ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ.. ಕೇಸರಿ ಬಟ್ಟೆಯಲ್ಲೇ ಸದನಕ್ಕೆ ಬಂದ ಭಾಜಪ ಶಾಸಕರು! - ಕೇಸರಿ ಬಟ್ಟೆ ತೊಟ್ಟ ಬಿಜೆಪಿ ಶಾಸಕರು
🎬 Watch Now: Feature Video
ರಾಂಚಿ(ಜಾರ್ಖಂಡ್): ಪಂಚರಾಜ್ಯಗಳ ಚುನಾವಣೆ ಪೈಕಿ ಭಾರತೀಯ ಜನತಾ ಪಾರ್ಟಿ ನಾಲ್ಕು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಬೆನ್ನಲ್ಲೇ ಜಾರ್ಖಂಡ್ ಬಿಜೆಪಿ ಶಾಸಕರು ಕೇಸರಿ ಬಟ್ಟೆ ತೊಟ್ಟು ಸನದಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು. ಬಜೆಟ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಬಿಜೆಪಿ ಶಾಸಕರು ಪಕ್ಷದ ಪರ ಹಾಗೂ ಜೈಶ್ರೀರಾಮ್ ಎಂದು ಜೈಕಾರ ಹಾಕಿದರು. ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಮತ್ತೊಮ್ಮೆ ತನ್ನ ಸರ್ಕಾರ ರಚನೆ ಮಾಡಲಿದೆ. ಇದೇ ವೇಳೆ ಜಾರ್ಖಂಡ್ನಲ್ಲಿ ಹೇಮಂತ್ ಸೊರೆನ್ ಸರ್ಕಾರದಿಂದ ಇಲ್ಲಿನ ಜನರಿಗೆ ಆದಷ್ಟು ಬೇಗ ಮುಕ್ತಿಗೊಳಿಸಿ, ನಮ್ಮ ಸರ್ಕಾರ ರಚನೆ ಮಾಡಲಾಗುವುದು ಎಂದರು.
Last Updated : Feb 3, 2023, 8:19 PM IST