ETV Bharat / sukhibhava

ತೂಕ ನಿರ್ವಹಣೆಗೆ ಸಿಹಿ ತ್ಯಜಿಸಬೇಡಿ; ಪರ್ಯಾಯ ಬಳಕೆ ಮಾಡಿ

ಸಿಹಿ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಹಲವರ ವಾದ. ಆದರೆ, ದೇಹಕ್ಕೆ ಅಗತ್ಯ ಪ್ರಮಾಣದ ಸಿಹಿ ಸಿಗದೇ ಹೋದರೂ ಸಮಸ್ಯೆಯೇ.

author img

By

Published : Mar 31, 2023, 1:18 PM IST

Use Sweets alternative way by quitting sugar

ಅನೇಕ ಮಂದಿ ತಮ್ಮ ದೇಹ ತೂಕ ನಿರ್ವಹಣೆಗೆ ಸಕ್ಕರೆ ತ್ಯಜಿಸುವುದೇ ಪರಿಹಾರ ಮಾರ್ಗ ಎಂದು ಭಾವಿಸುತ್ತಾರೆ. ಆದರೆ ಆರೋಗ್ಯಕರ ಬಿಎಂಐ (ಬಾಡಿ ಮಾಸ್​ ಇಂಡೆಕ್ಸ್​) ನಿರ್ವಹಣೆಗೆ ಸಿಹಿ ದೇಹಕ್ಕೆ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನಿಮ್ಮಿಷ್ಟದ ಸಿಹಿ ತಿಂಡಿಗಳನ್ನು ತ್ಯಜಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಕ್ಕರೆ ಬಿಡುವುದರಿಂದ ನಿಮ್ಮ ಆರೋಗ್ಯ ವೃದ್ಧಿ ಆಗುವುದಿಲ್ಲ. ಸಕ್ಕರೆರಹಿತ ಡಯಟ್​​ ಅನ್ನು ಸಂಶೋಧನೆ ಶಿಫಾರಸು ಮಾಡುವುದಿಲ್ಲ ಎಂದಿದ್ದಾರೆ.

ವ್ಯಕ್ತಿಯ ಉತ್ತಮ ಮತ್ತು ಕೆಟ್ಟ ಆಹಾರಗಳೊಂದಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಬಂಧ ಹೊಂದಿರುತ್ತದೆ. ಹೀಗಾಗಿ ಸಿಹಿ ಸೇವಿಸುವುದನ್ನು ನಿಲ್ಲಿಸಿದರೆ, ಅದಕ್ಕೆ ಪರ್ಯಾಯ ಆಹಾರ ವಿಧಾನ ಆರಿಸಿಕೊಳ್ಳಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಿಹಿ ಸೇವಿಸುವುದರಿಂದ ತೂಕ ಹೆಚ್ಚಳ ಕೂಡ ಆಗುವುದಿಲ್ಲ. ನಮ್ಮ ಮಾನಸಿಕ ಮತ್ತು ಭಾವಾನಾತ್ಮಕ ಯೋಗಕ್ಷೇಮಗಳು ಆಹಾರದೊಂದಿಗೆ ಸಂಬಂಧ ಹೊಂದಿರುವ ಜೊತೆಗೆ ದೈಹಿಕ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಬೇಕು.

ಅತಿ ಹೆಚ್ಚಿನ ಸಕ್ಕರೆ ತಪ್ಪಿಸುವುದು: ತೂಕ ನಿರ್ವಹಣೆಗೆ ಸಕ್ಕರೆ ಸೇವನೆಯನ್ನು ನಿಯಮಿತ ಮಾಡಬೇಕು. ಜೊತೆಗೆ, ಸಕ್ಕರೆ ಅಂಶ ಹೊಂದಿರುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಸಕ್ಕರೆ ಆಧಾರಿತ ಪಾನೀಯಗಳ ಬದಲಾಗಿ, ಸಿಹಿ ಅಂಶ ಇಲ್ಲದ ಪಾನೀಯಗಳಿಗೆ ಮುಂದಾಗಬೇಕು.

ಕಡಿಮೆ ಸಕ್ಕರೆ: ಡಯಟ್​ನಲ್ಲಿ ಸ್ವಲ್ಪ ಪ್ರಮಾಣದ ಸಕ್ಕರೆ ಸೇರಿಸುವುದು ಉತ್ತಮ. ಈ ವೇಳೆ ಸಕ್ಕರೆಯ ಕ್ಯಾಲೋರಿಯನ್ನು ಮೌಲ್ಯಮಾಪನ ಮಾಡಬೇಕು. ಈ ಕ್ಯಾಲೋರಿಯ ಒಟ್ಟಾರೆ ಮೊತ್ತವನ್ನು ಗಮನದಲ್ಲಿರಿಸಿಕೊಂಡು ಅದರ ಆಯ್ಕೆ ಮಾಡಬೇಕು. ಕಡಿಮೆ ಮಟ್ಟದ ಕ್ಯಾಲೋರಿ ಅಥವಾ ಫೈಬರ್​ ಅಥವಾ ಕ್ಯಾಲೋರಿ ರಹಿತ ಸಿಹಿಗಳು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಸಕ್ಕರೆ ಅಂಶ ಇರುವ ಹಿನ್ನೆಲೆಯಲ್ಲಿ ಅನೇಕ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ಕಡಿಮೆ ಮಾಡುವುದರಿಂದ ವಿಟಮಿನ್​ ಕೊರತೆ ಕಾಡುತ್ತದೆ. ಡೈರಿ ಉತ್ಪನ್ನದಿಂದಾಗಿ ನೈಸರ್ಗಿಕವಾದ ಸಿಹಿ ಅಂಶಗಳನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.

ಸಕ್ಕರೆ ತಿಂಡಿ ತಿನ್ನುವ ಆಸೆ: ಅನೇಕರು ಹಣ್ಣು ಮತ್ತು ಸೆರೆಲ್ಸ್​ ಸೇರಿದಂತೆ ಸಕ್ಕರೆ ಸಂಬಂಧಿಸದ ಎಲ್ಲಾ ಆಹಾರಗಳನ್ನು ತಪ್ಪಿಸುವುದು ಉತ್ತಮ ಮಾರ್ಗ ಎನ್ನುತ್ತಾರೆ. ಆದರೆ, ಇದು ತಪ್ಪು, ಇದರ ಬದಲಾಗಿ ಟೇಬಲ್​ ಶುಗರ್​ ಅನ್ನು ತಪ್ಪಿಸಬೇಕು. ನೈಸರ್ಗಿಕ ಸಕ್ಕರೆ ಸಂಸ್ಕರಿಸದ ಉತ್ಪನ್ನ ಈ ಟೇಬಲ್​ ಶುಗರ್​ ಆಗಿದೆ. ಈ ಸಕ್ಕರೆಯನ್ನು ನಿಮ್ಮ ದೇಹ ಸುಲಭವಾಗಿ ಹೀರುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಕಾರ್ಬೋಹೈಡ್ರೇಟ್​ ಲಭ್ಯವಾಗುತ್ತದೆ.

ತೂಕ ನಿರ್ವಹಣೆಗೆ ಡಯಟ್​ ಪ್ಲಾನ್​ ಹೇಗೆ ಸಹಾಯಕ?: ಡಯಟ್​ನಲ್ಲಿ ಸ್ಯಾಂಡ್​ವಿಚ್​, ಐಸ್​ಕ್ರೀಂಗಳ ಬದಲಾಗಿ ಬೇಳೆ ಕಾಳುಗಳನ್ನು ಸೇರಿಸಬಹುದು. ಸಕ್ಕರೆಯನ್ನು ತಿನ್ನಬೇಕು ಎನಿಸಿದರೆ, ಒಣ ಹಣ್ಣು, ಡಾರ್ಕ್​ ಚಾಕೋಲೆಟ್​​, ಬೆರ್ರಿ, ಬಾಳೆಹಣ್ಣು, ತೆಂಗಿನಕಾಯಿ, ಜೇನು ತಪ್ಪ, ಖರ್ಜೂರ, ಬೆಲ್ಲ ಸೇವಿಸಬಬಹುದು. ಇದರಿಂದ ಸಿಹಿ ತಿನ್ನಿಸುಗಳನ್ನು ತಯಾರಿಸುವ ಮೂಲಕ ನೈಸರ್ಗಿಕ ಸಕ್ಕರೆಯನ್ನು ಸೇವಿಸಬಹುದು.

ಸಕ್ಕರೆ ರಹಿತ ತಿಂಡಿ: ಹೆಚ್ಚಿನ ಫೈಬರ್​ ಹೊಂದಿದ ಓಟ್ಸ್​, ಯೋಗರ್ಟ್​, ಪ್ರೋಟಿನ್​ ಭರಿತ ಪ್ಲಾಕ್ಸ್​ ಬೀಜ, ಬಾದಾಮಿ, ಸಕ್ಕರೆ ರಹಿತ ಗ್ರಾನೋಲಾ ಆರೋಗ್ಯಯುತವಾಗಿದೆ. ಈ ಫ್ಲಾಕ್ಸ್​, ಕುಂಬಳಜಕಾಯಿ, ಸೂರ್ಯಕಾಂತಿ ಬೀಜ, ಓಟ್ಸ್​ಗಳನ್ನು ಸೇರಿಸಿ ಬೇಯಿಸಿ ತಿನ್ನಬಹುದು.

ರಾಗಿ ಬಳಕೆ: ರಾಗಿ ಸಂಪದ್ಬರಿತ ಆಹಾರವಾಗಿದ್ದು, ಆರೋಗ್ಯಕ್ಕೆ ಉತ್ತಮ. ಈ ರಾಗಿ ಬಳಕೆಯ ಪ್ಯಾನ್​ ಕೇಕ್​ಗಳನ್ನು ಬಳಸಬಹುದು. ಕ್ಯಾಲ್ಸಿಯಂ, ಫೈಬರ್​, ಕಬ್ಬಿಣದ ಅಂಶಗಳು ಇದರಲ್ಲಿರುತ್ತವೆ. ಅಲ್ಲದೇ ಇದರಿಂದ ತೂಕ ಹೆಚ್ಚಳವಾಗುತ್ತದೆ ಎಂಬ ಯಾವುದೇ ಚಿಂತೆ ಇರುವುದಿಲ್ಲ.

ಇದನ್ನೂ ಓದಿ: ಬೇಸಿಗೆ ಟಿಪ್ಸ್​: ಹುಳಿ ಬಂದ ಮೊಸರೆಂದು ಬಿಸಾಡದಿರಿ, ಹಲವು ಪ್ರಯೋಜನಗಳುಂಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.