ಸ್ಯಾನ್ಫ್ರಾನ್ಸಿಸ್ಕೋ( ಅಮೆರಿಕ): ಮಕ್ಕಳಿಗೆ ಬಾಲ್ಯದಲ್ಲೇ ಸರಿಯಾದ ಪೋಷಣೆ ಅತ್ಯವಶ್ಯಕವಾಗಿದ್ದು, ಅಪೌಷ್ಟಿಕಾಂಶತೆಯಿಂದ ಅವರ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಜೊತೆಗೆ ಸಾವು ಕೂಡ ಸಂಭವಿಸಬಹುದು ಎಂದು ಮೂರು ಅಧ್ಯಯನಗಳು ತಿಳಿಸಿದೆ. ಜನನದ ಆರು ತಿಂಗಳೊಳಗೆ ಮಗುವಿನ ಬೆಳವಣಿಗೆ ನಡೆಯುತ್ತದೆ. ಈ ವೇಳೆ, ಮಗುವಿನ ಬೆಳವಣಿಗೆ ಕುಂಠಿತಗೊಂಡರೆ ಮಗುವು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅಪೌಷ್ಟಿಕಾಂಶತೆಯು ಮಗು 18 - 24 ತಿಂಗಳೊಳಗೆ ಬೆಳೆವಣಿಗೆಯನ್ನು ಹೆಚ್ಚು ಕುಂಠಿತಗೊಳಿಸುತ್ತದೆ ಎಂದು ಕ್ಯಾಲಿಫೋರ್ನಿಯಾ - ಸ್ಯಾನ್ ಪ್ರಾನ್ಸಿಸ್ಕೋ ಯುನಿವರ್ಸಿಟಿಯ ಅಸೋಸಿಯೇಟ್ ಪ್ರೋ ಬೆಂಜಮಿನ್ ಅರ್ನೊಲ್ಡ್ ತಿಳಿಸಿದ್ದಾರೆ.
ಇದು ಕಡಿಮೆ ಸಮಯ ಅವಧಿಯಾಗಿದ್ದು, ಪ್ರಸವ ಪೂರ್ವದ ಪೋಷಕತ್ವ ಅವಧಿ ಆಗಿದೆ. ಈ ಹಿನ್ನೆಲೆಯಲ್ಲಿ ತಾಯ್ತನದ ಅವಧಿಯಲ್ಲಿ ಮಹಿಳೆಯರ ಪೋಷಕಾಂಶ ಅಭಿವೃದ್ಧಿ ಮಾಡಬೇಕಿದೆ ಎಂದು ಲೇಖಕರು ಸಲಹೆ ನೀಡಿದ್ದಾರೆ. ದತ್ತಾಂಶದ ಪ್ರಕಾರ, 2022ರಲ್ಲಿ ವಿಶ್ವದಲ್ಲಿ ಐದರಲ್ಲಿ ಒಂದು ಮಗುವು ಸಾಮಾನ್ಯ ಬೆಳವಣಿಗೆಗೆ ಬೇಕಾದಷ್ಟು ಕ್ಯಾಲೋರಿ ಪಡೆಯುತ್ತಿಲ್ಲ. ಇದೇ ವೇಳೆ 45 ಮಿಲಿಯನ್ ಮಂದಿ ಎತ್ತರಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ ಎಂದು ತೋರಿಸಿದ್ದಾರೆ.
ಪ್ರತಿ ವರ್ಷ ಮಿಲಿಯನ್ಗಿಂತ ಹೆಚ್ಚು ಮಕ್ಕಳು ತೂಕ ಕ್ಷೀಣಿಸುವಿಕೆಯಿಂದ ಸಾವನ್ನಪ್ಪುತ್ತಿದ್ದು, 2,50,00 ಮಕ್ಕಳು ಬೆಳವಣಿಗೆ ಕುಂಠಿತದಿಂದ ಸಾವನ್ನಪ್ಪುತ್ತಿದ್ದಾರೆ. ಈ ಸಂಶೋಧನೆಯನ್ನು ಜರ್ನಲ್ ನೇಚರ್ನಲ್ಲಿ ಪ್ರಕಟಿಸಲಾಗಿದೆ. 100ಕ್ಕೂ ಹೆಚ್ಚು ಸಂಶೋಧಕರನ್ನು ಹೊಂದಿರುವ ಅಂತಾರಾಷ್ಟ್ರೀಯ ತಂಡ ಈ ಅಧ್ಯಯನದಲ್ಲಿದ್ದು, ಇವರು ಎರಡು ವರ್ಷದೊಳಗಿನ 84 ಸಾವಿರ ಮಕ್ಕಳನ್ನು ಅಧ್ಯಯನ ನಡೆಸಿದ್ದು, 33 ಪ್ರಮುಖ ಅಧ್ಯಯನವನ್ನು 1987 ರಿಂದ 2014ರವರೆಗೆ ನಡೆಸಿದ್ದಾರೆ.
ಈ ತಂಡವೂ ಶೇ 20ರಷ್ಟು ಮಕ್ಕಳು ಜನನ ಸಮಯದಲ್ಲಿ ಕುಂಠಿತ ಮತ್ತು 52ರಷ್ಟು ಮಕ್ಕಳು ಎರಡು ವರ್ಷ ತಲುಪಿದಾಗ ಬೆಳವಣಿಗೆಯಲ್ಲಿ ಕುಂಠಿತವಾಗುತ್ತಿರುವುದು ಕಂಡು ಬಂದಿದೆ. ಇನ್ನು ಈ ಬೆಳವಣಿಗೆಯ ಕುಂಠಿತದಲ್ಲಿ ಋತುಮಾನದ ಬದಲಾವಣೆಯನ್ನು ಸಂಶೋಧಕರು ಗಮನಿಸಿದ್ದಾರೆ.
ವಿಶೇಷವಾಗಿ ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ , ಮೇ ತಿಂಗಳಲ್ಲಿ ಜನಿಸಿದ ಮಕ್ಕಳು ಜನವರಿ ಹೊತ್ತಿಗೆ ಬೆಳವಣಿಗೆಯಲ್ಲಿ ಕುಂಠಿತ ಅನುಭವಿಸಿದ್ದಾರೆ ಇದಕ್ಕೆ ಕಾರಣ ಆಹಾರದ ಲಭ್ಯತೆ ಮತ್ತು ತಾಯಿಯ ಗರ್ಭಾವಸ್ಥೆಯಲ್ಲಿನ ಪೋಷಕಾಂಶದ ಸ್ಥಿತಿಗತಿಯಾಗಿದೆ. ಬೆಳವಣಿಗೆ ಕುಂಠಿತವನ್ನು ತಡೆಯಲು ನಮ್ಮ ಅಧ್ಯಯನವೂ ಮಗು ಜನಿಸಿದ ಆರು ತಿಂಗಳೊಳಗೆ ಆರೋಗ್ಯ ಮಧ್ಯಸ್ಥಿಕೆವಹಿಸುವಂತೆ ಸಲಹೆ ಮಾಡುತ್ತದೆ ಎಂದು ಸ್ಟಾಂಡ್ಫೋರ್ಡ್ ಯುನಿವರ್ಸಿಟಿಯ ಅಸಿಸ್ಟಂಟ್ ಪ್ರೋ ಜಡೆ ಬೆಂಜಮಿನ್- ಚುಂಕ್ ತಿಳಿಸಿದ್ದಾರೆ.
ಅಧ್ಯಯನವೂ ಮಗುವಿನಗೆ ಪೋಷಣೆ ಮತ್ತು ಮಹಿಳೆಯರಿಗೆ ಗರ್ಭಾವಸ್ಥೆ ಮತ್ತು ಪ್ರಸವ ಪೂರ್ವದ ಬಳಿಕ ಆರೋಗ್ಯಕರ ಬೆಂಬಲ ನೀಡುವಂತೆ ತಿಳಿಸುತ್ತದೆ. ಅಧ್ಯಯನದಲ್ಲಿ ಗಮನಿಸಿದ ಮತ್ತೊಂದ ಅಂಶದ ಪ್ರಕಾರ ಅಪೌಷ್ಟಿಕತೆಯ ತಾಯಿ ಮಗುವಿಗೆ ಜನ್ಮ ನೀಡಿದಾಗ ಮುಂದಿನ ಪೀಳಿಗೆ ಈ ಅಪೌಷ್ಟಿಕತೆ ಚಕ್ರ ಸಾಗುತ್ತದೆ ಎಂದಿದ್ದಾರೆ. ಆರಂಭಿಕ ಜೀವನದಲ್ಲಿ ಅಪೌಷ್ಟಿಕಾಂಶತೆ ಹೋಗಲಾಡಿಸುವ ಗುರಿ ಹೊಂದುವ ಮೂಲಕ ಪೀಳಿಗೆಯ ಅವಧಿಯನ್ನು ವಿಸ್ತರಿಸಬಹುದು ಎಂದು ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ-ಬರ್ಕೆಲೆ ಪ್ರಾಧ್ಯಾಪಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹವಾಮಾನ ಬದಲಾವಣೆಗಳು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು; ಅಧ್ಯಯನ