ವಾಷಿಂಗ್ಟನ್: ಕೋವಿಡ್ ಸಮಯದಲ್ಲಿ ಜಾರಿಗೆ ತಂದ ಸಾಮಾಜಿಕ ಪ್ರತ್ಯೇಕಿರಣ ಕ್ರಮವೂ ಅನೇಕರಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗಿದೆ ಎಂಬುದನ್ನು ಈಗಾಗಲೇ ಹಲವು ವರದಿಗಳು ತಿಳಿಸಿದೆ. ಸಾಮಾಜಿಕ ಪ್ರತ್ಯೇಕಿಕರಣದಿಂದ ದೂರ ಉಳಿದವರಲ್ಲಿ ಮರೆವು, ಬುದ್ದಿಮಾಂದ್ಯತೆಗೆ ಕಾರಣವಾಗುತ್ತದೆ. ಇದರಲ್ಲಿ ಎಡಿಆರ್ಡಿಯೊಂದಿಗೆ ಸಂಬಂಧ ಹೊಂದಿದೆ. ಸಾಮಾಜಿಕ ಪ್ರತ್ಯೇಕತೆ ಎನ್ನುವುದು ಒಂಟಿಯಾಗಿರುವುದು ಅಥವಾ ಅಪರೂಪದ ಸಾಮಾಜಿಕ ಸಂಪರ್ಕಗಳನ್ನು ಹೊಂದಿರುವುದನ್ನು ಸೂಚಿಸುತ್ತದೆ. ಆದರೆ ಒಂಟಿತನ ಎಂಬುದು ಸಾಮಾಜಿಕ ಸಂವಹನದ ಮಟ್ಟವು ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾದಾಗ ಉಂಟಾಗುವ ನೋವಿನ ಭಾವನೆ ಎಂದು ತಿಳಿಸಲಾಗಿದೆ.
ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು: ಸಾಮಾಜಿಕ ಪ್ರತ್ಯೇಕಿಕರಣ ಸೇರಿದಂತೆ ಸಾಮಾಜಿಕ ಜೀವನ ಶೈಲಿಯ ನಿರ್ಣಾಯಕ ಅಂಶಗಳು ನ್ಯೂರೋ ಡಿಜೆನರೇಶನ್ನಂತ ಅಪಾಯವನ್ನು ಒಳಗೊಂಡಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಕೆನಾಡದ ಮೆಕ್ಗಿಲ್ ವಿಶ್ವವಿದ್ಯಾಲಯದ ಈ ಸಂಬಂಧ ಅಧ್ಯಯನ ನಡೆಸಿದೆ. ಅಲ್ಜೈಮೈರ (ಮರೆವಿನ ಸಮಸ್ಯೆ) ಮತ್ತು ಸಂಬಂಧಿತ ಡೆಮೆನ್ಶಿಯಾ (ಬುದ್ದಿಮಾಂದ್ಯತೆ) ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಾಗಿ ಬೆಳೆಯುತ್ತಿದೆ. ಸಾಮಾಜಿಕ ಪ್ರತ್ಯೇಕೀಕರಣವು ಎಡಿಆರ್ಡಿಯ ಹೆಚ್ಚಿನ ಅಪಾಯವನ್ನು ಹೊಂದಿದೆ. ಆದರೆ ಸಾಮಾಜಿಕ ಜೀವನಶೈಲಿ ಮತ್ತು ಎಡಿಆರ್ಡಿ ಅಪಾಯದ ಅಂಶಗಳ ನಡುವಿನ ಸಂಪರ್ಕಗಳನ್ನು ಕಡಿಮೆ ಅರ್ಥಮಾಡಿಕೊಳ್ಳಲಾಗಿದೆ.
ಈ ಅಧ್ಯಯನ ಸಂಬಂಧ ಯುಕೆ ಬಯೋಬ್ಯಾಂಕ್ನಲ್ಲಿ ಭಾಗವಹಿಸಿದ 5,02,506 ಮತ್ತು ಕೆನಡಿಯನ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಏಜಿಂಗ್‌ನ 30,097 ಜನರ ದತ್ತಾಂಶವನ್ನು ಅಧ್ಯಯನ ನಡೆಸಲಾಗಿದೆ.ಈ ಎರಡೂ ಅಧ್ಯಯನಗಳು ಒಂಟಿತನ, ಸಾಮಾಜಿಕ ಸಂವಹನದ ಸಂಪರ್ಕ ಮತ್ತು ಸಾಮಾಜಿಕ ಬೆಂಬಲದ ಕುರಿತ ಪ್ರಶ್ನಾವಳಿಗಳನ್ನು ನೀಡಲಾಗಿದೆ.
ಯಾರಲ್ಲಿ ಈ ಸಮಸ್ಯೆ: ಮಾರ್ಪಡಿಸಬಹುದಾದ ಎಡಿಆರ್ಡಿ ಅಪಾಯಕಾರಿ ಅಂಶಗಳು ಹಾಗೂ ಒಂಟಿತನ ಮತ್ತು ಸಾಮಾಜಿಕ ಬೆಂಬಲದ ಕೊರತೆ ಎರಡರ ನಡುವಿನ ಸಂಬಂಧ ಪತ್ತೆಯಾಗಿದೆ. ಧೂಮಪಾನಿಗಳು, ಅತಿ ಹೆಚ್ಚು ಆಲ್ಕೊಹಾಲ್ ಸೇವಿಸುವವರು, ನಿದ್ರಾ ಭಂಗ ಹೊಂದಿರುವವರು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ವಿಫಲರಾಗುತ್ತಾರೆ. ಎಡಿಆರ್ಡಿ ಒಂಟಿತನ ಮತ್ತು ಸಾಮಾಜಿಕ ಬೆಂಬಲದ ಕೊರತೆ ಅಪಾಯದ ಲಕ್ಷಣ ಹೊಂದಿದೆ.
ದೈಹಿಕ ಮತ್ತು ಮಾನಸಿಕ ಆರೋಗ್ಯ ಲಕ್ಷಣಗಳು ಈ ಹಿಂದೆ ಎಡಿಆರ್ಡಿಯೊಂದಿಗೆ ಸಂಬಂಧಿಸಿದೆ. ಕಾರ್ಡಿಯೋಸ್ಕವರ್ ಸಮಸ್ಯೆ, ದೃಷ್ಟಿ ಅಥವಾ ಕಿವುತನ, ಡಯಾಬೀಟಿಸ್ ಮತ್ತು ಡೆಪ್ರೆಸ್ಸಿವ್ ನಡುವಳಿಕೆಗಳು ಸಾಮಾಜಿಕ ಪ್ರತ್ಯೇಕಿಕರಣದೊಂದಿಗೆ ಸಂಬಂಧ ಹೊಂದಿದೆ.
ಕೋವಿಡ್ 19ವೇಳೆ ಸಾಮಾಜಿಕ ಪ್ರತ್ಯೇಕಿರಣವೂ ಅನಿಶ್ಚಿತ ಪರಿಣಾಮ ಬೀರಿದೆ. ಸಾಮಾಜಿಕ ಪ್ರತ್ಯೇಕತೆಯು ಅನುವಂಶಿಕ ಅಥವಾ ಆಧಾರವಾಗಿರುವ ಆರೋಗ್ಯ ಅಪಾಯಕಾರಿ ಅಂಶಗಳಿಗಿಂತ ಸುಲಭವಾಗಿ ಮಾರ್ಪಡಿಸಬಹುದಾಗಿದೆ. ಇದನ್ನು ಕ್ಲಿನಿಕಲ್ ಕ್ರಮ ಮೂಲಕ ತಡೆಗಟ್ಟಬಹುದಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಿನ ಉಪಹಾರ ತಪ್ಪಿಸುವುದರಿಂದ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ; ಅಧ್ಯಯನ