ನವದೆಹಲಿ: ಯೋಗ ಪರಂಪರೆಯನ್ನ ಉಳಿಸುವ ಮೂಲಕ ಸಮುದಾಯಗಳ ಸಾಮರಸ್ಯ, ಶಕ್ತಿ ಮತ್ತು ಹೊಸತನವನ್ನು ಒಂದು ಕೂಡಿಸುವ ಆಚರಣೆಯಾಗಿದೆ. ಯೋಗದ ಧ್ಯಾನ ಅಭ್ಯಾಸಗಳು ಜನರಿಗೆ ಅದ್ಬುತ ಅನುಭವ ನೀಡುವ ಜೊತೆಗೆ ಅಧ್ಯಾತ್ಮಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಅನುಭವವನ್ನು ನೀಡುತ್ತದೆ. ಯೋಗ ಉತ್ಸವಗಳು ತರಬೇತುದಾರರಿಂದ ವಿವಿಧ ರೀತಿಯ ಯೋಗ ಕಲಿಯಲು ಅವಕಾಶವನ್ನು ನೀಡುತ್ತದೆ. ಜಗತ್ತಿನಾದ್ಯಂತ ಅಧ್ಯಾತ್ಮಿಕ ಗುರುಗಳು ಮತ್ತು ಯೋಗಕ್ಷೇಮ ತಜ್ಞರು ತಮ್ಮ ಅನುಭವ ಮಟ್ಟ ಅಥವಾ ಆಸಕ್ತಿ ಹೊರತಾಗಿ ಅನೇಕ ಭಂಗಿಗಳನ್ನು ತಿಳಿಸುತ್ತಾರೆ.
ಈ ರೀತಿ ಜಗತ್ತಿನಲ್ಲಿ ಖ್ಯಾತಿಗೊಂಡ ಕೆಲವು ಯೋಗ ಉತ್ಸವದಲ್ಲಿ ಈ ಆರು ಪ್ರಮುಖವಾಗಿವೆ. ಬುಕ್ಕಿಂಗ್.ಕಾಮ್ ತಿಳಿಸಿರುವ ಈ ಆರು ಉತ್ಸವಗಳು ನಿಮಗೆ ನೆಮ್ಮದಿಯನ್ನು ಕಂಡುಕೊಳ್ಳಲು ಮತ್ತು ಯೋಗದ ಕಲೆಯನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ. ನೀವು ಇದೀಗ ಯೋಗ ಕಲಿಯುತ್ತಿದ್ದರೆ ಅಥವಾ ಹಲವು ವರ್ಷಗಳ ಅಭ್ಯಾಸ ಹೊಂದಿದ್ದರೆ, ಈ ಉತ್ಸವಗಳಲ್ಲಿ ಭಾಗಿಯಾಗಬಹುದು.
ನಾರ್ವಿಚ್ ಯೋಗ ಉತ್ಸವ, ವಿಟ್ಲಿಂಗ್ಹ್ಯಾಮ್ ಲೇಕ್, ನಾರ್ವಿಚ್, ಇಂಗ್ಲೆಡ್ ಆಗಸ್ಟ್ 5, 2023 - ಈ ನಗರ ಆಧುನಿಕ ಮತ್ತು ಸಂಪ್ರದಾಯದ ಮಿಶ್ರಣಗಳಿಂದ ಕೂಡಿದೆ. ಇಂಗ್ಲೆಡ್ನ ನಾರ್ವಿಚ್ ಕೇಂದ್ರ ಯೋಗಕ್ಷೇಮ ಆಚರಣೆಯ ಕೇಂದ್ರವಾಗಿದೆ. ಈ ಉತ್ಸವದಲ್ಲಿ ಭಾಗಿಯಾಗುವವರ ವಿವಿಧ ಅನುಭವದ ಮೇಲೆ ಉತ್ಸವ ಕೇಂದ್ರಿಕರಿಸಲಾಗುತ್ತದೆ. ನಾರ್ವಿಚ್ ಯೋಗಾ ಹಬ್ಬವದ ಮುಖ್ಯ ಉದ್ದೇಶ ವಿವಿಧ ಸ್ತರದ ಚಟುವಟಿಕೆಗಳನ್ನು ಒಟ್ಟಿಗೆ ಸೇರಿಸುವುದಾಗಿದೆ. ಈ ಯೋಗ ಉತ್ಸವವೂ ಅನೇಕ ವಿಧದ ಅಂದರೆ ಪಿಲೇಟ್ಸ್, ಅರ್ಥ್ ಎಲಿಮೆಂಟಲ್ ಯೋಗ, ರಾಕೆಟ್ ಯೋಗ, ಬ್ರೀತ್‌ವರ್ಕ್ ಮತ್ತು ನಾರ್ಫೋಕ್ ಯೋಗ ಥೆರಪಿ ಸೇರಿದಂತೆ ಹಲವು ತೀರಿಯ ಯೋಗದ ಅನುಭವದ ಮೂಲಕ ದೇಹಕ್ಕೆ ಪೋಷಣೆ ನೀಡುತ್ತದೆ. ಜೊತೆಗೆ ನೀವು ನಾರ್ವಿಚ್ನಲ್ಲಿ ಹೊಪ್ ಆನ್, ಹೊಪ್ ಆಫ್ ಸೈಟ್ಸೀಯಿಂಗ್ ಬಸ್ ಟೂರ್ ನಡೆಸುವ ಮೂಲಕ ನಗರದ ಸೌಂದರ್ಯ ಕಣ್ತುಂಬಿಕೊಳ್ಳಬಹುದು.
ಇನ್ಸ್ಪೈರ್ ಯೋಗ ಉತ್ಸ, ವೆರಬಿಯರ್, ಸ್ವಿಜರ್ಲೆಂಡ್, ಆಗಸ್ಟ್ 25-27, 2023: ಸ್ವಿಸ್ ಆಲ್ಪ್ಸ್ ಪರ್ವತಗಳ ನಡುವೆ ಯೋಗಾಭ್ಯಾಸ ಮಾಡುವುದು ನಿಮ್ಮ ಕನಸಾಗಿದ್ದರೆ, ಈ ಇನ್ಸ್ಪೈರ್ ಯೋಗ ಉತ್ಸವ ಸರಿಯಾದ ಸ್ಥಳ. ಸ್ವಿಜರ್ಲೆಂಡ್ನ ಅದ್ಬುತ ಪ್ರಕೃತಿ ಸೌಂದರ್ಯ ಹೊಂದಿರುವ ವರ್ಬಿಯರ್ ಅನ್ವೇಷಣೆ ಜೊತೆ ವಾರಾಂತ್ಯದ ಯೋಗದ ಮೂಲಕ ಮನಸು ಕೂಡ ಉಲ್ಲಾಸಗೊಳ್ಳುತ್ತದೆ. ಈ ಉತ್ಸವವೂ ಎಲ್ಲಾ ಮಟ್ಟದ ಭಾಗಿದಾರರ ತರಬೇತಿ, ವರ್ಕಶಾಪ್, ಸಮಗ್ರ ಚಿಕಿತ್ಸೆ ನೀಡುವ ಮೂಲಕ ಅವರ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಪುನರ್ಯೌವನಗೊಳಿಸುವ ಅವಕಾಶವನ್ನು ನೀಡುತ್ತದೆ. ನಿದ್ರಾ ಯೋಗ, ಮೂವ್ಮೆಂಟ್ ಮೆಡಿಸಿನ್, ಸೌಂಡ್ ಹೀಲಿಂಗ್ ಮತ್ತು ಇತರ ವಿಶ್ರಾಂತಿ ಚಟುವಟಿಕೆಯನ್ನು ಇಲ್ಲಿ ನಡೆಸಬಹುದು.
ಮೌಂಟೆನ್ ಯೋಗ ಉತ್ಸವ, ಸೆಂಟ್ ಅಂಟೊನ್, ಆಸ್ಟ್ರಿಯಾ ಆಗಸ್ಟ್ 31- ಸೆಪ್ಟೆಂಬರ್ 3, 2023: ಇದು ಕೂಡ ಸುಂದರವಾದ ಗಿರಿ ಶಿಖರದ ನಡುವೆ ಯೋಗ ಮಾಡುವ ಅವಕಾಶವನ್ನು ಕಲ್ಪಿಸುತ್ತದೆ. ಆಲ್ಪೈನ್ ಸ್ಕೀಯಿಂಗ್ ತೊಟ್ಟಿಲು ಎಂದೇ ಆಸ್ಟ್ರಿಯಾದಲ್ಲಿ ಇದು ಹೆಸರು ಪಡೆದಿದೆ. ಈ ಉತ್ಸವವೂ ಜಗತ್ತಿನಾದ್ಯಂತ ಯೋಗ ಉತ್ಸಾಹಿ ಮತ್ತು ನೈಸರ್ಗಿಕ ಪ್ರೇಮಿಗಳನ್ನು ಒಂದುಗೂಡಿಸುತ್ತದೆ. ನಾಲ್ಕು ದಿನ ನಡೆಯುವ ಈ ಉತ್ಸವದಲ್ಲಿ ಆಲ್ಬರ್ಗ್ ಪ್ರದೇಶದಲ್ಲಿ ದೈನಂದಿನ ಜೀವನದ ಸಮತೋಲನ ಕಾಯ್ದುಕೊಳ್ಳಬಹುದು. ಮೌಂಟೆನ್ ಯೋಗ, ಧ್ಯಾನ ಮತ್ತು ವರ್ಕ್ಶಾಪ್ ಅನ್ನು ನಡೆಸಲಾಗುವುದು. ಭಾಗಿದಾರರು, ಯೋಗ, ಡ್ಯಾನ್ಸ್, ನಗು, ಕಲಿಕೆ, ಹೈಕ್ ಕೂರುವ ಮೂಲಕ ಪ್ರತಿಯೊಬ್ಬರ ಸಮಯಕ್ಕೆ ಬೆಸೆದುಕೊಳ್ಳಬಹುದು. ಪರ್ವತದಲ್ಲಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ, ತಾಜಾ ಹವಾ ಸೇವನೆ ಮಾಡಬಹುದು.
ಕಿರ್ತನ್ ಭಕ್ತಿ ಉತ್ಸವ, ಬರ್ಸೆಲೊನಾ, ಸ್ಪೈನ್, ಸೆಪ್ಟೆಂಬರ್ 16-17, 2023 - ಬರ್ಸೆಲೊನಾ ಪ್ರದೇಶದಲ್ಲಿ ನಡೆಯುವ ಈ ಕಿರ್ತನ್ ಭಕ್ತಿ ಉತ್ಸವನ್ನು ಶಾಂತಿ, ಸಂಗೀತ, ಡ್ಯಾನ್ಸ್ ಮತ್ತು ತರಬೇತಿ ಸೆಷನ್ ಮೂಲಕ ಆಹ್ಲಾದಿಸಬಹುದು. ಊ ಉತ್ಸವವೂ ಯೋಗದ ಜೊತೆಗೆ ಕೀರ್ತನ್ವನ್ನು ಹೊಂದಿದ್ದು, ವೈಷ್ಣವ ಪರಂಪರೆ ಸಮ್ಮಿಳತಗೊಂಡಿದೆ. ಇದರ ಜೊತೆಗೆ ಬರ್ಸೆಲೊನ್ ನಗರದ ಸೌಂದರ್ಯವನ್ನು ಕೂಡ ಅನುಭವಿಸಬಹುದು. ಇಲ್ಲಿನ ಐತಿಹಾಸಿಕ ರಾಜಧಾನಿ ಕ್ಯಾಟಲೊನಿಯಾ ಸಂಪೂರ್ಣವಾಗಿ ಕಲೆ, ಸಂಗೀತ ಮತ್ತು ವಿಧ ವಿಧದ ರೆಸ್ಟೋರೆಂಟ್ಗಳಿಂದ ಸೆಳೆಯುತ್ತದೆ. ಇಲ್ಲಿನ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪಗಳು ಯೋಗದೊಂದಿಗೆ ಮೋಡಿ ಮಾಡುತ್ತದೆ.
ಲಮು ಯೋಗ ಉತ್ಸವ, ಲಮು, ಕೀನ್ಯಾ, ಅಕ್ಟೋಬರ್ 25-29, 2023: ಸಮುದ್ರ ಕೀನಾರೆಯಲ್ಲಿ ಸೂರ್ಯೋದಯದಿಂದ ಆರಂಭವಾಗುವ ಯೋಗವನ್ನು ಚಂದ್ರನ ಬೆಳಗಿನೊಂದಿಗೆ ಮುಗಿಸುವ ಅವಕಾಶ ಇಲ್ಲಿ ಸಿಗುತ್ತದೆ. ಕೀನ್ಯಾದ ಕಡಲ ಕಿನಾರೆಯಲ್ಲಿನ ಸಂಸ್ಕೃತಿಯನ್ನು ಅನುಭವಿಸಬಹುದು. ಜೊತೆಗೆ ಯುನೆಸ್ಕೋ ಪಾರಂಪರಿಕ ತಾಣವಾಗಿರುವ ಲಮು ಹಳೆಯ ನಗರವನ್ನು ಅನ್ವೇಷಿಸಬಹುದು. ಇದರ ವಾಸ್ತುಶಿಲ್ಪ ಮತ್ತು ಇತಿಹಾಸ ನಿಮ್ಮನ್ನು ಸೆಳೆಯದೇ ಇರಲಾರದು. ನಿತ್ಯದ ಜಂಜಾಟದಿಂದ ಈ ಉತ್ಸವ ನಿಮಗೆ ನೆಮ್ಮದಿ ತರುವುದು ಸುಳ್ಳಲ್ಲ. ಕೀನ್ಯಾದ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಭವಿಸಬಹುದು.
ಅಂತಾರಾಷ್ಟ್ರೀಯ ಯೋಗ ಉತ್ಸವ, ಗಂಗಾನದಿ ತೀರ, ರಿಷಿಕೇಷ, ಭಾರತ, ಮಾರ್ಚ್ 2024: ಯೋಗದ ಮೂಲ ಸ್ಥಳವಾದ ಭಾರತದ ನಗರದಲ್ಲಿ ನಡೆಯುವ ವಾರ ಪೂರ್ತಿ ಯೋಗ ಮತ್ತು ಧ್ಯಾನದ ಉತ್ಸವದಲ್ಲಿ ಭಾಗಿಯಾಗಲು ಜಾಗತಿನಾದ್ಯಂತ ಜನರು ಆಗಮಿಸುತ್ತಾರೆ. ಯೋಗದ ರಾಜಧಾನಿ ಎಂದು ಖ್ಯಾತಿಗೊಂಡಿರುವ ಇಲ್ಲಿ ಪವಿತ್ರ ಗಂಗಾ ನದಿ ತೀರವಿದ್ದು, ಹಿಮಾಲಯದ ತಪ್ಪಲಿನಲ್ಲಿ ಯೋಗದ ಅಭ್ಯಾಸ ನಡೆಸಲಾಗುವುದು. 70 ಗಂಟೆಗಳ ಯೋಗ ಕ್ಲಾಸ್ ಮೂಲಕ ತಮ್ಮನ್ನು ಅಧ್ಯಾತ್ಮದ ಜೊತೆ ಬೆಸೆದುಕೊಳ್ಳಬಹುದಾಗಿದೆ. ಜೊತೆಗೆ ಇಲ್ಲಿನ ಅತಿ ದೊಡ್ಡ ಆಶ್ರಮವಾದ ಪರ್ಮಾರ್ತ್ ನಿಕೇತನ್ ಆಶ್ರಮವನ್ನು ಅನ್ವೇಷಿಸಬಹುದು.
ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ 2023: ವಸುದೈವ ಕುಟುಂಬಕ್ಕಾಗಿ ಯೋಗ