ETV Bharat / sukhibhava

ಮಲ್ಟಿವಿಟಮಿನ್​ ಸೇವನೆ ಹೆಚ್ಚಳದಿಂದ ಕ್ಯಾನ್ಸರ್​ ಅಪಾಯ; ಅಧ್ಯಯನ - ಕ್ಯಾನ್ಸರ್​​ ಹೆಚ್ಚಾಗುವ ಅಪಾಯ ಇದೆ

ಆ್ಯಂಟಿ ಆಕ್ಸಿಡೆಂಟ್​ನಲ್ಲಿರುವ ಡಯಟರಿ ಪೂರಕಗಳು ಟ್ಯೂಮರ್​ ಬೆಳವಣಿಗೆ ಮತ್ತು ಮೆಟಾಸಸಿಸ್​ ಹೆಚ್ಚಿಸುತ್ತದೆ. ಆದಾಗ್ಯೂ ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಂಡಾಗ ಮಾತ್ರ ಈ ಅಪಾಯ ಎಂದಿದ್ದಾರೆ.

Risk of cancer due to increased consumption of multivitamins

author img

By ETV Bharat Karnataka Team

Published : Sep 4, 2023, 11:58 AM IST

ಲಂಡನ್​: ಯಾವುದೇ ಕೊರತೆ ಇಲ್ಲದೇ ಸುಖಾ ಸುಮ್ಮನೆ ಮಲ್ಟಿವಿಟಮಿನ್​ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕ್ಯಾನ್ಸರ್​​ ಹೆಚ್ಚಾಗುವ ಅಪಾಯ ಇದೆ ಎಂದು ಅಧ್ಯಯನ ಎಚ್ಚರಿಸಿದೆ. ಸ್ವೀಡನ್​ನ ಕರೊಲಿನ್ಸಕಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ವಿಟಮಿನ್​ ಸಿ ಮತ್ತು ಇತರೆ ಆ್ಯಂಟಿ ಆಕ್ಸಿಡೆಂಟ್​​ಗಳು ಶ್ವಾಸಕೋಶದಲ್ಲಿನ ಕ್ಯಾನ್ಸರ್​ ಗಡ್ಡೆಗಳ ಹೊಸ ರಕ್ತನಾಳ ಆಗುವುದಕ್ಕೆ ಪ್ರಚೋದಿಸುತ್ತದೆ ಎಂದು ತಿಳಿಸಿದ್ದಾರೆ.

ದಿ ಜರ್ನಲ್​ ಆಫ್​ ಕ್ಲಿನಿಕಲ್​ ಇನ್ವೆಸ್ಟಿಗೇಷನ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಆ್ಯಂಟಿಆಕ್ಸಿಡೆಂಟ್​ನಲ್ಲಿರುವ ಡಯಟರಿ ಪೂರಕಗಳು ಟ್ಯೂಮರ್​ ಬೆಳವಣಿಗೆ ಮತ್ತು ಮೆಟಾಸಸಿಸ್​ ಹೆಚ್ಚಿಸುತ್ತದೆ. ಆದಾಗ್ಯೂ ಹೆಚ್ಚಿನ ಮಟ್ಟದಲ್ಲಿ ತೆಗೆದುಕೊಂಡಾಗ ಮಾತ್ರ ಈ ಅಪಾಯ ಎಂದಿದ್ದಾರೆ.

ಆ್ಯಂಟಿ ಆಕ್ಸಿಡೆಂಟ್​ ಕ್ಯಾನ್ಸರ್​ ಟ್ಯೂಮರ್​ಗಳನ್ನು ಹೊಸ ರಕ್ತನಾಳಗಳನ್ನು ರೂಪಿಸಲು ಕಾರಣವಾಗುವ ಕಾರ್ಯ ವಿಧಾನವನ್ನು ಸಕ್ರಿಯಗೊಳಿಸುತ್ತದೆ ಎಂದು ನಾವು ಪತ್ತೆ ಮಾಡಿದ್ದೇವೆ. ಹಿಂದಿನ ಅಧ್ಯಯನದಲ್ಲಿ ಆ್ಯಂಟಿ ಆಕ್ಸಿಡೆಂಟ್​ಗಳು ರಕ್ಷಣಾತ್ಮಕ ಪರಿಣಾಮವನ್ನು ಹೊಂದಿದೆ ಎಂದು ತಿಳಿದಿದ್ದೆವು ಎಂದು ಅಧ್ಯಯನದ ಲೇಖಕ ಸ್ವೀಡನ್​ನ ಕಾರೊಲಿನ್ಸಕಾ ಸಂಸ್ಥೆಯ ಜೈವಿಕ ವಿಜ್ಞಾನ ಮತ್ತು ನ್ಯೂಟ್ರಿಷಿಯನ್​ ವಿಭಾಗದ ಪ್ರೋ ಮಾರ್ಟಿನ್​ ಬರ್ಗೊ ತಿಳಿಸಿದ್ದಾರೆ.

ಹೊಸ ರಕ್ತ ನಾಳಗಳು ಟ್ಯೂಮರ್​ ಪೋಷಿಸುತ್ತದೆ ಮತ್ತು ಬೆಳವಣಿಗೆ ಮತ್ತು ಹರಡಲು ಸಹಾಯ ಮಾಡುತ್ತದೆ ಎಂದಿದ್ದಾರೆ. ಆ್ಯಂಟಿ ಆಕ್ಸಿಡೆಂಟ್​ ನ್ಯೂಟ್ರಲೈಸ್​ ಆಮ್ಲಜನಕದ ರ್ಯಾಡಿಕಲ್​ಗಳಿಂದ ಮುಕ್ತವಾಗಿರುತ್ತದೆ. ಇದು ದೇಹವನ್ನು ಹಾನಿ ಮಾಡುತ್ತದೆ. ಇದು ಸಾಮಾನ್ಯವಾಗಿ ಡಯಟರಿ ಪೂರಕದಲ್ಲಿ ಕಂಡು ಬರುತ್ತದೆ. ಇದರ ಹೈ ಡೋಸ್​ ಹಾನಿಕಾರಕವಾಗಿದೆ.

ಸಾಮಾನ್ಯ ಆಹಾರದಲ್ಲಿನ ಆ್ಯಂಟಿ ಆಕ್ಸಿಡೆಂಟ್​ ಬಗ್ಗೆ ಭಯ ಬೇಡ. ಆದರೆ, ಬಹುತೇಕ ಜನರಿಗೆ ಇದರ ಹೆಚ್ಚಿನ ಅಂಶಗಳು ಬೇಕಾಗುವುದಿಲ್ಲ. ಇದು ಕ್ಯಾನ್ಸರ್​ ರೋಗಿಗಳಿಗೆ ಹಾನಿಯನ್ನು ಉಂಟು ಮಾಡುತ್ತದೆ ಎಮದು ಲೇಖಕರು ತಿಳಿಸಿದ್ದಾರೆ.

ವಿಟಮಿನ್​ ಸಿ ಮತ್ತು ಇ ಯಲ್ಲಿನ ಬಿಎಸಿಎಚ್​1 ಪ್ರೋಟಿನ್​ ಅನ್ನು ಆ್ಯಂಟಿ ಆಕ್ಸಿಡೆಂಟ್​​ ಶ್ವಾಸಕೋಶ ಬೆಳವಣಿಗೆ ಮತ್ತು ಹರಡುವಿಕೆಯನ್ನು ಹೆಚ್ಚಿಸುತ್ತದೆ. ಆಕ್ಸಿಜನ್​ ಮುಕ್ತ ರಾಡಿಕಲ್​ಗಳು ಕೆಳಗೆ ಇಳಿದಾಗ ಈ ಬಿಎಸಿಎಚ್​1 ಸಕ್ರಿಯವಾಗುತ್ತದೆ. ಬಿಎಸಿಎಚ್​1 ಸಕ್ರಿಯಗೊಳಿಸುವಿಕೆ ಹೊಸ ರಕ್ತನಾಳ ರಚನೆಯನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ.

ನಮ್ಮ ಅಧ್ಯಯನವೂ ಟ್ಯೂಮರ್​ನಲ್ಲಿನ ಅಂಜಿಯೊಜೆನಿಸಿಸ್ ಪರಿಣಾಮಕಾರಿಯಾಗಿ ತಡೆಗಟ್ಟುವಿಕೆ ಮಾರ್ಗವನ್ನು ತೆರೆಯುತ್ತದೆ. ಬಿಎಸಿಎಚ್​1 ಹೆಚ್ಚಿನ ಮಟ್ಟದಲ್ಲಿ ಹೊಂದಿರುವ ಟ್ಯೂಮರ್​ಗಳಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿದೆ.

ಅಧ್ಯಯನದ ಮುಂದಿನ ಹಂತದಲ್ಲಿ ಆಮ್ಲಜನಕ ಮತ್ತು ಸ್ವತಂತ್ರ ರಾಡಿಕಲ್​ ಮಟ್ಟಗಳು ಬಿಎಸಿಎಚ್​1 ಪ್ರೋಟಿನ್​ ಸಕ್ರಿಯಗೊಳಿಸುತ್ತದೆ. ನಮ್ಮ ಫಲಿತಾಂಶಗಳ ವೈದ್ಯಕೀಯ ಪ್ರಸ್ತುತತೆ ನಾವು ನಿರ್ಧರಿಸುವುದನ್ನು ಮುಂದುವರೆಸುತ್ತೇವೆ ಎಂದು ವಾಂಗ್​ ಹೇಳಿದರು.

ಇದನ್ನೂ ಓದಿ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್​ ಮಕ್ಕಳಿಗೆ ಸ್ಟೆಮ್​ ಥೆರಪಿಗೆ ಅನುಮತಿಸಿದ ದೆಹಲಿ ಹೈ ಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.