ನವದೆಹಲಿ: ಚಿಕ್ಕ ವಯಸ್ಸಿನಲ್ಲೇ ಮಾದಕದ್ರವ್ಯದ ಚಟಕ್ಕೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ಒತ್ತಡ, ಕುತೂಹಲ, ಸ್ನೇಹಿತರ ಸಹವಾಸದಿಂದ ಅನೇಕ ಯುವ ಜನತೆ ಈ ಮಾದಕ ವ್ಯಸನಕ್ಕೆ ಒಳಗಾಗಬಹುದು. ಈ ಮಾದಕ ದ್ರವ್ಯದ ದುರಪಯೋಗಗಳು ಸಮಾಜದ ಭಾಗವಾಗಿದೆ. ಕಳೆದೊಂದು ದಶಕದಿಂದ ಇದರ ಪರಿಣಾಮ ಹದಗೆಟ್ಟಿದೆ. ಈ ಮಾದಕ ದ್ರವ್ಯದ ವಿರುದ್ಧ ಯುವ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜೂನ್ 8ರಂದು ರಾಷ್ಟ್ರೀಯ ಮಾದಕ ದ್ರವ್ಯ ನಿರ್ಮೂಲನೆ ದಿನವನ್ನಾಗಿ ಆಚರಿಸಲಾಗುವುದು.
ಭಾರತವೂ ಗೋಲ್ಡನ್ ಕ್ರೆಸೆಂಟ್ ಮತ್ತು ಗೋಲ್ಡನ್ ಟ್ರಯಾಂಗಲ್ ಮಾದಕ ದ್ರವ್ಯದ ನೆಟ್ವರ್ಕ್ ಜಾಲದ ಮಧ್ಯದಲ್ಲಿದೆ. ಇದರಿಂದಾಗಿ ವ್ಯಾಪಾರ ಮಾರ್ಗವಾಗಿ ಮತ್ತು ಮಾದಕವಸ್ತು ಕಳ್ಳಸಾಗಣೆದಾರರಿಗೆ ಪ್ರಮುಖ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವರದಿಯಲ್ಲಿ ದೇಶದಲ್ಲಿ 2.3 ಲಕ್ಷ ಜನರು ಮಾದಕ ವ್ಯಸನಿಗಳಾಗಿದ್ದಾರೆ. ಈ ಅಂಶಗಳನ್ನು ಗಮನಿಸಿದಾಗ ಇದರ ಸೇವನೆ ಅಧಿಕವಾಗಿರುವುದು ಸ್ಪಷ್ಟವಾಗುತ್ತದೆ.
ಭಾರತದ ಮಾದಕ ದ್ರವ್ಯಗಳ ಸಿಂಡಿಕೇಟ್ ಪಶ್ಚಿಮ ಯುರೋಪ್, ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದ ದೇಶಗಳೊಂದಿಗೆ ಸಂಪರ್ಕವನ್ನು ಹೊಂದಿವೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಪ್ರಕಾರ ಪ್ರತಿ ವರ್ಷ 360 ಮೆಟ್ರಿಕ್ ಟನ್ ಲೂಸ್ ಹೆರಾಯಿನ್ ಭಾರತದ ವಿವಿಧ ನಗರಗಳಲ್ಲಿ ಕಳ್ಳ ಸಾಗಾಣಿಕೆಯಾಗುತ್ತದೆ. ಅಂಕಿ - ಅಂಶಗಳ ಪ್ರಕಾರ, 20 ಲಕ್ಷ ಕೈದಿಗಳು ದಿನಕ್ಕೆ 1000 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ಬಳಸುತ್ತಾರೆ. ಈ ವ್ಯಸನವನ್ನು ನಿಯಂತ್ರಿಸಲು ಕೆಲವು ಮಾರ್ಗಗಳಿವೆ. ಅವುಗಳ ಮೂಲಕ ಯುವ ಜನರನ್ನು ಇದರಿಂದ ದೂರ ಇರಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.
ಮಾದಕ ವ್ಯಸನದ ಚಟವನ್ನು ಗುಣಪಡಿಸಲಾಗುವುದು. ಆದರೆ, ಸಕಾರಾತ್ಮಕ ಚಟುವಟಿಕೆ ಮೂಲಕ ಇದನ್ನು ಮುಕ್ತಗೊಳಿಸಬಹುದು. ವ್ಯಾಯಾಮ, ಕಲೆಗಳ ಅಭ್ಯಾಸ, ಮಾರ್ಷಿಯಲ್ ಕಲೆ ಇತ್ಯಾದಿಗಳನ್ನು ಅಭ್ಯಾಸ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಬಹುದು.
ವ್ಯಸನವನ್ನು ತೊಡೆದು ಹಾಕಲು ಅದಕ್ಕೆ ಪರ್ಯಾಯ ಅಭ್ಯಾಸ ರೂಢಿಸಿಕೊಳ್ಳಬಹುದು. ಉದಾಹರಣೆಗೆ, ಧೂಮಪಾನ ಮಾಡುತ್ತಿದ್ದರೆ ಅಥವಾ ತಂಬಾಕನ್ನು ಅಗಿಯುತ್ತಿದ್ದರೆ, ಅದನ್ನು ಏಲಕ್ಕಿ ಅಥವಾ ಫೆನ್ನೆಲ್ನೊಂದಿಗೆ ಬದಲಿಸಲು ಪ್ರಯತ್ನಿಸಬೇಕು.
ವೈದ್ಯರು ಅಥವಾ ಸಲಹೆಗಾರರ ಸಹಾಯ ಪಡೆಯುವುದು ಸಹ ಉತ್ತಮವಾಗಿದೆ. ಮಾದಕ ದ್ರವ್ಯಗಳನ್ನು ದೂರವಿರುವುದು ಪ್ರಮುಖವಾಗಿದೆ. ವ್ಯಸನದಿಂದ ದೂರಾಗಲು ಪ್ರಯತ್ನಗಳನ್ನು ಮುಖ್ಯವಾಗುತ್ತದೆ. ಇದರ ವಿರುದ್ಧ ಹೋರಾಡಲು ನಿಮ್ಮನ್ನು ನೀವು ಸಜ್ಜಾಗಬೇಕಿದೆ.
ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮಗಳೇನು?: ದೀರ್ಘಕಾಲದ ಮಾದಕ ವಸ್ತುಗಳ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ನಿರ್ಧಾರ, ವರ್ತನೆ, ನಿಯಂತ್ರಣ ಮತ್ತಿತರ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥೆತೆಗಳಿಗೆ ಒಳಗಾಗಬಹುದು. ಕುಟುಂಬ, ಸ್ನೇಹಿತರು ಅಥವಾ ಮನೆ ಹಾಗೂ ಹೊರಗಿನ ಕೆಲಸಗಳ ಜವಾಬ್ದಾರಿಯ ಕುರಿತು ಸರಿಯಾಗಿ ಗಮನ ನೀಡಲು ಸಾಧ್ಯವಾಗುವುದಿಲ್ಲ. ಆರಂಭದಲ್ಲೇ ಇದರ ಬಗ್ಗೆ ಎಚ್ಚರ ವಹಿಸದಿದ್ದರೆ ವ್ಯಸನದಿಂದ ಮುಕ್ತರಾಗುವುದು ಕಷ್ಟ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್ ಫುಡ್: ವೈದ್ಯರು