ಹೈದರಾಬಾದ್: ಚಳಿಗಾಲದಲ್ಲಿ ಆರೋಗ್ಯಯುತ ಕೂದಲು ನಿರ್ವಹಣೆ ಮಾಡುವುದು ಕೊಂಚ ಸವಾಲಿನ ಕೆಲಸ. ಈ ಋತುಮಾನದಲ್ಲಿ ಕೂದಲು ಎಣ್ಣೆ ಅಂಶವನ್ನು ಕಳೆದುಕೊಂಡು ನಿಸ್ತೇಜವಾಗುತ್ತದೆ. ಇದಕ್ಕೆ ಸರಿಯಾದ ಆರೈಕೆ ಅಗತ್ಯ. ಇವು ಸರಿಯಾದ ಎಣ್ಣೆ ಅಂಶದಿಂದ ಲಭ್ಯವಾಗಿದೆ. ವಿವಿಧ ಎಣ್ಣೆಗಳು ಕೂದಲಿಗೆ ವಿವಿಧ ಪ್ರಯೋಜನವನ್ನು ನೀಡಿ ಪರಿಣಾಮ ಬೀರುತ್ತದೆ. ಈ ಎಣ್ಣೆಗಳ ಪ್ರಯೋಜನ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿದೆ. ಅಂತಹ ಪ್ರಮುಖ ಐದು ಎಣ್ಣೆಗಳು ಇಲ್ಲಿದ್ದು, ಇವು ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಕೊಬ್ಬರಿ ಎಣ್ಣೆ: ಕೊಬ್ಬರಿ ಪ್ರೋಟಿನ್ ಮತ್ತು ಮಾಶ್ಚರೈಸರ್ ಕಳೆದುಕೊಂಡಾಗ ಅದಕ್ಕೆ ಕೊಬ್ಬರಿ ಎಣ್ಣೆ ಬಳಕೆ ಅಗತ್ಯ. ಇದರಲ್ಲಿನ ಆ್ಯಂಟಿ ಬ್ಯಾಕ್ಟಿರಿಯಲ್ ಅಂಶಗಳು ಬುಡಕ್ಕೆ ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯನ್ನು ಕೂದಲು ಮತ್ತು ಬುಡಕ್ಕೆ ಹಚ್ಚುವ ಮೊದಲು ಅದನ್ನು ಚೆನ್ನಾಗಿ ಕಾಯಿಸಿ ಹಚ್ಚಬೇಕು ಬಳಿಕ 30 ನಿಮಿಷ ಅಥವಾ ರಾತ್ರಿ ಇಡೀ ಬಿಟ್ಟು ಬಳಿಕ ತಲೆ ಸ್ನಾನ ಮಾಡಿ.
ಅರ್ಗನ್ ಎಣ್ಣೆ: ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಪ್ರಮಾಣ ಹೆಚ್ಚಿರುತ್ತದೆ. ಇದು ಕೂದಲನ್ನು ಹೈಡ್ರೇಟ್ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ಕೂದಲನ್ನು ಮೃದುವಾಗಿಸುತ್ತದೆ. ಕೂದಲಿಗೆ ಕಂಡಿಷನರ್ ರೀತಿಯಾಗಿ ಕೆಲಸ ಮಾಡುತ್ತದೆ.
ಆಲಿವ್ ಆಯಿಲ್: ಆ್ಯಂಟಿ - ಆಕ್ಸಿಡೆಂಟ್ ಮತ್ತು ವಿಟಮಿನ್ ಇ ಇದರಲ್ಲಿದೆ. ಇದು ಕೂಡ ಕೂದಲನ್ನು ಹೈಡ್ರೇಟ್ ಮಾಡಿ ಬಲಗೊಳಿಸುತ್ತದೆ. ತಲೆ ಹೊಟ್ಟಿನ ಸಮಸ್ಯೆಗೆ ಇದು ಮುಕ್ತಿ ಹಾಡುತ್ತದೆ. ಬಿಸಿ ಆಲಿವ್ ಎಣ್ಣೆಯನ್ನು ಕೂದಲು ಮತ್ತು ಬುಡಕ್ಕೆ ಹಚ್ಚಿ ಕನಿಷ್ಠ 30 ನಿಮಿಷದ ಬಳಿಕ ತಲೆ ಸ್ನಾನ ಮಾಡುವುದು ಉತ್ತಮ.
ಜೊಜೊಬಾ ಎಣ್ಣೆ: ಜೊಬೊಬಾ ಎಣ್ಣೆಯು ನೈಸರ್ಗಿಕ ಎಣ್ಣೆಯಂತೆ ಪರಿಣಾಮಕಾರಿ. ಇದು ತಲೆ ಬುಡದಲ್ಲಿ ಎಣ್ಣೆ ಉತ್ಪಾದನೆಯನ್ನು ಸಮತೋಲನ ಮಾಡುತ್ತದೆ. ಕೂದಲಿಗೆ ಮಾಶ್ಚರೈಸ್ ಮಾಡಿ, ಆರೋಗ್ಯಯುತ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ಹಗುರವಾಗಿದ್ದು, ಕಡಿಮೆ ಜಿಗುಟಾಗಿದೆ.
ಸಿಹಿ ಬಾದಾಮಿ ಎಣ್ಣೆ: ವಿಟಮಿನ್ ಮತ್ತು ಮಿನರಲ್ ಸಮೃದ್ಧ ಗುಣಗಳು ಇದರಲ್ಲಿದೆ. ಇದು ಕೂದಲಿಗೆ ಪೋಷಣೆ ನೀಡಿ, ಒಟ್ಟಾರೆ ಕೂದಲಿನ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ. ಇದು ತುಂಡಾಗುವ ಕೂದಲಿನ ಸಮಸ್ಯೆಗೆ ಅಂತ್ಯ ಹಾಡುತ್ತದೆ. ಉದ್ದವಾದ ಕೂದಲ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. (ಎಎನ್ಐ)
ಇದನ್ನೂ ಓದಿ: ಚಳಿಗಾಲದಲ್ಲಿ ಈ ಸಿಹಿತಿನಿಸುಗಳ ಸೇವನೆ ಉತ್ತಮ: ದೇಹದ ಶಕ್ತಿಯ ಜೊತೆಗೆ ಉಷ್ಣತೆಯೂ ಹೆಚ್ಚಳ