ETV Bharat / sukhibhava

ಕೋವಿಡ್​ ಬಳಿಕ ಹೃದಯಾಘಾತ ಪ್ರಕರಣ ಹೆಚ್ಚಳ; ಜಪಾನ್​ ಅಧ್ಯಯನ

ಕೋವಿಡ್​​ 19 ಸಾಂಕ್ರಾಮಿಕದ ಬಳಿಕ ಹೃದಯಾಘಾತದ ಪ್ರಕರಣಗಳು ಗಮನಾರ್ಹ ಮಟ್ಟದಲ್ಲಿ ಏರಿಕೆ ಕಂಡಿವೆ.

author img

By ETV Bharat Karnataka Team

Published : Dec 30, 2023, 5:19 PM IST

significant surge in heart attacks after covid 19

ಟೋಕಿಯೋ (ಜಪಾನ್​): ಕೋವಿಡ್​ 19 ಬಳಿಕ ಹೃದಯ ವೈಫಲ್ಯದ ಅಪಾಯವನ್ನು ಜಪಾನ್​ ಸಂಶೋಧಕರ ತಂಡ ಅಂದಾಜಿಸಿದೆ. ಈ ಸಂಬಂಧ ಅಗತ್ಯ ಕ್ರಮ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದೆ.

ಕೋವಿಡ್​​ ಸೋಂಕಿನಿಂದ ಚೇತರಿಕೆ ಬಳಿಕವೂ ಹೃದಯದಲ್ಲಿರುವ ವೈರಲ್​ ಸೋಂಕಿನಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಇದು ಯಾವುದೇ ಹೃದಯ ರೋಗದ ಅಭಿವೃದ್ಧಿಯ ಲಕ್ಷಣವನ್ನು ತೋರುವುದಿಲ್ಲ ಎಂದು ತಂಡ ತಿಳಿಸಿದೆ. ಜಪಾನ್​ನ ಅತಿ ದೊಡ್ಡ ವಿಜ್ಞಾನ ಸಂಸ್ಥೆ ರಿಕೆನ್​ ಸಂಶೋಧಕರು ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದಾರೆ.

ಕೋವಿಡ್​​ 19 ಸಾಂಕ್ರಾಮಿಕತೆ ಬಳಿಕ ಹೃದಯಾಘಾತದ ಪ್ರಕರಣಗಳು ಗಮನಾರ್ಹ ಮಟ್ಟದಲ್ಲಿ ಏರಿಕೆ ಕಂಡಿವೆ. ಅದರಲ್ಲೂ ಆರೋಗ್ಯವಂತರು ಹೃತಯಾಘಾತಕ್ಕೆ ತುತ್ತಾಗುತ್ತಿರುವುದು ಆತಂಕ ಮೂಡಿಸಿದೆ. ಕೆಲ ಮಂದಿ ಈ ಹೃದಯಾಘಾತವೂ ಕೋವಿಡ್​ ಲಸಿಕೆಯೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಿದರೂ, ವಿಶ್ವ ಆರೋಗ್ಯ ಸಂಸ್ಥೆ, ಭಾರತದ ಐಸಿಎಂಅರ್​ ಇದನ್ನು ತಳ್ಳಿ ಹಾಕಿದೆ. ಅವರ ಅಧ್ಯಯನದಲ್ಲಿ ಕೋವಿಡ್​​ ಲಸಿಕೆ ಪಡೆಯದವರೂ ಕೋವಿಡ್​ನಿಂದ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆದ್ರೆ ಲಸಿಕೆಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿವೆ.

ಕೊರೊನಾ ವೈರಸ್​​ ಮೇಲ್ಮೈನ ಸ್ಪೈಕ್​ ಪ್ರೊಟೋನ್​ ವ್ಯಕ್ತಿಗಳ ಜೀವಕೋಶದ ಮೇಲ್ಮೈಯಲ್ಲಿರುವ ಎಸಿಇ2 ಗ್ರಾಹಕಗಳಿಗೆ ಲಗತ್ತಿಸಿದಾಗ ಈ ಸೋಂಕು ಉಂಟಾಗುತ್ತದೆ. ತಂಡವೂ ಬೇರೆ ಅಂಗಾಂಗಗಳಿಗಿಂತ ಹೃದಯದಲ್ಲಿ ಈ ಎಸಿಇ2 ಗ್ರಾಹಕಗಳು ಸಾಮಾನ್ಯವಾಗಿದೆ. ಕೆಲವು ಕೋವಿಡ್​ ರೋಗಿಗಳಲ್ಲಿ ಹೃದಯದ ಕಾರ್ಯಾಚರಣೆ ಕಡಿಮೆಯಾಗಿದೆ. ಆದರೆ, ಈ ಕುರಿತು ಯಾಂತ್ರೀಕೃತ ಮಾಹಿತಿ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಈ ಅಧ್ಯಯನವನ್ನು ಅಮೆರಿಕನ್​​ ಸೈನ್ಸ್​ ಜರ್ನಲ್​​ ಐಸೈನ್ಸ್​​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನಾ ತಂಡವೂ ಇಂಡ್ಯುಸ್ಡ್​​ ಫ್ಲೋರಿಪೊಟೆಂಟ್​ ಸ್ಟೆಮ್​ (ಐಪಿಎಸ್​​) ಕೋಶವನ್ನು ಬಳಕೆ ಮಾಡಿ ಹೃದಯದ ಟಿಶ್ಯೂವನ್ನು ಮೊದಲ ಬಾರಿಗೆ ಸೃಷ್ಟಿಸಿದೆ.

ಯಾವಾಗ ಈ ಟಿಶ್ಯೂ ಮೇಲೆ ಹೆಚ್ಚಿನ ಮೌಲ್ಯದ ವೈರಸ್​​ ಸೋಂಕಿಗೆ ಒಳಗಾಗುತ್ತದೆ. ಆಗ ಹೃದಯದ ಕಾರ್ಯಾಚಾರಣೆ ಕಡಿಮೆಯಾಗುತ್ತದೆ. ಇದು ಚೇತರಿಕೆ ಕಂಡಿದೆ. ಆದರೆ ಈ ಸೋಂಕು ನಾಲ್ಕು ವಾರಗಳ ಕಾಲ ಕಂಡು ಬಂದಿದೆ.

ಕೆಲವು ರೋಗಿಗಳು ಹೃದಯದಲ್ಲಿ ಈ ಸೋಂಕಿನ ಇರುವಿಕೆ ಪತ್ತೆಯಾದರೂ ಅವರಲ್ಲಿ ಹೃದಯ ವೈಪಲ್ಯದ ಅಭಿವೃದ್ಧಿ ಆಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಮುಂದುವರೆದ ಅಧ್ಯಯನದಲ್ಲಿ ಹೃದಯ ಟಿಶ್ಯೂವನ್ನು ಹೈಪೊಕ್ಸಿಕ್​ ಪರಿಸ್ಥಿತಿಯಡಿ ಇಟ್ಟಾಗ ಹೃದಯದ ಕಾರ್ಯಾಚಾರಣೆಯನ್ನು ಕಡಿಮೆ ಮಾಡುತ್ತದೆ. ಸೋಂಕಿತವಲ್ಲದ ಕೋಶವೂ ನಿರ್ದಿಷ್ಟ ಸಮಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆದರೆ, ಸ್ವಲ್ಪ ಪ್ರಮಾಣದ ವೈರಸ್ ಸೋಂಕಿಗೆ ಒಳಗಾದ ಜೀವಕೋಶಗಳು ಚೇತರಿಸಿಕೊಂಡಿಲ್ಲ. ನಿರಂತರ ಸೋಂಕಿನಿಂದ ಅವರ ಚೇತರಿಕೆಯ ಸಾಮರ್ಥ್ಯ ದುರ್ಬಲಗೊಂಡಿದೆ ಎಂದು ವರದಿ ಹೇಳಿದೆ. ಕೊರೊನಾ ವೈರಸ್ ಸೋಂಕಿಗೆ ಒಳಗಾದ ಕೆಲವು ಜನರು ತಮ್ಮ ಹೃದಯದಲ್ಲಿ ನಿರಂತರ ವೈರಲ್ ಸೋಂಕನ್ನು ಹೊಂದಿರಬಹುದು. ಈ ನಿಟ್ಟಿನಲ್ಲಿ ಹೃದಯಾಘಾತದ ಸಾಂಕ್ರಾಮಿಕತೆ ಪರೀಕ್ಷಾ ವ್ಯವಸ್ಥೆ ಮತ್ತು ಚಿಕಿತ್ಸಾ ವಿಧಾನಗಳನ್ನು ಸ್ಥಾಪಿಸಬೇಕು. ಇದರಲ್ಲಿ ಹೃದಯ ವೈಫಲ್ಯದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. (ಐಎಎನ್​ಎಸ್​​​)

ಇದನ್ನೂ ಓದಿ: ಹೃದಯಾಘಾತದ ಸಾವಿಗೂ ಕೋವಿಡ್​​ಗೂ ಯಾವುದೇ ಸಂಬಂಧವಿಲ್ಲ; ಐಸಿಎಂಆರ್​ ಮಾಜಿ ನಿರ್ದೇಶಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.