ನವದೆಹಲಿ: ವಾಯು ಮಾಲಿನ್ಯವು ಜನರಲ್ಲಿ ಹೃದಯ ರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇಟಾಲಿಯನ್ ಸಂಶೋಧಕರು ತಮ್ಮ ಇತ್ತೀಚಿನ ಅಧ್ಯಯನದಿಂದ ಕಂಡು ಹಿಡಿದಿದ್ದಾರೆ.
ಈ ಮಾಲಿನ್ಯವು ಈಗಾಗಲೇ ಹೃದಯ ಸಂಬಂಧಿ ಅಸ್ವಸ್ಥತೆಗಳಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿಯನ್ನು ಮತ್ತಷ್ಟು ಹಾಳುಮಾಡುತ್ತದೆ ಎಂದು ಬಹಿರಂಗ ಪಡಿಸಿದ್ದಾರೆ. ಸಂಶೋಧಕರು ಪ್ರಾಥಮಿಕವಾಗಿ ಪ್ರತಿಬಂಧಕವಲ್ಲದ ಪರಿಧಮನಿಯ ಕಾಯಿಲೆ (NOCAD) ಯಿಂದ ಬಳಲುತ್ತಿರುವ ಸರಾಸರಿ ವಯಸ್ಸು 62 ವರ್ಷದ ರೋಗಿಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ.
ಪಿಎಂ (ಪಾರ್ಟಿಕ್ಯುಲೇಟ್ ಮ್ಯಾಟರ್) 2.5 ಮತ್ತು ಪಿಎಂ 10 ಮಾಲಿನ್ಯಕಾರಕ ಕಣಗಳು ಬೀರುವ ದುಷ್ಪರಿಣಾಮವನ್ನು ಪರಿಶೀಲನೆ ನಡೆಸಲಾಗಿದೆ. ಆ ಮಾಲಿನ್ಯದಿಂದಾಗಿ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳ ಅಪಾಯವು ಜನರಲ್ಲಿ ಹೆಚ್ಚುತ್ತಿದೆ ಎಂದು ಅಧ್ಯಯನವು ತಿಳಿಸಿದೆ.
ಇದನ್ನೂ ಓದಿ: ಪರೋಕ್ಷ ಧೂಮಪಾನದಿಂದಲೂ ಚರ್ಮ ರೋಗದ ಸಮಸ್ಯೆ