ETV Bharat / sukhibhava

ಊಟದ ಸಮಯ ನಿಮ್ಮ ಮಗುವಿಗೆ ಸಂತೋಷದ ಸಮಯವಾಗಿರಬೇಕು ಅಲ್ಲವೇ? ಅದಕ್ಕಾಗಿ ಹೀಗೆ ಮಾಡಿ.. - ಆಹಾರ

ಜಂಕ್​ಫುಡ್​​,ಸ್ಟ್ರೀಟ್​​ಫುಡ್​​, ಮನೆಯಲ್ಲಿ ಊಟ ಮಾಡದೇ ಹಠ ಮಾಡುವ ಮಕ್ಕಳಿಗೆ ಉತ್ತಮ ಹಾಗೂ ಆರೋಗ್ಯಕರ ಆಹಾರದ ಅಭ್ಯಾಸ ಮಾಡಿಸುವುದು ದೊಡ್ಡ ಸಾಧನೆಯೇ ಸರಿ. ಮಕ್ಕಳಿಗೆ ಆಹಾರ ತಿನ್ನಿಸುವುದರ ಕುರಿತು ತಲೆಕೆಡಿಸಿಕೊಂಡಿರುವ ತಾಯಂದಿರಿಗೆಂದೇ ವೈದ್ಯರು ನೀಡಿರುವ ಕೆಲ ಉತ್ತಮ ಸಲಹೆ-ಸೂಚನೆಗಳು ಇಂತಿವೆ..

Tips To Deal With A Fussy Eater
ಊಟದ ಸಮಯವು ಮಗುವಿಗೆ ಸಂತೋಷದ ಸಮಯವಾಗಿರಬೇಕು
author img

By

Published : Sep 12, 2020, 9:05 PM IST

ಪುಟ್ಟ ಮಕ್ಕಳನ್ನ ಆರೈಕೆ ಮಾಡೋದು ಕೆಲವೊಮ್ಮೆ ತುಂಬಾ ಕಷ್ಟ. ಅದರಲ್ಲೂ ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಲು ಬಯಸಿದಾಗ ಅವರು ತಿನ್ನದೇ ಓಡಿಹೋಗುತ್ತಾರೆ. ತಿನ್ನಲು ಕಿರಿಕಿರಿ ಮಾಡುವ ಮಕ್ಕಳೊಂದಿಗೆ ವ್ಯವಹರಿಸುವುದಂತೂ ಸ್ವಲ್ಪ ತ್ರಾಸ. ಮಕ್ಕಳಿಗೆ ಆರು ವರ್ಷ ತುಂಬುತ್ತಿದ್ದಂತೆ ಅವರ ಆಹಾರದಲ್ಲಿ ಘನ ಆಹಾರದ ಅಗತ್ಯತೆ ಹೆಚ್ಚಾಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಮತ್ತು ಪೋಷಣೆಗೆ ಹೆಚ್ಚಿನ ಪೋಷಕಾಂಶಗಳು ಮತ್ತು ಖನಿಜಗಳು ಬೇಕಾಗುತ್ತವೆ.

ಹೈದರಾಬಾದ್‌ನ ರೇನ್‌ಬೋ ಮಕ್ಕಳ ಆಸ್ಪತ್ರೆಯ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್ ಆಗಿರುವ ಡಾ.ವಿಜಯಾನಂದ್ ಜಮಾಲ್‌ಪುರಿ (ಎಂಡಿ ಎಂಆರ್‌ಸಿಪಿಹೆಚ್, ಯುಕೆ) ಹೇಳುವಂತೆ, “ಊಟದ ಸಮಯವು ಮಗುವಿಗೆ ಸಂತೋಷದ ಸಮಯವಾಗಿರಬೇಕು. ಮಗು ಊಟ ಮಾಡಲು ಕಿರಿಕಿರಿ ಮಾಡಲು ಸಾಮಾನ್ಯ ಕಾರಣವೆಂದ್ರೆ ಬಲವಂತವಾಗಿ ಊಟ ಮಾಡಿಸುವುದು‌. ಕೆಲವೊಮ್ಮೆ ಮಗು ಹಸಿದಿರಬಹುದು ಎಂದುಕೊಂಡು ನೀವು ಬಲವಂತವಾಗಿ ಊಟ ಮಾಡಿಸಲು ತೊಡಗಬಹುದು. ಹಾಗಾಗಿ, ಮಗುವಿಗೆ ಹಾಲು ಮತ್ತು ಘನ ಆಹಾರಗಳ ಸಮತೋಲನ ನೋಡಿಕೊಳ್ಳುವುದು ಅಗತ್ಯವಾಗಿರುತ್ತದೆ''.

ಡಾ. ವಿಜಯಾನಂದ್ ಸೂಚಿಸಿದಂತೆ ಕೆಲವು ಸಲಹೆಗಳು ಇಲ್ಲಿವೆ, ಇವು ಊಟ ಮಾಡಲು ಕಿರಿಕಿರಿ ಮಾಡುವ ಮಕ್ಕಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತವೆ. ಹಾಲು ಮತ್ತು ಘನ ಆಹಾರದ ನಡುವೆ ಸಮತೋಲನ ನೋಡಿಕೊಳ್ಳಬೇಕು. ಮಗು ಜನಿಸಿದ 6 ತಿಂಗಳ ನಂತರ ಮಗುವಿಗೆ ನೀಡಲಾಗುವ ಹಾಲಿನ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುತ್ತಾ, ನಿಧಾನವಾಗಿ ಮಕ್ಕಳಿಗೆ ಘನ ಆಹಾರ ನೀಡಲು ಪ್ರಾರಂಭಿಸಬೇಕು ಮತ್ತು ಮಕ್ಕಳು ಬೆಳೆದಂತೆ ಆಹಾರದ ಪ್ರಮಾಣ ಹೆಚ್ಚಿಸಿ. ನಮ್ಮ ತಜ್ಞರು ಶಿಫಾರಸು ಮಾಡುವಂತೆ, 1 ವರ್ಷದ ನಂತರ ಮಕ್ಕಳಿಗೆ ದಿನವೊಂದಕ್ಕೆ 400 ಮಿಲಿ ಲೀಟರ್​​​ನಷ್ಟು ಹಾಲು ಕೊಟ್ಟರೆ ಸಾಕು.

ಆಹಾರ ತಯಾರಿಸುವ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಿ: ಮಕ್ಕಳನ್ನು ಆಹಾರ ತಯಾರಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ತಿನ್ನುವ ಆಹಾರದ ಬಗ್ಗೆ ಅವರ ಆಸಕ್ತಿ ಹೆಚ್ಚಾಗುತ್ತದೆ.

6-12 ತಿಂಗಳು: ನೀವು ಮಕ್ಕಳಿಗಾಗಿ ಆಹಾರ ತಯಾರಿಸುವಾಗ, ಅವರಿಗಾಗಿ ಏನು ತಯಾರಿಸುತ್ತೀದೀರಿ ಎಂದು ಅವರಿಗೆ ತಿಳಿಸಿ ಹಾಗೂ ನೀವು ಊಟವನ್ನು ಸಿದ್ದಪಡಿಸುವಾಗ ಮಕ್ಕಳೊಂದಿಗೆ ಅದರ ಬಗ್ಗೆ ಮಾತನಾಡಿ.

12 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು: ಮಕ್ಕಳು ಒಮ್ಮೆ ಓಡಾಡುವಂತಾದ ಮೇಲೆ, ಅಡುಗೆಗೆ ಬೇಕಾದ ತರಕಾರಿ ಮತ್ತು ಹಣ್ಣುಗಳನ್ನು ದೂರದಿಂದ ತೋರಿಸಲು ಮಕ್ಕಳಿಗೆ ಹೇಳಬಹುದು ಅಥವಾ ಅಂದಿನ ಊಟಕ್ಕೆ ಅವರಿಗೆ ಬೇಕಾದ ಹಣ್ಣು /ತರಕಾರಿಗಳನ್ನು ಆರಿಸಿಕೊಳ್ಳಲು ಅವರಿಗೆ ಹೇಳಿ.

ಆಹಾರದಲ್ಲಿ ವೈವಿಧ್ಯತೆ : ಹಾಲುಣಿಸುವ ಪ್ರಕ್ರಿಯೆಯಲ್ಲಿರುವಾಗ (ಮಗುವನ್ನು ಘನ ಆಹಾರಗಳಿಗೆ ಪರಿಚಯಿಸಲಾಗುತ್ತಿರುವಾಗ), ಸಾಧ್ಯವಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಮಕ್ಕಳಿಗೆ ನೀಡಲು ಆರಂಭಿಸಿ. ಮಕ್ಕಳು ಬೆಳೆದಂತೆ ಹೆಚ್ಚಿನದನ್ನು ತಿನ್ನುತ್ತಾರೆ. ಅಲ್ಲದೆ, ಆಹಾರದ ನೀಡುವಿಕೆಯನ್ನು 6-12 ತಿಂಗಳ ನಡುವೆ ಕ್ರಮೇಣವಾಗಿ ಬದಲಾಯಿಸಿ. ನೀವು ಮಾಂಸಹಾರಿಗಳಾಗಿದ್ದರೆ 9-12 ತಿಂಗಳ ನಡುವೆ ಮಕ್ಕಳಿಗೆ ಮಾಂಸ ಮತ್ತು ಮೊಟ್ಟೆಗಳನ್ನು ಆಹಾರವಾಗಿ ನೀಡಿ ಮತ್ತು ಆ ಆಹಾರ ಮಕ್ಕಳಿಗೆ ಇಷ್ಟವಾಗುವಂತೆ ಮಾಡಿ.

ಗೊಂದಲವನ್ನು ಕಡಿಮೆ ಮಾಡಿ : ಈ ದಿನಗಳಲ್ಲಿ ಪೋಷಕರು ಮಕ್ಕಳಿಗೆ ಊಟ ಮಾಡಿಸುವಾಗ ಅನಾವಶ್ಯಕವಾಗಿ ಟಿವಿಯನ್ನು ಆನ್ ಮಾಡುತ್ತಾರೆ ಅಥವಾ ಮಕ್ಕಳ ಕೈಗೆ ಸ್ಮಾರ್ಟ್‌ಫೋನ್‌ಗಳನ್ನೋ ಅಥವಾ ಟ್ಯಾಬ್ಲೆಟ್‌ಗಳನ್ನೋ ಕೊಡುತ್ತಾರೆ. ಇವುಗಳನ್ನು ಕಡ್ಡಾಯವಾಗಿ ತಪ್ಪಿಸಬೇಕು. ಇವು ಮಕ್ಕಳನ್ನು ಆಹಾರದಿಂದ ದೂರ ಮಾಡುತ್ತವೆ. ಮಕ್ಕಳು ಬೆಳೆದಂತೆ ಅವರಿಗೆ ಆಹಾರ ಮುಟ್ಟಲು, ಅದರೊಂದಿಗೆ ಆಟವಾಡಲು ಮತ್ತು ಅವರಾಗೆ ಅದನ್ನು ತಿನ್ನುವಂತೆ ಮಾಡಿ.

ಊಟದ ಸಮಯವನ್ನು ಮಿತಿಗೊಳಿಸಿ : ಊಟ ಮಾಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದು ಮಕ್ಕಳಿಗೆ ಕಿರಿಕಿರಿ ಉಂಟು ಮಾಡಬಹುದು. ಮಕ್ಕಳಿಗೆ ಊಟ ಮಾಡಿಸುವುದಕ್ಕಾಗಿ 30-40 ನಿಮಿಷಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬೇಡಿ. ಅಲ್ಲದೆ, ಕನಿಷ್ಠ ದಿನಕ್ಕೆ ಒಂದು ಬಾರಿಯಾದ್ರೂ ಕುಟುಂಬದ ಸದಸ್ಯರೊಂದಿಗೆ ಕುಳಿತು ಊಟ ಮಾಡುವುದನ್ನು ಅಭ್ಯಾಸ ಮಾಡಿಸಿ.

ಸಿಹಿ ಹೆಚ್ಚಾಗಿರುವ ಮತ್ತು ಕಾರ್ಬ್‌ಗಳಾದ ಕುಕೀಸ್, ಚಾಕೊಲೇಟ್‌ಗಳು, ಚಿಪ್ಸ್ ಮುಂತಾದವುಗಳನ್ನು ನಾಲ್ಕು ವರ್ಷಗಳಾಗುವವರೆಗೆ ಮಕ್ಕಳಿಗೆ ಕೊಡಬೇಡಿ. ಅದಾಗ್ಯೂ ಅವರಿಗೆ ಕೊಡಬೇಕಾಗಿ ಬಂದರೆ ಆರೋಗ್ಯಕರ ತಿಂಡಿಗಳನ್ನು ಪರಿಚಯಿಸಿ. "ನೀವು 6-18 ತಿಂಗಳ ನಡುವೆ ಮಗುವಿಗೆ ಆಹಾರವನ್ನು ತಿನ್ನಿಸಲು ಬಲವಂತ ಪಡಿಸಿದರೆ, ಅವರು ಊಟ ಮಾಡಲು ಕಿರಿಕಿರಿ ಮಾಡುವ ಮಕ್ಕಳಾಗುತ್ತಾರೆ‌. ಇದು ಹೆಚ್ಚಾದರೆ ಅದನ್ನು 'food aversion syndrome' ಎಂದು ಕರೆಯಲಾಗುತ್ತದೆ ಎಂದು ಅವರು ಹೇಳುತ್ತಾರೆ. ಆದ್ದರಿಂದ, ನಿಮ್ಮ ಮಗು ಊಟದ ವಿಷಯದಲ್ಲಿ ತುಂಬಾ ಕಿರಿಕಿರಿ ಮಾಡಬಾರದು ಎಂದಾದ್ರೆ, ಚಿಕ್ಕಂದಿನಿಂದಲೇ ಆರೋಗ್ಯಕರ ಆಹಾರ ಪದ್ಧತಿ ಬೆಳೆಸುವುದು ಬಹಳ ಮುಖ್ಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.