ETV Bharat / sukhibhava

ಮಹಿಳೆಯರೇ 30ರ ಬಳಿಕ ತಪ್ಪದೇ ಈ ಆರೋಗ್ಯ ತಪಾಸಣೆಗೆ ಒಳಗಾಗಿ

30 ವರ್ಷದ ಬಳಿಕ ಉಂಟಾಗುವ ಹಾರ್ಮೋನ್​ಗಳ ವ್ಯತ್ಯಯದಿಂದ ಅನೇಕ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ಸಮಸ್ಯೆಗಳನ್ನು ಮೊದಲೇ ಪತ್ತೆ ಹಚ್ಚಲು ನಿಯಮಿತ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಅವಶ್ಯ.

author img

By

Published : Mar 20, 2023, 2:14 PM IST

women-after-30-must-get-health-check-up-without-fail

ನವದೆಹಲಿ: ನಿಮ್ಮ ಹೃದಯ ಜೀವಂತಿಕೆಯಿಂದ ಕೂಡಿದಾಗ ವಯಸ್ಸು ಕೇವಲ ನಂಬರ್​ ಅಷ್ಟೇ ಎಂಬ ಮಾತಿದೆ. ಕೆಲವು ವೇಳೆ ಇದು ನಿಜವೂ ಆಗುತ್ತದೆ. ವಯಸ್ಸಿನ ಬಗ್ಗೆ ವಿಪರೀತ ಗಮನ ಹರಿಸುವುದರಿಂದ ಅದು ಅನೇಕ ಸಮಸ್ಯೆಗಳಿಗೆ ಉತ್ತರಿಸುವುದು ಸುಳ್ಳಲ್ಲ. ಅದರಲ್ಲೂ ಮಹಿಳೆಯರು 30 ವರ್ಷ ದಾಟುತ್ತಿದ್ದಂತೆ ಅನೇಕ ಹಾರ್ಮೋನ್​ಗಳ ಬದಲಾವಣೆ ಎದುರಿಸುತ್ತಾರೆ. ಅನೇಕ ಸಮಸ್ಯೆ, ವಯೋ ಸಹಜ ಸೌಂದರ್ಯ ಸಮಸ್ಯೆಯಾದ ನರಿಗೆ, ಸುಕ್ಕಿಗೆ ಒಳಗಾಗುತ್ತಾರೆ. 30ರ ಬಳಿಕ ಕಾಡುವ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯಯುತ ಜೀವನಶೈಲಿ ಕೂಡ ಪ್ರಮುಖವಾಗುತ್ತದೆ.

ರಕ್ತ ಮತ್ತು ಹೃದಯದ ಪರೀಕ್ಷೆಗೆ ಒಳಗಾಗಿ: ನಿಮ್ಮ ಹೃದಯ ಬಡಿಯುವಲ್ಲಿ ಉಂಟಾಗುವ ವ್ಯತ್ಯಾಯದ ಬಗ್ಗೆ ಎಷ್ಟೋ ಬಾರಿ ಗಮನಕ್ಕೆ ಬಾರದೇ ಹೋಗಬಹುದು. ಬಹುತೇಕ ಮಹಿಳೆಯರು ದೀರ್ಘ ಆಯಾಸ ಮತ್ತು ಹೆಚ್ಚಿನ ಒತ್ತಡದಿಂದ ಹೃದ್ರೋಗ ಸಮಸ್ಯೆ ಬಗ್ಗೆ ಗಮನಹರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯರು ರಕ್ತದ ಪರೀಕ್ಷೆಗೆ ಒಳಗಾಗುವುದು ಅವಶ್ಯವಾಗಿದೆ. ಈ ಪರೀಕ್ಷೆಯಲ್ಲಿ ಸಿಆರ್​ಪಿ ಪರೀಕ್ಷೆ ಜೊತೆ ರಕ್ತದೊತ್ತಡ, ಕೊಲೆಸ್ಟ್ರಾಲ್​, ರಕ್ತದಲ್ಲಿನ ಗ್ಲುಕೋಸ್​ ಜೊತೆಗೆ ಬಿಎಂಐ ಮಾಪನಕ್ಕೆ ಒಳಗಾಗುವುದೊಳಿತು. ಈ ಎಚ್​ಎಸ್​-ಸಿಆರ್​ಪಿ (hs-CRP)ಪರೀಕ್ಷೆ ಹೃದಯಾಘಾತದ ಅಪಾಯವನ್ನು ಮಾಪನ ಮಾಡುತ್ತದೆ. ಸಿ ಆಧಾರಿತ ಪ್ರೊಟೀನ್​ ಹೃದಯ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ.

ನಿಯಮಿತ ಡಯಾಬಿಟಿಸ್​ ಪರೀಕ್ಷೆ: ಜಾಗತಿಕವಾಗಿ ಕಾಡುತ್ತಿರುವ ಸಮಸ್ಯೆಯಲ್ಲಿ ಡಯಾಬಿಟಿಸ್​ ಪ್ರಮುಖವಾಗಿದೆ. ಈ ಬಗ್ಗೆ ಮಹಿಳೆಯರು ಕಾಳಜಿವಹಿಸಬೇಕು. ಇದು ಕಿಡ್ನಿಸಮಸ್ಯೆ, ಹೃದಯ ಸಮಸ್ಯೆ ಮತ್ತಿತ್ತರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಕುಟುಂಬದ ಡಯಾಬಿಟಿಸ್​ ಇತಿಹಾಸ 30ರ ಬಳಿಕ ಮಹಿಳೆ ಮೇಲೆ ಪ್ರಭಾವ ಬೀರುವ ಪರಿಣಾಮ ಇರುವ ಹಿನ್ನೆಲೆಯಲ್ಲಿ ಈ ಪರೀಕ್ಷೆಗೆ ಒಳಗಾಗುವುದು ಸೂಕ್ತ.

ಥೈರಾಯ್ಡ್​ ಪರೀಕ್ಷೆ: ಸಾಮಾನ್ಯವಾಗಿ ಥೈರಾಯ್ಡ್​ ಪರೀಕ್ಷೆಗೆ ಒಳಗಾಗುವುದರಿಂದ ಇದರ ಅಪಾಯ ಕಡಿಮೆ ಮಾಡಬಹುದು. ಥೈರಾಯ್ಡ್ ಕಾರ್ಯ ಪರೀಕ್ಷೆಯನ್ನು ಮಾಡುವುದರಿಂದ ಮಹಿಳೆಯರು ಆರೋಗ್ಯದ ಬಗ್ಗೆ ಕಾಳಜಿವಹಿಸಲು ಸಾಧ್ಯ ತಾಪಮಾನ ನಿಯಂತ್ರಣ, ಚಯಾಪಚಯ ಮತ್ತು ಶಕ್ತಿ ಉತ್ಪಾದನೆ ಸೇರಿದಂತೆ ಅನೇಕ ದೈಹಿಕ ಕಾರ್ಯಗಳು ಥೈರಾಯ್ಡ್ ಗ್ರಂಥಿಯಿಂದ ಉತ್ಪತ್ತಿಯಾಗುವ ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತವೆ. ಥೈರಾಯ್ಡ್​ ಸಮಸ್ಯೆಯಿಂದ ಹಠಾತ್ ತೂಕ ಹೆಚ್ಚಾಗುವುದು ಅಥವಾ ನಷ್ಟ, ಮನಸ್ಥಿತಿ ಬದಲಾವಣೆಗಳು, ಆಯಾಸ ಸೇರಿದಂತೆ ಇನ್ನಿತರ ಗಲಕ್ಷಣಗಳು ಸಂಭವಿಸಬಹುದು. ಗರ್ಭಿಣಿಯಾಗಲು ಬಯಸುವ ಮಹಿಳೆಯರು ತಮ್ಮ ಥೈರಾಯ್ಡ್ ಮಟ್ಟವನ್ನು ಅವಶ್ಯಕವಾಗಿ ಪರೀಕ್ಷಿಸಬೇಕು. ಏಕೆಂದರೆ ಥೈರಾಯ್ಡ್ ಅಸ್ವಸ್ಥತೆಗಳು ತಾಯಿ ಮತ್ತು ಅಭಿವೃದ್ಧಿಶೀಲ ಭ್ರೂಣದ ಮೇಲೆ ಪರಿಣಾಮ ಬೀರಬಹುದು.

ಮಮ್ಯೊಗ್ರಾಫಿ ಮೂಲಕ ಎದೆ ಪರೀಕ್ಷೆಗೆ ಒಳಗಾಗಿ: ಅನೇಕ ಮಹಿಳೆಯರು ತಮ್ಮ ಎದೆ ಆರೋಗ್ಯದಲ್ಲಿ ಇಂದಿಗೂ ಮುಜುಗರ ಹೊಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಬ್ರೇಸ್ಟ್​ ಕ್ಯಾನ್ಸರ್​ ಹೆಚ್ಚುತ್ತಿದ್ದು, ಇಂತಹ ಅಪಾಯ ತಡೆಯಲು ಇದು ಅವಶ್ಯಕವಾಗಿದೆ. 30ರ ಬಳಿಕ ಮಾಮ್ಯೂಗ್ರಾಫಿಗೆ ಮಹಿಳೆ ಒಳಗಾಗುವುದು ಅವಶ್ಯಕವಾಗಿದೆ. ಎಕ್ಸ್​ ರೇ ಮೂಲಕ ಎದೆಯಲ್ಲಿ ಉಂಟಾಗಿರುವ ಗೆಡ್ಡೆಗಳನ್ನು ಪತ್ತೆ ಮಾಡಬಹುದು. 30-40 ದಾಟಿದ ಮಹಿಳೆಯರು ಪ್ರತಿ 6 ತಿಂಗಳಿಗೆ ಪರೀಕ್ಷೆಗೆ ಒಳಗಾಗುತ್ತದೆ.

ಗರ್ಭಕಂಠ ಕ್ಯಾನ್ಸರ್​: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್​​ ಮೌಲ್ಯಮಾಪನ ಮಾಡುವಲ್ಲಿ ಪ್ರಮುಖ ಸಾಧನ ಪ್ಯಾಪ್​​ಸ್ಮೀಯರ್​. ಇದು ಕರ್ಭಕಂಠದ ಅಸಹಜ ಕೋಶಗಳನ್ನು ಪತ್ತೆ ಮಾಡುತ್ತದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅದರ ಬಗ್ಗೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುವುದು ಹೆಚ್ಚು ಮುಖ್ಯ.

ಮಹಿಳೆಯರು ತಮ್ಮ ಆರೋಗ್ಯದ ಎಚ್ಚರಿಕೆ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು. ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಗಾಗುವುದನ್ನು ನಿಯಮಿತವಾಗಿ ಮಾಡಬೇಕು. ಅನೇಕ ಗಂಭೀರ ಸಮಸ್ಯೆಗಳು ಮುಂಚೆಯೇ ಪತ್ತೆಯಾಗುತ್ತದೆ. ಅದಕ್ಕೆ ಸೂಕ್ತ ಚಿಕಿತ್ಸೆಗೆ ಇದು ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್​ ಬೆರಳ ತುದಿಯಲ್ಲೇ ಅಗತ್ಯ ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಕೂದಲು ಉದುರುವ ಸಮಸ್ಯೆಯೇ? ಹೆಚ್ಚು ಖರ್ಚಿಲ್ಲ, ಮನೆಯಲ್ಲೇ ಇದೆ ಪರಿಹಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.