'ಪುನೀತ್ ಸರ್ ನಮ್ಮ ಹೃದಯಲ್ಲಿದ್ದಾರೆ, ಅವರು ನಮ್ಮಿಂದ ದೂರ ಹೋಗಲು ಸಾಧ್ಯವಿಲ್ಲ': ಜೂ. ಎನ್ಟಿಆರ್ - ಪುನೀತ್ ಬಗ್ಗೆ ಜೂನಿಯರ್ ಎನ್ಟಿಆರ್ ಮಾತು
🎬 Watch Now: Feature Video
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆರ್ಆರ್ಆರ್' ಮಾರ್ಚ್ 25ರಂದು ರಿಲೀಸ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಕ್ಕೂ ಮುಂಚಿತವಾಗಿ ದೇವನಹಳ್ಳಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಭಾಗಿಯಾಯಿತು. ಈ ವೇಳೆ ವರದಿಗಾರರೊಬ್ಬರು ಪುನೀತ್ ರಾಜ್ಕುಮಾರ್ ವಿಚಾರವಾಗಿ ಪ್ರಶ್ನೆ ಕೇಳಿದ್ದು, ಇದಕ್ಕೆ ಜೂನಿಯರ್ ಎನ್ಟಿಆರ್ ಉತ್ತರ ನೀಡಿದ್ದಾರೆ. 'ಪುನೀತ್ ಸರ್ ನಮ್ಮಿಂದ ದೂರ ಹೋಗಿಲ್ಲ, ಅವರು ನಮ್ಮೊಂದಿಗೆ ಇದ್ದಾರೆ. ಅವರೊಬ್ಬ ಸೆಲೆಬ್ರೆಟಿ. ಯಾವಾಗಲೂ ನಮ್ಮ ಹೃದಯಲ್ಲಿರುತ್ತಾರೆ. ಸಂಜೆ ನಡೆಯುವ ಕಾರ್ಯಕ್ರಮದಲ್ಲೂ ಅವರು ನಮ್ಮ ಜೊತೆ ಇರಲಿದ್ದು, ಆಶೀರ್ವಾದ ಮಾಡಲಿದ್ದಾರೆ ಎಂದರು.
Last Updated : Feb 3, 2023, 8:20 PM IST