ETV Bharat / sukhibhava

ಅಧಿಕ ರಕ್ತದೊತ್ತ ನಿವಾರಿಸಲು ಸಹಾಯವಾಗಲಿದೆ ಈ ಐದು ಧ್ಯಾನದ ತಂತ್ರಗಳು

author img

By

Published : May 18, 2023, 4:10 PM IST

Updated : May 18, 2023, 4:27 PM IST

ಧ್ಯಾನಗಳು ಸದಾ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಜೊತೆಗೆ ಇದು ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ. ಧ್ಯಾನಗಳಲ್ಲಿ ಹಲವು ಪ್ರಕಾರಗಳಿದ್ದು, ಈ ಐದು ಧ್ಯಾನ ಪ್ರಕಾರಗಳು ಆರೋಗ್ಯ ಅಭಿವೃದ್ಧಿಗೆ ಇದು ಸಹಾಯವಾಗಲಿದೆ.

These five meditation techniques will help you get rid of high blood pressure

ಒತ್ತಡ, ಆತಂಕ ಮತ್ತು ಅಧಿಕ ರಕ್ತದೊತ್ತಡಗಳು ಜಾಗತಿಕವಾಗಿ ಲಕ್ಷಾಂತರ ಜನರ ಆರೋಗ್ಯ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಧ್ಯಾನಗಳು ಪರಿಹಾರವಾಗಬಲ್ಲದು. ಪ್ರಾಚೀನ ಧ್ಯಾನ ಅಭ್ಯಾಸಗಳು ವಿಧಗಳು ಅನೇಕ ಪರಿಹಾರ ನೀಡುತ್ತದೆ. ಈ ಪ್ರಾಚೀನ ಅಭ್ಯಾಸವು ಹಲವಾರು ರೂಪಗಳಲ್ಲಿ ಬರುತ್ತದೆ. ಒತ್ತಡ, ಆತಂಕ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಐದು ಧ್ಯಾನದ ತಂತ್ರಗಳು ಸಹಾಯ ಮಾಡುತ್ತದೆ.

ಧ್ಯಾನಗಳು ಸದಾ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಜೊತೆಗೆ ಇದು ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ. ಧ್ಯಾನಗಳಲ್ಲಿ ಹಲವು ಪ್ರಕಾರಗಳಿದ್ದು, ಈ ಐದು ಧ್ಯಾನ ಪ್ರಕಾರಗಳು ಆರೋಗ್ಯ ಅಭಿವೃದ್ಧಿಗೆ ಇದು ಸಹಾಯವಾಗಲಿದೆ.

ಅತೀಂದ್ರಿಯ ಧ್ಯಾನ: ಆತಂರಿಕ ಮಟ್ಟದಲ್ಲಿ ವಿಶ್ರಾಂತಿ ನೀಡುವಲ್ಲಿ ಇದು ಸಹಾಯ ಮಾಡುತ್ತದೆ. ಅತೀಂದ್ರಿಯ ಧ್ಯಾನ ಎಂದರೆ ಮೌನವಾಗಿ ಮಂತ್ರವನ್ನು ಪಠಿಸುವುದಾಗಿದೆ. 1950ರಲ್ಲಿ ಮಹರ್ಷಿ ಮಹೇಶ್​ ಯೋಗಿ ಈ ಧ್ಯಾನ ತಂತ್ರವನ್ನು ಅನ್ವೇಷಿಸಿದರು. ಅಂದಿನಿಂದ ಇದು ಸಾಕಷ್ಟು ಜನಪ್ರಿಯತೆ ಪಡೆದಿದೆ. ಬಿಡುವಿಲ್ಲದ ಜೀವನ ಶೈಲಿಯಿಂದ ಇದು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಅಂತೀದ್ರಿಯ ಧ್ಯಾನದ ಅಭ್ಯಾಸ ಮಾಡುವಾಗ ಶಾಂತಿವಾಗಿ ಕುಳಿತು ಮಂತ್ರವನ್ನು ಪದೇ ಪದೇ ಪಠಿಸುತ್ತಿರಬೇಕು. ಮಂತ್ರವನ್ನು ಪುನರ್​ಪಠಿಸುವುದರಿಂದ ಮನ್ಸ್ಉ ಶಾಂತವಾಗುತ್ತದೆ. ಆತಂರಿಕ ಮಟ್ಟದಲ್ಲಿ ವಿಶ್ರಾಂತಿ ಪಠಿಸಬಹುದು. ಇದರಿಂದ ರಕ್ತದೊತ್ತಡ, ಆತಂಕ ಮತ್ತು ಒತ್ತಡ ಕಡಿಮೆ ಮಾಡಬಹುದು.

ಉಸಿರಾಟದ ಧ್ಯಾನ: ಉಸಿರಾಟದ ಧ್ಯಾನ ಕೂಡ ಬಲು ಪ್ರಖ್ಯಾತವಾಗಿರುವ ಧ್ಯಾನದ ತಂತ್ರವಾಗಿದೆ. ಇದು ಉಸಿರಾಟದ ಮೇಲೆ ಗಮನಹರಿಸುವ ಮೂಲಕ ನಿಯಂತ್ರಣ ಮಾಡಬಹುದು. ಇದು ಸಾಮಾನ್ಯವಾಗಿ ಆರಂಭಿಕ ಹಂತದ ಜೊತೆಗೆ ಅಡ್ವಾನ್ಸ್ಡ್​ ಅಭ್ಯಾಸ ಮಾಡುತ್ತಾರೆ. ಕುಳಿತಾಗ, ನಡೆಯುವಾಗ ಮತ್ತು ಇತರೆ ಸಂದರ್ಭದಲ್ಲಿ ಇದನ್ನು ಅಭ್ಯಾಸ ನಡೆಸಬಹುದು.

ಪ್ರೀತಿ- ದಯೆ ಧ್ಯಾನ: ಇದು ಕೂಡ ನಿಮ್ಮ ಬಗ್ಗೆ ನಿಮಗೆ ಸಹಾನುಭೂತಿ ಮತ್ತು ಆಕರ್ಷಣೆಗೆ ಬೆಳೆಯಲು ಕಾರಣವಾಗುತ್ತದೆ. ಈ ಧ್ಯಾನವೂ ಬೌದ್ಧ ತತ್ವದ ಮೂಲವನ್ನು ಹೊಂದಿದೆ. ಇದು ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಗೆ ಬಂದಿದೆ. ಈ ಧ್ಯಾನದಕ್ಕು ನಿರ್ಧಿಷ್ಟ ವ್ಯಕ್ತಿ ಅಥವಾಗುಂಪು ಅಥವಾ ಅವರತ್ತ ಗಮನವನ್ನು ಕೇಂದ್ರಿಕರಿಸಿ ದಯೇ ಮೂಲಕ ಪಠಿಸಬೇಕು. ಒತ್ತಡ, ಭಯ ಮತ್ತು ಅಧಿಕ ರಕ್ತದೊತ್ತಡ ನಿವಾರಿಸುವುದರ ಜೊತೆಗೆ ನಕಾರಾತ್ಮಕ ಅಂಶಗಳನ್ನು ಇದು ತೆಗೆಯುತ್ತದೆ.

ಬಾಡಿ ಸ್ಕಾನಿಂಗ್​ ಧ್ಯಾನ: ದೇಹದ ಯಾವುದಾದರೂ ಒಂದು ಭಾಗದ ಮೇಲೆ ಕೇಂದ್ರಿಕರಿಸಿ ಮಾಡುವ ಯೋಗ ಇದಾಗಿದೆ, ಕುಳಿತು ಅಥವಾ ಮಲಗಿ ಪರಿಸರದ ಮಧ್ಯೆ ನಡೆಸುವ ಈ ಧ್ಯಾನ ಹೆಚ್ಚಿನ ಲಾಭ ತರಲಿದೆ. ಇದು ಭಂಗಿ ಮತ್ತು ಉಸಿರಾಟದ ಮೇಲೆ ಗಮನವನ್ನು ಹೊಂದಿರುತ್ತದೆ. ಕಾಲು ಬೆರಳಿನಿಂದ ದೇಹದ ಮೇಲ್ಬಾಗದವರೆಗೆ ಅಂಗಾಂಗಗಳ ಮೇಲೆ ಗಮನ ಕೆಂದ್ರೀಕರಿಸಲಾಗುವುದು. ಮನೋವೈಜ್ಞಾನಿಕದ ಮೂಲಕ ದೇಹವನ್ನು ಪರೀಕ್ಷೆ ನಡೆಸಲಾಗುವುದು.

ದೇಹದ ಪ್ರತಿಯೊಂದು ಅಂಗದ ಮೇಲೆ ಗಮನ ಕೆಂದ್ರೀಕರಿಸುವುದರಿಂದ ದೇಹ ವಿಶ್ರಮಿಸುತ್ತದೆ. ಆತಂಕಗಳು ನಿವಾರಣೆಯಾಗಿ ಸ್ನಾಯು, ದೇಹದ ಭಾಗಗಳು ವಿಶ್ರಾಂತಿಗೊಳಿಸಲಾಗುತ್ತದೆ.

ದೃಶ್ಯೀಕರಣ ಧ್ಯಾನ: ಇದು ಕೂಡ ಸಕಾರಾತ್ಮಕ ಚಿತ್ರಗಳು, ವ್ಯಕ್ತಿಗಳನ್ನು ಕಣ್ಮುಂದೆ ತರಿಸಿಕೊಂಡು ಮಾಡುವ ಧ್ಯಾನದ ವಿಧವಾಗಿದೆ. ಸಕಾರಾತ್ಮಕವಾಗಿ ವ್ಯಕ್ತಿ, ದೃಶ್ಯ ಅಥವಾ ಚಿತ್ರಗಳನ್ನು ಕಣ್ಮುಂದೆ ತರುವುದರಿಂದ ದೇಹದ ಐದು ಇಂದ್ರೀಯಗಳು ಪ್ರಯೋಜನ ಪಡೆಯುತ್ತವೆ.

ಧ್ಯಾನವು ಜಿಮ್, ಈಜು, ಕ್ರೀಡೆ, ಇತ್ಯಾದಿಗಳಂತಹ ಇತರ ಅಭ್ಯಾಸಗಳಂತೆ ತಾಳ್ಮೆ ಮತ್ತು ನಿರಂತರತೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ನಿಯಮಿತ ತರಬೇತಿ ಮತ್ತು ಸಲಹೆಯೊಂದಿಗೆ ನಿಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮಕ್ಕೆ ಪ್ರಯೋಜನವನ್ನು ನೀಡುವ ಧ್ಯಾನ ಅಭ್ಯಾಸಗಳನ್ನು ನುರಿತವರಿಂದ ಅಭ್ಯಾಸ ಮಾಡುವುದು ಹೆಚ್ಚು ಪ್ರಯೋಜನ ನೀಡಲಿದೆ.

ಇದನ್ನೂ ಓದಿ: ಬೆನ್ನು, ಭುಜ ನೋವಿಗೆ ಕಾರಣ ಕೆಟ್ಟ ಭಂಗಿ

Last Updated : May 18, 2023, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.