ETV Bharat / sukhibhava

ಅಂಗೈಯಲ್ಲಿ ಆರೋಗ್ಯ: ಈ 5 ಹೆಲ್ತ್​​ಕೇರ್​ ಆ್ಯಪ್​ಗಳ ಬಗ್ಗೆ ಗೊತ್ತೇ? - ಡಯಟ್​ ಪ್ಲಾನ್​ ಆ್ಯಪ್​

ಹೊಸ ವರ್ಷದಲ್ಲಿ ನಾವು ಅನೇಕ ಆರೋಗ್ಯ ಗುರಿಗಳನ್ನು ಹೊಂದಿರುತ್ತೇವೆ. ಅಂತಹ ಧ್ಯೇಯೋದ್ದೇಶಗಳ ಪೂರೈಕೆಗೆ ಈ ಸಾಧನಗಳು ನೆರವಾಗಲಿವೆ.

these health apps helps your fitness life

author img

By ETV Bharat Karnataka Team

Published : Jan 2, 2024, 12:26 PM IST

ಹೈದರಾಬಾದ್​​: ಆರೋಗ್ಯದ ಕಾಳಜಿ ವಿಚಾರ ಇಂದು ಹೆಚ್ಚು ಪ್ರಾಬಲ್ಯದ ಕ್ಷೇತ್ರವಾಗಿದೆ. ಅನೇಕರು ತಮ್ಮ ಮೊಬೈಲ್​ಗಳಲ್ಲಿ ಆರೋಗ್ಯದ ಕುರಿತ ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದಾರೆ. ಈ ಹೆಲ್ತ್​​ಕೇರ್​​ ಮೊಬೈಲ್​ ಆ್ಯಪ್​ಗಳು ಇಂದು ಟ್ರೆಂಡ್​​​ ಸೆಟ್ಟರ್‌ಗಳಾಗಿವೆ.

ಹೆಡ್​ಸ್ಪೇಸ್​​: ಸಾಂಕ್ರಾಮಿಕತೆಯ ಬಳಿಕ ಒತ್ತಡ ಮತ್ತು ಆತಂಕ ಎಂಬೆರಡು ಅತ್ಯಂತ ಕಾಳಜಿಯ ವಿಚಾರವಾಗಿದೆ. ಇದಕ್ಕೆ ಧ್ಯಾನ ಎಂಬುದು ಪರಿಹಾರಾತ್ಮಕ ಚಿಕಿತ್ಸೆ. ಹೆಡ್​ಸ್ಪೆಸ್​ ಆ್ಯಪ್​ ಈ ಧ್ಯಾನದ ಕುರಿತು ವೈಯಕ್ತಿಕ ಮಾರ್ಗದರ್ಶನ ನೀಡುತ್ತದೆ. ಉಸಿರಾಟದ ವ್ಯಾಯಾಮವೂ ಸೇರಿದಂತೆ ಸಂಪೂರ್ಣ ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ದೈನಂದಿನ ಧ್ಯಾನ, ನಿದ್ರಾ ಧ್ಯಾನ, ಒತ್ತಡ ಮತ್ತು ಖಿನ್ನತೆ ಮತ್ತು ಏಕಾಗ್ರತೆಗೆ ಇದು ಸಹಾಯಕ.

ಹೆಲ್ತ್​ ಟಿಪ್​: ಅಮೆರಿಕದ ಪ್ರಮಾಣಿತ ವೈದ್ಯರು ಕಡಿಮೆ ವೆಚ್ಚದಲ್ಲಿ ಪ್ರೀಮಿಯಮ್ ಸೇವೆ ನೀಡುತ್ತಾರೆ. ಇದು ರೋಗಿಗಳಿಗೆ ವೈದ್ಯರ ಜೊತೆಗೆ ಸಂಪರ್ಕ ಸಾಧಿಸಲು ಪ್ರೈಮರಿ ಕೇರ್​ ವಿಡಿಯೋ ಅಪಾಯಿಟುಮೆಂಟ್​ ನೀಡುತ್ತದೆ. ಇದರ ಹೊರತಾಗ ಆರೋಗ್ಯ ಸಂಬಂಧಿತ ಪ್ರಶ್ನಾವಳಿಗೆ ಉತ್ತರವನ್ನು ಇದರಲ್ಲಿ ಕಂಡುಕೊಳ್ಳಬಹುದು.

ಸ್ಲೀಪ್​ ಸೈಕಲ್​: ಸ್ಲೀಪ್​ ಸೈಕಲ್​ ಎಂಬುದು ಸ್ಮಾರ್ಟ್​ ಅಲರಾಂನೊಂದಿಗೆ ನಿದ್ರೆಯನ್ನು ಪತ್ತೆ ಮಾಡುವ ಆ್ಯಪ್​. ಇದೂ ಕೂಡ ಕಾಲ್​ ಫೀಚರ್​ನೊಂದಿಗೆ ನಿಧಾನ ಎಚ್ಚರ ವಿಧಾನ ಹೊಂದಿದೆ. ಅಲ್ಲದೇ ಪ್ರತಿನಿತ್ಯ ನಿಮ್ಮ ನಿದ್ರೆಯ ಮಾದರಿಯ ಪತ್ತೆಗೆ ಸಹಾಯಕ. ರಾತ್ರಿ ಉತ್ತಮ ನಿದ್ರೆಗೆ ಸಹಾಯ ಮಾಡುವ ಸಂಗೀತ ಮತ್ತು ಕಥೆಗಳ ಗ್ರಂಥಾಲಯವನ್ನು ಇದು ಹೊಂದಿದೆ.

ಮೈ ಪ್ಲೇಟ್​​: ಮೈ ಪ್ಲೇಟ್​ ಎಂಬುದು ಆಹಾರದ ಮಾದರಿಯಲ್ಲಿ ಕ್ಯಾಲರಿ ಲೆಕ್ಕ ಹಾಕುವ ಜೊತೆಗೆ ಪೌಷ್ಟಿಕಾಂಶ, ಆಹಾರ ಮತ್ತು ಹೆಚ್ಚಿನ ನೀರಿನ ಸೇವನೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಸಮೃದ್ಧ ಆಹಾರದ ದತ್ತಾಂಶಗಳನ್ನು ಪಡೆಯಬಹುದು. ಬಳಕೆದಾರರು ತಮ್ಮ ಕಸ್ಟಮೈಸ್ಡ್​​ ಆಹಾರದ ಪ್ಲಾನ್​ ರೂಪಿಸಲಯ ಸಹಾಯ ಮಾಡುತ್ತದೆ. ಇದು ತೂಕ ನಿರ್ವಹಣೆ ಮತ್ತು ಪ್ರಗತಿಗೆ ಬೇಕಾಗಬಹುದು.

ಲೈಫ್​ಸಮ್​: ಇದೂ ಕೂಡ ನಿಮಗೆ ಸರಿಯಾದ ಡಯಟ್​ ಪ್ಲಾನ್​ ಆರಿಸಿಕೊಳ್ಳಲು ಸಹಾಯಕ. ಈ ಆ್ಯಪ್​ ಕೂಡ ನಿಮ್ಮ ದೇಹದ ಕ್ಯಾಲರಿ ಲೆಕ್ಕ ಮತ್ತು ಆಹಾರ ಸೇವನೆ ಪತ್ತೆಗೆ ಸಹಾಯ ಮಾಡುತ್ತದೆ.

ಕೆಲವು ಆ್ಯಪ್​ಗಳು ಉತ್ತಮ ತಂತ್ರಜ್ಞಾನದೊಂದಿಗೆ ಆರೋಗ್ಯ ಮಾಹಿತಿಯನ್ನು ಬಳಕೆ ಮಾಡುವಲ್ಲಿ ಅಸಾಧಾರಣವಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಸುಲಭ ಬಳಕೆ ಮತ್ತು ಗ್ರಾಹಕಸ್ನೇಹಿ ಯೋಜನೆಯನ್ನು ಇವು ರೂಪಿಸುತ್ತವೆ. ​​​

ಇದನ್ನೂ ಓದಿ: ಫಾರ್ಮಾ​ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲಿದೆ ಕೋಶ, ಜೀನ್​ ಚಿಕಿತ್ಸೆ: ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.