ಎಂಎನ್ಎಸ್ ಕಚೇರಿ ಬಳಿ ಧ್ವನಿವರ್ಧಕ ಅಳವಡಿಕೆ.. ಹನುಮಾನ್ ಚಾಲೀಸಾ ಪಠಣೆ - ಶರದ್ ಪವಾರ್ ವಿರುದ್ಧ ರಾಜ್ ಠಾಕ್ರೆ ಅಸಮಾಧಾನ
🎬 Watch Now: Feature Video
ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ನವನಿರ್ಮಾಣಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಶನಿವಾರ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಒಂದು ವೇಳೆ ಧ್ವನಿವರ್ಧಕಗಳನ್ನು ತೆಗೆಯದಿದ್ದರೆ, ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ಇಟ್ಟು ಹನುಮಾನ್ ಚಾಲೀಸಾ ನುಡಿಸುವ ಎಚ್ಚರಿಕೆ ನೀಡಿದ್ದರು. ಇಂದು ಘಟ್ಕೋಪರ್ನಲ್ಲಿರುವ ಎಂಎನ್ಎಸ್ ಕಚೇರಿ ಬಳಿ ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲಾಗಿದೆ.
Last Updated : Feb 3, 2023, 8:21 PM IST