ವಾಷಿಂಗ್ಟನ್(ಅಮೆರಿಕ): ಮಧ್ಯವಯಸ್ಕ ಪುರುಷರಲ್ಲಿ ಒಂಟಿತನವು ಕ್ಯಾನ್ಸರ್ ಖಾಯಿಲೆ ತಂದೊಡ್ಡುವ ಸಾಧ್ಯತೆ ಇದೆ ಎಂದು ಈಸ್ಟರ್ನ್ ಫಿನ್ಲ್ಯಾಂಡ್ ವಿಶ್ವವಿದ್ಯಾನಿಲಯ ನಡೆಸಿದ ಇತ್ತೀಚಿನ ಅಧ್ಯಯನದ ಸಂಶೋಧನೆಗಳಲ್ಲಿ ತಿಳಿದುಬಂದಿದೆ.
ಸಂಶೋಧಕರ ಪ್ರಕಾರ, ಒಂಟಿತನ ಮತ್ತು ಸಾಮಾಜಿಕ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಸಂಬಂಧ ನಡೆದ ಸಂಶೋಧನೆಯನ್ನು 'ಸೈಕಿಯಾಟ್ರಿ ರಿಸರ್ಚ್' ಎಂಬ ಸಂಶೋಧನಾ ಪುಸ್ತಕದಲ್ಲಿ ಪ್ರಕಟಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅಧ್ಯಯನಗಳ ಆಧಾರದ ಮೇಲೆ, ಒಂಟಿತನವು ವ್ಯಕ್ತಿಯು ಧೂಮಪಾನ ಮಾಡುವುದರಿಂದ ಮತ್ತು ಅಧಿಕ ತೂಕ ಇರುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳಷ್ಟೇ ಪರಿಣಾಮ ಬೀರುತ್ತದೆ ಎಂದು ಅಂದಾಜು ಮಾಡಲಾಗಿದೆ ಎಂದು ಸಂಶೋಧಕ ಈಸ್ಟರ್ನ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದ ಸಿರ್ರಿ ಲಿಸ್ಸಿ ಕ್ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್: ಬೇಸರದಿಂದ ಹೊರಬರಲು ಎಮ್ಮೆ ಸಾಕಣೆಗೆ ಮುಂದಾದ ಸ್ನಾತಕೋತ್ತರ ವಿದ್ಯಾರ್ಥಿ !
1980ರ ದಶಕದಲ್ಲಿ ಪೂರ್ವ ಫಿನ್‌ಲ್ಯಾಂಡ್‌ನ 2,570 ಮಧ್ಯವಯಸ್ಕ ಪುರುಷರನ್ನು ಈ ಅಧ್ಯಯನದಲ್ಲಿ ಒಳಗೊಳ್ಳಲಾಗಿತ್ತು. ಅವರ ಹೇಳಿಕೆಗಳ ಆಧರಿಸಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಈ ಸಂಶೋಧನೆಯಲ್ಲಿ 649 ಪುರುಷರು, ಅಂದರೆ, ಭಾಗವಹಿಸಿದವರಲ್ಲಿ ಶೇಕಡಾ 25ರಷ್ಟು ಮಂದಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು, 283 ಪುರುಷರು ಅಂದರೆ ಶೇಕಡಾ 11 ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದರು.
ಒಂಟಿತನವು ಕ್ಯಾನ್ಸರ್ ಅಪಾಯವನ್ನು ಶೇಕಡಾ 10ರಷ್ಟು ಹೆಚ್ಚಿಸಿದ್ದು, ವಯಸ್ಸು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ, ಜೀವನಶೈಲಿ, ನಿದ್ರೆಯ ಗುಣಮಟ್ಟ, ಖಿನ್ನತೆಯ ಲಕ್ಷಣಗಳು, ಬಾಡಿ ಮಾಸ್ ಇಂಡೆಕ್ಸ್, ಹೃದ್ರೋಗ ಹೊರತುಪಡಿಸಿ ಎಲ್ಲರನ್ನೂ ಈ ಸಂಶೋಧನೆಯಲ್ಲಿ ಒಳಗೊಳ್ಳಲಾಗಿತ್ತು.
ಇದಲ್ಲದೆ, ಅವಿವಾಹಿತರು, ವಿಧವೆಯರು ಅಥವಾ ವಿಚ್ಚೇದನ ಪಡೆದ ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.