ವೈಯಕ್ತಿಕ ಶುಚಿತ್ವ ಎಂಬುದು ಪ್ರತಿಯೊಬ್ಬರ ಆದ್ಯತೆ ಆಗಬೇಕು. ಆದರೆ, ಹದಿಹರೆಯದ ವಯಸ್ಸಿನವರಲ್ಲಿ ಮೂರರಲ್ಲಿ ಇಬ್ಬರು ಉತ್ತಮ ಕೈ ತೊಳೆಯುವ ಅಭ್ಯಾಸವನ್ನು ಹೊಂದಿಲ್ಲ ಎಂದು ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯ ಸಂಶೋಧಕರು ಮಾಹಿತಿ ನೀಡಿದ್ದಾರೆ.
ವೈಯಕ್ತಿಯ ಕಾಳಜಿ, ಶುಚಿತ್ವದ ಕುರಿತು ಇತ್ತೀಚಿನ ದಿನದಲ್ಲಿ ಹೆಚ್ಚಿನ ವರದಿಯಾಗುತ್ತಿದೆ. ಅದರಲ್ಲೂ ಪುರುಷರ ಶುಚಿತ್ವದ ಕುರಿತು ಹೆಚ್ಚಿನ ಕಾಳಜಿ ವಹಿಸಲೇಬೇಕಿದೆ ಎಂದು ಸ್ಕಿನ್ ಎಲೆಮೆಂಟ್ಸ್ನ ಸಹ ಸಂಸ್ಥಾಪಕ ಸಾರ್ಥಕ್ ತನೇಜಾ ತಿಳಿಸಿದ್ದಾರೆ. ವೈಯಕ್ತಿಕ ಅದರಲ್ಲೂ ಕೈ ಶುಚಿತ್ವವೂ ಅತ್ಯಗತ್ಯ ಎಂದಿದ್ದಾರೆ. ಅದರಲ್ಲೂ ಬೇಸಿಗೆಯಂತಹ ಅಧಿಕ ತಾಪಮಾನದ ಸಮಯದಲ್ಲಿ ಕೈ ಮತ್ತು ದೇಹದ ಶುಚಿತ್ವ ಕಾಪಾಡುವುದು ಅವಶ್ಯಕ. ಇಲ್ಲದೇ ಹೋದಲ್ಲಿ ಇವು ಚರ್ಮರೋಗ ಮತ್ತು ಇನ್ನಿತರ ಆರೋಗ್ಯದ ಅನಾಹುತಕ್ಕೆ ದಾರಿ ಮಾಡುತ್ತವೆ ಎಂದು ಎಚ್ಚರಿಸಿದ್ದಾರೆ.
ಕೈ ತೊಳೆಯುವ ಅಭ್ಯಾಸ: ದೇಶದ ಪ್ರಮುಖ ಭಾಗಗಳ ಹೊರತಾಗಿ ಪದೇ ಪದೇ ಕೈ ತೊಳೆಯವುದಕ್ಕೆ ಕೂಡ ಆದ್ಯತೆ ನೀಡಬೇಕು. ಅನೇಕ ಬಾರಿ ಈ ಕೈಗಳಿಂದಲೇ ಅನೇಕ ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರುತ್ತವೆ. ನಮಗೆ ತಿಳಿದು, ತಿಳಿಯದೇ ಮುಟ್ಟಿದ ವಸ್ತುಗಳು ದೇಹ ಸೇರಿ ಸೋಂಕು ಉಂಟು ಮಾಡುತ್ತದೆ. ಹೀಗಾಗಿ, ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳುವುದು ಒಳ್ಳೆಯದು. ಕನಿಷ್ಟ ಒಂದು ನಿಮಿಷವಾದರೂ ಸೋಪ್ ಅಥವಾ ನೀರಿನಿಂದ ಸರಿಯಾಗಿ ಕೈ ತೊಳೆಯಬೇಕು ಎನ್ನುವುದನ್ನು ಮರೆಯಬಾರದು.
ಗಂಟೆಗೆ ಒಮ್ಮೆ ಕೈ ತೊಳೆಯಿರಿ-ಯುನಿಸೆಫ್: ಕೋವಿಡ್ ಬಳಿಕವಂತೂ ಈ ಅಭ್ಯಾಸಕ್ಕೆ ಮತ್ತಷ್ಟು ಒತ್ತು ನೀಡಲಾಗಿದೆ. ನಿಯಮಿತವಾಗಿ ಕೈ ಶುಚಿತ್ವ ಕಾಪಾಡುವುದರಿಂದ ಅತಿಸಾರ, ಎಬೋಲಾ, ಕಾಲರಾ, ಹೆಪಟೈಟಿಸ್ ಇ ಸೇರಿದಂತೆ ಹಲವು ರೋಗಗಳನ್ನು ತಡೆಯಬಹುದು. ಇದೇ ಕಾರಣಕ್ಕೆ ಯುನಿಸೆಫ್ ಗಂಟೆಗೆ ಒಮ್ಮೆ ಕೈ ತೊಳೆಯಲು ಸಲಹೆ ನೀಡಿದೆ. ಆಹಾರ ಸೇವನೆ ಸೇರಿದಂತೆ ಮಲ ವಿಸರ್ಜನೆಯವರೆಗೆ ಪ್ರತಿ ಕೆಲಸದ ಬಳಿಕ ಮತ್ತು ಕೆಲಸ ನಂತರವೂ ಕೈ ತೊಳೆಯುವುದನ್ನು ಮರೆಯಬಾರದು.
ದೈಹಿಕ ಶುಚಿತ್ವಕ್ಕೆ ಇರಲಿ ಆದ್ಯತೆ: ಬೇಸಿಗೆಯಲ್ಲಿ ದೇಹ ಬಲು ಬೇಗ ದುರ್ಗಂಧ, ಅಶುಚಿತ್ವಕ್ಕೆ ಒಳಗಾಗುತ್ತದೆ. ಇದರಿಂದಾಗಿ ದೈನಂದಿನ ನೈರ್ಮಲ್ಯತೆ ಕಾಪಾಡಲೇ ಬೇಕು. ಇವು ಬೆವರಿನಿಂದ ಉಂಟಾಗುವ ಬ್ಯಾಕ್ಟೀರಿಯಾ, ಫಂಗಸ್ನಿಂದ ರಕ್ಷಣೆ ಮಾಡುತ್ತದೆ. ಬೇಸಿಗೆಯ ತಾಪಮಾನ ಹೆಚ್ಚಿದಂತೆ ಸೋಂಕಿನ ಉಲ್ಬಣತೆ ಕೂಡ ಹೆಚ್ಚು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಶುಚಿತ್ವದ ಜೊತೆಗೆ ದೇಹಕ್ಕೆ ಆರಾಮದಾಯಕ ಬಟ್ಟೆಗಳನ್ನು ಧರಿಸುವುದು ಮುಖ್ಯ. ಬೆವರಿನಿಂದ ದೇಹದ ಅಂಗಾಂಗಗಳು ಒತ್ತಡಕ್ಕೆ ಒಳಗಾಗದಂತೆ ಹಗುರ, ಸಡಿಲ ದಿರಿಸಿಗೆ ಮಹತ್ವ ಕೊಡಬೇಕಾಗುತ್ತದೆ. ಸುಡು ಬಿಸಿಲಿನಿಂದ ಬೆವರು ಉತ್ಪತ್ತಿಯಾಗುವುದು ಸಹಜ. ಈ ಬೆವರು ದೀರ್ಘಕಾಲವಿದ್ದಾಗ ಅನೇಕ ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಇಲ್ಲದೇ ಹೋದಲ್ಲಿ ಇದು ಊರಿಯೂತ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಪುರುಷರ ಅಂದ ಕಾಪಾಡಲು ಇಲ್ಲಿದೆ ಸಲಹೆ