ಬೇಸಿಗೆಯಲ್ಲಿ ನಿರ್ಜಲೀಕರಣದ ಜೊತೆಗೆ ಕಾಡುವ ಮತ್ತೊಂದು ಸಮಸ್ಯೆ ಎಂದರೆ ಚರ್ಮ. ಉರಿ ಬಿಸಿಲಿನಲ್ಲಿ ಹೊರಗೆ ಹೋಗುವ ಮಂದಿಯ ಚರ್ಮದ ಡಾರ್ಕ್ ಆಗಿ, ಮುಖದ ಅಂದ ಹಾಳಾಗುವುದು ಕಾಣಬಹುದು. ಈ ಚರ್ಮ ಡಾರ್ಕ್, ಸನ್ ಬರ್ನ್ ಸೇರಿದಂತೆ ಮತ್ತಿತರ ಸಮಸ್ಯೆಗೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗಿ ಹೊರಗೆ ಹೋಗಿವ ಮುನ್ನ ಸನ್ ಸ್ಕ್ರೀನ್ ಅನ್ನು ಹಚ್ಚುತ್ತೇವೆ. ಆದರೆ, ಈ ಸನ್ ಸ್ಕ್ರೀನ್ ಲೋಷನ್ಗಿಂತಲೂ ಹೆಚ್ಚು ಪ್ರಬಲವಾಗಿ ಸೂರ್ಯನ ಅತಿ ನೇರಳ ಕಿರಣಗಳಿದ್ದು, ಅವು ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಇದೆ ಹಿನ್ನಲೆ ಕೆಲವು ನ್ಯೂಟ್ರಿಷಿಯನ್ಗಳು ಈ ಸನ್ಬರ್ನ್ನಿಂದ ಚರ್ಮದಿಂದ ರಕ್ಷಣೆ ಮಾಡುವುದು ಅವಶ್ಯ ಎನ್ನುತ್ತಾರೆ. ಅದಕ್ಕೆ ಕೆಲವು ಪರಿಹಾರಗಳು ಇದ್ದು, ಅವುಗಳ ಪಾಲನೆ ಮಾಡುವುದರಿಂದ ಸನ್ಬರ್ನ್ನಿಂದಾಗಿ ತಪ್ಪಿಸಿಕೊಳ್ಳಬಹುದಾಗಿದೆ.
ಬಾಹ್ಯವಾಗಿ ದೇಹವನ್ನು ರಕ್ಷಣೆ ಮಾಡುವ ಬದಲಾಗಿ ಆಂತರಿಕವಾಗಿ ದೇಹವನ್ನು ಬಲಗೊಳಿಸುವ ಮೂಲಕ ಸೂರ್ಯನ ಅತಿ ನೇರಳೆ ಕಿರಣಗಳ ವಿರುದ್ಧ ಹೋರಾಡಬಹುದು. ಇದರಿಂದ ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಜೊತೆಗೆ ಮಲಬದ್ಧತೆ, ನಿರ್ಜಲೀಕರಣ ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ಕಾಣಬಹುದಾಗೊದೆ.
ಹಣ್ಣುಗಳು: ಹಣ್ಣುಗಳು ಸನ್ ಬರ್ನ್ನಿಂದ ರಕ್ಷಿಸುತ್ತದೆ. ವಿಶೇವಾಗಿ ಪೌಷ್ಟಿಕಾಂಶಯುಕ್ತ ಹಣ್ಣುಗಳಾದ ದಾಳಿಂಬೆ, ಸ್ಟ್ರಾಬೆರಿ, ಸೀಬೆ ಮುತ್ತಾದವರು ಬೇಸಿಗೆ ಕಾಲದಲ್ಲಿ ಹೆಚ್ಚು ಸಹಾಕಾರಿಯಾಗಿದೆ. ದಾಳಿಂಬೆಯಲ್ಲಿ ಎಲಾಜಿಕ್ ಆಸಿಡ್ ಹೆಚ್ಚಿರುತ್ತದೆ. ಇದು ಅತಿನೇರಳೆ ಕಿರಣಗಳು ದೇಹದೊಳಗೆ ಪ್ರವೇಶ ಮಾಡದಂತೆ ತಡೆಯುತ್ತದೆ. ಬೆರಿ ಹಣ್ಣುಗಳು ಕೂಡ ಸೂರ್ಯನಿಂದ ಚರ್ಮವನ್ನು ರಕ್ಷಿಸುತ್ತದೆ. ಸೀಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಇದ್ದು, ಈ ಹಣ್ಣು ವರ್ಷ ಪೂರ ಲಭ್ಯವಿದೆ. ಇದರ ಜೊತೆಗೆ ಕಲ್ಲಂಗಡಿ, ಕಿವಿ ಮತ್ತು ಸೇಬು ಹಣ್ಣು ಬಳಕೆಯು ಉತ್ತಮ ಫಲಿತಾಂಶ ನೀಡುತ್ತದೆ. ಚರ್ಮವೂ ಅತಿ ಹೆಚ್ಚು ಅತಿ ನೇರಳ ಕಿರಣಗಳಿಗೆ ಒಳಗಾಗುವುದರಿಂದ ಚರ್ಮದ ಕ್ಯಾನ್ಸರ್ ಅಥವಾ ಚರ್ಮ ಸಂಬಂಧಿತ ಇನ್ನಿತರ ಸಮಸ್ಯೆಗೆ ಕಾರಣವಾಗುತ್ತದೆ. ಈ ಹಿನ್ನೆಲೆ ರಕ್ಷಣೆ ಅವಶ್ಯಕವಾಗಿದೆ
ಗ್ರೀನ್ ಟೀ ಸೇವನೆ: ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ, ಆರೋಗ್ಯಯುತ ಜೀವನಶೈಲಿಗೆ ಈ ಟೀ ಬೆಸ್ಟ್. ಇದರಲ್ಲಿನ ಪೋಷಕಾಂಶಗಳು ಆರೋಗ್ಯ ಮತ್ತು ಫಿಟ್ನೆಸ್ಗೆ ಮಾತ್ರವಲ್ಲ. ಸೂರ್ಯನಿಂದ ಚರ್ಮದ ಆರೋಗ್ಯ ಕಾಪಾಡಲು ಉಪಯುಕ್ತವಾಗಿದೆ. ವಿಶೇಷವಾಗಿ ಟ್ಯಾನಿಂಗ್ ಮತ್ತಿತರ ರೀತಿಯ ಸನ್ಬರ್ನ್ಗೆ ಇದು ಪರಿಹಾರ ನೀಡುತ್ತದೆ. ತಜ್ಞರ ಪ್ರಕಾರ ಪ್ರತಿನಿತ್ಯ ಗ್ರೀನ್ ಟೀ ಸೇವಿಸುವುದರಿಂದ ಸನ್ಬರ್ನ್ ಸಮಸ್ಯೆ ಕಡಿಮೆ ಮಾಡಬಹುದಾಗಿದೆ.
ಟೊಮೆಟೊ ಬಳಕೆ: ಟೊಮೆಟೊ ಅಡುಗೆ ರುಚಿ ಜೊತೆಗೆ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನೆನಪಿನ ಶಕ್ತಿಗೂ ಇದು ಸಹಾಯಕ. ಇದರಲ್ಲಿ ಇರುವ ಕಾರ್ಬೋಹೈಡ್ರೇಟ್ ಚರ್ಮ ಸುಡದಂತೆ ಕಾಪಾಡುವುದು. ಟೊಮೆಟೊ ಬದಲಾಗಿ ಬೇಕಾದಲ್ಲಿ ಆಲೂಗಡ್ಡೆ ಯನ್ನು ಮುಖಕ್ಕೆ ಹಚ್ಚುವುದರಿಂದ ಪರಿಹಾರ ಕಾಣ ಬಹುದಾಗಿದೆ. ಇದರಿಂದ ಮುಖದ ಸೌಂದರ್ಯ ಕೂಡ ಹೆಚ್ಚಾಗುತ್ತದೆ.
ಇದನ್ನೂ ಓದಿ: ಮ್ಯೂಸಿಕ್ ಥೆರಪಿಯಿಂದ ಔಷಧಿಗಳ ಪರಿಣಾಮಕಾರತ್ವ ಹೆಚ್ಚಳ: ಸಂಶೋಧನೆಯಲ್ಲಿ ಬಹಿರಂಗ