ETV Bharat / sukhibhava

ಚಹಾ, ಟೀ, ಚಾಯ್​; ಹೆಸರಲ್ಲಿ ವಿಭಿನ್ನತೆ ಇರಬಹುದು.. ಆದರೆ, ಭಾವನೆಯಲ್ಲಿ ಅಲ್ಲ.. - ಕೈಗೆಟುಕುವ ದರದ ಈ ಟೀ

ಟೀ ಕೇವಲ ಭಾರತೀಯರ ನೆಚ್ಚಿನ ಪಾನೀಯವಷ್ಟೇ ಅಲ್ಲ, ಅದೊಂದು ಭಾವನೆ. ಇದಕ್ಕೆ ಕಾರಣವೂ ಹಲವು

Tea has different Name but not in Emotion

author img

By

Published : Jun 24, 2023, 3:57 PM IST

ಬೆಂಗಳೂರು: ಭಾರತೀಯರ ದಿನ ಆರಂಭವಾಗುವುದೇ ಬಿಸಿ ಬಿಸಿಯ ಚಹಾದ ಕುಟುಕು ಏರಿದ ಬಳಿಕ. ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ಟೀ ಅನೇಕರ ಮೆಚ್ಚಿನ ಪಾನೀಯ. ಯಾವುದೇ ಸಾಮಾಜಿಕ ಆರ್ಥಿಕ ವ್ಯತ್ಯಾಸವಿಲ್ಲದೆ, ಪ್ರತಿಯೊಬ್ಬರು ಇಚ್ಚೆ ಪಡುವುದು ಇದರ ಮತ್ತೊಂದು ವಿಶೇಷತೆ. ಭಾರತದ ಸಾಂಸ್ಕೃತಿಯಕತೆ ಮತ್ತು ಆತಿಥ್ಯ ಸೇರಿದಂತೆ ಅನೇಕ ಸಂದರ್ಭದಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶವೂ ಅತಿಥಿ ದೇವೊ ಭವದಲ್ಲಿ ನಂಬಿಕೆ ಹೊಂದಿದ್ದು, ಯಾವುದೇ ಮನೆಯ ಅತಿಥ್ಯದಲ್ಲಿ ಟೀ ನೀಡದೇ ಇರಲು ಸಾಧ್ಯವಿಲ್ಲ. ಭಾರತದಲ್ಲಿ ಟೀ ಇಷ್ಟೊಂದು ಪ್ರಾಮುಖ್ಯತೆ ಪಡೆಯಲು ಕಾರಣ ಏನು ಎಂಬ ಅನೇಕ ಪ್ರಶ್ನೆ ನಿಮ್ಮಲ್ಲಿದ್ದರೆ, ಅದಕ್ಕೆ ಇಲ್ಲಿದೆ ಉತ್ತರ.

ಪ್ರತಿ ಋತುಮಾನವೂ ಟೀ ಸೀಸನ್​: ಟೀ ಪ್ರೇಮಿ ನೀವಾಗಿದ್ದರೆ, ಅದು ಯಾವುದೇ ವಾತಾವರಣ ಇದ್ರೂ ಕೈಯಲ್ಲಿ ಒಂದು ಕಪ್​ ಚಹಾ ಇರಲೇ ಬೇಕು. ನಡುಗುತ್ತಿದ್ದರೂ ಸರಿಯೇ ಬೆವರು ಸುರಿಯುತ್ತಿದ್ದರೂ ಸರಿಯೇ. ಯಾವುದೇ ಋತುಮಾನದ ಗಡುವು ಇದಕ್ಕಿಲ್ಲ. ಅದರಲ್ಲೂ ಮಳೆಗಾಲದಲ್ಲಿ ಪಕೋಡದ ಜೊತೆಗೆ ಚಹಾ ಸೇರಿದರೆ ಮುಗಿದೇ ಹೋಯಿತು. ಚಹಾದಲ್ಲಿ ಕೆಲವು ಮಸಾಲೆಗಳನ್ನು ಏಲಕ್ಕಿ, ಶುಂಠಿ, ಚಕ್ಕೆಯನ್ನು ಸೇರಿಸುವುದರಿಂದ ಇದು ನಿಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ.

ಫಿಟ್ನೆಸ್​ ಪ್ರಯಾಣಕ್ಕೆ ಸಾಥ್​​: ಆ್ಯಂಟಿಆಕ್ಸಿಡೆಂಟ್​ ಗುಣ ಹೊಂದಿರುವ ಚಹಾ ನಿಮ್ಮಗೆ ತಾಜಾ ಅನುಭವ ಅನ್ನು ನೀಡುತ್ತದೆ. ಚಹಾ ನೈಸರ್ಗಿಕವಾಗಿ ಕೆಫಿನ್​ ಅಂಶವನ್ನು ಹೊಂದಿದ್ದು, ಶಕ್ತಿ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ ಜೊತೆಗೆ ವರ್ಕ್​ಔಟ್​​ ವೇಳೆ ಗುರಿ ಸುಧಾರಣೆಗೆ ಸಹಾಯ ಮಾಡುತ್ತದೆ. ಇನ್ನು ಚಹಾದ ವಿವಿಧ ಬಗೆಗೆ ಬಂದರೆ, ಉದಾಹರಣೆ ಹನಿ ಗ್ರೀನ್​ ಚಹಾ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಚಕ್ಕೆ, ಶುಂಠಿ, ಏಲಕ್ಕಿ ಚಹಾ ವಿಭಿನ್ನ ರುಚಿ ನೀಡುವ ಜೊತೆಗೆ ಆರೋಗ್ಯದ ಲಾಭವೂ ಹೊಂದಿದೆ.

ಕಚೇರಿಯ ಒತ್ತಡ ಹೊರಹಾಕಲು: ವೀಕೆಂಡ್​ ರಜೆಯಿಂದ ಮರಳಿ ಬಂದ ಬಹುತೇಕರಿಗೆ ಮಂಡೆ ಬ್ಲೂಸ್​ ಕಾಡುವುದು ಸುಳ್ಳಲ್ಲ. ಅಥವಾ ಕಚೇತಿ ಒತ್ತಡ, ಪ್ರಮುಖವಾದ ಮೀಟಿಂಗ್​ಗಳು ನಿಮ್ಮ ತಲೆ ಬಿಸಿ ಮಾಡಿದಾಗ ಒಮ್ಮೆ ನಿಮ್ಮಿಷ್ಟವಾದ ಚಹಾ ಸೇವಿಸಿ. ಈ ವೇಳೆ ನೀವು ಚಾರ್ಜ್​ ಆಗುವವುದು ಸುಳ್ಳಲ್ಲ. ಜೊತೆಗೆ ಸಹೋದ್ಯೋಗಿನ ಸಾಮರಸ್ಯಕ್ಕೆ ಕೂಡ ಈ ಚಹಾ ಔತಣಕೂಟ ಸಹಾಯವಾಗುತ್ತದೆ.

ಸಂಬಂಧಗಳ ಬೆಸುಗೆ: ಪ್ರತಿಯೊಬ್ಬರಿಗೂ ತಮ್ಮದೇ ಆದ ಒಂದು ಮೆಚ್ಚಿನ ಟೀ ಅಂಗಡಿ ಇರದೇ ಇರಲು ಸಾಧ್ಯವಿಲ್ಲ. ಇದು ತಮ್ಮಿಷ್ಟದ ಟೀ ಜೊತೆಗೆ ಸ್ನೇಹಿತರ ನಡುವಿನ ಸಂಬಂಧ ಹೆಚ್ಚಿಸುವ ತಾಣವೂ ಹೌದಯ, ಇಲ್ಲಿಯೇ ಅನೇಕ ಜೀವನದ ಅನುಭವ, ರಾಜಕೀಯದಿಂದ ಹಿಡಿದು ಕ್ಷುಲ್ಲಕದವರೆಗೆ ಚರ್ಚೆಗಳನ್ನು ಮಾಡಿರುತ್ತೇವೆ. ಟೀ ಜೊತೆಗೆ ಒಬ್ಬ ಸದಾ ಆತ್ಮೀಯ ಗೆಳೆಯನ ನೆನಪು ಕೂಡ ಅಡಗಿರುತ್ತದೆ. ಜೊತೆಗೆ ನೆಗಡಿ ಮತ್ತು ತಲೆ ನೋವು ಉಪಶಮನಕ್ಕೆ ಈ ಟೀ ಮನೆ ಮದ್ದಾಗಿದೆ.

ಸ್ನಾಕ್ಸ್​ ಟೈಮ್​ ಎಂದರೆ ಅದು ಟೀ ಸಮಯ: ಸಾಮಾನ್ಯವಾಗಿ ಊಟವಾದ ಬಳಿಕ ಯಾವಾಗಲೇ ಹೊಟ್ಟೆ ಚುರುಕ್​ ಎನಿಸಿದರೆ ಆಗ ಒಂದು ಕಪ್​ ಚಾಯ್​ ಜೊತೆಗೆ ಬಿಸ್ಕೆಟ್​ ಇರಲೇಬೇಕು. ಇದು ಹೊಟ್ಟೆ ಹಸಿವಿಗೆ ಪರಿಣಾಮಕಾರಿ ಎಂಬ ಭಾವನೆ ನಮ್ಮಲ್ಲಿದೆ. ಬಿಡುವಿಲ್ಲದ ದಿನದಲ್ಲಿ ಒಂದು ಟೀ ಕುಡಿದರೆ ಸಿಗುವ ನೆಮ್ಮದಿ ಕೂಡ ಅಷ್ಟಿಷ್ಟಲ್ಲ.

ಟೀ ಹೊರತಾಗಿ ಅನೇಕ ಪಾನೀಯಗಳಿದ್ದರೂ ಅದೇ ಪ್ರಮುಖ ಆಯ್ಕೆ ಆಗಿರುತ್ತದೆ. ಯಾವುದೇ ಸೀಸನ್​ ಇರಲಿ ಟೀ ಉತ್ಸಾಹಿಗಳಿಗೆ ಅದರ ರುಚಿ ಸ್ವಾದದ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ಟೀ ಎಂಬುದು ಅನೇಕರಿಗೆ ಕೇವಲ ಪಾನೀಯವಲ್ಲ, ಅದೊಂದು ಭಾವನೆ ಆಗಿರುತ್ತದೆ. ಬಡವರಿಂದ ಶ್ರೀಮಂತ, ಹಿರಿಯರಿಂದ ಕಿರಿಯರು ಪ್ರತಿಯೊಬ್ಬರು ಇದರ ಪ್ರೇಮಿಗಳೇ. ಬಹುತೇಕ ಭಾರತೀಯ ಕುಟುಂಬಗಳಲ್ಲಿ ಟೀ ಕುರಿತ ತಮ್ಮದೇ ಆದ ಒಂದು ರುಚಿ ಹೊಂದಿರುತ್ತಾರೆ. ಅದೊಂದು ಪರಂಪರೆಯಾಗಿದ್ದು, ಅದನ್ನು ಮುಂದುವರೆಸುತ್ತಾರೆ. ಇದೀಗಂತೂ ಟೀ ಅಲ್ಲಿ ಅನೇಕ ವಿಧಗಳಿದ್ದು, ರುಚಿಯನ್ನು ಹೆಚ್ಚಿಸಿದೆ. ಜೊತೆಗೆ ತೂಕ ನಿರ್ವಹಣೆಗೂ ಸಹಾಯ ಮಾಡುತ್ತದೆ. ಈ ಎಲ್ಲಾ ಕಾರಣಕ್ಕೆ ನಮಗೆಲ್ಲಾ ಟೀ ಎಂದ್ರೆ ಎಂದೆಂದಿಗೂ ಅಚ್ಚು ಮೆಚ್ಚು.

ಇದನ್ನೂ ಓದಿ: ದೇಹ ಮತ್ತು ಮನಸ್ಸು ಆರೋಗ್ಯದಿಂದ ಇರಲು ಈ ಐದು ಚಹಾ ಸೇವನೆ ಉತ್ತಮ ಪರಿಹಾರ!​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.