ETV Bharat / sukhibhava

ವಾರಕ್ಕೊಮ್ಮೆ ಅಥವಾ ಪ್ರತಿದಿನ ಜಿಮ್ ವರ್ಕೌಟ್.. ಯಾವುದು ಬೆಸ್ಟ್?

ವಾರಕ್ಕೊಂದು ಬಾರಿ ಗಂಟೆಗಟ್ಟಲೇ ದೀರ್ಘಕಾಲ ವ್ಯಾಯಾಮ ಮಾಡುವುದಕ್ಕಿಂತ ನಿತ್ಯ ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಪರಿಣಾಮಕಾರಿಯಾಗಿರುವುದು ಅಧ್ಯಯನಗಳಲ್ಲಿ ಕಂಡು ಬಂದಿದೆ.

What you need to know if you're working out at the gym..

author img

By

Published : Aug 16, 2022, 10:59 AM IST

ಸಿಡ್ನಿ: ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಆದರೆ, ನಿತ್ಯ ಸ್ವಲ್ಪ ವ್ಯಾಯಾಮ ಮಾಡುವುದು ಉತ್ತಮವೇ ಅಥವಾ ವಾರದಲ್ಲಿ ಯಾವಾಗಲೋ ಒಮ್ಮೆ ಹೆಚ್ಚು ಪ್ರಮಾಣದಲ್ಲಿ ವ್ಯಾಯಾಮ ಮಾಡುವುದು ಉತ್ತಮವೇ? ಹೊಸ ಸಂಶೋಧನೆಯ ಪ್ರಕಾರ ನಿತ್ಯ ಸ್ವಲ್ಪಮಟ್ಟಿಗಿನ ವ್ಯಾಯಾಮ ಮಾಡುವುದು ಸೂಕ್ತ ಎನ್ನಲಾಗಿದೆ.

ನಿಯಮಿತವಾಗಿ ಮಾಡಬಹುದಾದ ವ್ಯಾಯಾಮಗಳು ದೈಹಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ನಿಜವಾದ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳು ಹೇಳಿವೆ. ಜನರು ಜಿಮ್‌ನಲ್ಲಿ ಸುದೀರ್ಘ ಅವಧಿಯವರೆಗೆ ವ್ಯಾಯಾಮ ಮಾಡಬೇಕೆಂದು ಭಾವಿಸುತ್ತಾರೆ, ಆದರೆ ಅದು ಸರಿಯಲ್ಲ ಎನ್ನುತ್ತಾರೆ ಕೆನ್ ನೊಸಾಕಾ. ಕೆನ್ ಇವರು ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದಲ್ಲಿ (ECU) ವ್ಯಾಯಾಮ ಮತ್ತು ಕ್ರೀಡಾ ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ. ಭಾರೀ ಡಂಬೆಲ್ ಒಂದನ್ನು ದಿನಕ್ಕೆ ಒಮ್ಮೆ ಅಥವಾ ಆರು ಬಾರಿ ನಿಧಾನವಾಗಿ ಎತ್ತಿ ಇಳಿಸಿದರೆ ಸಾಕು ಎನ್ನುತ್ತಾರೆ ಕೆನ್.

ಎಡಿತ್ ಕೋವನ್ ವಿಶ್ವವಿದ್ಯಾಲಯದ ತಂಡವು ಜಪಾನ್‌ನ ನಿಗಾಟಾ ವಿಶ್ವವಿದ್ಯಾಲಯ ಮತ್ತು ನಿಶಿ ಕ್ಯುಶು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಾಲ್ಕು ವಾರಗಳ ಕಾಲ ವ್ಯಾಯಾಮ ತರಬೇತಿಯ ಬಗ್ಗೆ ಅಧ್ಯಯನಗಳನ್ನು ನಡೆಸಿತು. ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಮೂರು ಗುಂಪುಗಳು ತೋಳಿನ ಪ್ರತಿರೋಧ ವ್ಯಾಯಾಮ ಮತ್ತು ಸ್ನಾಯುವಿನ ಬಲದಲ್ಲಿ ಬದಲಾವಣೆಗಳನ್ನು ತೋರುವ ವ್ಯಾಯಾಮಗಳನ್ನು ಪ್ರದರ್ಶಿಸಿದವು.

ಇವರೆಲ್ಲರ ಸ್ನಾಯುವಿನ ದಪ್ಪವನ್ನು ಅಳೆಯಲಾಯಿತು ಮತ್ತು ಪರಸ್ಪರ ಹೋಲಿಕೆ ಮಾಡಲಾಯಿತು. ವ್ಯಾಯಾಮವು - ಗರಿಷ್ಠ ಸ್ವಯಂಪ್ರೇರಿತ ವಿಕೇಂದ್ರಿತ ಬೈಸೆಪ್ ಸಂಕೋಚನಗಳನ್ನು- (maximal voluntary eccentric bicep contractions) ಒಳಗೊಂಡಿತ್ತು. ಜಿಮ್‌ನಲ್ಲಿ ಅವರು ಮಾಡುವ ಪ್ರತಿಯೊಂದು ವ್ಯಾಯಾಮದ ಸ್ನಾಯುವಿನ ಸಂಕೋಚನದಲ್ಲಿ ಉಂಟಾಗುವ ಸ್ನಾಯುವಿನ ಬಲವನ್ನು ಅಳೆಯಬಹುದಾದ ಜಿಮ್​ ಮಶೀನ್​ನಲ್ಲಿ ಈ ವ್ಯಾಯಾಮಗಳನ್ನು ಮಾಡಲಾಯಿತು.

ವಿಕೇಂದ್ರಿತ ಸಂಕೋಚನವೆಂದರೆ ಸ್ನಾಯು ಉದ್ದವಾಗುವುದು; ಈ ಸಂದರ್ಭದಲ್ಲಿ, ಬೈಸೆಪ್ ಕರ್ಲ್‌ನಲ್ಲಿ ಭಾರವಾದ ಡಂಬೆಲ್​ ಅನ್ನು ಕೆಳಗಿಳಿಸಿದಂತೆ ಎಂದರ್ಥ. ಎರಡು ಗುಂಪುಗಳು ವಾರಕ್ಕೆ 30 ಸಂಕೋಚನ ವ್ಯಾಯಾಮಗಳನ್ನು ನಿರ್ವಹಿಸಿದವು. ಒಂದು ಗುಂಪು ವಾರದಲ್ಲಿ ಐದು ದಿನಗಳವರೆಗೆ ದಿನಕ್ಕೆ ಆರು ಸಂಕೋಚನಗಳನ್ನು ಮಾಡಿತು (6 x 5 ಗುಂಪು). ಇನ್ನೊಂದು ಗುಂಪು ವಾರಕ್ಕೊಂದು ಬಾರಿಯಂತೆ (30 x 1 ಗುಂಪು) ಒಂದೇ ದಿನದಲ್ಲಿ ಎಲ್ಲಾ 30 ಸಂಕೋಚನ ವ್ಯಾಯಾಮಗಳನ್ನು ಮಾಡಿತು. ಇನ್ನೊಂದು ಗುಂಪು ವಾರದಲ್ಲಿ ಒಂದು ದಿನ ಮಾತ್ರ ಆರು ಸಂಕೋಚನ ವ್ಯಾಯಾಮಗಳನ್ನು ನಡೆಸಿತು.

ನಾಲ್ಕು ವಾರಗಳ ನಂತರ, ಒಂದೇ ದಿನದಲ್ಲಿ 30 ಸಂಕೋಚನಗಳನ್ನು ಮಾಡುವ ಗುಂಪು ಸ್ನಾಯುವಿನ ಬಲದಲ್ಲಿ ಯಾವುದೇ ಹೆಚ್ಚಳವನ್ನು ತೋರಿಸಲಿಲ್ಲ, ಆದಾಗ್ಯೂ ಸ್ನಾಯುವಿನ ದಪ್ಪವು (ಸ್ನಾಯು ಗಾತ್ರದಲ್ಲಿನ ಹೆಚ್ಚಳದ ಸೂಚಕ) 5.8 ರಷ್ಟು ಹೆಚ್ಚಾಗಿತ್ತು. ವಾರಕ್ಕೊಮ್ಮೆ ಆರು ಸಂಕೋಚನ ವ್ಯಾಯಾಮಗಳನ್ನು ಮಾಡುವ ಗುಂಪು ಸ್ನಾಯುವಿನ ಬಲ ಮತ್ತು ಸ್ನಾಯುವಿನ ದಪ್ಪದಲ್ಲಿ ಯಾವುದೇ ಬದಲಾವಣೆಗಳನ್ನು ತೋರಿಸಲಿಲ್ಲ. ಆದಾಗ್ಯೂ, 6 x 5 ಗುಂಪು ಸ್ನಾಯುವಿನ ಬಲದಲ್ಲಿ ಗಮನಾರ್ಹ ಹೆಚ್ಚಳ ಕಂಡಿತು - ಇದು ಶೇಕಡಾ 10 ಕ್ಕಿಂತ ಹೆಚ್ಚಾಗಿತ್ತು - ಸ್ನಾಯುವಿನ ದಪ್ಪದಲ್ಲಿ ಹೆಚ್ಚಳದೊಂದಿಗೆ 30x1 ಗುಂಪಿನ ರೀತಿಯಲ್ಲೇ ಇದು ಹೆಚ್ಚಾಗಿತ್ತು.

ಸ್ನಾಯು ಬಲವು ನಮ್ಮ ಆರೋಗ್ಯಕ್ಕೆ ಮುಖ್ಯವಾಗಿದೆ. ಇದು ವಯಸ್ಸಾದಂತೆ ಸ್ನಾಯುವಿನ ದ್ರವ್ಯರಾಶಿ ಮತ್ತು ಶಕ್ತಿ ಕಡಿಮೆಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಸ್ನಾಯುವಿನ ದ್ರವ್ಯರಾಶಿಯಲ್ಲಿನ ಇಳಿಕೆಯಿಂದ ಹೃದಯರಕ್ತನಾಳದ ಕಾಯಿಲೆ, ಟೈಪ್ 2 ಮಧುಮೇಹ, ಕೆಲವು ಕ್ಯಾನ್ಸರ್​ಗಳು, ಬುದ್ಧಿಮಾಂದ್ಯತೆ, ಜೊತೆಗೆ ಆಸ್ಟಿಯೊಪೊರೋಸಿಸ್​ನಂಥ ಮಸ್ಕ್ಯುಲೋಸ್ಕೆಲಿಟಲ್ ಸಮಸ್ಯೆಗಳಂಥ ಅನೇಕ ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ನೊಸಾಕಾ. ನೋಸಾಕಾ ಅವರ ಈ ಸಂಶೋಧನಾ ವರದಿಯು ಸ್ಕಾಂಡಿನೇವಿಯನ್ ಜರ್ನಲ್ ಆಫ್ ಮೆಡಿಸಿನ್ ಅಂಡ್ ಸೈನ್ಸ್ ಇನ್ ಸ್ಪೋರ್ಟ್ಸ್‌ನಲ್ಲಿ ಪ್ರಕಟವಾಗಿದೆ.

ಇದಲ್ಲದೇ, ವಾರಕ್ಕೊಮ್ಮೆ ಹೆಚ್ಚು ಪ್ರಮಾಣದ ವ್ಯಾಯಾಮ ಮಾಡುವುದಕ್ಕಿಂತ ವ್ಯಾಯಾಮವನ್ನು ದೈನಂದಿನ ಚಟುವಟಿಕೆಯನ್ನಾಗಿ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ನೊಸಾಕಾ ಹೇಳಿದರು. ನೀವು ವಾರಕ್ಕೊಮ್ಮೆ ಜಿಮ್‌ಗೆ ಹೋಗುತ್ತಿದ್ದರೆ, ಅದು ಮನೆಯಲ್ಲಿ ನಿತ್ಯ ಸ್ವಲ್ಪ ಸ್ವಲ್ಪವೇ ವ್ಯಾಯಾಮ ಮಾಡುವಷ್ಟು ಪರಿಣಾಮಕಾರಿಯಲ್ಲಎಂದು ಅವರು ಹೇಳುತ್ತಾರೆ.

ವಾರಕ್ಕೊಂದು ಬಾರಿ ಗಂಟೆಗಟ್ಟಲೇ ದೀರ್ಘಕಾಲ ವ್ಯಾಯಾಮ ಮಾಡುವುದಕ್ಕಿಂತ ಪ್ರತಿದಿನ ಸಣ್ಣ ಪ್ರಮಾಣದಲ್ಲಿ ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಪರಿಣಾಮಕಾರಿಯಾಗಿರುವುದು ನಮ್ಮ ಅಧ್ಯಯನಗಳಲ್ಲಿ ಬೆಳಕಿಗೆ ಬಂದಿದೆ ಎನ್ನುತ್ತಾರೆ ನೊಸಾಕಾ.

ಇದನ್ನು ಓದಿ:ಋತುಬಂಧ ನಂತರ ಬರುವ ಮಾನಸಿಕ ಒತ್ತಡಕ್ಕೆ ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.