ETV Bharat / sukhibhava

ನಾವು ಹಣ್ಣುಗಳನ್ನು ಏಕೆ ತಿನ್ನಬೇಕು?: ಮದುಮೇಹಿಗಳಿಗೆ ಫಲ ಸೇವನೆ ಅಪಾಯವೇ? - VLCC Healthcare Program

ಮಧುಮೇಹಿಗಳು ಖಂಡಿತವಾಗಿಯೂ ಹಣ್ಣುಗಳನ್ನು ಸೇವಿಸಬಹುದು. ಹಣ್ಣುಗಳು ರಕ್ತವನ್ನು ಕ್ಷಾರೀಯವಾಗಿಸುತ್ತವೆ. ಇದು ಯಾವಾಗಲೂ ಉತ್ತಮ ಆರೋಗ್ಯಕ್ಕೆ ಮತ್ತು ಉತ್ತಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ಅಲ್ಲದೇ, ರಕ್ತದಲ್ಲಿನ ಗ್ಲೂಕೋಸ್ ಅನ್ನು ಸ್ಥಿರಗೊಳಿಸಲು ಫ್ರಕ್ಟೋಸ್ ಸಹಾಯ ಮಾಡುತ್ತದೆ ”. ಆದರೂ, ಅತಿಯಾಗಿ ಹಣ್ಣುಗಳನ್ನು ತಿನ್ನುವುದು ನಕಾರಾತ್ಮಕ ಪರಿಣಾಮಗಳನ್ನೂ ಉಂಟುಮಾಡಬಹುದು ಆದ್ದರಿಂದ, ಮಧುಮೇಹಿಗಳು ಹಣ್ಣುಗಳನ್ನು ಸೇವಿಸಬಹುದು. ಆದರೆ, ಮಿತವಾಗಿ ಸೇವಿಸಬೇಕು ಎಂದು ಡಾ. ದೀಪ್ತಿ ಶಿಫಾರಸು ಮಾಡುತ್ತಾರೆ.

Why should we eat fruit? Is fruit consuption is dangerous for sugar patients..?
ನಾವು ಹಣ್ಣುಗಳನ್ನು ಏಕೆ ತಿನ್ನಬೇಕು?.. ಮದುಮೇಹಿಗಳಿಗೆ ಫಲ ಸೇವನೆ ಅಪಾಯವೇ?
author img

By

Published : Sep 24, 2020, 8:23 PM IST

ನಮ್ಮ ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಅಗತ್ಯಗಳನ್ನು ಪೂರೈಸಲು ತರಕಾರಿಗಳು ಎಷ್ಟು ಮುಖ್ಯವೋ, ಹಣ್ಣುಗಳು ಸಹ ದೇಹಕ್ಕೆ ಬೇಕಾದ ಅಗತ್ಯ ಅಂಶಗಳ ಪೂರೈಕೆಯಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ. ಹಣ್ಣುಗಳು ಆರೋಗ್ಯಕರ ಸ್ನ್ಯಾಕಿಂಗ್ ಆಯ್ಕೆಯಾಗಿದೆ ಮತ್ತು ಅದರ ನೈಸರ್ಗಿಕ ಸಕ್ಕರೆ ಅಂಶದೊಂದಿಗೆ ಹಲ್ಲುಗಳಿಗೆ, ದೇಹಕ್ಕೆ ಬೇಕಾದ ಸಿಹಿ ಪೂರೈಸುವಲ್ಲಿ ಸಹಕಾರಿಯಾಗಿದೆ.

ಈ ಕುರಿತು ವಿಎಲ್‌ಸಿಸಿ ಹೆಲ್ತ್‌ಕೇರ್ ಕಾರ್ಯಕ್ರಮದ ಮುಖ್ಯಸ್ಥೆ ಡಾ. ದೀಪ್ತಿ ವರ್ಮಾ “ಹಣ್ಣು ಸಸ್ಯದ ಬೀಜವನ್ನು ಹೊಂದಿರುವ ಭಾಗವಾಗಿದ್ದು, ಅದನ್ನು ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು. ಅವು ಪೌಷ್ಟಿಕ ಮತ್ತು ನಾರಿನ ಉತ್ತಮ ಮೂಲವಾಗಿದೆ ” ಎಂದು ಹೇಳುತ್ತಾರೆ. ಈ ಬಗ್ಗೆ ನಮ್ಮ ತಜ್ಞರು ವಿವರಿಸಿದಂತೆ ಹಣ್ಣುಗಳ ಕೆಲವು ಪ್ರಯೋಜನಗಳು ಇಲ್ಲಿವೆ.

ಹಣ್ಣುಗಳ ಪ್ರಯೋಜನಗಳು:

ಅವು ರೌಗೇಜ್ ಮತ್ತು ಫೈಬರ್​ಗಳ ಉತ್ತಮ ಮೂಲವಾಗಿರುವುದರಿಂದ ಉತ್ತಮ ಕರುಳಿನ ಆರೋಗ್ಯ, ಹೈಪೋಥೈರಾಯ್ಡಿಸಮ್, ಹೃದ್ರೋಗಗಳು ಬಾರದಂತೆ ಕಾಯ್ದುಕೊಳ್ಳಲು, ಡಯಾಬಿಟಿಸ್ ಮೆಲ್ಲಿಟಸ್, ಪಿಸಿಒಎಸ್ ಇತ್ಯಾದಿಗಳಿಂದ ದೂರವಿರಲು ಸಹಕಾರಿಯಾಗಿರುವುದರಿಂದ ಇದನ್ನು ಶಿಫಾರಸು ಮಾಡಲಾಗಿದೆ.

ಅವು ಫ್ರಕ್ಟೋಸ್ ಎಂಬ ಹಣ್ಣಿನ ಸಕ್ಕರೆಯನ್ನು ಹೊಂದಿರುತ್ತವೆ. ಇದು ರಕ್ತದಲ್ಲಿನ ಇನ್ಸುಲಿನ್ ಬಿಡುಗಡೆಯನ್ನು ಸ್ಥಿರಗೊಳಿಸುತ್ತದೆ. ಹಾಗೂ ಮಧುಮೇಹದ ಮೆಲ್ಲಿಟಸ್ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಹಣ್ಣುಗಳು ಆರೋಗ್ಯಕರ ಸೂಕ್ಷ್ಮ ಪೋಷಕಾಂಶಗಳ ಅತ್ಯಂತ ಶ್ರೀಮಂತ ಮೂಲವಾಗಿದೆ. ಅಂದರೆ, ಹಣ್ಣುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ದೇಹದಲ್ಲಿನ ಚಯಾಪಚಯ ಚಟುವಟಿಕೆಗಳ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ.

ಹಣ್ಣುಗಳು ಪೊಟ್ಯಾಸಿಯಂ ನ ಉತ್ತಮ ಮೂಲವಾಗಿದೆ. ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಸಹಾಯ ಮಾಡುತ್ತದೆ. ಜೊತೆಗೆ ಮೂತ್ರಪಿಂಡದಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ. ಅಲ್ಲದೇ, ಹಣ್ಣುಗಳಲ್ಲಿ ಫೈಟೊಕೆಮಿಕಲ್ಸ್, ಹಣ್ಣುಗಳಲ್ಲಿ ಬಣ್ಣದ ಅಂಶ ಸಮೃದ್ಧವಾಗಿವೆ. ಇದು ನಮ್ಮ ದೇಹದಲ್ಲಿ ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಹಣ್ಣುಗಳನ್ನು ಯಾವಾಗ ತಿನ್ನಬೇಕು?

ಹಣ್ಣುಗಳ ಸೇವನೆ ಪ್ರಯೋಜನಕಾರಿಯಾಗಿದ್ದು, ನಿತ್ಯ ಸೇವಿಸುವುದು ಆರೋಗ್ಯಕರ ಅಭ್ಯಾಸವಾಗಿದೆ. ಡಾ. ದೀಪ್ತಿ ಬೇರೆ ಯಾವುದೇ ಆಹಾರಕ್ಕೆ ಪ್ರತ್ಯೇಕವಾಗಿ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಅಂದರೆ ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರಕ್ತವು ಹಣ್ಣಿನಲ್ಲಿನ ಜೀವಸತ್ವಗಳು ಮತ್ತು ಖನಿಜಗಳನ್ನು ಉತ್ತಮವಾಗಿ ಹೀರಿಕೊಳ್ಳುವುದು. ಇದನ್ನು ಇತರ ಆಹಾರಗಳೊಂದಿಗೆ ತಿನ್ನುವುದರಿಂದ ಈ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಮಧುಮೇಹಿಗಳ ಬಗ್ಗೆ ಏನು?

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಆಗಾಗ ಹಣ್ಣುಗಳನ್ನು ತಿನ್ನಬೇಕೆ ಅಥವಾ ಬೇಡವೇ. ಸೇವಿಸಿದರೂ ಎಷ್ಟು ಸೇವಿಸಬಹುದು? ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆಯೇ? ಮತ್ತು ಇನ್ನೂ ಅನೇಕ ಪ್ರಶ್ನೆಗಳು ಇರುತ್ತದೆ. ಇದಕ್ಕೆ ನಮ್ಮ ತಜ್ಞರು ಹೇಳುತ್ತಾರೆ, “ಮಧುಮೇಹಿಗಳು ಖಂಡಿತವಾಗಿಯೂ ಹಣ್ಣುಗಳನ್ನು ಸೇವಿಸಬಹುದು. ಹಣ್ಣುಗಳು ರಕ್ತವನ್ನು ಕ್ಷಾರೀಯವಾಗಿಸುತ್ತವೆ. ಇದು ಯಾವಾಗಲೂ ಉತ್ತಮ ಆರೋಗ್ಯಕ್ಕೆ ಮತ್ತು ಉತ್ತಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ಅಲ್ಲದೇ, ರಕ್ತದಲ್ಲಿನ ಗ್ಲೂಕೋಸ್ ಅನ್ನು ಸ್ಥಿರಗೊಳಿಸಲು ಫ್ರಕ್ಟೋಸ್ ಸಹಾಯ ಮಾಡುತ್ತದೆ ”. ಆದರೂ, ಅತಿಯಾಗಿ ಹಣ್ಣುಗಳನ್ನು ತಿನ್ನುವುದು ನಕಾರಾತ್ಮಕ ಪರಿಣಾಮಗಳನ್ನೂ ಉಂಟು ಮಾಡಬಹುದು ಆದ್ದರಿಂದ, ಮಧುಮೇಹಿಗಳು ಹಣ್ಣುಗಳನ್ನು ಸೇವಿಸಬಹುದು ಆದರೆ, ಮಿತವಾಗಿ ಸೇವಿಸಬೇಕು ಎಂದು ಡಾ. ದೀಪ್ತಿ ಶಿಫಾರಸು ಮಾಡುತ್ತಾರೆ. ಅಂದರೆ, ಒಬ್ಬರು ಒಂದು ಸಮಯದಲ್ಲಿ 100-125 ಗ್ರಾಂ ಹಣ್ಣನ್ನು ಸೇವಿಸಬಹುದು ಮತ್ತು ಅದಕ್ಕಿಂತ ಹೆಚ್ಚಿಲ್ಲ.

ಯಾವುದೇ ಕೃತಕ - ಸಕ್ಕರೆ ಇರುವ ಸಿಹಿ ತಿಂಡಿಗಳನ್ನು ಸೇವಿಸುವುದಕ್ಕಿಂತ ಹಣ್ಣುಗಳು ಯಾವಾಗಲೂ ಆರೋಗ್ಯಕರ ಆಯ್ಕೆಯಾಗಿದೆ. "ಅತ್ಯುತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎರಡು ಬಾರಿ ಕನಿಷ್ಠ 100 ಗ್ರಾಂ ಹಣ್ಣುಗಳನ್ನು ಶಿಫಾರಸು ಮಾಡಲಾಗಿದೆ". ಮತ್ತು ‘ದಿನಕ್ಕೆ ಒಂದು ಸೇಬು ಸೇವನೆ ವೈದ್ಯರನ್ನು ದೂರವಿರಿಸುತ್ತದೆ’ ಎಂಬ ಮಾತಿನಂತೆ, ನಿತ್ಯ ಒಂದು ಹಣ್ಣಿನ ಸೇವನೆಯು ತುಂಬಾ ಪರಿಣಾಮಕಾರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.