ಬೆಂಗಳೂರು: ಕುಳಿತುಕೊಳ್ಳುವುದಕ್ಕಿಂತ ಮಲಗುವುದು ಉತ್ತಮ ಎಂದಾಕ್ಷಣ ಒಮ್ಮೆ ಅಚ್ಚರಿಯಾಗುವುದು ಸಹಜವೇ. ಆದರೆ, ಇದರಿಂದ ಪ್ರಯೋಜನವಿದೆ ಎನ್ನುತ್ತಿದೆ ಹೊಸ ಅಧ್ಯಯನ. ಯುರೋಪಿಯನ್ ಹಾರ್ಟ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಜಢ ಜೀವನಶೈಲಿಯ ವ್ಯಕ್ತಿಗಳಿಗೆ ಈ ರೀತಿಯ ಸಲಹೆ ನೀಡಲಾಗಿದೆ. ಇತ್ತೀಚಿನ ದಿನದಲ್ಲಿ ಪ್ರೌಢ ವಯಸ್ಕರಲ್ಲಿ ಸೋಮಾರಿತನ ಹೆಚ್ಚುತ್ತಿದೆ. ಇವರು ದಿನದಲ್ಲಿ ಸರಿಸುಮಾರು 9.30 ಗಂಟೆಗಳ ಕಾಲ ಕುಳಿತೇ ಕಾಲ ಕಳೆಯುತ್ತಾರೆ. ಈ ರೀತಿ ದೀರ್ಘಕಾಲ ಕುಳಿತುಕೊಳ್ಳುವುದು ಬದಲಾಗಿ ಹಾಗೆಯೇ ಮಲಗುವುದು ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಅಧ್ಯಯನ ತೋರಿಸಿದೆ. ಈ ಸಂಶೋಧನಾ ಫಲಿತಾಂಶವು ಐದು ದೇಶಗಳ ಆರು ಅಧ್ಯಯನ ಆಧಾರವಾಗಿದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಹೃದಯದ ಆರೋಗ್ಯ ದೈಹಿಕವಾಗಿ ಕ್ರಿಯಾಶೀಲವಾಗಿರುವವರಲ್ಲಿ ಉತ್ತಮವಾಗಿರುತ್ತದೆ. ಸಾಮಾನ್ಯ, ವೇಗದ ಅಥವಾ ಸೌಮ್ಯದ ವ್ಯಾಯಾಮಗಳು ಅವರ ಆರೋಗ್ಯಕ್ಕೆ ನೆರವಾಗುತ್ತದೆ. ನಿದ್ರೆಯಂತಹ ಕಡಿಮೆ ಚಟುವಟಿಕೆಗಳು ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಇಂದಿನ ದಿನದಲ್ಲಿ ಕುಳಿತು ಕೆಲಸ ಮಾಡುವವರ ಸಂಖ್ಯೆ ಹೆಚ್ಚು. ಈ ರೀತಿ ದೀರ್ಘಕಾಲ ಕುಳಿತುಕೊಳ್ಳುವುದು ಅಪಾಯಕಾರಿ. ಇದರ ಬದಲಾಗಿ 30 ನಿಮಿಷ ಕುಳಿತುಕೊಳ್ಳುವ ಅವಧಿಯ ಸಮಯದಷ್ಟೇ ಪ್ರಮಾಣದ ನಿದ್ರೆಯೂ ದೇಹದ ತೂಕ ರಾಶಿ ಮತ್ತು ಸೊಂಟದ ಸುತ್ತಳತೆಯಲ್ಲಿ ಕಡಿಮೆ ಮಾಡುವಲ್ಲಿ ಗಮನಾರ್ಹ ಪ್ರಯೋಜನ ನೀಡಿದೆ ಎಂದು ಅಧ್ಯಯನ ಹೇಳುತ್ತದೆ. ಅದೇ ರೀತಿ ನಿಂತು ಕೊಳ್ಳುವುದು ಅಥವಾ ಸಾಧಾರಣ ನಡಿಗೆಯು ಸಣ್ಣ ಮಟ್ಟದಲ್ಲಿ ಪ್ರಯೋಜನ ಒದಗಿಸುತ್ತದೆ.
ಉದಾಹರಣೆಗೆ, 54 ವರ್ಷದ ಮಹಿಳೆ ಕುಳಿತುಕೊಳ್ಳುವುದಕ್ಕಿಂತ ಅರ್ಧಗಂಟೆ ವ್ಯಾಯಾಮ ಮಾಡುವುದರಿಂದ ಅವರ ಒಟ್ಟಾರೆ ದೇಹ ತೂಕದ ದರದಲ್ಲಿ ಶೇ 2.4ರಷ್ಟು ಕಡಿಮೆ ಮಾಡಬಹುದು. ಸೊಂಟದ ಸುತ್ತಳತೆ 2.7ರಷ್ಟು ಕಡಿಮೆ ಮಾಡಿದೆ. ಅದೇ ರೀತಿ ಅವರಲ್ಲಿ ನಿದ್ರೆ ಕೂಡ ಒಟ್ಟಾರೆ ಆರೋಗ್ಯದ ಮೇಲೆ ಪ್ರಯೋಜನ ಬೀರಿದೆ ಎಂದಿದ್ದಾರೆ. ಇದೇ ವೇಳೆ ಅಧ್ಯಯನಕಾರರು ಆರೋಗ್ಯ ಉತ್ತೇಜಿಸುವ ಇತರೆ ದೈಹಿಕ ಚಟುವಟಿಕೆ ಬದಲಾಗಿ ಹೆಚ್ಚಿನ ಅವಧಿಯ ನಿದ್ರೆಯನ್ನು ಶಿಫಾರಸು ಮಾಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.
ದೀರ್ಘಕಾಲ ಕುಳಿತುಕೊಳ್ಳುವ ಬದಲಾಗಿ ನಿದ್ರೆಯು ಆರೋಗ್ಯ ಸುಧಾರಿಸುವಲ್ಲಿ ಪ್ರಯೋಜನ ನೀಡುತ್ತದೆ. ಆದರೆ, ಇದು ಆರೋಗ್ಯದ ಎಲ್ಲಾ ಅಂಶಗಳಿಗೆ ಒಂದೇ ರೀತಿಯ ಪ್ರಯೋಜನವನ್ನು ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಸೌಮ್ಯ ರೀತಿಯ ದೈಹಿಕ ಚಟುವಟಿಕೆ ಅಗತ್ಯತೆ ಬಗ್ಗೆಯೂ ತಿಳಿಸುತ್ತದೆ ಎಂದಿದ್ದಾರೆ ಲೇಖಕರು.
ಇದನ್ನೂ ಓದಿ: ಕಡಿಮೆ ನಿದ್ರೆ, ನೈಟ್ ಶಿಫ್ಟ್ ಕೆಲಸ ಮಾಡುವವರಲ್ಲಿ ಬಿಪಿ ಅಧಿಕ: ಅಧ್ಯಯನದಲ್ಲಿ ಬಯಲು