ETV Bharat / sukhibhava

2020 ಕೋವಿಡ್ ವರ್ಷ: ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮಗಳೇನು?

ಕೆಲವು ಜನರು ತಮ್ಮ ದೈನಂದಿನ ದಿನಚರಿಗೆ ತಾಲೀಮು ಅವಧಿಗಳನ್ನು ಸೇರಿಸಿದರೆ, ಇತರರು ಆರೋಗ್ಯಕರ ಮತ್ತು ಪೋಷಕಾಂಶಯುಕ್ತ ಆಹಾರವನ್ನು ಅಳವಡಿಸಿಕೊಂಡರು. ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡಿತು.

diet
diet
author img

By

Published : Dec 26, 2020, 9:26 PM IST

ಹೈದರಾಬಾದ್: ಈ ವರ್ಷ ಜನರು ಕೋವಿಡ್-19 ನಿರ್ಬಂಧಗಳಿಂದಾಗಿ ಸಾಕಷ್ಟು ಸಮಯವನ್ನು ಮನೆಯಲ್ಲೇ ಕಳೆಯಬೇಕಾಯಿತು. ಆದರೆ, ಅವರಲ್ಲಿ ಅನೇಕರು ಆರೋಗ್ಯ ಮತ್ತು ಫಿಟ್‌ನೆಸ್ ಕುರಿತು ಗಮನ ಹರಿಸಿದರು. ಕೆಲವು ಜನರು ತಮ್ಮ ದೈನಂದಿನ ದಿನಚರಿಗೆ ತಾಲೀಮು ಅವಧಿಗಳನ್ನು ಸೇರಿಸಿದರೆ, ಇತರರು ಆರೋಗ್ಯಕರ ಮತ್ತು ಪೋಷಕಾಂಶಯುಕ್ತ ಆಹಾರ ಅಳವಡಿಸಿಕೊಂಡರು.

ಇದು ಕೆಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜನರಿಗೆ ಸಹಾಯ ಮಾಡಿತು. 2020ರ ಕೆಲವು ಉನ್ನತ ಆಹಾರ ಮತ್ತು ಆರೋಗ್ಯಕರ ಆಹಾರ ಪ್ರವೃತ್ತಿಗಳನ್ನು ನೋಡೋಣ.

ಆಹಾರ ಪದ್ಧತಿ: ಈ ವರ್ಷ ಹಲವರು ಡಯಟಿಂಗ್ ಮೊರೆ ಹೋಗಿದ್ದು, ಅತ್ಯಂತ ಜನಪ್ರಿಯ ಆಹಾರಕ್ರಮಗಳು ಇಲ್ಲಿವೆ:

ಕೀಟೋ ಡಯಟ್: ಇದನ್ನು ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಮೊದಲ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಹೆಚ್ಚಿನ ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್​ಯುಕ್ತ ಆಹಾರವು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಈ ವರ್ಷ ಕೀಟೋ ಡಯಟ್ ಸಾಮಾನ್ಯ ಜನರಲ್ಲಿ ಬಹಳ ಜನಪ್ರಿಯವಾಗಿತ್ತು. ಈ ಆಹಾರದಲ್ಲಿ ಧಾನ್ಯಗಳು, ಸಕ್ಕರೆ, ಬ್ರೆಡ್, ಆಲ್ಕೋಹಾಲ್, ಡೈರಿ ಮತ್ತು ಸಂಸ್ಕರಿಸಿದ ಆಹಾರವನ್ನು ಸಂಪೂರ್ಣವಾಗಿ ಕೈ ಬಿಡಲಾಗುತ್ತದೆ. ಕೀಟೋ ಆಹಾರದ ಋಣಾತ್ಮಕ ಪರಿಣಾಮಗಳ ಬಗ್ಗೆ ಅನೇಕ ಪ್ರಶ್ನೆಗಳಿದ್ದು, ಅದನ್ನು ವೈದ್ಯಕೀಯ ಮೇಲ್ವಿಚಾರಣೆ ಅಡಿ ಅನುಸರಿಸಬೇಕು. ಇದು ದೀರ್ಘಕಾಲದ ಹೊಟ್ಟೆಯ ತೊಂದರೆಗಳು, ದೇಹದ ಸೆಳೆತ, ವಾಕರಿಕೆ, ಸೋಮಾರಿತನ ಮತ್ತು ಆಲಸ್ಯದಂತಹ ಅಡ್ಡಪರಿಣಾಮಗಳನ್ನು ಹೊಂದಿದೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಮಧ್ಯಂತರವಾಗಿ ಉಪವಾಸ: ಮಧ್ಯಂತರವಾಗಿ ಉಪವಾಸವನ್ನು ಹಲವಾರು ವಿಧಗಳಲ್ಲಿ ಮಾಡಬಹುದು. ಮೊದಲನೆಯದಾಗಿ, ಒಬ್ಬ ವ್ಯಕ್ತಿಯು ಬೆಳಗ್ಗೆ ಲಘು ಆಹಾರ ತೆಗೆದುಕೊಂಡು, ಮಧ್ಯಾಹ್ನ ತುಂಬಾ ಹಗುರವಾದ ಆಹಾರ ಮತ್ತು ರಾತ್ರಿಯಲ್ಲಿ ಆಹಾರವಿಲ್ಲ. ಎರಡನೆಯದಾಗಿ, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಘನ ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾನೆ. ಲಾಕ್‌ಡೌನ್ ಸಮಯದಲ್ಲಿ ಅನೇಕ ಜನರು ಈ ಆಹಾರ ಪದ್ಧತಿಯನ್ನು ಅನುಸರಿಸಿದ್ದಾರೆ. ಏಕೆಂದರೆ ಇದು ತೂಕ ಇಳಿಸಲು ಸಹಾಯ ಮಾಡುತ್ತದೆ, ಟಾಕ್ಸಿಕ್ ಅಂಶಗಳನ್ನು ತೆಗೆದುಹಾಕುತ್ತದೆ, ಸ್ಮರಣೆಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದೆ. ಆದರೆ, ಅನಗತ್ಯ ದೀರ್ಘಕಾಲದ ಉಪವಾಸವು ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಮಿಲಿಟರಿ ಡಯಟ್‌: ಲೋ-ಕ್ಯಾಲೋರಿ ಮಿಲಿಟರಿ ಆಹಾರವೂ ಈ ವರ್ಷ ಸಾಕಷ್ಟು ಜನಪ್ರಿಯವಾಗಿತ್ತು. ಏಕೆಂದರೆ ಇದನ್ನು ವಾರದಲ್ಲಿ 3 ದಿನಗಳು ಮಾತ್ರ ಅನುಸರಿಸಬೇಕು ಮತ್ತು ಉಳಿದ 4 ದಿನಗಳವರೆಗೆ ಸಾಮಾನ್ಯ ಆಹಾರವನ್ನು ಸೇವಿಸಬಹುದು. ಮೊದಲ ಮೂರು ದಿನಗಳವರೆಗೆ ಒಬ್ಬ ವ್ಯಕ್ತಿಯು 1100 -1200 ಕ್ಯಾಲೊರಿಗಳಿಗಿಂತ ಕಡಿಮೆ ಆಹಾರ ಸೇವಿಸಬೇಕು ಮತ್ತು ಮುಂದಿನ ನಾಲ್ಕು ದಿನಗಳವರೆಗೆ 1,800 ಕ್ಯಾಲೊರಿಗಳನ್ನು ಸೇವಿಸಬೇಕಾಗುತ್ತದೆ. ಈ ಆಹಾರವು ಮೂರು ದಿನಗಳಲ್ಲಿ ಸುಮಾರು 2 ಕಿ.ಗ್ರಾಂ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಸರ್ಟ್‌ಫುಡ್ ಡಯಟ್:

ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಸನ್ನಿವೇಶದಲ್ಲಿ ಸಿರ್ಟ್‌ಫುಡ್ ಡಯಟ್, ಎಲ್ಲ ಆಹಾರ ಪದ್ಧತಿಗಳಲ್ಲಿ ಅತ್ಯುತ್ತಮವಾದದ್ದು ಎಂದು ಪರಿಗಣಿಸಬಹುದುದಾಗಿದೆ. ಏಕೆಂದರೆ ಇದರಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಆಹಾರ ಸೇವನೆ ಸೇರಿದೆ. ಈ ಆಹಾರವು ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ. ಸರ್ಟ್‌ಫುಡ್ ಆಹಾರವು ಗ್ರೀನ್ ಟೀ, ಅರಿಶಿನ, ಸೇಬು, ಪಾರ್ಸ್ಲಿ, ಸಿಟ್ರಸ್ ಹಣ್ಣುಗಳು, ಬ್ಲೂಬೆರ್ರಿ, ಸೋಯಾ, ಡಾರ್ಕ್ ಚಾಕೊಲೇಟ್, ಬಾಳೆಹಣ್ಣು ಮತ್ತು ಆಲಿವ್ ಎಣ್ಣೆಯನ್ನು ಸೇವಿಸುವುದನ್ನು ಒಳಗೊಂಡಿರುತ್ತದೆ. ಇದು ದೇಹದಲ್ಲಿನ ಸಿರ್ಟುಯಿನ್ ಪ್ರೋಟೀನ್‌ನ ಕಾರ್ಯನಿರ್ವಹಣೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿರ್ಟುಯಿನ್ ಪ್ರೋಟೀನ್ ನಮ್ಮ ದೇಹವನ್ನು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ಕೋಶಗಳಿಂದ ರಕ್ಷಿಸುತ್ತದೆ ಮತ್ತು ಚರ್ಮವನ್ನು ರಕ್ಷಿಸುತ್ತದೆ.

ಕೆಲವು ಇತರ ಆಹಾರ ಪದ್ಧತಿಗಳಲ್ಲಿ ಪ್ಯಾಲಿಯೊ ಡಯಟ್, ಅಟ್ಕಿನ್ಸ್ ಡಯಟ್ ಮತ್ತು ಡ್ಯಾಶ್ ಡಯಟ್ ಸೇರಿದ್ದು, ಇವುಗಳನ್ನೂ ಸಹ ತೂಕ ಇಳಿಸುವ ಮುಖ್ಯ ಗುರಿಯೊಂದಿಗೆ ಅನೇಕ ಜನರು ಅನುಸರಿಸುತ್ತಿದ್ದಾರೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಪೋಷಣೆ:

ಕೋವಿಡ್-19 ನಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಿದ ಕಾರಣ, ಈ ವರ್ಷ ಬಹುತೇಕ ಎಲ್ಲರೂ ತಾವು ಸೇವಿಸಿದ ಆಹಾಋದ ಕುರಿತು ಹೆಚ್ಚಿನ ಕಾಳಜಿ ವಹಿಸಿದರು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವಿಸಿದರು. ವೈದ್ಯರು ವಿಟಮಿನ್ ಸಿ, ವಿಟಮಿನ್ ಡಿ ಮತ್ತು ಇತರ ಮಲ್ಟಿವಿಟಮಿನ್ ಪೂರಕಗಳ ಕೋರ್ಸ್‌ಗಳನ್ನು ಶಿಫಾರಸು ಮಾಡಿದ್ದಾರೆ. ತೂಕ ನಷ್ಟದ ಜೊತೆಗೆ, ತಮ್ಮನ್ನು ಆರೋಗ್ಯವಾಗಿರಿಸಿ ಕೊಳ್ಳುವುದು ಗುರಿಯಾಗಿತ್ತು. ಆದ್ದರಿಂದ, 2020ರಲ್ಲಿ ಜನರು ಎದುರಿಸಿದ ಕೆಲವು ಸಮಸ್ಯೆಗಳು ಮತ್ತು ಆಹಾರಗಳು ಇಲ್ಲಿವೆ:

ರೋಗನಿರೋಧಕ ಶಕ್ತಿ ಹೆಚ್ಚಿಸಲು:

ಈ ವರ್ಷ ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಅತೀ ಮುಖ್ಯವಾಗಿದ್ದರಿಂದ, ಜನರು ಹೆಚ್ಚಿನ ಪ್ರಮಾಣದ ಸಿಟ್ರಸ್ ಆಹಾರಗಳನ್ನು ಮತ್ತು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಆಹಾರವನ್ನು ಸೇವಿಸಿದರು. ವಿಟಮಿನ್ ಸಿ ಸಮೃದ್ಧ ಆಹಾರಗಳಾದ ನಿಂಬೆ, ಕಿತ್ತಳೆ, ನೆಲ್ಲಿಕಾಯಿ, ಕಿವಿ ಹಣ್ಣು, ದಾಳಿಂಬೆ ಮತ್ತು ಸೇಬನ್ನು ಆಹಾರದಲ್ಲಿ ಸೇರಿಸಲಾಗಿತ್ತು. ಉತ್ಕರ್ಷಣ ನಿರೋಧಕ ಆಹಾರಗಳಾದ ತುಳಸಿ, ಬೆಳ್ಳುಳ್ಳಿ, ಅಗಸೆ ಬೀಜಗಳು, ಹಣ್ಣುಗಳು, ಬೀನ್ಸ್ ಇತ್ಯಾದಿಗಳನ್ನು ಪರಿಗಣಿಸಲಾಯಿತು. ಇದಲ್ಲದೇ, ಜನರು ತಮ್ಮ ದೈನಂದಿನ ಊಟದಲ್ಲಿ ವಿಟಮಿನ್ ಡಿ, ಪ್ರೋಟೀನ್ ಮತ್ತು ಸತುಗಳಂತಹ ಪೋಷಕಾಂಶಗಳನ್ನು ಸಹ ಸೇರಿಸಿದ್ದಾರೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ನಿದ್ರಾಹೀನತೆಗಾಗಿ:

ಲಾಕ್​ಡೌನ್ ಮತ್ತು ಭವಿಷ್ಯದ ಅನಿಶ್ಚಿತತೆಗಳನ್ನು ನಿಭಾಯಿಸಬೇಕಾದರೆ, ಅನೇಕ ಜನರಿಗೆ ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳಿದ್ದವು. ಇದು ಅನೇಕ ಜನರಲ್ಲಿ ನಿದ್ರಾಹೀನತೆ ಅಥವಾ ಗುಣಮಟ್ಟದ ನಿದ್ರೆಯ ಕೊರತೆಗೆ ಕಾರಣವಾಯಿತು. ಬೆಚ್ಚಗಿನ ಹಾಲು, ಬೀಜಗಳು, ಕ್ಯಾಮೊಮೈಲ್ ಚಹಾ, ಕಿವಿ ಹಣ್ಣು, ಕೊಬ್ಬಿನ ಮೀನು ಇತ್ಯಾದಿಗಳು ಸಹಾಯಕವೆಂದು ಸಾಬೀತಾಯಿತು.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಮನಸ್ಥಿತಿಯನ್ನು ಸುಧಾರಿಸಲು:

ನಾವು ತಿನ್ನುವ ಆಹಾರವು ನಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ವರ್ಷ ಮಾನಸಿಕ ಆರೋಗ್ಯ ಸಮಸ್ಯೆಗಳ ಪಟ್ಟಿಯಲ್ಲಿ ಒತ್ತಡ, ಖಿನ್ನತೆ ಮತ್ತು ಆತಂಕವು ಅಗ್ರಸ್ಥಾನದಲ್ಲಿದೆ. ಮೊಟ್ಟೆ, ಡಾರ್ಕ್ ಚಾಕೊಲೇಟ್, ಮೊಸರು, ಹಸಿರು ಚಹಾ, ಬೀಜಗಳು, ಕಾಫಿ, ಕೇಸರಿ, ಬೀನ್ಸ್ ಮತ್ತು ಮಸೂರಗಳಂತಹ ಆಹಾರ ಪದಾರ್ಥಗಳು ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ.

Top Diets And Foods Of 2020
ಆರೋಗ್ಯ ಕಾಪಾಡಲು ಜನರು ಪಾಲಿಸಿದ ಆಹಾರ ಕ್ರಮ

ಎನರ್ಜಿ ಬೂಸ್ಟ್ ಮಾಡಲು:

ದಿನವಿಡೀ ಮನೆಯಲ್ಲೇ ಇದ್ದದ್ದು, ಜನರಲ್ಲಿ ಸೋಮಾರಿತನಕ್ಕೆ ಕಾರಣವಾಯಿತು ಮತ್ತು ಅವರ ಹೆಚ್ಚಿನ ದಿನಗಳು ಏನೂ ಮಾಡದೇ ಖಾಲಿ ಕುಳಿತಿದ್ದರು. ಆದರೆ, ಬಾಳೆಹಣ್ಣು, ಸೇಬು, ಕಾಫಿ, ಸ್ಟ್ರಾಬೆರಿ, ಡಾರ್ಕ್ ಚಾಕೊಲೇಟ್, ಬೀಜಗಳು, ಹಸಿರು ಸೊಪ್ಪು ತರಕಾರಿಗಳು ಇತ್ಯಾದಿಗಳು ಎನರ್ಜಿ ಕಿಕ್ ನೀಡಲು ಸಹಾಯ ಮಾಡಿದವು.

ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಪ್ರತಿಫಲಿಸುತ್ತದೆ. ಉತ್ತಮ ಮತ್ತು ಆರೋಗ್ಯಕರ ಆಹಾರವು ನಮ್ಮ ಮನಸ್ಥಿತಿಯನ್ನು ಉನ್ನತೀಕರಿಸುತ್ತದೆ ಮತ್ತು ದಿನವಿಡೀ ನಮ್ಮನ್ನು ಚೈತನ್ಯದಿಂದಿರಲು ಸಹಾಯ ಮಾಡುತ್ತದೆ. ಆದ್ದರಿಂದ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವು ಆರೋಗ್ಯಕರ ಜೀವನಕ್ಕೆ ಪ್ರಮುಖವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.