ETV Bharat / sukhibhava

ಭಾರತದ ವಿವಿಧ ರಾಜ್ಯಗಳಲ್ಲಿನ ಪ್ರಖ್ಯಾತ ಹಬ್ಬಗಳಿವು: ಒಮ್ಮೆಯಾದರೂ ಕಣ್ತುಂಬಿಕೊಳ್ಳಿ! - ವೈಶಿಷ್ಟ್ಯಪೂರ್ಣ ಹಬ್ಬದ ಕುರಿತ ಮಾಹಿತಿ

ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಅನೇಕ ಹಬ್ಬದ ಆಚರಣೆಗಳನ್ನು ಕಾಣಬಹುದು. ಅದರಲ್ಲಿ ಪ್ರಮುಖವಾದವು ಇಲ್ಲಿದೆ.

these are the Famous festivals in India
these are the Famous festivals in India
author img

By

Published : Apr 11, 2023, 12:36 PM IST

Updated : Apr 11, 2023, 1:04 PM IST

ಭಾರತದ ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶೇಷ ಹಬ್ಬದ ಆಚರಣೆಗಳನ್ನು ಹೊಂದಿದ್ದು, ಇವು ಎಲ್ಲರ ಗಮನ ಸೆಳೆಯುವುದು ಸುಳ್ಳಲ್ಲ. ವಿಭಿನ್ನ ಸಂಸ್ಕೃತಿ, ಆಚರಣೆ ಪದ್ದತಿ ಮೂಲಕ ಇವು ಪ್ರಖ್ಯಾತಗೊಂಡಿದೆ. ಅಂತಹ ಕೆಲವು ರಾಜ್ಯಗಳ ವೈಶಿಷ್ಟ್ಯಪೂರ್ಣ ಹಬ್ಬದ ಕುರಿತ ಮಾಹಿತಿ ಇಲ್ಲಿದೆ.

ಪಂಜಾಬ್​ನ ವಾಘಾ ಗಡಿಯಲ್ಲಿನ ಸ್ವಾತಂತ್ರ್ಯ ದಿನಾಚರಣೆ: ಪಂಜಾಬಿನ ವಾಘಾ ಗಡಿಯಲ್ಲಿ ಕಾಣುವ ದೇಶಭಕ್ತಿಯ ಈ ಆಚರಣೆ ಬೇರೆಯದೇ ಅನುಭವ ನೀಡುತ್ತದೆ. ಪ್ರತಿಯೊಬ್ಬರಲ್ಲೂ ದೇಶಕ್ಕಾಗಿ ಸಮರ್ಪಣಾ ಮನೋಭಾವವನ್ನು ಇದು ಮೂಡಿಸುತ್ತದೆ. 1959ರಿಂದ ಇಲ್ಲಿನ ವಾಘಾ ಅಟಾರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಈ ಸಂಪ್ರದಾಯ ರೂಢಿಸಿಕೊಂಡು ಬರಲಾಗಿದೆ. ಈ ಆಚರಣೆ ಕಾಣಲು ದೇಶದ ಮೂಲೆ ಮೂಲೆಯಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ನೃತ್ಯ, ಸಂಗೀತ, ದೇಶ ಭಕ್ತಿ ಗೀತೆಗಳ ಚಟುವಟಿಕೆಗಳನ್ನು ಈ ದಿನ ಹಮ್ಮಿಕೊಳ್ಳಲಾಗುವುದು.

ಮೈಸೂರು ದಸರಾ: ಮೈಸೂರಿನ ದಸರಾ ಜಗತ್​ ವಿಖ್ಯಾತಿ ಪಡೆದಿದೆ. 10 ದಿನಗಳ ಕಾಲ ನಡೆಯುವ ಈ ಆಚರಣೆ ಅಂತಿಮ ದಿನದ ಜಂಬೂ ಸವಾರಿ ಕಾಣಲು ದೇಶ - ವಿದೇಶದಿಂದ ಜನರು ಆಗಮಿಸುತ್ತಾರೆ. ಈ ಸಮಯದಲ್ಲಿ ಅರಮನೆ ಸೇರಿದಂತೆ ಇಡೀ ನಗರ ದೀಪಗಳಿಂದ ಜಗಮಗಿಸುತ್ತದೆ. ಚಾಮುಂಡಿ ದೇವಿಯ ಜಂಜೂ ಸವಾರಿ ಜೊತೆಗೆ ಟಾರ್ಚ್​ಲೈಟ್​ ಪೆರೇಡ್​​, ಲೇಸರ್​ ಶೋ, ವಿಂಟೆಜ್​ ಕಾರ್​​ ರ್ಯಾಲಿ, ಶಾಪಿಂಗ್​​ ಹಬ್ಬಗಳು ಎಲ್ಲರ ಗಮನ ಸೆಳೆಯುತ್ತದೆ.

ಉತ್ತರ ಪ್ರದೇಶದ ಹೋಳಿ: ಬಣ್ಣಗಳ ಹಬ್ಬ ಹೋಳಿ ಉತ್ತರ ಪ್ರದೇಶದ ಮಥುರಾದಲ್ಲಿ ವಾರಗಳ ಕಾಲ ಸಂಭ್ರಮಿಸಲಾಗುತ್ತದೆ. ಈ ವೇಳೆ, ಡಿಜೆ ಮತ್ತು ಭಾಂಗ್​ ಕೂಡ ಇದ್ದು, ಜನರು ಬಣ್ಣದೊಕುಳಿಯಲ್ಲಿ ಹೆಜ್ಜೆಗಳನ್ನು ಹಾಕುತ್ತಾರೆ. ವೃಂದಾವನ, ಬನರಾಸ್​ ಮತ್ತು ಮಧುರಾದಲ್ಲಿ ವಿಧ ವಿಧದ ಹೋಳಿ ಆಚರಿಸಲಾಗುವುದು. ಇದೊಂದು ಜೀವನದ ಅದ್ಬುತ ಅನುಭವಗಳಲ್ಲಿ ಒಂದಾಗುವುದರಲ್ಲಿ ಸುಳ್ಳಿಲ್ಲ.

ವಾರಾಣಸಿಯಲ್ಲಿ ದೀಪಾವಳಿ: ಬೆಳಕಿನ ಹಬ್ಬ ದೀಪಾವಳಿಯಲ್ಲಿ ವಾರಾಣಸಿಯಲ್ಲಿ ಗಂಗಾತೀರದಲ್ಲಿ ಸಂಭ್ರಮದಿಂದ ಆಚರಿಸಲಾಗುವುದು. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರು ದೀಪ ದಾನ ಮಾಡುವುದು ವಿಶೇಷ. ರಾಕ್ಷಸಿ ತ್ರಿಪುರಸೊರ್​ ಎಂಬ ರಕ್ಷಾಸನನ್ನು ಶಿವ ನಾಶ ಮಾಡಿದ ಎಂಬ ಕಥೆ ಇದರೊಂದಿಗೆ ತಳಕು ಹಾಕಿಕೊಂಡಿದೆ.

ಕೇರಳದಲ್ಲಿ ಓಣಂ: ದೇವರ ನಾಡು ಕೇರಳದಲ್ಲಿ ನಡೆಯುವ ಓಣಂ ಹಬ್ಬ ಬಲಿ ಮಹಾರಾಜನಿಗೆ ಸಂಬಂಧಿಸಿದೆ. ಈ ದಿನ ಮಹಾಬಲವನ್ನು ಹೂವುಗಳಿಂದ ಸಿಂಗರಿಸಿ, ಬರಮಾಡಿಕೊಳ್ಳಲಾಗುವುದು. ಅಲ್ಲದೇ ಈ ಸಮಯದಲ್ಲಿ ಭಕ್ಷ್ಯ ಭೋಜಗಳನ್ನು ಮಾಡಲಾಗುವುದು. ಇಲ್ಲಿನ ಸಂಪ್ರದಾಯಿಕ ನೃತ್ಯ, ಆಚರಣೆಗಳದಂತಹ ಕಥಕ್ಕಳಿ, ಬೋಟ್​ ರೇಸ್​, ಕ್ಲಾಪ್​ ಡ್ಯಾನ್ಸ್​, ಪುಲಿ ಕಾಲಿ ಪೇರೆಡ್​​ಗಳು ಕಣ್ಮನ ಸೆಳೆಯುತ್ತದೆ.

ಗೋವಾದಲ್ಲಿನ ಕ್ರಿಸ್ಮಸ್​: ಕ್ರಿಸ್ಮಸ್​ ಆಚರಣೆಗೆ ಭಾರತದಲ್ಲಿ ಅತ್ಯುತ್ತಮ ತಾಣ ಎಂದರೆ ಅದು ಕಡಲ ತೀರವಾದ ಗೋವಾ. ಕಾರಣ ಇಲ್ಲಿನ ಚರ್ಚ್​ಗಳಿಗೆ 400 ವರ್ಷಗಳ ಇತಿಹಾಸವಿದ್ದು, ಅನೇಕ ಚರ್ಚ್​ಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೋವಾದ ಒಂದು ಪ್ರದೇಶಕ್ಕೆ ಮಾತ್ರ ಇದು ಸೀಮಿತವಾಗಿರದೇ ರಾಜ್ಯದೆಲ್ಲೆಡೆ ಈ ಸಂಭ್ರಮ ಕಾಣಬಹುದು. ರಾತ್ರಿ ಇಡೀ ಪಟಾಕಿ, ಸಿಹಿ ಹಂಚುವಿಕೆ, ಡ್ಯಾನ್ಸ್​, ಪಾರ್ಟಿಗಳನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: ಭಾರತದಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ಗೆ ಸ್ಥಳ ಹುಡುಕುತ್ತಿದ್ರೆ, ಇಲ್ಲಿವೆ ನೋಡಿ ರಮಣೀಯ ತಾಣಗಳು

Last Updated : Apr 11, 2023, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.