ಹೈದರಾಬಾದ್: ಫೆಬ್ರವರಿ 7 ರಿಂದ 14 ರವರೆಗೆ ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಈಗಾಗಲೇ ಉತ್ಸಾಹ ಮತ್ತು ಸಂತೋಷದಿಂದ ಈ ದಿನ ಶುರುವಾಗಿದೆ. ಈ ವಾರದ ಏಳನೇ ದಿನ ವ್ಯಾಲೆಂಟೈನ್ಸ್ ಡೇ ಆಗಿರುವುದರಿಂದ. ಪ್ರತಿಯೊಂದು ದಿನವೂ ತನ್ನದೇ ಆದ ವಿಭಿನ್ನ ಮಹತ್ವವನ್ನು ಹೊಂದಿದೆ. ನಮ್ಮ ಪ್ರೀತಿಪಾತ್ರರೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ಆಚರಣೆ ಆಗಿದೆ. ಪ್ರೇಮಿಗಳ ವಾರದ ಮೊದಲ ದಿನವನ್ನು 'ರೋಸ್ ಡೇ' ಎಂದು ಆಚರಿಸಲಾಗುತ್ತದೆ. ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳ ಹೂಗುಚ್ಛ ನೀಡಿವುದರ ಮೂಲಕ ಅವರಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.
-
Single gang, where you at? 🌹#rose #RoseDay #ValentinesDay #ValentinesDay2023 #Valentine pic.twitter.com/60V7imwJrn
— Shardings (@shardingsmeet) February 7, 2023 " class="align-text-top noRightClick twitterSection" data="
">Single gang, where you at? 🌹#rose #RoseDay #ValentinesDay #ValentinesDay2023 #Valentine pic.twitter.com/60V7imwJrn
— Shardings (@shardingsmeet) February 7, 2023Single gang, where you at? 🌹#rose #RoseDay #ValentinesDay #ValentinesDay2023 #Valentine pic.twitter.com/60V7imwJrn
— Shardings (@shardingsmeet) February 7, 2023
ಈ ದಿನ ಪ್ರೇಮಿಗಳಿಗೆ ಮಾತ್ರವೇ? ಇಲ್ಲ ತಮ್ಮಗೇ ತಾವು ಗುಲಾಬಿಗಳನ್ನು ಉಡುಗೊರೆ ಕೊಟ್ಟು ಮತ್ತು ತಮ್ಮ ಸ್ಥಳವನ್ನು ಹೂವಿನಿಂದ ಅಲಂಕರಿಸಿಕೊಂಡ ಒಬ್ಬಂಟಿಗರನ್ನು ನಿರುತ್ಸಾಹಗೊಳಿಸಬಾರದು. ಈ ದಿನದಂದು ವಿಶೇಷ ವ್ಯಕ್ತಿಯಿಂದ ಗುಲಾಬಿಗಳನ್ನು ಸ್ವೀಕರಿಸದಿರುವುದು ಸಂತಸ ನೀಡುತ್ತದೆ. ಆದರೆ, ಈ ದಿನವನ್ನು ಒಬ್ಬಂಟಿಗರು ಸಾಮಾಜಿಕ ಮಾಧ್ಯಮದಲ್ಲಿ ಸರ್ಫಿಂಗ್ ಮಾಡುವ ಮೂಲಕ ಮತ್ತು ಈ ದಿನಕ್ಕೆ ಸಂಬಂಧಿಸಿದ ಮೀಮ್‌ಗಳನ್ನು ನೋಡಿ ಆನಂದಿಸುವ ಮೂಲಕ ಸಮಯ ಕಳೆಯಬಹುದು.
ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಭಾವನೆಗಳನ್ನು ಜನರು ವ್ಯಕ್ತಪಡಿಸುತ್ತಾರೆ. ಇದು ವಿಶೇಷವಾಗಿ ನಾಚಿಕೆಪಡುವ ಜನರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಲು ಉತ್ತಮ ಮಾರ್ಗವಾಗಿದೆ. ಆದರೆ, ಗುಲಾಬಿಗಳ ವಿವಿಧ ಬಣ್ಣಗಳು ವ್ಯಕ್ತಿಯ ವಿಭಿನ್ನ ಭಾವನೆಗಳನ್ನು ಮತ್ತು ಸಂಕೇತಗಳನ್ನು ಸೂಚಿಸುತ್ತದೆ. ಆದ್ದರಿಂದ, ಗುಲಾಬಿಯ ಪ್ರತಿಯೊಂದು ಬಣ್ಣದ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ನೀವು ಗುಲಾಬಿಯನ್ನು ಯಾರಿಗಾದರೂ ನೀಡಲು ಬಯಸಿದ್ದರೆ. ಈ ವಿವಿಧ ಬಣ್ಣದ ಗುಲಾಬಿಗಳ ಅರ್ಥವನ್ನು ತಿಳಿದುಕೊಳ್ಳಿ.
ಕೆಂಪು ಗುಲಾಬಿ: ಗ್ರೀಕ್ ಪುರಾಣದ ಪ್ರಕಾರ, ಪ್ರೀತಿಯ ದೇವತೆ ತನ್ನ ಗಾಯಗೊಂಡ ಪ್ರೇಮಿ ಅಡೋನಿಸ್ ನನ್ನು ನೋಡಲು ಹೊರಟಾಗ, ಅಫ್ರೋಡೈಟ್ನ ಪಾದಕ್ಕೆ ಬಿಳಿ ಗುಲಾಬಿಯ ಮುಳ್ಳು ಚುಚ್ಚಿಕೊಳ್ಳುತ್ತದೆ. ನಂತರ ಅಫ್ರೋಡೈಟ್ನ ರಕ್ತವು ಬಿಳಿ ಗುಲಾಬಿ ದಳಗಳ ಮೇಲೆ ಬಿದ್ದಾಗ ಅವು ಕೆಂಪು ದಳಗಳಾಗಿ ಪರಿವರ್ತನೆಯಾಯಿತು ಎಂಬುದು ಜನಪ್ರಿಯ ನಂಬಿಕೆಯಾಗಿದೆ. ಆದ್ದರಿಂದ, ಕೆಂಪು ಗುಲಾಬಿಯು ಅಂತ್ಯವಿಲ್ಲದ ಪ್ರೀತಿ ಮತ್ತು ಪ್ರಣಯದ ಸಂಕೇತವಾಗಿ ಮಾರ್ಪಟ್ಟಿತು. ಕೆಂಪು ಗುಲಾಬಿಯನ್ನು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀಡಬಹುದು.
ಪಿಂಕ್ ಗುಲಾಬಿ: ನಿಮ್ಮ ಜೀವನದಲ್ಲಿ ನೀವು ಧನ್ಯವಾದ ಹೇಳಲು ಅಥವಾ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಅಥವಾ ನೀವು ಇಷ್ಟಪಡುವ ವ್ಯಕ್ತಿಯನ್ನು ಹೊಂದಿದ್ದರೆ, ಗುಲಾಬಿ ದಿನದಂದು ಅವರಿಗೆ ಪಿಂಕ್ ಗುಲಾಬಿಯನ್ನು ನೀಡಬಹುದು. ಪಿಂಕ್ ಗುಲಾಬಿಗಳು ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಸೂಚಿಸುತ್ತದೆ.
ಹಳದಿ ಗುಲಾಬಿ: ಹಳದಿ ಗುಲಾಬಿಗಳು ಸ್ನೇಹವನ್ನು ಪ್ರತಿಬಿಂಬಿಸುತ್ತದೆ. ಹಳದಿ ಗುಲಾಬಿಯು ಸ್ನೇಹ ಮತ್ತು ಹೆಚ್ಚಿನ ಕಾಳಜಿಯ ಭರವಸೆಯನ್ನು ಸೂಚಿಸುತ್ತದೆ, ಆದ್ದರಿಂದ ಇದು ಕಠಿಣ ಸಮಯಗಳಲ್ಲಿ ನಿಮ್ಮೊಂದಿಗೆ ಇದ್ದ ನಿಮ್ಮ ಆಪ್ತ ಸ್ನೇಹಿತರಿಗೆ ಹಳದಿ ಗುಲಾಬಿ ನೀಡಬಹುದು.
ಪೀಚ್ ರೋಸ್: ಪೀಚ್ ಗುಲಾಬಿಗಳು ಮುಗ್ಧ ಆಕರ್ಷಣೆಯ ಸಂಕೇತವಾಗಿದೆ, ಆದ್ದರಿಂದ, ನೀವು ನಿಜವಾಗಿಯೂ ಅವರಿಗೆ ಹೇಳದೇ ಅವರನ್ನು ಪ್ರೀತಿಸಲು ಪ್ರಾರಂಭಿಸಿದ್ದೀರಿ ಎಂದು ಅವರಿಗೆ ತಿಳಿಸಲು ಪೀಚ್ ಗುಲಾಬಿ ನೀಡಬಹುದು.
ಕಿತ್ತಳೆ ಗುಲಾಬಿ: ಕಿತ್ತಳೆ ಗುಲಾಬಿ ಉತ್ಸಾಹದ ಸಂಕೇತವಾಗಿದೆ. ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೀವು ಸಿದ್ಧರಿದ್ದೇವೆ ಎಂದು ಹೇಳಲು ಈ ಗುಲಾಬಿಯನ್ನು ನೀಡಬಹುದು.
ಬಿಳಿ ಗುಲಾಬಿ: ಬಿಳಿ ಬಣ್ಣವನ್ನು ಶಾಂತಿ, ಶುದ್ಧತೆ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಯಾರಿಗಾದರೂ ಬಿಳಿ ಗುಲಾಬಿಯನ್ನು ನೀಡುಬೇಕು ಎಂದುಕೊಂಡಿದ್ದರೆ, ನೀವು ಅವರನ್ನು ಇಷ್ಟಪಡುತ್ತೀರಿ ಮತ್ತು ಅವರಿಗೆ ನಿಷ್ಠರಾಗಿದ್ದೀರಿ ಎಂದರ್ಥ. ಬಿಳಿ ಗುಲಾಬಿಗಳನ್ನು ಸಾಮಾನ್ಯವಾಗಿ ಯಾರಿಗಾದರೂ ಕ್ಷಮೆ ಕೇಳಲು ನೀಡಲಾಗುತ್ತದೆ, ಆದ್ದರಿಂದ ನೀವು ಯಾರಿಗಾದರೂ ನೋವುಂಟು ಮಾಡಿದ್ದರೆ ಅವರಿಗೆ ಬಿಳಿ ಗುಲಾಬಿ ನೀಡಬಹುದು.
ಇದನ್ನೂ ಓದಿ:ಡೇಟಿಂಗ್ ಮಾಡಲು ಮತ್ತು ಸಂಬಂಧ ಮುರಿಯಲು ಈ ಅಂಶಗಳು ಪ್ರಮುಖ ಕಾರಣ ಇವುಗಳಂತೆ..!