ಹೈದ್ರಾಬಾದ್: ಕಣ್ಣಿನ ಕೆಳಗೆ ಮೂಡುವ ಕಪ್ಪು ವರ್ತುಲ ಮತ್ತು ಕಣ್ಣು ಊತ ಸಾಮಾನ್ಯವಾಗಿ ಒಂದೇ ಎಂಬಂತೆ ಕಂಡರೂ, ಇವರೆಡರ ನಡುವೆ ಭಾರೀ ವ್ಯತ್ಯಾಸ ಇದೆ. ಇನ್ನು, ಕಣ್ಣಿನ ಸುತ್ತ ಕಾಣುವು ಊತ ಐ ಬ್ಯಾಗ್ಗೂ ಹಾಗೂ ಕಣ್ಣಿನ ಕೆಳಗೆ ಕಾಣುವ ಕಪ್ಪು ಕಲೆಗಳನ್ನು ಡಾರ್ಕ್ ಸರ್ಕಲ್ ಅಥವಾ ಕಪ್ಪು ವರ್ತಲ ಹಲವರನ್ನು ಕಾಡುವ ಸಮಸ್ಯೆ. ಈ ವರ್ತುಲಗಳು ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಒತ್ತಡ, ಆತಂಕ, ಜೀವನಶೈಲಿ ವಿಧಾನ, ಸರಿಯಾದ ನಿದ್ದೆ ಇಲ್ಲದೆ ಇರುವುದು ಈ ಕಪ್ಪು ವರ್ತುಲ ಬರಲು ಕಾರಣವಾಗುತ್ತದೆ.
ಅಲರ್ಜಿ, ಅತಿ ಹೆಚ್ಚು ಉಪ್ಪು ಸೇವನೆ, ಧೂಮಪಾನ, ಮದ್ಯಪಾನ ಸೇವನೆ, ಅರೋಗ್ಯಕರವಲ್ಲದ ಡಯಟ್ ಮತ್ತು ದೀರ್ಘಕಾಲದ ಸೈನಸ್ ಸಮಸ್ಯೆಗಳು ಮೇಲಿನ ಎರಡು ಸಮಸ್ಯೆಗೆ ಕಾರಣವಾಗುತ್ತದೆ. ಕಣ್ಣಿನ ಸೌಂದರ್ಯಕ್ಕೆ ಹಾನಿ ಮಾಡುವ ಈ ಸಮಸ್ಯೆಗೆ ಮನೆಯಲ್ಲೇ ಮದ್ದು ಇದೆ. ಇವುಗಳನ್ನು ಬಳಕೆ ಮಾಡುವ ಮೂಲಕ ಕಪ್ಪು ವರ್ತುಲ ಮತ್ತು ಐ ಡಾರ್ಕ್ ಸಮಸ್ಯೆ ಕಡಿಮೆ ಮಾಡಬಹುದಾಗಿದೆ. ಹೆಚ್ಚಿನ ಕಾಳಜಿ ವಹಿಸುವ ಮೂಲಕ ಈ ಮನೆ ಮದ್ದು ಪಾಲಿಸಿ, ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದು. ಈ ಮನೆ ಮದ್ದುಗಳನ್ನು ಅನುಸರಿಸುವ ಮುನ್ನ ನಿಮ್ಮ ಚರ್ಮಕ್ಕೆ ಇವು ಹೊಂದುತ್ತವೆಯಾ ಎಂದು ಪರೀಕ್ಷೆ ನಡೆಸುವುದು ಅವಶ್ಯವಾಗಿದೆ.
ಸೌತೆಕಾಯಿ: ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲೆ 10 ರಿಂದ 12 ನಿಮಿಷಗಳ ಕಾಲ ಇಟ್ಟುಕೊಳ್ಳುವುದರಿಂದ ಕಣ್ಣಿನ ವಿಶ್ರಾಂತಿಗೆ ಸಹಾಯಕವಾಗುತ್ತದೆ. ಇದರ ಜೊತೆಯಲ್ಲಿಯೇ, ಸೌತೆಕಾಯಿ ರಸವನ್ನು ಕೂಡ ಕಪ್ಪು ವರ್ತಲ ಸುತ್ತ ಲೇಪನ ಮಾಡಬೇಕು. ಹತ್ತಿಯ ಸಹಾಯದಿಂದ ಇವುಗಳ ಮೇಲೆ ಸೌತೆಕಾಯಿ ರಸವನ್ನು ಸವರಿ, ಇದಾದ ಒಂದರಿಂದ ಮೂರು ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆಯಬೇಕು.
ಸಿಹಿ ಬಾದಾಮಿ ಎಣ್ಣೆ: ಮಲಗುವ ಮುನ್ನ ಸಿಹಿ ಬಾದಾಮಿ ಎಣ್ಣೆಯನ್ನು ಕೂಡ ಹತ್ತಿ ಸಹಾಯದಿಂದ ಕಣ್ಣಿನ ಸುತ್ತ ಸವರಬೇಕು, ಬಳಿಕ ನಿಮ್ಮ ಚರ್ಮವನ್ನು ಮೃದುವಾಗಿ ಮಸಾಜ್ ಮಾಡಿ. ರಾತ್ರಿ ಇಡೀ ಹಾಗೇ ಬಿಟ್ಟುಬಿಡಿ. ಪ್ರತಿ ರಾತ್ರಿ ಈ ರೀತಿ ಮಾಡುವುದರಿಂದ ಕಪ್ಪು ವರ್ತುಲವನ್ನು ಕಡಿಮೆ ಮಾಡಬಹುದಾಗಿದೆ.
ಗ್ರೀನ್ ಟೀ: ಟೀ ಬ್ಯಾಗ್ಗಳನ್ನು 20 ನಿಮಿಷದಲ್ಲಿ ಹಾಗೇ ಬಿಡಬೇಕು. ಬಳಿಕ ಅದರ ರಸವನ್ನು ಕಣ್ಣಿನ ಕಪ್ಪು ವರ್ತುಲಗಳ ಅಡಿ ಹಚ್ಚಬೇಕು. ಹಾಗೇ 15ರಿಂದ 30 ನಿಮಿಷ ಬಿಡಬೇಕು.
ಟೊಮೆಟೊ: ಟೊಮೆಟೊ ಮತ್ತು ನಿಂಬೆ ಹಣ್ಣಿನ ರಸವನ್ನು ಪೇಸ್ಟ್ ಮಾಡಿ, ಅದನ್ನು ಕಣ್ಣಿನ ಕಪ್ಪು ವರ್ತುಲ ಕೆಳಗೆ ಹಚ್ಚಬೇಕು. 20 ನಿಮಿಷದ ಬಳಿಕ ಅದನ್ನು ತೊಳೆಯಿರಿ. ವಾರದಲ್ಲಿ ಎರಡು ದಿನ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಆಲೋವೆರಾ: ಅನೇಕ ಸೌಂದರ್ಯ ವರ್ಧಕಗಳಲ್ಲಿ ಬಳಕೆಯಾಗುವ ಅಲೋವೆರಾವನ್ನು ಕಣ್ಣಿನ ಕೆಳಗೆ 5 ರಿಂದ 7 ನಿಮಿಷ ಬಿಡಬೇಕು. ಇದು ಒಣಗುವ ಮುನ್ನ ಇದನ್ನು ತಣ್ಣೀರಿನಿಂದ ತೊಳೆಯಬೇಕು.
ಇದನ್ನೂ ಓದಿ: ಮದುವೆ ವೇಳೆ ತ್ವಚೆಯ ಸೌಂದರ್ಯ ಹೆಚ್ಚಿಸುವುದು ಹೇಗೆ? ಈ ಅಂಶಗಳ ಬಗ್ಗೆ ಕಾಳಜಿವಹಿಸಿ