ETV Bharat / sukhibhava

ಕೋವಿಡ್​ 19 ಸಾವು ಮತ್ತು ಗಂಭೀರತೆಯಿಂದ ಪಾರಾಗಲು ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯುವುದು ಅವಶ್ಯ; ಅಧ್ಯಯನ

ಜಾಗತಿಕವಾಗಿ ಮಲ್ಟಿ ಮೆಟಾ ವಿಶ್ಲೇಷಣೆಗಳು ಗರ್ಭಾವಸ್ಥೆಯ ಲಸಿಕೆಯಿಂದ ಗಂಭೀರ ಅಪಾಯ ಮತ್ತು ಅಡ್ಡಪರಿಣಾಮ ಇಲ್ಲ ಎನ್ನುವುದನ್ನು ದೃಢಪಡಿಸಿದೆ.

Vaccination in pregnancy greatly reduces risk of severe illness and death from COVID-19, and protects babies up to 6 months after birth
Vaccination during pregnancy is essential to avoid death and seriousness of Covid-19
author img

By

Published : Jul 4, 2023, 1:43 PM IST

ಟೊರೊಂಟೊ: ಸಾಂಕ್ರಾಮಿಕತೆ ಆರಂಭದಲ್ಲಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಕೋವಿಡ್​ 19 ಸೋಂಕು ಗಂಭೀರವಾಗಿತ್ತು ಎಂದು ಸ್ಪಷ್ಟಪಡಿಸಿತು. ಈ ಸಂಬಂಧ ನಡೆದ ನೂರಾರು ಅಧ್ಯಯನಗಳು ಕೂಡ ಇತರೆ ಕೋವಿಡ್​ 19 ರೋಗಿಗಳಿಗೆ ಹೋಲಿಕೆ ಮಾಡಿದಾಗ ಗರ್ಭಿಣಿರಲ್ಲಿ ಇದು ಹೆಚ್ಚಿನ ಅಪಾಯವನ್ನು ಹೊಂದಿತ್ತು.

ಗರ್ಭಾವಸ್ಥೆಯಲ್ಲಿ ಕೋವಿಡ್​​ 19 ಸೋಂಕಿನಿಂದ ಐಸಿಯುಗೆ ದಾಖಲಾಗುವ ಅಪಾಯವು ಐದು ಪಟ್ಟು ಹೆಚ್ಚು ಇರುವ ಜೊತೆಗೆ ಇದು ತಾಯಿಯ ಮರಣದ ಅಪಾಯವು 22 ಪಟ್ಟು ಹೆಚ್ಚು ಹೊಂದಿತ್ತು. ಭ್ರೂಣಕ್ಕೆ ಕೂಡ ಇದು ಅಪಾಯವನ್ನು ಹೊಂದಿದ್ದು, ಅವಧಿ ಪೂರ್ವ ಜನನ, ಕಡಿಮೆ ತೂಕದ ಮಗುವಿನ ಜನನದಂತಹ ಸಮಸ್ಯೆ ಜೊತೆಗೆ ನವಜಾತ ಶಿಶುಗಳ ಸಾವಿನ ಅಪಾಯವನ್ನು ಉಂಟುಮಾಡಿತ್ತು.

ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ, ಕೋವಿಡ್​ 19 ಸಮಯದಲ್ಲಿ ಲಸಿಕೆ ಪಡೆಯದ ಗರ್ಭಿಣಿಯರಲ್ಲಿ ಭ್ರೂಣ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಇದೇ ಅಧ್ಯಯನದಲ್ಲಿ ಶೇ 90ರಷ್ಟು ಆಸ್ಪತ್ರೆಗೆ ದಾಖಲಾದ ಮತ್ತು ಶೇ 98ರಷ್ಟು ಕ್ರಿಟಿಕಲ್​ ಕೇರ್​ ಆಸ್ಪತ್ರೆಗೆ ದಾಖಲಾದ ಕೋವಿಡ್​​ 19 ಸೋಂಕಿತ ಗರ್ಭಿಣಿಯರು ಲಸಿಕೆ ಪಡೆಯದವರು ಎಂದು ತೋರಿಸಿದೆ.

ಗರ್ಭಾವಸ್ಥೆಯಲ್ಲಿ ಕೋವಿಡ್​ 19 ಲಸಿಕೆ ಸುರಕ್ಷತೆ: ಈ ಕುರಿತು ಅಧ್ಯಯನ ನಡೆಸಿದ ವೈದ್ಯ ವಿದ್ಯಾರ್ಥಿ ಹಾಗೂ ಸೈನ್ಸ್​ ಕಮ್ಯೂನಿಕೇಟರ್​ ಪ್ರಕಾರ, ನಮ್ಮ ಅಧ್ಯಯನವೂ ಲಸಿಕೆ ಬಗ್ಗೆ ಇರುವ ಅಂಜಿಕೆ ಬಗ್ಗೆ ಸಾಕಷ್ಟು ಕೇಂದ್ರಿಕೃತವಾಗಿದೆ. ಗರ್ಭಾವಸ್ಥೆಯಲ್ಲಿನ ಕೋವಿಡ್​ 19 ಸೋಂಕಿನ ಅಪಾಯದ ಮಾಹಿತಿ ಇದ್ದರೂ ಸುರಕ್ಷತೆ ಹಿನ್ನೆಲೆ ಅನೇಕ ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಇದೀಗ ನಾವು ಗರ್ಭಾವಸ್ಥೆಯಲ್ಲಿ ಕೋವಿಡ್​​ 19 ಲಸಿಕೆ ಸುರಕ್ಷತೆ ಕುರಿತು ಸಾಕಷ್ಟು ಆಧಾರ ನೀಡುತ್ತೇವೆ ಎಂದಿದ್ದಾರೆ.

ಜಾಗತಿಕವಾಗಿ, ಮಲ್ಟಿ ಮೆಟಾ ವಿಶ್ಲೇಷಣೆಗಳು ಗರ್ಭಾವಸ್ಥೆಯ ಲಸಿಕೆಯಿಂದ ಗಂಭೀರ ಅಪಾಯ ಮತ್ತು ಅಡ್ಡಪರಿಣಾಮ ಇಲ್ಲ ಎನ್ನುವುದನ್ನು ದೃಢಪಡಿಸಿದೆ. ಗರ್ಭಪಾತ ಮತ್ತು ಅವಧಿ ಪೂರ್ವ ಜನನ, ಪ್ಲೆಸೆಂಟಾ ಅಬ್ರಪ್ಷನ್​, ಪ್ರಸವದ ಬಳಿಕದ ರಕ್ತಸ್ರಾವ, ತಾಯಂದಿರ ಸಾವು, ಕಡಿಮೆ ತೂಕದ ಮಗು ಜನನದಂತಹ ಯಾವುದೇ ಸಮಸ್ಯೆ ಅಪಾಯದ ಕುರಿತು ಸಾಕ್ಷ್ಯಗಳು ಇಲ್ಲ. ಬಹುತೇಕ ಅಧ್ಯಯನಗಳು ಲಸಿಕೆ ಸಕಾರಾತ್ಮಕ ಆರೋಗ್ಯದ ವೃದ್ಧಿಗೆ ಕೊಡುಗೆ ನೀಡಿರುವುದು ಕಂಡು ಬಂದಿದೆ. ಲಸಿಕೆ ಪಡೆದವರಲ್ಲಿ ಅವಧಿಪೂರ್ವದ ಜನನ ಮತ್ತಿತರ ಸಮಸ್ಯೆಯ ಅಪಾಯ ಕಡಿಮೆ ಇದೆ.

ಪ್ಲೆಸೆಂಟಾ ಮೂಲಕ ಆ್ಯಂಟಿಬಾಡಿಸ್​ ವರ್ಗಾವಣೆ: ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆದಾಗ ಸಾರ್ಸ್​-ಕೋವ್​-2 ಆ್ಯಂಟಿಬಾಡಿಗಳು ತಾಯಂದಿರ ಹೊಕ್ಕಳಬಳ್ಳಿಯಲ್ಲಿರುವುದನ್ನು ಅನೇಕ ಅಧ್ಯಯನಗಳು ತಿಳಿಸಿದೆ. ಇದು ಲಸಿಕೆಯ ಪ್ರಯೋಜನ ಕುರಿತು ತಿಳಿಸುತ್ತದೆ. ಸಾರ್ಸ್​​ ಕೋವ್​ 2 IgG ಆ್ಯಂಟಿಬಾಡಿಗಳು ಸಾಮಾನ್ಯವಾಗಿ ರಕ್ತದಲ್ಲಿ ಕಂಡು ಬಂದಿದ್ದು, ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಅದರಲ್ಲೂ ಗರ್ಭಾವಸ್ಥೆಯ ಮೂರನೇ ಹಂತದಲ್ಲಿ ಲಸಿಕೆ ಪಡೆದಾಗ ಇದು ಪ್ಲೆಸೆಂಟಾ ಮೂಲಕ ಭ್ರೂಣಕ್ಕೆ ತಲುಪುತ್ತದೆ.

ಮಕ್ಕಳಲ್ಲಿ ಕೋವಿಡ್​ 19 ಸಂಬಂಧಿತ ಸೋಂಕುಗಳು ಸಾಮಾನ್ಯವಾಗಿ ಸೌಮ್ಯವಾಗಿದ್ದು, ಗಣನೀಯ ವ್ಯತ್ಯಾಸವಿದೆ. ಮಧ್ಯಮ ವಯಸ್ಸಿನ ಮಕ್ಕಳು ತೀವ್ರತರವಾದ ಸೋಂಕಿಗೆ ತುತ್ತಾಗುತ್ತಾರೆ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು. ಸಾವು ಸೇರಿದಂತೆ ಸೋಂಕುಗಳಿಗೆ ಸಂಬಂಧಿಸಿದ ತೀವ್ರ ಪರಿಣಾಮಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ನಾಲ್ಕನೇ ವರ್ಷ ಸೋಂಕಿನ ಕಾಲದಲ್ಲಿ ನಾವಿದ್ದು, ಇದೀಗ ಮಕ್ಕಳನ್ನು ಮತ್ತು ನಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಹೆಚ್ಚುವರಿ ಬೂಸ್ಟರ್​ ಡೋಸ್​ ಪಡೆಯುವುದು ಅವಶ್ಯವಾಗಿದೆ. ತಾಯಿಯ ಮತ್ತು ಶಿಶುಗಳ ಆರೋಗ್ಯದ ಮೇಲೆ ಲಸಿಕೆ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ನೀಲಿ ಬಣ್ಣಕ್ಕೆ ತಿರುಗಿದ ನವಜಾತ ಶಿಶು: ಮಗುವಿನಲ್ಲಿನ ನಿಕೋಟಿನ್​ ಮಟ್ಟ ನೋಡಿ ವೈದ್ಯರೇ ಶಾಕ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.