ನ್ಯೂಯಾರ್ಕ್( ಅಮೆರಿಕ): ಆತಂಕವಿಲ್ಲದ ಗರ್ಭಿಣಿಯರಿಗೆ ಹೋಲಿಕೆ ಮಾಡಿದರೆ, ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ಜೈವಿಕ ಪ್ರತಿರಕ್ಷಣಾ ವ್ಯವಸ್ಥೆ ವಿಭಿನ್ನವಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ಸಂಬಂಧ ವೈಲ್ ಕೊರ್ನೆಲ್ ಮೆಡಿಸಿನ್, ಜಾನ್ ಹಾಪ್ಕಿನ್ಸ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನ ನಡೆಸಿದೆ.
ಆತಂಕ ಹೊಂದಿರುವ ಮಹಿಳೆಯರಲ್ಲಿ ದೊಡ್ಡ ಪ್ರಮಾಣದಲ್ಲಿ ಸೈಟೊಟೊಕ್ಸಿಕ್ ಟಿ ಜೀವಕೋಶ, ಪ್ರತಿರಕ್ಷಣಾ ಕೋಶ ಇರುತ್ತದೆ. ಅದು ದೇಹದ ಜೀವ ಕೋಶಕ್ಕೆ ಹಾನಿ ಮಾಡುತ್ತದೆ. ಇದರ ಜೊತೆಗೆ ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ರಕ್ತದ ಪರಿಚಲನೆ, ರೋಗ ನಿರೋಧಕ ಬದಲಾವಣೆಗಳು ವಿಭಿನ್ನವಾಗಿ ಕಾರ್ಯ ನಿರ್ವಹಣೆ ಮಾಡುವುದನ್ನು ಅಧ್ಯಯನದ ವೇಳೆ ಸಂಶೋಧಕರು ಕಂಡು ಕೊಂಡಿದ್ದಾರೆ. ಆತಂಕವು ಹೇಗೆ ಗರ್ಭಾವಸ್ಥೆಯಲ್ಲಿ ಮತ್ತು ಪ್ರಸವಾನಂತರದ ಅವಧಿಯಲ್ಲಿ ರೋಗನಿರೋಧಕ ಬದಲಾವಣೆಗಳಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಸಂಬಂಧ ಮೊದಲ ಬಾರಿಗೆ ಇಂತಹದ್ದೊಂದು ಸಂಶೋಧನೆ ನಡೆಸಲಾಗಿದೆ.
ಆತಂಕ ಮತ್ತು ನಿರಾಂತಕ ಗರ್ಭಿಣಿಯರು: ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ರೋಗ ನಿರೋಧಕ ವ್ಯವಸ್ಥೆಯೂ ಸಾಮಾನ್ಯ ಗರ್ಭಿಣಿ ಮಹಿಳೆಯರಿಗಿಂತ ವಿಭಿನ್ನವಾಗಿದೆ ಎಂದು ಡಾ ಲಾರೂನ್ ಎಂ ಒಸ್ಬೊರ್ನೆ ತಿಳಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಕೆಲವು ದುರ್ಬಲತೆ ಉಂಟಾಗಬಹುದು. ರೋಗ ನಿರೋಧಕ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬಹುದಾಗಿದೆ.
ಈ ಅಧ್ಯಯನವು ಗರ್ಭಿಣಿ ರೋಗಿಗಳಲ್ಲಿ ಆತಂಕಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆಗೆ ಉತ್ತೇಜನ ನೀಡುತ್ತದೆ ಎಂದು ಡಾ ಒಸ್ಬೊರ್ನೆ ತಿಳಿಸಿದ್ದಾರೆ. ಇದೇ ವೇಳೆ, ಆತಂಕ ಹೊಂದಿರುವ ಗರ್ಭಣಿಯರು ಈ ಸಂಬಂಧ ಔಷಧವನ್ನು ನಿರಾಕರಿಸುತ್ತಾರೆ. ಕಾರಣ, ಅವರಿಗೆ ಮಗುವಿಗೆ ಏನಾದರೂ ಆಗಬಹುದು ಎಂಬ ಭಯ.
ಗರ್ಭಾವಸ್ಥೆಯಲ್ಲಿ ಕಾಡುವ ಆತಂಕ ಶೇ 20ರಷ್ಟ ಮಹಿಳೆಯರಿಗೆ ಕಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಇದು ಮಗು ಮತ್ತು ತಾಯಿ ಆರೋಗ್ಯದ ಮೇಲೆ ಪರಿಣಾಮ ಹೊಂದಿದ್ದು, ಅವಧಿ ಪೂರ್ವ ಜನನ ಅಥವಾ ಕಡಿಮೆ ತೂಕದ ಮಗು ಜನನದ ಅಪಾಯವನ್ನು ಇದು ಹೊಂದಿದೆ. ಈ ಅಧ್ಯಯನಕ್ಕಾಗಿ 107 ಗರ್ಭಿಣಿಯರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಇದರಲ್ಲಿ 56 ಮಂದಿ ಆತಂಕದ ಸಮಸ್ಯೆ ಹೊಂದಿದ್ದರೆ, ಉಳಿದ 51 ಮಂದಿ ಯಾವುದೇ ಸಮಸ್ಯೆ ಇರಲಿಲ್ಲ. ಅಧ್ಯಯನಕ್ಕೆ ಒಳಪಟ್ಟ ಗರ್ಭಿಣಿಯರ ರಕ್ತದ ಮಾದರಿಯ ಮೂಲಕ ಪ್ರತಿ ರಕ್ಷಣಾ ಕಾರ್ಯ ಪತ್ತೆ ಹಚ್ಚಲಾಗಿದೆ.
ಈ ಅಧ್ಯಯನದ ಫಲಿತಾಂಶದಲ್ಲಿ ಆತಂಕ ಹೊಂದಿರುವ ಗರ್ಭಿಣಿಯರಲ್ಲಿ ಸೈಟೊಟೊಕ್ಸಿಕ್ ಟಿ ಸೆಲ್ಸ್ ಇರುವುದು ಪತ್ತೆಯಾಗಿದೆ. ಮಗುವಿನ ಜನನದ ಬಳಿಕ ಇದು ಕಡಿಮೆಯಾಗಿದೆ. ಆತಂಕ ಹೊಂದಿಲ್ಲದ ಮಹಿಳೆಯರಲ್ಲಿ ಈ ಜೀವಕೋಶ ಕಡಿಮೆ ಇದ್ದು, ಮಗುವಾದ ಬಳಿಕ ಇದರಲ್ಲಿ ಇನ್ನಷ್ಟು ಇಳಿಕೆ ಕಾಣಬಹುದಾಗಿದೆ. ಗರ್ಭಿಣಿಯರ ಆತಂಕದ ಸ್ಥಿತಿಗೆ ಅನುಗುಣವಾಗಿ ಅವರ ಪ್ರತಿರಕ್ಷಣಾ ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಗರ್ಭಿಣಿಯರಲ್ಲಿನ ಆತಂಕದಲ್ಲಿ ಉಂಟಾಗುವ ಜೈವಿಕ ಅಂಶಗಳನ್ನು ಅರ್ಥೈಸಿಕೊಳ್ಳುವಿಕೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಅವಲಂಬನೆ ಮೊದಲ ಹಂತ ಎಂದು ಪತ್ತೆ ಮಾಡಲಾಗಿದೆ. ಹೊಸ ಚಿಕಿತ್ಸೆ ಅಭಿವೃದ್ಧಿಗೆ ಕೂಡ ಇದು ಮೊದಲಾಗಲಿದೆ. ತಾಯಿ ಮತ್ತು ಮಗುವಿನ ಆರೋಗ್ಯದ ಹಿನ್ನೆಲೆ ಆತಂಕಕ್ಕೆ ಉತ್ತಮ ಚಿಕಿತ್ಸೆ ಅವಶ್ಯಕವಾಗಿದೆ ಎಂದು ವೈದ್ಯೆ ಒಸ್ಬೊರ್ನೆ ತಿಳಿಸಿದ್ದಾರೆ.
ಇದನ್ನೂ ಓದಿ: ಹುಟ್ಟು ಅಂಗವೈಕಲ್ಯದಿಂದ ಹೆಚ್ಚುತ್ತಿರುವ ಸಾವು.. ನಿಯಂತ್ರಣಕ್ಕೆ ಮುಂದಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಕರೆ