ETV Bharat / sukhibhava

ಕಳಪೆ ನಿದ್ದೆಯಿಂದಾಗಿ ಮಹಿಳೆಯರಲ್ಲಿ ಹೈಪರ್​​ ಟೆನ್ಷನ್​​ ರಿಸ್ಕ್​; ಅಧ್ಯಯನ - ಹೊಸ ಸಂಶೋಧನೆ ತಿಳಿಸಿದೆ

ನಿದ್ದೆ ಎಂಬುದು ಭೌತಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಾಗಿದೆ. ಇದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ.

risk-of-hypertension-in-women-due-to-poor-sleep

author img

By ETV Bharat Karnataka Team

Published : Oct 3, 2023, 3:17 PM IST

ನ್ಯೂಯಾರ್ಕ್​: ಕಳಪೆ ನಿದ್ದೆಯ ಪರಿಣಾಮವಾಗಿ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡ ಅಥವಾ ಹೈಪರ್​​ಟೆನ್ಷನ್​ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ.

ರಾತ್ರಿ ಸಮಯದಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡದ ಮಹಿಳೆಯರಲ್ಲಿ ಅಧಿಕ ರಕ್ತದೊತ್ತಡದ ಅಪಾಯ ಗಮನಾರ್ಹವಾಗಿ ಹೆಚ್ಚಿರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ. ಈ ಕುರಿತು ಜರ್ನಲ್​ ಹೈಪರ್​ಟೆನ್ಷನ್​ನಲ್ಲಿ ಪ್ರಕಟಿಸಲಾಗಿದೆ.

ಜೊತೆಗೆ ಬ್ರಿಗ್ಯಾಮ್​ ಮತ್ತು ಅಮೆರಿಕದ ಮಹಿಳೆ ಆಸ್ಪತ್ರೆಯ ತಂಡ ನಿದ್ದೆ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಅಧಿಕ ಬಿಎಂಐ ಸಮಸ್ಯೆ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಕಳಪೆ ಡಯಟ್​​ ಗುರುತಿಸಿದ್ದಾರೆ. ಈ ಮಹಿಳೆಯರಲ್ಲಿ ಸರಾಸರಿ ಮಂದಿ ಧೂಮಪಾನ ಮತ್ತು ಆಲ್ಕೋಹಾಲ್​ ಹಾಗೂ ಈ ಹಿಂದೆ ಮೆನೋಪಸ್​ ಸಮಸ್ಯೆಗೆ ಒಳಗಾದವರಾಗಿದ್ದಾರೆ.

ನಿದ್ರಾಹೀನತೆಯಂತಹ ಲಕ್ಷಣಗಳಿಂದ ಹೋರಾಡುತ್ತಿರುವವರು ಹೈಪರ್​ಟೆನ್ಷನ್​ ಅಪಾಯವನ್ನು ಹೊಂದಿದ್ದು, ಮುಂಚೆಯೇ ಇದನ್ನು ಪತ್ತೆ ಮಾಡುವ ಮೂಲಕ ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಬ್ರಿಗ್ಯಾಮ್​ ಮತ್ತು ಹಾರ್ವರ್ಡ್​ ಮೆಡಿಕಲ್​ ಸ್ಕೂಲ್​​ ಸಂಶೋಧಕ ಶಾಹಬ್​​ ಹ್ಯಾಗ್ಯೆಂಗ್​​ ತಿಳಿಸಿದ್ದಾರೆ.

ಹೈಪರ್​​ ಟೆನ್ಷನ್​​ ಎಂಬುದು ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿದೆ. ಹೈಪರ್​ ಟೆನ್ಷನ್​ ಅನ್ನು ಶೀಘ್ರದಲ್ಲೇ ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಇದರಿಂದ ಭವಿಷ್ಯದ ಆರೋಗ್ಯ ಸಮಸ್ಯೆ ಎದುರಿಸಬಹುದಾಗಿದೆ ಎಂದರು.

ಈ ಅಧ್ಯಯನಕ್ಕಾಗಿ ಕ್ಯಾನ್ನಿಂಗ್​ ಡಿವಿಷನ್​ ಆಫ್​ ನೆಟ್​ವರ್ಕ್​ ಮೆಡಿಸಿನ್​ ಆಫ್​ ಹಾಸ್ಪಿಟಲ್​ 66,122 ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಿದೆ. ಹೈಪರ್​​ಟೆನ್ಷನ್​ ಇಲ್ಲದ 25 ರಿಂದ 42 ವರ್ಷದ ವಯೋಮಾನದವರು ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ.

ಅವರು ವಯಸ್ಸು, ವರ್ಣ, ಬಾಡಿ ಮಾಸ್​ ಇಂಡೆಕ್ಸ್​ (ಬಿಎಂಐ) ಡಯಟ್​​, ದೈಹಿಕ ಚಟುವಟಿಕೆ, ಸ್ಲಿಪ್​ ಅಪ್ನೆಯ ಮತ್ತು ಹೈಪರ್​ ಟೆನ್ಷನ್​ ಕೌಟುಂಬಿಕ ಇತಿಹಾಸ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಮಲಗುವಾಗ ತೊಂದರೆ ಅಥವಾ ಎಚ್ಚರದಿಂದ ಇರುವುದು ಅಥವಾ ಬೆಳಗಿನ ಹೊತ್ತು ಬೇಗ ಎಚ್ಚರವಾಗುವ ನಿದ್ದೆಯ ಸಮಸ್ಯೆಯನ್ನು ತಂಡವು ಟ್ರಾಕ್​ ಮಾಡಿದೆ. ಈ ಸಂಬಂಧ ಅನೇಕ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದು ಫಾಲೋಅಪ್​ನಲ್ಲಿ 25,987 ಮಂದಿಯನ್ನು ಹೈಪರ್​​ ಟೆನ್ಷನ್​​ ಪ್ರಕರಣ ಪತ್ತೆ ಮಾಡಿದ್ದಾರೆ. ಪ್ರಮುಖ ಅಂಶ ಎಂದರೆ ಬೆಳಗಿನ ಹೊತ್ತು ಬೇಗ ಎಚ್ಚರವಾಗುವುದು ಅಪಾಯದೊಂದಿಗೆ ಸಂಬಂಧವನ್ನು ಹೊಂದಿಲ್ಲ.

ನಿದ್ದೆಯ ಕಷ್ಟಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲಿ ಸೋಡಿಯಂ ಧಾರಣ, ಅಪಧಮನಿಯ ಬಿಗಿತ ಮತ್ತು ಹೃದಯಬಡಿತ ಹೆಚ್ಚಿಸಿ, ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ನಿದ್ದೆಯ ಚಕ್ರದಲ್ಲಿ ಅಡೆತಡೆಯು ರಕ್ತನಾಳಗಳ ವಿಶ್ರಾಂತಿಯ ಚಟುವಟಿಕೆಯೊಂದಿಗೆ ಪ್ರಭಾವ ಹೊಂದಿದೆ. ಇದು ನಾಳಗಳ ನಾದವನ್ನು ನಿಯಂತ್ರಿಸುವ ಕೋಶಗಳಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಈ ಫಲಿತಾಂಶವು ನಮ್ಮ ಒಟ್ಟಾರೆ ಯೋಗಕ್ಷೇಮದಲ್ಲಿ ಗುಣಮಟ್ಟದ ನಿದ್ರೆಯ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವದ ಬೇರೆ ದೇಶಗಳ ಜನರಿಗೆ ಹೋಲಿಸಿದಲ್ಲಿ ಕಡಿಮೆ ನಿದ್ದೆ ಮಾಡ್ತಾರೆ ಏಷ್ಯನ್ನರು; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.