ಬ್ಯಾಂಕಾಕ್: ಭಾರತೀಯ ಮನೆಗಳಲ್ಲಿ ಅಡುಗೆಗೆ ಸಾಮಾನ್ಯವಾಗಿ ಬಳಕೆ ಮಾಡುವ ಅರಿಶಿಣದಲ್ಲಿ ಪರಿಣಾಮಕಾರಿ ಒಮೆಪ್ರೊಜೋಲ್ ಇದ್ದು, ಇದು ಉದರದ ಆಮ್ಲತೆಯನ್ನು ನಿವಾರಣೆ ಮಾಡುತ್ತದೆ. ಜೊತೆಗೆ ಅಜೀರ್ಣದಂತಹ ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಕುರಿತು ಆನ್ಲೈನ್ ಜರ್ನಲ್ ಬಿಎಂಜೆನಲ್ಲಿ ಪ್ರಕಟಿಸಲಾಗಿದೆ.
ಕ್ಯುಕುಮ ಲೊಂಗಾ ಸಸ್ಯದ ಬೇರುಗಳಿಂದ ಈ ಅರಿಶಿಣ ಲಭ್ಯವಾಗುತ್ತದೆ. ಇದರಲ್ಲಿ ನೈಸರ್ಗಿಕವಾಗಿ ಊರಿಯುತ ನಿವಾರಣೆ ಮತ್ತು ಆ್ಯಂಟಿಮೈಕ್ರೋಬಯಲ್ ಅಂಶಗಳಿರುತ್ತವೆ. ಈ ಹಿನ್ನೆಲೆ ಆಗ್ನೇಯ ಏಷ್ಯಾದಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಅದರಲ್ಲೂ ಅಜೀರ್ಣದಂತಹ ಸಮಸ್ಯೆಯಲ್ಲಿ ದೀರ್ಘಕಾಲದಿಂದ ಬಳಕೆ ಮಾಡಲಾಗಿದೆ.
ಈ ಅಧ್ಯಯನದ ಫಲಿತಾಂಶದಲ್ಲಿ ಅರಿಶಿಣದ ಮಾತ್ರೆಗಳು ಒಮೆಪ್ರೊಜಾಲ್ನಂತೆ ಜೀರ್ಣಕ್ರಿಯೆ ಸುಧಾರಣೆಗೆ ಸಹಾಯಕಾರಿಯಾಗಿದೆ ಎಂದು ತೋರಿಸಿದೆ.
ಇದರಿಂದ ಯಾವುದೇ ಗಂಭೀರ ಅಡ್ಡ ಪರಿಣಾಮ ಇಲ್ಲ. ಯಕೃತ್ತಿನ ಕಾರ್ಯ ಪರೀಕ್ಷೆಗಳು ಹೆಚ್ಚಿನ ತೂಕವನ್ನು ಹೊಂದಿರುವ ಕರ್ಕ್ಯುಮಿನ್ ಬಳಕೆದಾರರಲ್ಲಿ ಕೆಲವು ಮಟ್ಟದ ಕ್ಷೀಣತೆಯನ್ನು ಸೂಚಿಸುತ್ತವೆ ಎಂದು ಥೈಲ್ಯಾಂಡ್ನ ಚುಲೌಂಗ್ಕೊರ್ನ್ ಯುನಿರ್ವಸಿಟಿ ಸಂಶೋಧಕರು ತಿಳಿಸಿದ್ದಾರೆ.
ಈ ಅಧ್ಯಯನದಲ್ಲಿ 18 ರಿಂದ 70 ವರ್ಷದ 206 ಮಂದಿಯನ್ನು ಒಳಪಡಿಸಲಾಗಿದೆ. 2019ರಿಂದ 2021ರವರೆಗೆ ನಡೆದ ಅಧ್ಯಯನದಲ್ಲಿ 28 ದಿನಗಳಿಗೆ ಮೂರು ಚಿಕಿತ್ಸೆಯ ಗುಂಪು ರಚಿಸಲಾಗಿದೆ. ಒಂದು ಗುಂಪಿಗೆ 250 ಎಂಜಿಯ ಅರಿಶಿಣದ ಮಾತ್ರೆಯನ್ನು ದಿನಕ್ಕೆ ನಾಲ್ಕು ಬಾರಿ ನೀಡಲಾಗಿದೆ. ಮತ್ತೊಂದು ಸಣ್ಣ ಗುಂಪಿಗೆ ಡಮ್ಮಿ ಮಾತ್ರೆಗಳನ್ನು ನೀಡಲಾಗಿದೆ. ಮೂರನೇ ಗುಂಪಿಗೆ 20 ಎಂಜಿಯ ಒಮೆಪ್ರೊಜೊಲ್ ಮಾತ್ರೆಯನ್ನು ದಿನಕ್ಕೆ ನಾಲ್ಕು ನೀಡಲಾಗಿದೆ.
ಡೆಐಸ್ಪೆಸಿಯಾ ಕಾರ್ಯಾಚರಣೆಗೆ ಪಿಪಿಐ ಅನ್ನು ಬಳಕೆ ಮಾಡಲಾಗಿದೆ. ಇವರಲ್ಲಿ ಸ್ವಲ್ಪ ಊಟ ಮಾಡಿದರೂ ಹೆಚ್ಚು ಆಹಾರ ಸೇವಿಸಿದ ಅನುಭವ ಮತ್ತು ಹೊಟ್ಟೆ ಉರಿಯಂತಹ ಅನುಭವ ಕಂಡು ಬಂದಿದೆ.
ದೀರ್ಘ ಕಾಲದ ಪಿಪಿಐ ಬಳಕೆಯು ಭವಿಷ್ಯದಲ್ಲಿ ಮೂಳೆ ಮುರಿತದ ಅಪಾಯವನ್ನು ಹೊಂದಿದ್ದು, ಮೈಕ್ರೋನ್ಯೂಟ್ರಿಯೆಂಟ್ಸ್ ಕೊರತೆ ಮತ್ತು ಸೋಂಕಿನ ಅಪಾಯವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಫಲಿತಾಂಶಗಳು ಅರಿಶಿಣ ಮತ್ತು ಒಮೆಪ್ರೊಜೋಮ್ ಬಳಕೆ ಮಾಡುವ ಗುಂಪಿಗಳಲ್ಲಿ 28 ದಿನದಲ್ಲಿ ಅವರು ಅಜೀರ್ಣ, ಊರಿಯೂತದಂತಹ ಲಕ್ಷಣವು ಕಡಿಮೆಯಾಗಿರುವುದನ್ನು ತೋರಿಸಿದೆ.
56 ದಿನದಲ್ಲಿ ಈ ನೋವು ಮತ್ತು ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಮತ್ತಷ್ಟು ಬಲವಾದ ಸುಧಾರಣೆ ಕಂಡು ಬಂದಿದೆ. ಈ ಅಧ್ಯಯನವೂ ಸಣ್ಣ ಗಾತ್ರದ್ದಾಗಿದ್ದು, ನಮಗೆ ಅನೇಕ ಮಿತಿಗಳಿದ್ದವು. ಇದರಲ್ಲಿ ಅಲ್ಪಾವಧಿಯ ಮಧ್ಯಸ್ಥಿಕೆ ಅವಧಿ ಮತ್ತು ದೀರ್ಘ ಕಾಲದ ನಿರ್ವಣೆ ದತ್ತಾಂಶದ ಕೊರತೆ ಇದೆ. ಈ ಹಿನ್ನೆಲೆ ಮಂದೆ ದೊಡ್ಡ ಮತ್ತು ದೀರ್ಘ ಅವಧಿ ಅಧ್ಯಯನ ಅವಶ್ಯಕತೆ ಇದೆ ಎಂದು ಸಂಶೋಧನೆ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಸಂಪೂರ್ಣ ಧಾನ್ಯಕ್ಕಿಂತ ಜೋಳದಲ್ಲಿದೆ ಹಲವು ಪ್ರಯೋಜನ; ಅಧ್ಯಯನ