ETV Bharat / sukhibhava

ಸ್ತನ ಕ್ಯಾನ್ಸರ್​ನ ಅಂತಿಮ ಹಂತದಲ್ಲಿ ಶೇ 60ರಷ್ಟು ಮಹಿಳೆಯರು; ಬೇಕಿದೆ ಜಾಗೃತಿ - ಕ್ಯಾನ್ಸರ್​ ಆರಂಭದ ಪತ್ತೆ

Breast cancer in women: ಮಹಿಳೆಯರನ್ನು ಹೆಚ್ಚಾಗಿ ಕಾಡುವ ಈ ಸ್ತನ ಕ್ಯಾನ್ಸರ್​ಅನ್ನು ಆರಂಭದಲ್ಲೇ ಪತ್ತೆ ಮಾಡುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

women  more than 60 per cent present in advanced stages of breast cancer

author img

By ETV Bharat Karnataka Team

Published : Jan 10, 2024, 1:22 PM IST

Updated : Jan 10, 2024, 1:32 PM IST

ಹೈದರಾಬಾದ್​: ಸ್ತನ ರೋಗದ ಕುರಿತು ಅರಿವಿನ ಕೊರತೆ ಮತ್ತು ಸಾರ್ವಜನಿಕರ ಪತ್ತೆ ಕಾರ್ಯಕ್ರಮಗಳು ನಡೆಯದಿರುವುದರಿಂದ ಶೇ 60ರಷ್ಟು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ಅಭಿವೃದ್ಧಿ ಹೊಂದಿದ ಹಂತದಲ್ಲಿದೆ ಎಂದು ಪ್ರಮುಖ ಸ್ತನ ಕ್ಯಾನ್ಸರ್​​ ಸರ್ಜನ್​​ ಆಗಿರುವ ಡಾ ಪಿ. ರಘುರಾಮ್​ ತಿಳಿಸಿದ್ದಾರೆ.

ಪ್ರತಿ ವರ್ಷ ಸ್ತನ ಕ್ಯಾನ್ಸರ್​ನಿಂದ 2,00,000 ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸ್ತನ ಕ್ಯಾನ್ಸರ್​​ ಎಂಬುದು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮಹಿಳೆಯರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ.

ಹೈದರಾಬಾದ್​ನಲ್ಲಿ ಎಐಸಿಒಜಿ -2024 - 66ನೇ ವಾರ್ಷಿಕ ಸಮಾವೇಶದಲ್ಲಿ ಬ್ರೆಸ್ಟ್​​ ಕ್ಯಾನ್ಸರ್​​ ಅಡ್ವಾಕಸಿ ಮತ್ತು ಸ್ಕ್ರೀನಿಂಗ್​​ ವಿಷಯದ ಕುರಿತು ಮಾತನಾಡಿರುವ ಉಶಾಲಕ್ಷ್ಮೀ ಬ್ರೆಸ್ಟ್​​ ಕ್ಯಾನ್ಸರ್​ ಫೌಂಡೇಷನ್​ ಸಿಇಒ ಮತ್ತು ನಿರ್ದೇಶಕ ಡಾ ಪಿ ರಘುರಾಮ್​, ಭಾರತದಲ್ಲಿ ಸ್ತನ ಕ್ಯಾನ್ಸರ್​ ಪ್ರಕರಣಗಳ ಕುರಿತು ಅರಿವು ಮೂಡಿಸಿದರು.

ಎಐಸಿಒಜಿ 2024ನ ಅಧ್ಯಕ್ಷ ಡಾ ಶಾಂತಾ ಕುಮಾರಿ ಮಾತನಾಡಿ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​​​ ಕುರಿತು ಜಾಗೃತಿ ಮೂಡಿಸುವಂತ ಮತ್ತು ಸಬಲೀಕರಣಗೊಳಿಸುವಲ್ಲಿ ಸ್ತ್ರೀರೋಗತಜ್ಞರು ಮುಂದಾಗಬೇಕಿದೆ. ಸ್ತ್ರೀರೋಗ ತಜ್ಞರು ಆರಂಭದಲ್ಲಿ ರೋಗ ಪತ್ತೆ ಮಾಡುವ ಮತ್ತು ಈ ಕುರಿತು ಉತ್ತಮ ತಜ್ಞರಿಗೆ ತೋರಿಸುವ ಕುರಿತು ಜಾಗೃತಿ ಮೂಡಿಸುವುದರಿಂದ ಆರಂಭಿಕ ಹಂತದಲ್ಲೇ ಇದನ್ನು ತಡೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ತಮ್ಮ ಬಳಿ ಆಗಮಿಸುವ ರೋಗಿಗಳಲ್ಲಿ ಆರಂಭದಲ್ಲಿ ಸ್ತನ ಕ್ಯಾನ್ಸರ್​ ಪತ್ತೆ ಭರವಸೆ ನೀಡುವಲ್ಲಿ ಸ್ತ್ರೀರೋಗ ತಜ್ಞರ ಪಾತ್ರ ಪ್ರಮುಖವಾಗಿದೆ. ಸ್ತ್ರೀರೋಗ ತಜ್ಞರು ಇತರೆ ಸಮಸ್ಯೆಗಳೊಂದಿಗೆ ತಮ್ಮ ಬಳಿ ಬರುವ ಮಹಿಳಾ ರೋಗಿಗಳಲ್ಲಿ ಸ್ತನದ ಯಾವುದೇ ಸಮಸ್ಯೆ ಇಲ್ಲವಾದರೂ ಸ್ತನ ಪರೀಕ್ಷೆಯನ್ನು ಮಾಡಿಸಬೇಕು. ಕಾರಣ ನಿಖರವಾದ ವಿಧಾನವೂ ಸ್ತನ ಕ್ಯಾನ್ಸರ್​ ಪತ್ತೆ ಮಾಡಲು ಸಹಾಯ ಮಾಡುತ್ತದೆ. ಕೆಲವು ಮಾರಣಾಂತಿಕವಾಗಿರುವ ಹಿನ್ನೆಲೆ ಇದರ ಆರಂಭಿಕ ಪತ್ತೆ ಅವಶ್ಯವಾಗಿದೆ.

ಸ್ತನಕ್ಯಾನ್ಸರ್​ ವಿಚಾರದಲ್ಲಿ ಬಹುತೇಕ ಸಮಯದಲ್ಲಿ ಮಹಿಳೆಯರು ಆಗಮಿಸುವುದು ಸ್ತ್ರೀರೋಗ ತಜ್ಞರ ಬಳಿ. ಈ ಹಿನ್ನೆಲೆ ಇವರ ಪಾತ್ರ ಮುಖ್ಯವಾಗಿದೆ. ಮಹಿಳೆಯರ ಸ್ತನದಲ್ಲಿ ಗಡ್ಡೆಗಳು ಪತ್ತೆಯಾದಾಗ ಮೂರು ಬಾರಿ ಮೌಲ್ಯಮಾಪನಕ್ಕೆ ಒಳಗಾಗುವ ಭರವಸೆಯನ್ನು ನೀಡಬೇಕು. ಇದರಲ್ಲಿ ಮೊದಲು ಕ್ಲಿನಿಕಲ್​ ಪರೀಕ್ಷೆ, ಮ್ಯಾಮೋಗ್ರಾಮ್​ ಮತ್ತು ಅಲ್ಟ್ರಾಸೌಂಡ್​ಗಳು ಸಮಸ್ಯೆ ಕುರಿತು ಸ್ಪಷ್ಟಪಡಿಸುತ್ತವೆ ಎಂದರು.

ಅನೇಕ ಬಾರಿ ರೋಗಿಗಳನ್ನು ಎಫ್​ಎನ್​ಎಸಿ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗುತ್ತದೆ. ಆದರೆ, ಇದು ನಿಖರವಾಗಿಲ್ಲ. ಇದು ತಪ್ಪು ಸಕಾರಾತ್ಮಕತೆಯ ಪತ್ತೆಯನ್ನು ಮಾಡುತ್ತದೆ. ರೋಗಿಗಳನ್ನು ತಪ್ಪು ದಾರಿಗೆ ಎಳೆಯುತ್ತದೆ. ಇದು ತಪ್ಪು ಪತ್ತೆ ಮತ್ತು ಚಿಕಿತ್ಸೆಗೆ ಕಾರಣ ಆಗುತ್ತದೆ ಎಂದು ಡಾ. ರಘುರಾಮ್​ ವಿವರಿಸಿದರು.

40 ವರ್ಷದ ದಾಟಿದ ಮಹಿಳೆಯರಿಗೆ ಮ್ಯಾಮೋಗ್ರಾಮ್​ಗೆ ಒಳಗಾಗುವತೆ ಸ್ತ್ರೀರೋಗ ತಜ್ಞರು ಪ್ರೋತ್ಸಾಹಿಸಬೇಕಿದೆ. ಇದರಿಂದ ರೋಗಿಯ ಜೀವನ ಉಳಿಯುತ್ತದೆ. ಮಹಿಳೆ ಸ್ತನದಲ್ಲಿ ಗಂಟು ಇದೆಯಾ ಎಂಬುದನ್ನು ಪತ್ತೆ ಮಾಡಲು ಬಳಕೆ ಮಾಡುವ ಗುಣಮಟ್ಟದ ತನಿಖಾ ವಿಧಾನ ಮ್ಯಾಮೋಗ್ರಾಫ್​ ಆಗಿದೆ. ಈ ಹಿನ್ನೆಲೆ ಈ ಬಗ್ಗೆ ಸ್ತ್ರೀರೋಗ ತಜ್ಞರು ಎಚ್ಚರದಿಂದ ಇರಬೇಕು. ಸ್ತನ ಕ್ಯಾನ್ಸರ್​ ಪತ್ತೆಗೆ ಬಳಕೆ ಮಾಡುವ. ಥರ್ಮೊಗ್ರಫಿ ಅಷ್ಟೇನು ಪರಿಣಾಮಕಾರಿಯಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

ಶಿಕ್ಷಿತರಾದರೂ ಅನೇಕ ಮಹಿಳೆಯರು ಈ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಿರುವುದಿಲ್ಲ. 40ವರ್ಷ ದಾಟಿದ ಬಳಿಕ ಮಹಿಳೆಯರು ಮ್ಯಾಮೋಗ್ರಾಫ್​​ ಪರೀಕ್ಷೆಗೆ ಒಳಗಾಗುವುದು ಅವಶ್ಯವಾಗಿದೆ ಎಂದು ಅವರು ಸಲಹೆ ನೀಡಿದರು. (ಐಎಎನ್​ಎಸ್)

ಇದನ್ನೂ ಓದಿ: ಮಾನಸಿಕ ಆರೋಗ್ಯ ವೃದ್ಧಿಗೆ ಸಾವಧಾನತೆ ಜೊತೆಗೆ ವ್ಯಾಯಾಮ ಸಹಾಯಕ: ಅಧ್ಯಯನ

Last Updated : Jan 10, 2024, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.