ETV Bharat / sukhibhava

ಸಕ್ಕರೆಯಲ್ಲಿ ಯೂರಿಯಾ? ತರಕಾರಿಯಲ್ಲಿ ಕೆಮಿಕಲ್ಸ್​? ಪತ್ತೆ ಹಚ್ಚುವುದು ಹೀಗೆ..

ಮೇಲ್ನೋಟಕ್ಕೆ ತಾಜಾ ಎಂದೆನಿಸುವ ಬೆಂಡೆಕಾಯಿ ಕೂಡಾ ನಮ್ಮ ಕಣ್ಣುಗಳನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಹಸಿರು ಬಣ್ಣದಲ್ಲಿ ತಾಜಾ ಆಗಿ ಕಂಗೊಳಿಸಲು ಮಲಚೈಟ್ ಗ್ರೀನ್ ಎಂಬ ರಾಸಾಯನಿಕವನ್ನು ಈ ಬೆಂಡೆಕಾಯಿಗಳ ಮೇಲೆ ಹಾಕಲಾಗಿರುತ್ತದೆ. ಸಕ್ಕರೆಯಲ್ಲೂ ಯೂರಿಯಾ ಕಲಬೆರಕೆ ಆಗಿರಬಹುದು ಇದನ್ನು ಪತ್ತೆ ಹಚ್ಚುವುದು ಹೇಗೆ ಅನ್ನೋದನ್ನು ತಿಳಿಯೋಣ.

author img

By

Published : Jan 15, 2022, 5:51 PM IST

Updated : Jan 15, 2022, 6:09 PM IST

Simple tips to check adulteration in staples and vegetables
ನೀವು ತಿನ್ನುವ ಸಕ್ಕರೆಯಲ್ಲಿರಬಹುದು ಯೂರಿಯಾ, ಪತ್ತೆ ಹಚ್ಚುವುದು ಹೀಗೆ...

ನಮ್ಮ ಆರೋಗ್ಯ ನಾವು ಏನು ತಿನ್ನುತ್ತೇವೆ ಎಂಬುದರ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ. ಒಮ್ಮೊಮ್ಮೆ ನಾವು ಆರೋಗ್ಯಕರ ಆಹಾರ ತಿನ್ನುತ್ತೇವೆ ಎಂದು ಭಾವಿಸಿದರೂ, ಆ ಆಹಾರ ನಮ್ಮ ಆರೋಗ್ಯಕ್ಕೆ ಕೇಡುಂಟು ಮಾಡಬಲ್ಲದು.

ಕೆಲವೊಂದು ಆಹಾರ ಪದಾರ್ಥಗಳನ್ನು ಕಲಬೆರಕೆ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಭಾವಿಸುವ ಆಹಾರ ಪದಾರ್ಥಗಳು ಕಲಬೆರಕೆಯಿಂದಾಗಿ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತೆ.

ನಾವು ಮಾರುಕಟ್ಟೆಯಲ್ಲಿ ಸಿಗುವ ತರಕಾರಿಗಳು ಮತ್ತು ದಿನಸಿ ವಸ್ತುಗಳನ್ನು ನೋಡಿ ಖರೀದಿಸುತ್ತೇವೆ. ಆದರೆ ನಮ್ಮ ಕಣ್ಣುಗಳು ಸಹ ನಮ್ಮನ್ನು ವಂಚಿಸಬಹುದು. ಎಷ್ಟೇ ಚೆನ್ನಾಗಿ ಕಂಡರೂ.. ಆ ವಸ್ತು ಕಲಬೆರಕೆಗೆ ಒಳಪಟ್ಟು ಅಪಾಯಕಾರಿ ರಾಸಾಯನಿಕ ಅಂಶಗಳಿಂದ ಕೂಡಿರಬಹುದು. ಹಾಗಾಗಿ ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ. ಈ ಕಲಬೆರಕೆಯನ್ನು ಕಂಡು ಹಿಡಿಯುವುದು ಹೇಗೆ ಗೊತ್ತಾ?

ಸಕ್ಕರೆಯಲ್ಲಿ ಕಲಬೆರಕೆ ಪತ್ತೆ ಹಚ್ಚುವ ವಿಧಾನ

ನಾವು ಪ್ರತಿದಿನ ಬಳಸುವ ಸಕ್ಕರೆಯಲ್ಲಿ ಯೂರಿಯಾ ಮಿಶ್ರಣ ಮಾಡುವ ಸಾಧ್ಯತೆಯಿದೆ. ಇದನ್ನು ಪತ್ತೆ ಮಾಡಲು ಮೊದಲು ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆಯನ್ನು ಬೆರೆಸಿ. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಮಿಶ್ರಣ ಮಾಡಿ. ಆ ನೀರಿನಿಂದ ಅಮೋನಿಯಾ ವಾಸನೆ ಬಂದರೆ, ಸಕ್ಕರೆಗೆ ಯೂರಿಯಾ ಮಿಶ್ರಣವಾಗಿದೆ ಎಂದರ್ಥ. ಅಂದಹಾಗೆ ಅಮೋನಿಯಾ ಒಂದು ರೀತಿಯ ಕಟು ವಾಸನೆ ಹೊಂದಿರುತ್ತದೆ.

ಲವಂಗದಲ್ಲಿ ಕಲಬೆರಕೆ ಪತ್ತೆ ಹಚ್ಚುವ ವಿಧಾನ

ನಾವು ಬಳಸುವ ಲವಂಗಗಳೂ ಕೂಡಾ ಕಲಬೆರಕೆಯಾಗುವ ಅಂದರೆ, ಕಳಪೆ ಮಟ್ಟದ ಲವಂಗಗಳನ್ನು ಬೆರಸಿರುವ ಸಾಧ್ಯತೆ ಇರುತ್ತದೆ. ಇದನ್ನು ಪತ್ತೆ ಹಚ್ಚಲು ಒಂದು ಲೋಟ ನೀರನ್ನು ತೆಗೆದುಕೊಂಡು, ಒಂದು ಚಮಚದಷ್ಟು ಲವಂಗವನ್ನು ನೀರೊಳಗೆ ಹಾಕಿ. ಒಂದು ವೇಳೆ ಲವಂಗಗಳು ತೇಲಿದರೆ, ಅವು ಕಳಪೆ ಮಟ್ಟದ ಲವಂಗಗಳೆಂದೂ, ಮುಳುಗಿದರೆ ಅವು ಉತ್ತಮ ಗುಣಮಟ್ಟದ ಲವಂಗಗಳೆಂದು ಅರ್ಥ.

ಬೇಳೆ ಕಾಳುಗಳಲ್ಲಿ ಕಲಬೆರಕೆ ಪತ್ತೆ ಹಚ್ಚುವ ವಿಧಾನ

ಕೆಲವು ಬೇಳೆ ಕಾಳುಗಳಲ್ಲಿ ಒಂದು ರೀತಿಯ ಕಾಳನ್ನು ಸೇರಿಸಿ, ಕಲ ಬೆರಕೆ ಮಾಡಲಾಗುತ್ತದೆ. ಅವುಗಳನ್ನು ಪತ್ತೆ ಹಚ್ಚಲು ಗ್ಲಾಸ್ ಪ್ಲೇಟಿನ ಮೇಲೆ ಬೇಳೆ ಕಾಳುಗಳನ್ನು ತೆಗೆದುಕೊಂಡು ಸೂಕ್ಷ್ಮವಾಗಿ ನೋಡಿದರೆ, ಬೇಡವಾದ ಕಪ್ಪು ಬಣ್ಣದ ಕಾಳುಗಳು ಕಾಣಿಸುತ್ತವೆ.ಗ್ಲಾಸ್​ನ ಪ್ಲೇಟ್​ ಮೇಲೆ ಬೇಳೆಗಳನ್ನು ಹಾಕಿ ಇವುಗಳನ್ನು ನೋಡುವುದರಿಂದ ಸ್ಪಷ್ಟವಾಗಿ ಕಾಣಿಸುತ್ತವೆ.

ಬೆಂಡೆಕಾಯಿಯಿಂದ ಮೋಸ ಹೋಗದಿರಿ..

ಮೇಲ್ನೋಟಕ್ಕೆ ತಾಜಾ ಎಂದೆನಿಸುವ ಬೆಂಡೆಕಾಯಿ ಕೂಡಾ ನಮ್ಮ ಕಣ್ಣುಗಳನ್ನು ವಂಚಿಸುವ ಸಾಧ್ಯತೆ ಇರುತ್ತದೆ. ಹಸಿರು ಬಣ್ಣದಲ್ಲಿ ತಾಜಾ ಆಗಿ ಕಂಗೊಳಿಸಲು ಮಲಚೈಟ್ ಗ್ರೀನ್ ಎಂಬ ರಾಸಾಯನಿಕವನ್ನು ಈ ಬೆಂಡೆಕಾಯಿಗಳ ಮೇಲೆ ಸಿಂಪಡಿಸಲಾಗುತ್ತದೆ. ಒಂದು ಹತ್ತಿ ಉಂಡೆಯಲ್ಲಿ ಫ್ಯಾರಾಫಿನ್ ಎಂಬ ದ್ರಾವಣವನ್ನು ಅದ್ದಿ, ಬೆಂಡೆಕಾಯಿಗಳನ್ನು ಒರೆಸಿದರೆ, ಕೃತಕ ಬಣ್ಣ ಬಳಸಲಾಗಿದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತದೆ.

ಇದನ್ನೂ ಓದಿ: ಮಕರ ಸಂಕ್ರಾಂತಿ: ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಇಲ್ಲಿವೆ

Last Updated : Jan 15, 2022, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.