ETV Bharat / sukhibhava

ಅಲ್ಝೈಮರ್​ ಎಂದರೇನು? ಇದು ಮದ್ದಿಲ್ಲದ ರೋಗ! - ಸಾಮಾನ್ಯ ಮರೆಗುಳಿತನ

World Alzheimers Day: ವಯಸ್ಸಾದ ಬಳಿಕ ಬಹುತೇಕರನ್ನು ಕಾಡುವ ಈ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಇಲ್ಲ.

World Alzheimers Day celebrate on September 21

author img

By ETV Bharat Karnataka Team

Published : Sep 21, 2023, 11:57 AM IST

ಬೆಂಗಳೂರು: ಅಲ್ಝೈಮರ್​​ ಎಂಬುದು ಮಿದುಳಿನ ಸಮಸ್ಯೆ. ಈ ರೋಗವನ್ನು ಅನೇಕ ಮಂದಿ 'ಸಾಮಾನ್ಯ ಮರೆಗುಳಿತನ' ಎಂದು ಪರಿಗಣಿಸುತ್ತಾರೆ. ಅಲ್ಝೈಮರ್​ ಉಂಟಾಗಲು ಕಾರಣವೇನು? ಇದರ ಪತ್ತೆ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್​ 21ರಂದು ವಿಶ್ವ ಅಲ್ಝೈಮರ್​ ದಿನವನ್ನಾಗಿ ಆಚರಿಸಲಾಗುತ್ತದೆ. ಸಂಪೂರ್ಣ ಸೆಪ್ಟೆಂಬರ್​ ತಿಂಗಳು ಅಲ್ಝೈಮರ್​ ಜಾಗೃತಿ ನಡೆಯುತ್ತದೆ. 2023ರ ಅಂದರೆ ಈ ವರ್ಷದ ವಿಶ್ವ ಅಲ್ಝೈಮರ್​ ದಿನದ ಧ್ಯೇಯ ವಾಕ್ಯ 'Never too early never too late'.

ಅಲ್ಝೈಮರ್​ ಎಂದರೇನು?: ಅಲ್ಝೈಮರ್​​ ಎಂಬುದು ನರದ ಸಮಸ್ಯೆ. ಇದು ಮಿದುಳಿನ ನಿರ್ಣಾಯಕ ಕಾರ್ಯಾಚರಣೆ ಮೇಲೆ ಪರಿಣಾಮ ಬೀರುತ್ತದೆ. ಸಮಸ್ಯೆ ಪತ್ತೆಯಾದ ಕಾಲಾನಂತರದಲ್ಲಿ ರೋಗಿ ನಿಧಾನವಾಗಿ ತಮ್ಮ ನೆನಪಿನ ಶಕ್ತಿ ಮತ್ತು ಚಿಂತನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ. ಇದು ಸಂಪೂರ್ಣ ಸ್ಮರಣೆ ನಷ್ಟಕ್ಕೂ ಕಾರಣವಾಗುತ್ತದೆ. ಇದರಿಂದ ದೈನಂದಿನ ಚಟುವಟಿಕೆ ನಿರ್ವಹಣೆಯೇ ಕಷ್ಟವಾಗುತ್ತದೆ.

ಡೆಮನ್ಶಿಯಾ ಮತ್ತು ಅಲ್ಝೈಮರ್​ ಎರಡು ವಿಭಿನ್ನ ಸಮಸ್ಯೆಗಳು. ಡೆಮನ್ಶಿಯಾ ಎಂಬುದು ಸ್ಮರಣೆ ನಷ್ಟ ಮತ್ತು ನಡುವಳಿಕೆಯ ತೊಂದರೆ. ಅಲ್ಝೈಮರ್​ ಎಂಬುದು ನಿರ್ದಿಷ್ಟ ರೋಗ. ಅಲ್ಝೈಮರ್​ ಲಕ್ಷಣಗಳು ಸಾಮಾನ್ಯವಾಗಿ 65 ವರ್ಷದ ನಂತರ ಕಾಣಿಸಿಕೊಳ್ಳುತ್ತದೆ. ಕೆಲವು ನಿರ್ದಿಷ್ಟ ಪರಿಸ್ಥಿತಿ ಅಥವಾ ಅನಾರೋಗ್ಯದ ಹಿನ್ನೆಲೆಯಲ್ಲಿ ಇದು ಬೇಗನೇ ಶುರುವಾಗುತ್ತದೆ.

ಅಲ್ಝೈಮರ್​​ಗೆ ಚಿಕಿತ್ಸೆ ಹೇಗೆ?: ಅಲ್ಝೈಮರ್​ಗೆ ಪ್ರಸ್ತುತ ನಿರ್ದಿಷ್ಟ ಚಿಕಿತ್ಸೆ ಎಂಬುದಿಲ್ಲ. ಆದಾಗ್ಯೂ ಇದನ್ನು ಕೆಲವು ಚಿಕಿತ್ಸೆ ಮತ್ತು ರೋಗದ ಆರಂಭಿಕ ಲಕ್ಷಣ ಪತ್ತೆ ಮೂಲಕ ಇದರ ಪ್ರಗತಿಯನ್ನು ನಿಧಾನಗೊಳಿಸಬಹುದು. ಸದ್ಯ ಜಾಗತಿಕ ಸಂಶೋಧನೆಗಳು ಅಲ್ಝೈಮರ್​ ಕುರಿತು ಸುಧಾರಿತ ಚಿಕಿತ್ಸೆ ಪತ್ತೆ ಮಾಡುವುದರೊಂದಿಗೆ ರೋಗದ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಗುರಿ ಹೊಂದಿವೆ.

ಅಲ್ಝೈಮರ್​ ದಿನದ ಇತಿಹಾಸ: 1901ರಲ್ಲಿ ಜರ್ಮನ್​ ಮನೋವಿಜ್ಞಾನಿ ಡಾ.ಅಲೊಯಸ್ ಅಲ್ಝೈಮರ್​ ​​ಜರ್ಮನ್​ ಎಂಬವರು ಮಹಿಳೆಗೆ ಚಿಕಿತ್ಸೆ ನೀಡುವಾಗ ಅಲ್ಝೈಮರ್​ ಪತ್ತೆ ಮಾಡಿದರು. ಈ ರೋಗಕ್ಕೆ ಅವರ ಹೆಸರನ್ನೇ ಇಡಲಾಗಿದೆ. ಬಳಿಕ ಸೆಪ್ಟೆಂಬರ್​​ 21 ಅನ್ನು ಅಲ್ಝೈಮರ್​ ದಿನವನ್ನಾಗಿ ಗುರುತಿಸಿ, ಈ ಕುರಿತು ಜನರಲ್ಲಿ ಅರಿವು ಮತ್ತು ರೋಗಿಗಳಿಗೆ ಬೆಂಬಲ ನೀಡಲಾಗುತ್ತಿದೆ. ಜಾಗೃತಿ ಪ್ರಯತ್ನವನ್ನು ತಿಂಗಳವರೆಗೆ ನಡೆಸಲಾಗುತ್ತಿದೆ.

ಜನರಿಗೆ ಈ ಸಮಸ್ಯೆ ಗಂಭೀರತೆಯನ್ನು ಅರ್ಥ ಮಾಡಿಸುವುದು, ಜಾಗೃತಿ ಹೆಚ್ಚಿಸುವುದು, ರೋಗಪೀಡಿತ ವ್ಯಕ್ತಿಗಳನ್ನು ಬೆಂಬಲಿಸಿ, ಉತ್ತಮ ಚಿಕಿತ್ಸೆಗಳ ಕಡೆಗೆ ಸಂಶೋಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ.

ಇದನ್ನೂ ಓದಿ: ಅಲ್ಝೈಮರ್​ ಅಪಾಯವನ್ನು ಕಡಿಮೆ ಮಾಡುತ್ತದೆ ಉಸಿರಾಟದ ವ್ಯಾಯಾಮ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.