ನಾಷ್ಟಾ, ತಿಂಡಿ ಅಥವಾ ಬೆಳಗಿನ ಉಪಾಹಾರ ತಿನ್ನುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವು ನೀವೆಲ್ಲ ಬಹುತೇಕ ಸಂಜೆಯ ಚಾಯ್ ಜೊತೆಗೆ ತಿಂಡಿಗಳನ್ನು ಸವಿಯುತ್ತಾ ಸುಂದರ ಸಂಜೆಯನ್ನು ಕಳೆಯಲು ಬಯಸುತ್ತೇವೆ. ತ್ವರಿತ ಮೆಲ್ಲಗೆ ಮತ್ತು ರುಚಿಕರವಾದ ತಿಂಡಿ ಬೆಳಗ್ಗೆಯಿಂದ ಕೆಲಸ ಮಾಡಿ ಮಾಡಿ ದಣಿದ ದೇಹಕ್ಕೆ ಚೈತನ್ಯ ನೀಡುತ್ತದೆ. ಆದರೆ, ಆಧುನಿಕ ಜೀವನ ಶೈಲಿ ಹಾಗೂ ಕೆಲಸದ ಒತ್ತಡದಲ್ಲಿ ಇವೆಲ್ಲ ಈಗ ಮರೆಯಾಗುತ್ತಿವೆ.
ನಮ್ಮಲ್ಲಿ ಹೆಚ್ಚಿನವರ ಜೀವನ ಶೈಲಿ ಆಧುನಿಕತೆಯ ಭರಾಟೆಯಲ್ಲಿ ತೇಲಿ ಹೋಗುತ್ತಿದೆ. ಹೀಗಾಗಿ ಸ್ವಯಂ - ಆರೈಕೆಯ ಪರಿಕಲ್ಪನೆಯನ್ನು ಆದ್ಯತೆಯ ಪಟ್ಟಿಯ ಕೆಳಭಾಗಕ್ಕೆ ತಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜನರ ಸ್ವಯಂ - ಅರಿವು ಹೆಚ್ಚಿಸಿಕೊಂಡಿದೆ. ಆದ್ದರಿಂದ ನಾವು ಈಗ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಲು ಮಾತ್ರವಲ್ಲದೇ ಬಹು - ಕಾರ್ಯಕಾರಿ ಕೆಲಸದ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು ಸ್ವಯಂ - ಆರೈಕೆಯತ್ತ ಗಮನಹರಿಸುತ್ತಿದ್ದೇವೆ.
ಒಬ್ಬರ ದೈಹಿಕ, ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಸ್ವಯಂ - ಆರೈಕೆ ಒಂದು ಅತ್ಯುತ್ತಮ ಪರಿಹಾರ ಎನ್ನಬಹುದು. ಇನ್ನು ನಾವು ನಿತ್ಯ ಏನು ತಿನ್ನುತ್ತೇವೆ ಎನ್ನುವುದು ಅತಿ ಮುಖ್ಯವಾಗುತ್ತದೆ. ಬೆಳಗಿನ ಉಪಾಹಾರ ಹಾಗೂ ಸಂಜೆಯ ತಿಂಡಿ ಹೇಗಿರಬೇಕು ಎಂಬುದನ್ನು ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳಬೇಕಿದೆ.
ಸ್ವಯಂ-ಆರೈಕೆಯನ್ನು ಅಭ್ಯಾಸ ಮಾಡಲು ಉತ್ತಮ ಮಾರ್ಗವೆಂದರೆ ಚಟ್ಪಾಟಾ ಮತ್ತು ಪೋಷಣೆ ಸರಿಯಾದ ದಾರಿಯಾಗಿದೆ. ಸಮೋಸಾ, ಪಕೋಡ್ ಮತ್ತು ಚಾಟ್‌ಗಳು ಭಾರತದ ಮೆಚ್ಚಿನ ತಿಂಡಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಆದರೆ, ಇವುಗಳನ್ನು ಹೊರತುಪಡಿಸಿ ದೇಹಕ್ಕೆ ಅನುಕೂಲವಾಗುವ ಅನೇಕ ಪೌಷ್ಟಿಕಾಂಶದ ತಿಂಡಿ ಆಯ್ಕೆಗಳು ನಮ್ಮ ಮುಂದಿವೆ.
ಓಟ್ಸ್‌ನಿಂದ ತಯಾರಿಸಿದ ರೆಸಿಪಿಗಳು ಈಗೀಗ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿವೆ. ಇದು ಬಹಳಷ್ಟು ಪ್ರೋಟೀನ್, ಫೈಬರ್ ಮತ್ತು ಕಬ್ಬಿಣವನ್ನು ಹೊಂದಿರುತ್ತವೆ. ಪೌಷ್ಟಿಕಾಂಶಯುಕ್ತ ಓಟ್ಸ್ ದಿನವಿಡೀ ನಿಮ್ಮನ್ನು ಪೂರ್ಣವಾಗಿ ಮತ್ತು ಶಕ್ತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಮಸಾಲಾ ಓಟ್ಸ್‌ನಿಂದ ತಯಾರಿಸಿದ ಕೆಲವು ರುಚಿಕರವಾದ ತಿಂಡಿಗಳು ಹೀಗಿವೆ. ಅಂದ ಹಾಗೆ ಇವುಗಳನ್ನು ತಯಾರಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ.
ಮಸಾಲಾ ಓಟ್ಸ್ : ನಿಮ್ಮ ದೇಹದ ಹಸಿವು ನೀಗಿಸಲು ಇರುವ ರುಚಿಕರವಾದ ತಿಂಡಿಯಾಗಿದೆ. ಇದನ್ನು ಸಫೋಲಾ ಕ್ಲಾಸಿಕ್ ಮಸಾಲಾ ರುಚಿಯೊಂದಿಗೆ ಸಂಯೋಜಿಸಬಹುದು. ಇದು ಬಾಯಿಯಲ್ಲಿ ಕರಗುವ ಚಟ್ಪಾಟಾ ರುಚಿಗಳ ಉತ್ತಮ ಸಂಯೋಜನೆಯಾಗಿದೆ. ಉಪ್ಪು ಮತ್ತು ಮೆಣಸು ಜೊತೆಗೆ ಮಿಶ್ರಣಕ್ಕೆ ಬದಿಯಲ್ಲಿ ಕೆಲವು ಈರುಳ್ಳಿ ಸ್ಲೈಸ್ ಇದ್ದರೆ ಬಾಯಲ್ಲಿ ನೀರೂರಿಸದೇ ಇರದು. ಈ ಮಸಾಲಾ ಓಟ್ಸ್ ಅನ್ನು ಸ್ವಲ್ಪ ಬಿಸಿಯಾದ ಕೇಸರ್ ಪಿಸ್ತಾ ಹಾಲಿನೊಂದಿಗೆ ಸಂಯೋಜಿಸಿ ಸೇವಿಸಿದರೆ ನಿಮ್ಮ ಮೆದುಳಿಗೆ ಹಾಗೂ ಮನಸಿಗೆ ಮುದು ನೀಡುವುದಂತೂ ಶತ ಸಿದ್ದ.
ಮಸಾಲಾ ಓಟ್ಸ್ ಬೇಲ್: ಇದು ಸಂಜೆಯ ತಿಂಡಿಗೆ ಸೂಕ್ತವಾದ ಉಪಾಹಾರವಾಗಿದೆ. ಯಾವುದೇ ಸಮಯದಲ್ಲಿ ಇದನ್ನು ತಯಾರಿಸಬಹುದಾಗಿದೆ. ಓಟ್ಸ್ ಬೇಲ್ ಮಾಡಲು, ಒಂದು ಪ್ಯಾನ್‌ನಲ್ಲಿ ಮಸಾಲಾ ಓಟ್ಸ್ ಮತ್ತು ಪೋಹಾವನ್ನು ವಿಶಾಲವಾದ ನಾನ್ - ಸ್ಟಿಕ್ ಪ್ಯಾನ್‌ನಲ್ಲಿ ಸೇರಿಸಿ ಮತ್ತು ಅವುಗಳನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಒಣಗಿಸಬೇಕಾಗುತ್ತದೆ. ಒಮ್ಮೆ ಸಿದ್ಧವಾದ ನಂತರ, ಹುರಿದ ಕಡಲೆಕಾಯಿ, ಈರುಳ್ಳಿ, ಟೊಮೇಟೊ, ಆಲೂಗಡ್ಡೆ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್, ಉಪ್ಪು ಮತ್ತು ನಿಂಬೆ ರಸ ಹಾಕಬೇಕು ಮತ್ತು ಅದನ್ನು ಚೆನ್ನಾಗಿ ಕಸಲಬೇಕು. . ಇದನ್ನು ಕಲ್ಲಂಗಡಿ ಹಣ್ಣಿನ ರಸದೊಂದಿಗೆ ಸೇವಿಸಿದರೆ ಬೇಸಿಗೆ ಶಕೆಯನ್ನು ಹೋಗಲಾಡಿಸಬಹುದು.
ಬನ್ ಪಾವ್ ಜೊತೆಗೆ ಮಸಾಲಾ ಓಟ್ಸ್ ಭುರ್ಜಿ: ದಿನವಿಡಿ ದುಡಿದು ಮನೆಗೆ ಬಂದಾಗ ನಮಗೆ- ನಿಮಗೆಲ್ಲ ವಿಶ್ರಾಂತಿ ಅತ್ಯಗತ್ಯ. ಜೊತೆಗೆ ದಣಿದ ದೇಹಕ್ಕೆ ಉಪಾಹಾರವೂ ಮುದ ನೀಡುತ್ತದೆ. ಅಲ್ಲದೇ ಈ ಸಮಯದಲ್ಲಿ ಮಸಾಲಾ ಭುರ್ಜಿ ತಯಾರಿಸಿದರೆ ಅದಕ್ಕಿಂತ ಹೆಚ್ಚಿನ ಸಂತಸ ಇನ್ನೇನಿದೆ ಹೇಳಿ. ಅಂದ ಹಾಗೆ ಬಟಾಣಿ, ಕ್ಯಾರೆಟ್, ಈರುಳ್ಳಿ ಮತ್ತು ಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಜೊತೆಗೆ ಮಸಾಲಾ ಓಟ್ಸ್ ರುಚಿ ದಣಿದ ದೇಹಕ್ಕೆ ಹೆಚ್ಚು ಆಹ್ಲಾದಕರ ವಾತಾವರಣ ನಿರ್ಮಾಣ ಮಾಡುತ್ತದೆ. ಈ ಖಾದ್ಯವನ್ನು ಪುದೀನಾ ಚಟ್ನಿಯೊಂದಿಗೆ ಸವಿಯಬಹುದು. ಅಂತಿಮವಾಗಿ ಅದನ್ನು ತಾಜಾ ಬನ್ ಪಾವ್‌ನೊಂದಿಗೆ ಮತ್ತಷ್ಟು ರುಚಿಕರವಾಗಿಸಬಹುದು. ಅದರ ಜೊತೆಗೆ ಶುಂಠಿ ಚಹಾದೊಂದಿಗೆ ಬನ್ ಪಾವ್ ಹಾಗೂ ಮಸಾಲಾ ಓಟ್ಸ್ ಭುರ್ಜಿ ಸವಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎನ್ನುವಂತಾಗಬಹುದು.
ಇದನ್ನು ಓದಿ: ಅಷ್ಟವಕ್ರಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ವೈದ್ಯೆ: ಗಿನ್ನಿಸ್ ರೆಕಾರ್ಡ್ ಸೇರಲು ಸಜ್ಜು