ETV Bharat / sukhibhava

ರಾಮನವಮಿಗೆ ಭಕ್ತಿಯ ಜೊತೆ ಜಿಹ್ವೆಯ ರುಚಿ ತಣಿಸಲು ಸಿಹಿ ಭಕ್ಷ್ಯ - ETV Bharat Kannada

ರಾಮನವಮಿ ಹಬ್ಬಕ್ಕೆ ನೀವು ಮಾಡಬಹುದಾದ ಕೆಲವೊಮದು ಸಿಹಿ ಖಾದ್ಯಗಳು ಇಲ್ಲಿವೆ..

try these 7 dishes to relish on ram navami
ರಾಮನವಮಿಗೆ ಭಕ್ತಿಯ ಜೊತೆ ಜಿಹ್ವೆಯ ರುಚಿ ತಣಿಸಲು ಸಿಹಿ ಭಕ್ಷ್ಯ
author img

By

Published : Mar 29, 2023, 10:34 PM IST

ಹಿಂದೂ ಹಬ್ಬಗಳಲ್ಲಿ ಒಂದಾದ ರಾಮ ನವಮಿಯನ್ನು ಹಿಂದೂ ಕ್ಯಾಲೆಂಡರ್​ನ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ಆಚರಿಸಲಾಗುತ್ತದೆ. ಭಗವಾನ್​ ವಿಷ್ಣುವಿನ ಅವತಾರವಾಗಿ ರಾಮನ ಜನ್ಮವಾದ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ಈ ದಿನ ಜನರು ಉಪವಾಸವಿದ್ದು, ಕನ್ಯಾ ಪೂಜೆಯನ್ನು ಮಾಡುತ್ತಾರೆ. ಯಾವುದೇ ಹಬ್ಬಗಳಲ್ಲಿ ಪೂಜಾ ಕೈಂಕರ್ಯಗಳು ಹೇಗೆ ಒಂದು ಭಾಗವಾಗಿರುತ್ತದೆಯೋ ಹಾಗೆಯೇ, ಸಿಹಿ, ಆಹಾರವಿಲ್ಲದೆ ಅಪೂರ್ಣ. ಆದ್ದರಿಂದ ಹಬ್ಬದ ಸಾಂಪ್ರಾದಾಯಿಕ ಆಚರಣೆಯ ನಂತರ ನೀವು ಸವಿಯಬಹುದಾದ ಭಕ್ಷ್ಯಗಳ ಪಟ್ಟಿ ಇಲ್ಲಿದೆ.

Aloo Curry
ಆಲೂ ಕರಿ

ಆಲೂ ಕರಿ: ಸರಳವಾದರೂ ಎಲ್ಲರಿಗೂ ಇಷ್ಟವಾಗುವ ಖಾದ್ಯ. ಹೆಚ್ಚಿನ ಮಸಾಲೆಗಳನ್ನು ಬಳಸದೆ ಟೊಮೆಟೊ ಸಾಸ್‌ನಲ್ಲಿ ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಈ ಮೇಲೋಗರವನ್ನು ತಯಾರಿಸುವುದು ಸರಳವಾಗಿರುವುದರಿಂದ ಹಬ್ಬಗಳ ಸಮಯದಲ್ಲಿಯೂ ಮಾಡಲಾಗುತ್ತದೆ. ಇದು ಪೂರಿ, ಪರಾಠ ಅಥವಾ ರೋಟಿ ಜೊತೆ ಸವಿಯಲು ಚೆನ್ನಾಗಿರುತ್ತದೆ.

Coconut Laddu
ತೆಂಗಿನಕಾಯಿ ಲಡ್ಡು

ಸಿಂಘಾರ ಪೂರಿ: ಆಲೂಗಡ್ಡೆ ಮತ್ತು ವಾಟರ್ ಚೆಸ್ಟ್ನಟ್ ಹಿಟ್ಟನ್ನು ಈ ಪೂರಿ ಅಥವಾ ಪಫಿ ಬ್ರೆಡ್ ಮಾಡಲು ಬಳಸಲಾಗುತ್ತದೆ. ನೀವು ಇದನ್ನು ಕಢಿ, ಖಟ್ಟಾ ಮೀಠಾ ಕದ್ದು, ಕುಂಬಳಕಾಯಿ ಸಬ್ಜಿ ಅಥವಾ ಆಲೂ-ಪಾಲಕ್ ಸಬ್ಜಿಯೊಂದಿಗೆ ಸೇವಿಸಬಹುದು.

ಕಡ್ಲೆ ಬೇಳೆ ಹೋಳಿಗೆ: ಈ ರುಚಿಕರವಾದ ಮಹಾರಾಷ್ಟ್ರದ ಖಾದ್ಯ ಖಂಡಿತವಾಗಿಯೂ ನಿಮ್ಮ ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಕಡ್ಲೆ ಬೇಳೆ ಹೋಳಿಗೆ ಬೆಲ್ಲ, ತೆಂಗಿನಕಾಯಿ, ಏಲಕ್ಕಿ, ಮತ್ತು ಬೆಣ್ಣೆ ಅಥವಾ ತುಪ್ಪ ಸೇರಿಸಿ ಕಡ್ಲೆ ಬೇಳೆಯಿಂದ ಮಾಡಿದ ಸಿಹಿಯಾದ ಖಾದ್ಯ.

Purana Poli
ಕಡ್ಲೆ ಬೇಳೆ ಹೋಳಿಗೆ

ಕಲಾ ಚಾನಾ: ಅಷ್ಟಮಿ ಮತ್ತು ರಾಮ ನವಮಿಯ ಹಬ್ಬವು ಕಲಾ ಚನಾ ಭಕ್ಷ್ಯವಿಲ್ಲದೆ ಅಪೂರ್ಣವೆಂದೇ ಹೇಳಬಹುದು. ಒಣ ಮಸಾಲೆಗಳೊಂದಿಗೆ ಬೆರೆಸಿ ಹುರಿದ ಕಪ್ಪು ಕಡಲೆ ಭಾರತದಾದ್ಯಂತ ಎಲ್ಲರೂ ಇಷ್ಟಪಡುವ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದೆ.

ಮಖಾನಾ ಖೀರ್​: ಯಾವುದೇ ಹಬ್ಬವು ಸಿಹಿ ಭಕ್ಷ್ಯವಿಲ್ಲದೆ ಪೂರ್ಣವಾಗದು. ಸಂಪೂರ್ಣವಾಗಿ ಕೆನೆ ತುಂಬಿದ ಅಕ್ಕಿ ಖೀರ್​ ತಯಾರಿಸುವ ರೀತಿಯಲ್ಲಿಯೇ ಈ ಮಖಾನಾ ಖೀರ್​ ತಯಾರಿಸಲಾಗುತ್ತದೆ. ನೀವು ಮಾಡಬೇಕಾಗಿರುವುದು ಅಕ್ಕಿಯ ಬದಲು ಮಖಾನಾ ತೆಗೆದುಕೊಳ್ಳಿ. ಮಖಾನಾ ಎಂದರೆ ತಾವರೆಯ ಬೀಜ. ಇದು ಉಪವಾಸದ ಸಮಯದಲ್ಲಿ ಮತ್ತು ನಂತರ ಸೇವಿಸಲು ಉತ್ತಮವಾದ ಆರೋಗ್ಯಕರ ತಿಂಡಿಯಾಗಿದೆ. ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್​ ಕಡಿಮೆ, ಪೊಟ್ಯಾಸಿಯಮ್​ ಸಮೃದ್ಧವಾಗಿದೆ. ಆದ್ದರಿಂದ ರಕ್ತದೊತ್ತಡ ನಿಯಂತ್ರಿಸಲು ಒಳ್ಳೆಯದು.

Makhana Kheer
ಮಖಾನಾ ಖೀರ್

ತೆಂಗಿನಕಾಯಿ ಲಡ್ಡು: ಈ ರಾಮನವಮಿಗೆ ಉಳಿದ ಲಡ್ಡುಗಳ ಬದಲು ತೆಂಗಿನಕಾಯಿಯ ಲಡ್ಡು ತಯಾರಿಸಿ. ತುರಿದ ತೆಂಗಿನಕಾಯಿಯೊಂದಿಗೆ ಮಂದಗೊಳಿಸಿದ ಹಾಲನ್ನು ಸೇರಿಸಿ ಮತ್ತು ನಂತರ ಸಕ್ಕರೆಯೊಂದಿಗೆ ಬೆರೆಸಿ. ಈ ಸರಳ ಪದಾರ್ಥಗಳೊಂದಿಗೆ, ನಿಮ್ಮ ಸಿಹಿ ಭಕ್ಷ್ಯವನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಗೊಳಿಸಬಹುದು.

Suji Ka Halva
ಸೂಜಿ ಕಾ ಹಲ್ವಾ

ಸೂಜಿ ಕಾ ಹಲ್ವಾ: ಹೆಚ್ಚು ಪ್ರಮಾಣದ ಶುದ್ಧ ತುಪ್ಪ ಮತ್ತು ಸಾಕಷ್ಟು ಒಣ ಹಣ್ಣುಗಳನ್ನು ಸೇರಿಸಿ ಮಾಡಿದ ಈ ಕ್ಲಾಸಿಕ್ ರವೆ ಫುಡ್ಡಿಂಗ್​ ಅನ್ನು ಮಾತ್ರ ಈ ಹಬ್ಬದಲ್ಲಿ ಮರೆಯಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: ಬೇಸಿಗೆ ಟಿಪ್ಸ್​: ಹುಳಿ ಬಂದ ಮೊಸರೆಂದು ಬಿಸಾಡದಿರಿ, ಹಲವು ಪ್ರಯೋಜನಗಳುಂಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.