ಇಸ್ರೇಲ್: ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ತೆಗೆದುಕೊಳ್ಳುವುದು ಸುರಕ್ಷಿತ ಎಂದು ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್ ವಾಚ್‌ಗಳು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಇದನ್ನು ದೃಢಪಡಿಸಲಾಗಿದೆ.
ಸಂಶೋಧಕರು ಇಸ್ರೇಲ್‌ನ ಸುಮಾರು 5 ಸಾವಿರ ನಾಗರಿಕರ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ಅವರಲ್ಲಿ 2,038 ಮಂದಿ ಬೂಸ್ಟರ್ ಡೋಸ್ ಪಡೆದವರಾಗಿದ್ದಾರೆ. ಸ್ಮಾರ್ಟ್ವಾಚ್ ಸಹಾಯದಿಂದ ಬೂಸ್ಟರ್ ತೆಗೆದುಕೊಂಡವರ ಮತ್ತು ತೆಗೆದುಕೊಳ್ಳದವರ ಹೃದಯ ಬಡಿತ, ನಿದ್ರೆಯ ಗುಣಮಟ್ಟ ಮತ್ತು ನಡೆದಾಡುವ ದೂರ ಸೇರಿದಂತೆ ದೈಹಿಕ ಚಟುವಟಿಕೆಗಳ ನಿಯತಾಂಕಗಳನ್ನು ಸಂಗ್ರಹಿಸಲಾಯಿತು. ಈ ವೇಳೆ ಹೃದಯ ಬಡಿತದ ನಿಯತಾಂಕಗಳು ಮೊದಲಿಗೆ ಸ್ವಲ್ಪ ಹೆಚ್ಚು ತೋರಿಸಿದ್ದವು. ಆದರೆ ಕೆಲವೇ ಕ್ಷಣದಲ್ಲಿ ಅವು ಸಂಪೂರ್ಣ ನಿಯಂತ್ರಣಕ್ಕೆ ಬಂದವು. ಈ ಕಾರಣಕ್ಕಾಗಿ ಕೋವಿಡ್ ಲಸಿಕೆ ಬೂಸ್ಟರ್ ಪಡೆಯುವುದು ಸುರಕ್ಷಿತ ಎಂದು ಸಂಶೋಧಕರು ಹೇಳಿದ್ದಾರೆ.
ಲಸಿಕೆ ಹಾಕಿಸಿಕೊಂಡವರು ಕೂಡ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಮತ್ತು ಸ್ಮಾರ್ಟ್ವಾಚ್ ನಿಯತಾಂಕಗಳು ಅದಕ್ಕೆ ಪೂರಕವಾಗಿರುವಂತಹ ವರದಿಯನ್ನೇ ನೀಡಿದೆ. ಬೂಸ್ಟರ್ ಡೋಸ್ ಪಡೆದವರಲ್ಲಿ ಯಾವುದೇ ರೀತಿಯ ಗಂಭೀರ ಆರೋಪಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕಾರ್ಬೆವಾಕ್ಸ್ ಬೂಸ್ಟರ್ ಪರಿಣಾಮಕಾರಿ: ಎಐಜಿ ಆಸ್ಪತ್ರೆಗಳ ಅಧ್ಯಯನ