ನಿಮ್ಮ ಪಕ್ಷದ ಲೀಡರ್ ಯಾರು? ಕಾಂಗ್ರೆಸ್ಗೆ ಬಿಎಸ್ವೈ ಪ್ರಶ್ನೆ:ನಿಮ್ಮ ಬಗ್ಗೆ ಈಗಾಗಲೇ ಜನ ತೀರ್ಮಾನ ಮಾಡಿದಾರೆ ಎಂದು ಸಿದ್ದು ಟಾಂಗ್ - ಕರ್ನಾಟಕ ಬಜೆಟ್ ಅಧಿವೇಶನ 2022
🎬 Watch Now: Feature Video
ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಮುಕ್ತ ಭಾರತ, ಜನರ ಮುಂದೆ ಪ್ರಚಾರಕ್ಕೆ ಹೋಗುವ ಮಾತುಗಳು ಕೇಳಿ ಬಂದವು. ಬಜೆಟ್ ಮೇಲೆ ಮಾತನಾಡುವ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲೂ ಧೂಳಿಪಟ ಆಗುತ್ತೆ. ನಿಮ್ಮ ರಾಷ್ಟ್ರಾಧ್ಯಕ್ಷರು ಯಾರು ಎಂಬುದೇ ನಿಮಗೆ ಗೊತ್ತಿಲ್ಲ. ನೀವು ಮತ್ತೆ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಮಾನಸಿಕವಾಗಿ ಸಿದ್ಧರಾಗಿ ಎಂದು ಸಿದ್ದರಾಮಯ್ಯರಿಗೆ ಯಡಿಯೂರಪ್ಪ ಟಾಂಗ್ ಕೊಟ್ಟರು. ಇದಕ್ಕೆ ಸಿದ್ದರಾಮಯ್ಯ ಅವರು ಸಮರ್ಥವಾಗಿಯೇ ಉತ್ತರಕೊಟ್ಟರು ನೀವು ಸಿಎಂ ಸ್ಥಾನದಿಂದ ಕೆಳಗಿಳಿದಾಗಲೇ ಬಿಜೆಪಿ ಹೋಯ್ತು ಎಂದು ತಿರುಗೇಟು ಕೊಟ್ಟರು.
Last Updated : Feb 3, 2023, 8:19 PM IST