ETV Bharat / sukhibhava

ಕೋವಿಡ್​ ಅಪಾಯ ಕಡಿಮೆ ಮಾಡಲು ತರಕಾರಿ, ಕಾಳು, ಒಣಹಣ್ಣು ಸೇವನೆ ಒಳ್ಳೆಯದು - ಕೋವಿಡ್​ 19 ಸೋಂಕಿನ ಅಪಾಯ

ಕೋವಿಡ್​ ಸೋಂಕಿತರಲ್ಲಿ ಆಹಾರ ಕ್ರಮವು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬ ಕುರಿತು ಅಧ್ಯಯನ ತಿಳಿಸಿದೆ.

vegetarian diet lower odds of Covid 19 infection

author img

By ETV Bharat Karnataka Team

Published : Jan 11, 2024, 3:17 PM IST

ಹೈದರಾಬಾದ್​: ಸಸ್ಯಾಧಾರಿತ ಉತ್ಪನ್ನಗಳ ಹೆಚ್ಚು ಸೇವನೆ ಅಥವಾ ತರಕಾರಿ, ಕಾಳುಗಳು, ನಟ್ಸ್​ಗಳಿಂದ ಕೂಡಿದ ಡಯಟಿಂಗ್​ನಿಂದ ಕೋವಿಡ್​ 19 ಸೋಂಕನ್ನು ಶೇ 39ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಬ್ರೆಜಿಲ್​ನ ಸಾವೊ ಪೌಲೊ ಯುನಿವರ್ಸಿಟಿ ಸಂಶೋಧಕರು ತಿಳಿಸಿರುವಂತೆ ಕಡಿಮೆ ಡೈರಿ ಉತ್ಪನ್ನಗಳು ಮತ್ತು ಮಾಂಸಗಳು ಸೋಂಕಿಗೆ ಕಾರಣವಾಗಬಹುದು. ಸಸ್ಯಾಧಾರಿತ ಆಹಾರಗಳು ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟ್​​, ಫೈಟೊಸ್ಟೆರಾಲ್​​ ಮತ್ತು ಪಾಲಿಫಿನಾಲ್​ಗಳಿಂದ ಕೂಡಿದ್ದು, ಇವು ರೋಗ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಅನೇಕ ರೀತಿಯ ಕೋಶಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದು ರೋಗ ನಿರೋಧಕ ಅಂಶವನ್ನು ನೇರವಾಗಿ ಪ್ರದರ್ಶಿಸುತ್ತದೆ ಎಂದು ತಂಡವೂ ತಿಳಿಸಿದೆ. ಈ ಅಧ್ಯಯನವನ್ನು ಬಿಎಂಜೆ ನ್ಯೂಟ್ರಿಷನ್​ ಪ್ರಿವೆನ್ಷನ್​​ ಮತ್ತು ಹೆಲ್ತ್​​ನಲ್ಲಿ ಓದಲು ಲಭ್ಯವಿದೆ.

ಆಹಾರದ ಅಂಶಗಳು ಕೋವಿಡ್​ ರೋಗಿಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂದು ಮೌಲ್ಯಮಾಪನ ಮಾಡಲು ತಂಡವು ಮುಂದಾಗಿದೆ. ಇದಕ್ಕಾಗಿ 2022ರ ಮಾರ್ಚ್​ನಿಂದ ಜುಲೈವರೆಗೆ 702 ವಯಸ್ಕ ಸ್ವಯಂ ಕಾರ್ಯಕರ್ತರು ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ 424 ಮಂದಿ ಒಮ್ನಿವೈರಸ್​​​ (ಸಸ್ಯ ಮತ್ತು ಪ್ರಾಣಿ ಮಾಂಸ ಸೇವಿಸುವವರಾಗಿದ್ದು), 278 ಮಂದಿ ಸಸ್ಯಾಧಾರಿತ ಆಹಾರ ಸೇವಿಸುವ ಗುಂಪಿನವರಾಗಿದ್ದಾರೆ.

ಆಹಾರ ಸೇವನೆ ಗುಂಪನ್ನು ಮೂರು ವರ್ಗವಾಗಿ ವಿಂಗಡಿಸಲಾಗಿದೆ. ವಾರದಲ್ಲಿ ಮೂರು ಬಾರಿ ಮಾಂಸ ಅಥವಾ ವಾರದಲ್ಲಿ ಕೆಲವು ಸಮಯ ಮಾಂಸ ಸೇವನೆ ಗುಂಪು ಮತ್ತು ತರಕಾರಿ ಸೇವಿಸುವ ಗುಂಪು ಮತ್ತು ಸಸ್ಯಾಹಾರಿಗಳು ಮತ್ತು ವೇಗನ್​ ಎಂದು ವಿಭಾಗಿಸಲಾಗಿದೆ.

ಓಮ್ನಿವೈರಸ್​​ ಗುಂಪಿನ ಮಂದಿ ಕಡಿಮೆ ದೈಹಿಕ ಚಟುವಟಿಕೆ ಹೊಂದಿದ್ದು, ಅಧಿಕ ಆರೋಗ್ಯ ಸಮಸ್ಯೆ ಹೊಂದಿರುವುದು ಕಂಡು ಬಂದಿದೆ. ಜೊತೆಗೆ ಇವರಲ್ಲಿ ಸ್ಥೂಲಕಾಯ ಮತ್ತು ಅಧಿಕ ತೂಕ ಕೋವಿಡ್​ನ ತೀವ್ರ ಲಕ್ಷಣದ ಜೊತೆಗೆ ಸಂಬಂಧ ಹೊಂದಿರುವುದು ಕಂಡು ಬಂದಿದೆ.

330 ಜನರಲ್ಲಿ ಅಂದರೆ ಶೇ 47ರಷ್ಟು ಮಂದಿಯಲ್ಲಿ ಕೋವಿಡ್​ 19 ಸೋಂಕು ಇದೆ ಎಂದು ತಿಳಿಸಿದ್ದು, 224 ಮಂದಿ ಸೌಮ್ಯ ಮತ್ತು 106 ಮಂದಿ ಸಾಧಾರಣದಿಂದ ತೀವ್ರ ಲಕ್ಷಣ ಹೊಂದಿರುವುದಾಗಿ ತಿಳಿಸಿದ್ದಾರೆ.

ಸಸ್ಯಾಧಾರಿತ ಆಹಾರ ಪದ್ಧತಿ ಹೊಂದಿರುವ ಗುಂಪಿಗೆ ಹೋಲಿಸಿದಾಗ ಓಮ್ನಿವೈರಸ್​​ಗಳಲ್ಲಿ ಕೋವಿಡ್​ 19ನ ಹೆಚ್ಚಾಗಿ ಕಂಡು ಬಂದಿದೆ. ಇವರಲ್ಲಿ ಸಾಧಾರಣದಿಂದ ತೀವ್ರತರದ ಸೋಂಕಿನ ಲಕ್ಷಣ ಕಂಡು ಬಂದಿದೆ. ಅತಿ ಹೆಚ್ಚಿನ ಸಸ್ಯಾಧಾರಿತ ಆಹಾರ ಅಥವಾ ವೇಗನ್​ ಡಯಟ್​​ ಹೊಂದಿರುವವರಲ್ಲಿ ಸೋಂಕಿನ ದರವೂ ಓಮ್ನಿವೈರಸ್​​ಗಳಿಗೆ ಹೋಲಿಕೆ ಮಾಡಿದಾಗ ಶೇ 39ರಷ್ಟಿದೆ.

ಸಸ್ಯ ಆಧಾರಿತ ಆಹಾರಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತವೆ. ಹಾಗೇ ವೈರಲ್ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಡಿಸೆಂಬರ್​ ಒಂದೇ ತಿಂಗಳಲ್ಲಿ ಕೋವಿಡ್​ನಿಂದ 10 ಸಾವಿರ ಮಂದಿ ಸಾವು: WHO

ETV Bharat Logo

Copyright © 2025 Ushodaya Enterprises Pvt. Ltd., All Rights Reserved.