ETV Bharat / sukhibhava

ಶ್ವಾಸಕೋಶ ಸಮಸ್ಯೆಗೆ ಈ ಆಹಾರ ಪದಾರ್ಥಗಳು ರಾಮಬಾಣ..! - tips for healthy lungs best food for lung problems

ಹರಿಶಿನ, ಶುಂಠಿ, ಸೇಬು, ನಿಂಬೆಹಣ್ಣು ಹಾಗೂ ವಾಲ್‌ನಟ್ಸ್‌ ಸೇರಿದಂತೆ ಹಲವು ಪದಾರ್ಥಗಳ ಸೇವನೆಯಿಂದ ಉಸಿರಾಟದ ಸಮಸ್ಯೆ ಪರಿಹಾರಿಸಿಕೊಳ್ಳಬಹುದಾಗಿದೆ.

tips for healthy lungs best food for lung problems
ಶ್ವಾಸಕೋಶದ ಆರೋಗ್ಯಕ್ಕೆ ಸಮಸ್ಯೆಗೆ ಈ ಆಹಾರ ಪದಾರ್ಥಗಳು ರಾಮಬಾಣ..!
author img

By

Published : Mar 5, 2022, 9:21 AM IST

ಹೈದರಾಬಾದ್‌: ಪರಿಸರ ಮಾಲಿನ್ಯ ಮತ್ತು ಸಿಗರೇಟ್ ಹೊಗೆ ಶ್ವಾಸಕೋಶದ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿನ ಶ್ವಾಸಕೋಶಗಳಿಗೆ ಉಸಿರಾಡಲು ಆಹಾರದ ಅಗತ್ಯವಿದೆ. ಜೊತೆಗೆ ಶ್ವಾಸಕೋಶದ ಆರೋಗ್ಯಕ್ಕಾಗಿ, ಕೆಲವು ಆಹಾರಗಳನ್ನು ಸೇವಿಸಬೇಕು.

ಕಳೆದೆರಡು ವರ್ಷಗಳಿಂದ ಕೋವಿಡ್‌ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಕಣ್ಣಿಗೆ ಕಾಣದ ವೈರಸ್‌ ಜಗತ್ತಿನಲ್ಲಿ ಅದೆಷ್ಟೋ ಮಂದಿಯನ್ನು ಬಲಿ ಪಡೆದುಕೊಂಡಿದೆ. ಕೊರೊನಾ ಬಂದ ನಂತರ ಜನ ರೋಗನಿರೋಧಕ ಶಕ್ತಿ ಹೆಚ್ಚಿಸುವತ್ತ ಹೆಚ್ಚಿನ ಆಗಮನ ಹರಿಸುತ್ತಿದ್ದಾರೆ. ಇದಕ್ಕಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳುತ್ತಾರೆ. ಇದು ಶ್ವಾಸಕೋಶಗಳ ಆರೋಗ್ಯ ಉತ್ತಮ ಪಡಿಸುತ್ತಿದೆ. ಶ್ವಾಸಕೋಶ ಪೋಷಿಸುವ ಒಂದಿಷ್ಟು ಆಹಾರಗಳನ್ನು ಇಲ್ಲಿ ನೀಡಲಾಗಿದೆ.

ಅರಿಶಿನ: ಆಹಾರದಲ್ಲಿ ಅರಿಶಿನ ಸೇವನೆಯಿಂದ ಶ್ವಾಸನಾಳದಲ್ಲಿನ ಕಫವನ್ನು ಕಡಿಮೆ ಮಾಡುತ್ತದೆ. ಉಸಿರಾಟದ ಸಮಸ್ಯೆಗಳನ್ನೂ ಇದು ಪರಿಹರಿಸುತ್ತದೆ.

ಶುಂಠಿ: ನಮ್ಮ ಆಹಾರ ಪದ್ಧತಿಯಲ್ಲಿ ಶುಂಠಿ ಕೂಡ ಮುಖ್ಯವಾಗಿದ್ದು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಶ್ವಾಸಕೋಶದಲ್ಲಿನ ಕಲ್ಮಶಗಳನ್ನು ಕಡಿಮೆ ಮಾಡುತ್ತದೆ. ಇದು ಸುಲಭವಾಗಿ ಉಸಿರಾಡಲು ಸಹಕಾರಿಯಾಗಿದೆ.

ಸೇಬು: ಸೇಬುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುತ್ತದೆ. ಶ್ವಾಸಕೋಶಗಳು ಶಕ್ತಿಯುತವಾಗಿರಲು ಮತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ನಿಂಬೆಹಣ್ಣು: ನಿಂಬೆ, ಕಮಲ ಮತ್ತು ಸಿಹಿ ಗೆಣಸುಗಳಂತಹ ನಿಂಬೆಯಲ್ಲಿರುವ ವಿಟಮಿನ್ ಸಿ ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

ವಾಲ್‌ನಟ್ಸ್ (ಅಖ್ರೋಟ್‌): ವಾಲ್‌ನಟ್ಸ್‌ನಲ್ಲಿ ಒಮೆಗಾ-3 ಆಮ್ಲಗಳು ಸಮೃದ್ಧವಾಗಿದೆ. ಇದು ಶ್ವಾಸಕೋಶದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಉಸಿರಾಟದ ತೊಂದರೆಗಳನ್ನು ನಿವಾರಿಸುತ್ತದೆ.

ಬೆರ್ರಿ ಹಣ್ಣುಗಳು: ಹಣ್ಣುಗಳು, ದ್ರಾಕ್ಷಿಗಳು, ಸ್ಟ್ರಾಬೆರಿಗಳು ಹಾಗೂ ಚೆರ್ರಿಗಳಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಶ್ವಾಸಕೋಶದ ಅಂಗಾಂಶಗಳಿಗೆ ಹಾನಿ ಮಾಡುವ ಕಣಗಳ ವಿರುದ್ಧ ಹೋರಾಡುತ್ತದೆ.

ಮೆಣಸು: ಕಾರಯುಕ್ತ ಮೆಣಸಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಶ್ವಾಸಕೋಶದ ಸಾಂಕ್ರಾಮಿಕ ರೋಗಗಳನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ಶ್ವಾಸಕೋಶಕ್ಕೆ ಮೆಣಸು ಒಳ್ಳೆಯದು

ಇದನ್ನೂ ಓದಿ: ದೇಹದ ತೂಕ ಇಳಿಸಬೇಕೇ, ಈ 5 ಯೋಗಾಸನಗಳನ್ನು ಪ್ರತಿದಿನವೂ ಮಾಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.