ETV Bharat / sukhibhava

Tips To Deal With Acne : ಚಳಿಗಾಲದಲ್ಲಿ ಮೊಡವೆಗಳನ್ನು ನಿವಾರಿಸಲು ತಜ್ಞರ ಸಲಹೆಗಳು ಇಲ್ಲಿವೆ - skin care in winter

ಮೊಡವೆಗಳನ್ನು ಚಳಿಗಾಲದಲ್ಲಿ ನಿಯಂತ್ರಣ ಮಾಡುವುದು ಹೇಗೆ ಎಂಬುದಕ್ಕೆ ಕಾಸ್ಮೆಟಾಲಜಿಸ್ಟ್ ಮತ್ತು ಹೋಮಿಯೋಪತಿ ತಜ್ಞರಾದ ಡಾ. ಕರುಣಾ ಮಲ್ಹೋತ್ರಾ ಮತ್ತು ಸ್ತ್ರೀರೋಗತಜ್ಞೆ ಮತ್ತು ಐವಿಎಫ್ ತಜ್ಞೆಯಾದ ಡಾ.ಅನುಭಾ ಸಿಂಗ್ ನೀಡಿರುವ ಮಾಹಿತಿ ಇಲ್ಲಿದೆ..

Tips To Deal With Winter Acne Breakout
Tips To Deal With Acne: ಚಳಿಗಾಲದಲ್ಲಿ ಮೊಡವೆಗಳನ್ನು ನಿವಾರಿಸಲು ತಜ್ಞರ ಸಲಹೆಗಳು ಇಲ್ಲಿವೆ
author img

By

Published : Jan 8, 2022, 5:33 PM IST

ಸೌಂದರ್ಯ ಕಾಳಜಿ ಉಳ್ಳವರು ಮೊಡವೆಗಳಿಗೆ ಹೆಚ್ಚು ಕಂಗಾಲಾಗುತ್ತಾರೆ. ಎಲ್ಲರಿಗೂ ತಿಳಿದಿರುವಂತೆ ಮೊಡವೆಗಳು ದೇಹದಲ್ಲಿರುವ ಎಣ್ಣೆಯ ಅಂಶ, ಬ್ಯಾಕ್ಟೀರಿಯಾಗಳು ಮತ್ತು ಸತ್ತ ಚರ್ಮದ ಕೋಶಗಳ ಕಾರಣದಿಂದಾಗಿ ಕಾಣಿಸುತ್ತವೆ. ಮುಖ, ಭುಜ, ಬೆನ್ನು, ಕುತ್ತಿಗೆ, ಎದೆ ಮತ್ತು ತೋಳುಗಳ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಇಂತಹ ಮೊಡವೆಗಳನ್ನು ಚಳಿಗಾಲದಲ್ಲಿ ನಿಯಂತ್ರಣ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

  • ಹೈಡ್ರೇಟ್ ಆಗಿರಿ..

ಚಳಿಗಾಲದಲ್ಲಿ ನೀವು ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀರು ಕಡಿಮೆ ಕುಡಿಯುತ್ತಿರುವುದೇ ಮುಖ್ಯ ಕಾರಣವಾಗಿರುತ್ತದೆ. ಚಳಿಗಾಲದ ವಾತಾವರಣದಲ್ಲಿ ನಿಮ್ಮ ಚರ್ಮವು ಒಣಗಿರುತ್ತದೆ. ಆದ್ದರಿಂದ ನೀವು ನೀರು ಕುಡಿಯುವುದನ್ನು ಹೆಚ್ಚು ಮಾಡಿದರೆ, ಮೊಡವೆ ಉಂಟು ಮಾಡುವ ಟಾಕ್ಸಿನ್​ಗಳು ನೀರಿನ ಮೂಲಕವೇ ಹೊರ ಹೋಗುತ್ತವೆ. ಅದರಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗಿ ಮೊಡವೆಗಳು ಉಂಟಾಗುವುದು ಕಡಿಮೆಯಾಗುತ್ತದೆ.

  • ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಮೊಡವೆಗಳನ್ನು ನಿಯಂತ್ರಿಸಲು ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ಫೇಸ್​ ವಾಶ್ ಅಥವಾ ಫೇಸ್ ಕ್ಲೆನ್ಸರ್ (face cleanser) ಅನ್ನು ಬಳಸಬಹುದು. ಇದರಿಂದ ಚರ್ಮ ಒಣಗುವುದು ಕಡಿಮೆಯಾಗುತ್ತದೆ. ಇದರ ಜೊತೆಗೆ ಗಾಳಿಯಲ್ಲಿರುವ ಮಾಲಿನ್ಯಕಾರಕಗಳಿಂದ ಮುಖವನ್ನು ರಕ್ಷಣೆ ಮಾಡಿಕೊಳ್ಳಬಹುದು.

  • ಮಾಯಿಶ್ಚರೈಸ್ ಅತಿ ಮುಖ್ಯ

ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ತೇವಗೊಳಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ನಿಮ್ಮದು ಎಣ್ಣೆಯ ಚರ್ಮವಾಗಿದ್ದರೆ, ನೀರು ಅಥವಾ ಫೇಶಿಯಲ್ ಜೆಲ್ ಅನ್ನು ಬಳಸಿ ಮಾಯಿಶ್ಚರೈಸ್ ಮಾಡಿಕೊಳ್ಳಿ. ನಿಮ್ಮ ಚರ್ಮಕ್ಕೆ ಬೇಕಾದ ಫೇಶಿಯಲ್ ಅಥವಾ ಫೇಸ್ ಪ್ಯಾಕ್‌ಗಳನ್ನು ಬಳಸಬಹುದು. ಹಣ್ಣಿನ ಫೇಶಿಯಲ್ ಎಲ್ಲಾ ರೀತಿಯ ಚರ್ಮಕ್ಕೆ ಒಳ್ಳೆಯದು.

  • ವ್ಯಾಯಾಮ ಮಾಡಿ..

ಚಳಿಗಾಲದಲ್ಲಿಯೂ ನೀವು ವ್ಯಾಯಾಮ ಮಾಡಬೇಕಾಗುತ್ತದೆ. ತಣ್ಣನೆಯ ವಾತಾವರಣದಲ್ಲಿ ವ್ಯಾಯಾಮ ಕಷ್ಟವಾದರೆ, ಒಳಾಂಗಣದಲ್ಲಿಯೇ ವ್ಯಾಯಾಮ ಮಾಡಬಹುದು. ಅಥವಾ ವ್ಯಾಯಾಮಕ್ಕೆ ಪರ್ಯಾಯವಾಗಿ ಯೋಗ ಅಥವಾ ನೃತ್ಯ ಕೂಡ ಮಾಡಬಹುದು. ಆದರೂ ಎಲ್ಲಾ ಸಮಯದಲ್ಲೂ ಒಳಾಂಗಣದಲ್ಲಿ ಉಳಿಯುವುದು ಸೂಕ್ತವಲ್ಲ. ಏಕೆಂದರೆ, ನೀವು ಬೆಳ್ಳಂಬೆಳಗ್ಗೆ ತಾಜಾ ಗಾಳಿಯನ್ನು ಸೇವನೆ ಮಾಡಿದರೆ, ಅದು ನಿಮ್ಮ ಚರ್ಮಕ್ಕೆ ತಾಜಾತನ ಒದಗಿಸುತ್ತದೆ.

  • ಎಕ್ಸ್​ಫೋಲಿಯೇಷನ್​ (Exfoliation) ಕಡಿಮೆ ಇರಲಿ..

ಮುಖದ ಮೇಲಿನ ಸತ್ತ ಜೀವಕೋಶಗಳನ್ನು ಹೊರತೆಗೆದು ತ್ವಚೆ ಕಾಪಾಡಿಕೊಳ್ಳಲು ವಿವಿಧ ರಾಸಾಯನಿಕಗಳನ್ನು ಮುಖಕ್ಕೆ ಹಾಕಿಕೊಳ್ಳುವ ಪರಿಪಾಠವಿದೆ. ಇದನ್ನು ಎಕ್ಸ್ಫೋಲಿಯೇಶನ್ ಎಂದು ಕರೆಯಲಾಗುತ್ತದೆ. ಈ ಎಕ್ಸ್ಫೋಲಿಯೇಶನ್ ಮಿತಿ ಮೀರಿದರೆ ಮೊಡವೆಗಳು ಬರುವ ಸಾಧ್ಯತೆಗಳಿರುತ್ತವೆ. ಆದ್ದರಿಂದಾಗಿ ಎಕ್ಸ್ಫೋಲಿಯೇಶನ್ ಕಡಿಮೆ ಮಾಡಿದರೆ ಒಳ್ಳೆಯದು.

ಏನು ಮಾಡಬಾರದು?

  • ದೀರ್ಘಕಾಲದವರೆಗೆ ಬಿಸಿ ನೀರಿನ ಸ್ನಾನ ಮಾಡಬೇಡಿ, ಸ್ನಾನಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಬಳಸಿ
  • ಎಣ್ಣೆಯುಕ್ತ ಸೌಂದರ್ಯವರ್ಧಕಗಳು ಅಥವಾ ತ್ವಚೆ ಉತ್ಪನ್ನಗಳನ್ನು ಬಳಸಬೇಡಿ
  • ಮೊಡವೆಗಳನ್ನು ಕೈಯಿಂದ ನಾಶಗೊಳಿಸಬೇಡಿ
  • ಅತ್ಯಂತ ಹೆಚ್ಚು ಸುಗಂಧ ಬೀರುವ ಪರ್ಫ್ಯೂಮ್​ಗಳಿಂದ ದೂರವಿರಿ

ಇದನ್ನೂ ಓದಿ: Tips For Pregnant : ಧೂಮಪಾನ ಮಾಡುವ ಗರ್ಭಿಣಿಯರಿಗೆ ಸಣ್ಣ ಗಾತ್ರದ ಮಕ್ಕಳ ಜನನ.. ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.