ಬಾಲಿವುಡ್ ಸೆಲೆಬ್ರಿಟಿಗಳು ತ್ವಚೆಯ ಆರೈಕೆಯಲ್ಲಿ ಸದಾ ದೇಸಿ ಆರೈಕೆಗೆ ಮಹತ್ವ ನೀಡುತ್ತಾರೆ. ಅದರಲ್ಲೂ ಮುಖ್ಯವಾಗಿ ಕಡಲೆ ಹಿಟ್ಟು, ಮೊಸರು, ಅರಿಶಿಣ ಬಳಸುತ್ತಾರೆ. ತ್ವಚೆಯ ರಹಸ್ಯ ಕಾಪಾಡುವಲ್ಲಿ ಈ ಮೂರು ಮ್ಯಾಜಿಕ್ ಪವರ್ ಸೃಷ್ಟಿಸುವುದು ಸುಳ್ಳಲ್ಲ. ಇವು ಭಾರತೀಯರ ಸೌಂದರ್ಯದ ಪ್ರಮುಖ ರಹಸ್ಯವಾಗಿದ್ದು, ಇದರಲ್ಲಿನ ಕೆಲವು ಅಂಶಗಳು ತ್ವಚೆಯ ಹೊಳಪು ಮತ್ತು ಆರೈಕೆ ಮಾಡುವಲ್ಲಿ ಯಶಸ್ವಿಯಾಗಿವೆ. ಈ ಕುರಿತು ಕಾಸ್ಮೆಟೊಲೊಜಿಸ್ಟ್ ಪೂಜಾ ನಾಗ್ದೇವ್ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">
ಅರಿಶಿಣ: ಭಾರತೀಯರ ಅಡುಗೆ ಮನೆಯಲ್ಲಿರುವ ಅರಿಶಿಣ ರೋಗ ಪ್ರತಿರೋಧಕ ಗುಣ ಹೊಂದಿದ್ದು, ಸೌಂದರ್ಯ ಸೇರಿದಂತೆ ಹಲವು ಚಿಕಿತ್ಸೆಯಲ್ಲೂ ಮಹತ್ವ ಪಡೆದಿದೆ.
ಆ್ಯಂಟಿ ಆಕ್ಸಿಡೆಂಟ್ ಅಂಶ: ಅರಿಶಿಣದಲ್ಲಿ ಕ್ಯುರ್ಕುಮಿನ್ ಇದೆ. ಇದು ನೈಸರ್ಗಿಕವಾಗಿ ರಾಡಿಕಲ್ ಮುಕ್ತ ಸಾಮರ್ಥ್ಯ ಹೊಂದಿದೆ. ಇದು ಅವಧಿ ಪೂರ್ವ ವಯಸ್ಸಾಗುವಿಕೆ ಮತ್ತು ತ್ವಚೆ ಹಾನಿ ತಡೆಯುತ್ತದೆ.
ಉರಿಯೂತ ವಿರೋಧಿ ಪರಿಣಾಮ: ಅರಿಶಿಣದಲ್ಲಿ ಉರಿಯೂತ ವಿರೋಧಿ ಗುಣ ಹೊಂದಿದ್ದು, ತ್ವಚೆಯನ್ನು ಮೃದುವಾಗಿಸುತ್ತದೆ. ರೆಡ್ನೆಸ್ ಮತ್ತು ತ್ವಚೆ ಕಿರಿಕಿರಿ ತಡೆಯುತ್ತದೆ.
ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಮೈಕ್ರೊಬಯಲ್: ಅರಿಶಿಣ ನೈಸರ್ಗಿಕವಾಗಿ ರೋಗ ನಿರೋಧಕ ಗುಣ ಹೊಂದಿದ್ದು, ಮೊಡವೆಗೆ ಕಾರಣವಾಗುವ ಬ್ಯಾಕ್ಟೀರಿಯಾ ನಿಯಂತ್ರಣ ಮಾಡುತ್ತದೆ.
ಕಡಲೆ ಹಿಟ್ಟು: ಕಡಲೆಹಿಟ್ಟು ಎಕ್ಸೊಲಿಯಟ್ ಪರಿಣಾಮ ಹೊಂದಿದ್ದು, ಇದು ಚರ್ಮದಲ್ಲಿನ ಸತ್ತ ಕೋಶ ತೆಗೆದುಹಾಕುತ್ತದೆ. ಚರ್ಮದಲ್ಲಿ ತೆರೆದ ರಂಧ್ರಗಳನ್ನು ಮುಚ್ಚುತ್ತದೆ. ನೈಸರ್ಗಿಕ ಬಣ್ಣ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಎಣ್ಣೆ ಹೀರಿಕೊಳ್ಳುವಿಕೆ: ಮುಖದಲ್ಲಿ ಅತಿಯಾದ ಎಣ್ಣೆಯ ಅಂಶವನ್ನು ತೆಗೆದು ಹಾಕುತ್ತದೆ. ಎಣ್ಣೆಯುಕ್ತ ಚರ್ಮದಲ್ಲಿ ಏಳುವ ಮೊಡವೆ ನಿರ್ವಹಣೆ ಮಾಡುತ್ತದೆ.
ಹೊಳೆಯುವಿಕೆ: ಕಡಲೆಹಿಟ್ಟನ್ನು ನಿಯಮಿತವಾಗಿ ಬಳಕೆ ಮಾಡುವುದರಿಂದ ಚರ್ಮ ಹೊಳೆಯುವಂತೆ ಆಗುತ್ತದೆ. ಸ್ಕಿನ್ ಟಾನ್ ನಿವಾರಣೆ ಮಾಡಿ, ಒಟ್ಟಾರೆ ಚರ್ಮದ ಕಾಂತಿಗೆ ಸಹಾಯ ಮಾಡುತ್ತದೆ.
- " class="align-text-top noRightClick twitterSection" data="">
ಮೊಸರು- ಮಾಶ್ಚರೈಸರ್: ಮೊಸರಿನಲ್ಲಿ ಸಮೃದ್ಧವಾದ ಲ್ಯಾಕ್ಟಿಕ್ ಆ್ಯಸಿಡ್ ಇದ್ದು, ಇದು ನೈಸರ್ಗಿಕವಾಗಿ ತ್ವಚೆಯನ್ನು ಮಾಶ್ಚರೈಸ್ ಮಾಡುತ್ತದೆ. ಹೈಡ್ರೇಟ್ ಮಾಡಿ ಚರ್ಮವನ್ನು ಮೃದುಗೊಳಿಸುತ್ತದೆ.
ಇದರಲ್ಲಿನ ಲ್ಯಾಕ್ಟಿಕ್ ಆಮ್ಲವು ಚರ್ಮದ ಮೃದುತ್ವ ಹೆಚ್ಚಿಸುತ್ತದೆ. ಇದೂ ಕೂಡ ಚರ್ಮದ ಸತ್ತ ಕೋಶ ತೆಗೆದು ಹಾಕುವಲ್ಲಿ ಮತ್ತು ಚರ್ಮದ ವಿನ್ಯಾಸವನ್ನು ಮೃದುವಾಗುವಂತೆ ನೋಡಿಕೊಳ್ಳುತ್ತದೆ.
ಪ್ರೊಬಯೊಟಿಕ್ಸ್: ಮೊಸರಿನಲ್ಲಿ ಪ್ರೊಬಯಾಟಿಕ್ಸ್ ಅಂಶ ಇದ್ದು, ಚರ್ಮದ ಮೈಕ್ರೋಬಯೊಮ್ ಮತ್ತು ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ.
ಇದನ್ನೂ ಓದಿ: ಮಾನ್ಸೂನ್ನಲ್ಲಿ ಮುಖದ ಅಂದವನ್ನು ಹೆಚ್ಚಿಸಿ; ಮನೆಯಲ್ಲಿ ಸುಲಭವಾಗಿ ತಯಾರಿಸಿ ಫೇಸ್ಪ್ಯಾಕ್