ಹೈದರಾಬಾದ್: ಪ್ರತಿವರ್ಷ ನ. 19ನ್ನು ವಿಶ್ವ ಶೌಚಾಲಯ ದಿನವಾಗಿ ಆಚರಿಸುವ ಮೂಲಕ ಶುಚಿತ್ವದ ಕುರಿತು ಜಾಗೃತಿ ಜೊತೆ ಜಾಗತಿಕ ಶುಚಿತ್ವದ ಬಿಕ್ಕಟ್ಟಿನ ಜಾಗೃತಿ ಮೂಡಿಸಲಾಗುವುದು. ವಿಶ್ವಸಂಸ್ಥೆಯ ಅನುಸಾರ 3.6 ಮಿಲಿಯನ್ ಜನರು ಪ್ರಸ್ತುತ ಸುರಕ್ಷಿತವಾಗಿ ನಿರ್ವಹಿಸಲಾದ ಶುಚಿತ್ವ ಹೊಂದಿಲ್ಲ. ವಿಶ್ವಸಂಸ್ಥೆಯ ಅನುಸಾರ ವಿಶ್ವ ಶೌಚಾಲಯ ದಿನದಂದು ನೀರು ಮಹತ್ವದ್ದಾಗಿದೆ.
2013ರಲ್ಲಿ ಕುಡಿಯುವ ನೀರು ಮತ್ತು ಮೂಲಭೂತ ನೈರ್ಮಲ್ಯದದ ಪ್ರದೇಶದ ಆಧ್ಯತೆಯನ್ನು ಗಮನಹರಿಸಿ ಅದರ ಮೇಲ್ವಿಚಾರಣೆಯನ್ನು ಪ್ರತಿ ವರ್ಷ ವಿಶ್ವ ಶೌಚಾಲಯ ದಿನದಂದು ಮಾಡುವ ಉದ್ದೇಶ ಇದೆ. ಈ ಬಾರಿ 2022 ವಿಶ್ವ ಶೌಚಾಲಯ ದಿನ ಅಂತರ್ಜಲದ ಮೇಲೆ ನೈರ್ಮಲ್ಯ ಬಿಕ್ಕಟ್ಟಿನ ಪ್ರಭಾವದ ಮೇಲೆ ಕೇಂದ್ರೀಕರಿಸಿದೆ.
ಅಗೋಚರವಾಗಿ ಗೋಚರಿಸುವ ವಿಷಯಗಳ ಮೇಲೆ ವಿಶ್ವಸಂಸ್ಥೆಯ ಪ್ರಚಾರ ಗಮನಹರಿಸುತ್ತಿದ್ದು, ಅಸಮರ್ಪಕ ನೈರ್ಮಲ್ಯ ಮಾನವ ತ್ಯಾಜ್ಯ ನದಿಗೆ ಸೇರುವುದು ಸೇರಿದಂತೆ ಸರೋವರಗಳು ಮತ್ತು ಮಣ್ಣಿನಲ್ಲಿ ಹೇಗೆ ಹರಡುತ್ತವೆ, ಅಂತರ್ಜಲ ಸಂಪನ್ಮೂಲಗಳನ್ನು ಕಲುಷಿತಗೊಳಿಸುತ್ತವೆ ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ.
ಮಾನ ತ್ಯಾಜ್ಯದಿಂದ ಅಂತರ್ಜಲ ಸಂರಕ್ಷಣೆ.. 2022 ವಿಶ್ವ ಶೌಚಾಲಯ ದಿನದ ಮತ್ತೊಂದು ಸಂದೇಶ ಎಂದರೆ, ಅಂತರ್ಜಲವನ್ನು ಮಾನವ ತ್ಯಾಜ್ಯ ಮಾಲಿನ್ಯದಿಂದ ರಕ್ಷಿಸುವುದು. ಅಂತರ್ಜಲ ಪ್ರಪಂಚದ ಶುದ್ಧ ನೀರಿನ ಮೂಲವಾಗಿದೆ. ಇದು ಕುಡಿಯುವ ನೀರಿನ ಸರಬರಾಜಯ, ನೈರ್ಮಲ್ಯ ವ್ಯವಸ್ಥೆ, ಕೈಗಾರಿಕೆ ಮತ್ತು ಪರಿಸರ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಹವಾಮಾನ ಬದಲಾವಣೆ ಹದಗೆಟ್ಟಂತೆ ಮತ್ತು ಜನಸಂಖ್ಯೆ ಬೆಳೆದಂತೆ ಅಂತರ್ಜಲ ಒಂದೇ ಮಾನವನ ಉಳಿವಿಗೆ ಉಳಿದಿರುವುದಾಗಿದೆ. ವಿಶ್ವಸಂಸ್ಥೆ ಸುರಕ್ಷಿತ ನೈರ್ಮಲ್ಯವು ಅಂತರ್ಜಲವನ್ನು ರಕ್ಷಿಸುತ್ತದೆ. ಶೌಚಾಲಯವೂ ಸರಿಯಾಗಿ ನಿರ್ಮಾಣವಾಗಿದ್ದು, ಸುರಕ್ಷಿತವಾಗಿ ನೈರ್ಮಲ್ಯ ವ್ಯವಸ್ಥೆಯಿಂದ ನಿರ್ವಹಿಸಿದರೆ, ಮಾನವ ತ್ಯಾಜ್ಯವನ್ನು ಸಂಸ್ಕರಿಸಿ, ವಿಲೇವಾರಿ ಮಾಡಬಹುದಾಗಿದೆ. ಜೊತೆಗೆ ಮಾನವ ತ್ಯಾಜ್ಯ ಅಂತರ್ಜಲವನ್ನು ಸೇರುವುದನ್ನು ತಪ್ಪಿಸುತ್ತದೆ.
ನೈರ್ಮಲ್ಯ ಕ್ರಮ ತುರ್ತು ಅಗತ್ಯ.. ಸಿಂಗಾಪೂರ ನಿರ್ಣಯದ ಬಳಿಕ ವಿಶ್ವಸಂಸ್ಥೆಯ 2013ರಲ್ಲಿ ವಿಶ್ವ ಆರೋಗ್ಯ ಸಾಮಾನ್ಯ ಸಭೆ, ನ. 19ರಂದು ವಿಶ್ವ ಶೌಚಾಲಯ ದಿನವಾಗಿ ಘೋಷಿಸಿತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಪ್ರಕಾರ, 2030 ರ ವೇಳೆಗೆ ಎಲ್ಲರಿಗೂ ಸುರಕ್ಷಿತ ಶೌಚಾಲಯಗಳನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಈ ಗುರಿ ನಿರ್ಮಾಣಕ್ಕೆ ಪ್ರಪಂಚವು ನಾಲ್ಕು ಪಟ್ಟು ವೇಗವಾಗಿ ಕೆಲಸ ಮಾಡಬೇಕಾಗಿದೆ. ನೈರ್ಮಲ್ಯವು ಹವಾಮಾನ ಬದಲಾವಣೆ ಜೊತೆ ನಡೆಯಬೇಕು. ಹವಾಮಾನ ಪರಿಸ್ಥಿತಿ ಅನುಗುಣವಾಗಿ ಶೌಚಾಲಯಗಳು ಮತ್ತು ನೈರ್ಮಲ್ಯ ವ್ಯವಸ್ಥೆಗಳನ್ನು ನಿರ್ಮಿಸಬೇಕು. ಈ ಹಿನ್ನೆಲೆ ನೈರ್ಮಲ್ಯ ಕ್ರಮವು ತುರ್ತು ಅಗತ್ಯವಾಗಿದೆ.
ವಿಶ್ವ ಶೌಚಾಲಯ ದಿನವು ಜಾಗತಿಕ ನೈರ್ಮಲ್ಯ ಬಿಕ್ಕಟ್ಟಿನ ಬಗ್ಗೆ ಹಾಗೂ ಜನರ ಆರೋಗ್ಯ ವೃದ್ಧಿಗೆ ನೈರ್ಮಲ್ಯದ ಮಹತ್ವದ ಜಾಗೃತಿ ಮೂಡಿಸಲಿದೆ. ಈ ಮೂಲಕ ನೀರು, ನೈರ್ಮಲ್ಯ ಮತ್ತು ಶುಚಿತ್ವದ ಸಮಸ್ಯೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಒಂದು ಅವಕಾಶವಾಗಿದೆ.
ಇದನ್ನೂ ಓದಿ: ನಿಮ್ಮ ವೃದ್ಧಾಪ್ಯದ ಆರೋಗ್ಯವನ್ನು ಹದಿ ವಯಸ್ಸಿನಲ್ಲೇ ಪತ್ತೆ ಮಾಡಬಹುದು!