ಲಿಂಗ ಸಮಾನತೆಯ ಬಗ್ಗೆ ವಿಶ್ವಾದ್ಯಂತ ಚರ್ಚೆಯಾದರೂ ಇಂದಿಗೂ ಕೂಡ ಯಾವುದೇ ರಾಷ್ಟ್ರವೂ ಪರಿಪೂರ್ಣ ಲಿಂಗ ಸಮಾನತೆ ಸಾಧಿಸಿಲ್ಲ. ಹೆಚ್ಚಿನ ಮಹಿಳಾ ಸಬಲೀಕರಣ ಮತ್ತು ಕಡಿಮೆ ಲಿಂಗ ಅಂತರವಿರುವ ದೇಶದಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಮಹಿಳೆಯರು ಮತ್ತು ಹುಡುಗಿಯರು ವಾಸಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಹಿಳಾ ಮತ್ತು ಯುಎನ್ಡಿಪಿ ಹೊಸ ಜಾಗತಿಕ ವರದಿ ಹೇಳುತ್ತದೆ. ಈ ವರದಿಯಲ್ಲಿ ಮೊದಲ ಬಾರಿಗೆ ಮಹಿಳೆ ಮತ್ತು ಯುವತಿಯರ ಅಭಿವೃದ್ಧಿಯಲ್ಲಿ ಕೊಂಚ ಮಟ್ಟದ ಪ್ರಗತಿ ಕಾಣಬಹುದು.
ಎರಡು ಸೂಚ್ಯಂಕದಲ್ಲಿ ಮಾಪನ: ಯುಎನ್ ಮಹಿಳೆ ಮತ್ತು ಯುಎನ್ಡಿಪಿ ಈ ಪ್ರಗತಿಯನ್ನು ಅಳೆಯಲು ಮಹಿಳಾ ಸಬಲೀಕರಣ ಸೂಚ್ಯಂಕ (ಡಬ್ಲ್ಯೂಇಐ) ಮತ್ತು ಜಾಗತಿಕ ಲಿಂಗ ಸಮಾನತೆ ಸೂಚ್ಯಂಕವನ್ನು (ಜಿಜಿಪಿಐ) ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಅಳೆಯುವ ಸೂಚ್ಯಂಕವಾಗಿ ಬಳಕೆ ಮಾಡಿದೆ. ಈ ಎರಡು ಸೂಚ್ಯಂಕವೂ ವಿಭಿನ್ನವಾಗಿದ್ದು ಮಹಿಳೆಯರ ಮಾನವ ಅಭಿವೃದ್ಧಿ, ಶಕ್ತಿ ಮತ್ತು ಸ್ವಾತಂತ್ರ್ಯಗಳನ್ನು ಮುನ್ನಡೆಸುವಲ್ಲಿ ಪ್ರಗತಿಯನ್ನು ನಿರ್ಣಯಿಸಲು ಪೂರಕ ಅಂಶಗಳನ್ನು ನೀಡುತ್ತದೆ. ಈ ಮೂಲಕ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಿರುವ ಸವಾಲು ಮತ್ತು ನೀತಿ ಸುಧಾರಣೆ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ.
114 ದೇಶಗಳು ಮಹಿಳಾ ಶಕ್ತಿ ಮತ್ತು ಆಯ್ಕೆಗಳನ್ನು ಮಾಡುವ ಅವಕಾಶಗಳನ್ನು ವಶಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ಹೆಚ್ಚಾಗಿ ನಿರ್ಬಂಧಿಸಲಾಗಿದೆ ಎಂದು ವಿಶ್ಲೇಷಿಸಿದೆ. ಕಡಿಮೆ ಮಹಿಳಾ ಸಬಲೀಕರಣ ಮತ್ತು ಲಿಂಗ ಸಮಾನತೆ ಅಂತರ ಸಾಮಾನ್ಯ. ಮಹಿಳಾ ಶಕ್ತಿ ಮತ್ತು ಆಯ್ಕೆಗಳನ್ನು ಮಾಡುವ ಅವಕಾಶಗಳನ್ನು ಐದು ಕೋನದಲ್ಲಿ ಮಾಪನ ಮಾಡಿದೆ. ಅದು ಆರೋಗ್ಯ, ಶಿಕ್ಷಣ, ಒಳಗೊಳ್ಳುವಿಕೆ, ನಿರ್ಧಾರ ಕೈಗೊಳ್ಳುವುದು ಮತ್ತು ಮಹಿಳೆ ಮೇಲಿನ ದೌರ್ಜನ್ಯ. ಅದೇ ರೀತಿ ಜಿಜಿಪಿಐ ಆರೋಗ್ಯ, ಶಿಕ್ಷಣ, ಒಳಗೊಳ್ಳುವಿಕೆ, ನಿರ್ಧಾರ ಕೈಗೊಳ್ಳುವಿಕೆ ಸೇರಿದಂತೆ ಮಾನವ ಅಭಿವೃದ್ಧಿಯಲ್ಲಿ ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆ ಸ್ಥಾನದ ಮೌಲ್ಯಮಾಪನ ನಡೆಸಿದೆ.
ಶೇ 28ರಷ್ಟು ಅಸಮಾನತೆ ಮುಂದುವರಿಕೆ: ಡಬ್ಲ್ಯೂಇಐ ಮಾಪನ ಮಾಡಿದಂತೆ ಜಾಗತಿಕವಾಗಿ ಮಹಿಳೆಯರು ತಮ್ಮ ಸಂಪೂರ್ಣ ಸಾಮರ್ಥ್ಯದ ಸರಾಸರಿ 60 ಪ್ರತಿಶತವನ್ನು ಮಾತ್ರ ಸಾಧಿಸಲು ಸಬಲರಾಗಿದ್ದಾರೆ. ಜಿಪಿಪಿಐ ಮಾಪನದಂತೆ ಮಾನ ಅಭಿವೃದ್ಧಿ ಕೋನದಲ್ಲಿ ಪುರುಷರು 72ರಷ್ಟು ಸಾಧನೆ ಮಾಡಿದ್ದಾರೆ. ಇಲ್ಲಿ ಶೇ 28ರಷ್ಟು ಲಿಂಗ ಅಸಮಾನತೆ ಇದೆ. ಈ ಸಬಲೀಕರಣದ ಕೊರತೆ ಕೇವಲ ಮಹಿಳೆಯರ ಯೋಗಕ್ಷೇಮಕ್ಕೆ ಮಾತ್ರವಲ್ಲದೇ, ಮಾನವ ಪ್ರಗತಿಗೂ ಹಾನಿಕಾರಕ.
ಈ ವರದಿ ಕುರಿತು ಮಾತನಾಡಿರುವ ವಿಶ್ವಸಂಸ್ಥೆ ಮಹಿಳಾ ಕಾರ್ಯಕಾರಿ ನಿರ್ದೇಶಕಿ ಸೀಮಾ ಬಹೂಸ್, ಸುಸ್ಥಿರ ಅಭಿವೃದ್ಧಿ ಗುರಿ ಜೊತೆಗೆ ಜಾಗತಿಕ ಸಮುದಾಯವೂ ಲಿಂಗ ಅಸಮಾನತೆ ಮತ್ತು ಮಹಿಳಾ ಸಬಲೀಕರಣ ಕುರಿತು ಬಲವಾದ ಬದ್ಧತೆ ಹೊಂದಿದೆ. ಆದಾಗ್ಯೂ, ಈ ಹೊಸ ಸೂಚ್ಯಂಕದ ಸ್ಪಷ್ಟತೆಯನ್ನು ಎಲ್ಲ ದೇಶದಲ್ಲಿ ಕಾಣುತ್ತಿದ್ದೇವೆ. ಮಹಿಳೆಯ ಸಂಪೂರ್ಣ ಸಾಮರ್ಥ್ಯ ಇನ್ನು ಅರಿತುಕೊಂಡಿಲ್ಲ. ದೊಡ್ಡದಾದ ಲಿಂಗ ಅಂತವೂ ಸಾಮಾನ್ಯದಂತೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗುರಿ ಸಾಧನೆ ಮತ್ತು ಪ್ರಗತಿಯನ್ನು ಇದು ನಿಧಾನಗೊಳಿಸಿದೆ.
ಲಿಂಗ ಸಮಾನತೆಯ ಭರವಸೆಯನ್ನು ಈಡೇರಿಸಲು, ಮಹಿಳೆಯರು ಮತ್ತು ಯುವತಿಯರ ಮಾನವ ಹಕ್ಕುಗಳನ್ನು ಭದ್ರಪಡಿಸಲು ಮತ್ತು ಅವರ ಮೂಲಭೂತ ಸ್ವಾತಂತ್ರ್ಯಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದಿದ್ದಾರೆ.
ಇದೊಂದು ಕಣ್ತೆರೆಸುವ ವಿಶ್ಲೇಷಣೆ. ಅಧಿಕ ಮಾನವ ಅಭಿವೃದ್ಧಿ ಎಂಬುದು ಪೂರಕ ಪರಿಸ್ಥಿತಿ ಹೊಂದಿರುವುದು ಎಂದು ಅಲ್ಲ. ಅರ್ಧದಷ್ಟು ದೇಶಗಳಲ್ಲಿ ಮಹಿಳಾ ಸಬಲೀಕರಣ ಸೂಚ್ಯಂಕದಲ್ಲಿ ಕಡಿಮೆ ಮತ್ತು ಮಧ್ಯಮದ ಪ್ರದರ್ಶನ ತೋರಲಾಗಿದೆ. ಹಾಗೆಯೇ ಜಾಗತಿಕ ಸಮಾನತೆ ಸೂಚ್ಯಂಕವು ಅತಿ ಹೆಚ್ಚು ಮತ್ತು ಹೆಚ್ಚಿನ ಮಾನವ ಅಭಿವೃದ್ಧಿ ಗುಂಪುಗಳಲ್ಲಿ ಕಡಿಮೆಯಾಗಿದೆ ಎಂದು ಯುಎನ್ಡಿಪಿ ಆಡಾಳಿತಾಧಿಕಾರಿ ಅಚಿಮ್ ಸ್ಟೈನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಿಂಗ ಸಮಾನತೆ, ಮಹಿಳಾ ಸಬಲೀಕರಣದ ಪ್ರತಿಪಾದಕ ಗಾಂಧೀಜಿ