ತಮ್ಮಿಷ್ಟದ ಆಹಾರದ ಚಿತ್ರಗಳನ್ನು ನೋಡಿದರೆ ತಿನ್ನಬೇಕು ಎಂಬ ಬಯಕೆ ಮೂಡುವುದು ಸಹಜ. ಆದರೆ, ಇದೇ ರೀತಿಯ ಚಿತ್ರಗಳು ನಿಮ್ಮನ್ನು ಅತಿ ಹೆಚ್ಚು ತಿನ್ನದಂತೆಯೂ ತಡೆದು ನಿಮ್ಮ ತಿನ್ನುವ ಬಯಕೆ ನಿರ್ವಹಣೆ ಮಾಡಿ, ತೂಕ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಡೆನ್ಮಾರ್ಕ್ನ ಅರಹುಸ್ ಯುನಿವರ್ಸಿಟಿ ಸಂಶೋಧನೆ ನಡೆಸಿದೆ. ಈ ಕುರಿತು ಅನೇಕ ಪ್ರಯೋಗಗಳನ್ನು ನಡೆಸಿದ್ದು, ಇಷ್ಟದ ಆಹಾರದ ಚಿತ್ರವನ್ನು ಸರಿಸುಮಾರು 30 ಬಾರಿ ನೋಡಿದರೆ, ಮನಸ್ಸು ಆಹಾರ ಸೇವನೆ ಸೇವನೆ ಮಾಡದೇ ತೃಪ್ತಿ ಪಡುತ್ತದೆ. ಇದರಿಂದ ಹೆಚ್ಚು ತಿನ್ನುವ ಚಟಕ್ಕೆ ನಿಯಂತ್ರಣ ಹಾಕಬಹುದು ಎಂದಿದೆ.
ಅಧ್ಯಯನದಲ್ಲಿ ಭಾಗಿಯಾದ ಒಂದು ಗುಂಪು ಆಹಾರದ ಚಿತ್ರವನ್ನು ಫೋಟೋದಲ್ಲಿ ಮೂರು ಬಾರಿ ನೋಡಿದಾಗ ಉಳಿದ ಗುಂಪಿನ ಜನರಿಗಿಂತ ಕಡಿಮೆ ಭಾಗ ಆಹಾರ ಸೇವನೆ ಮಾಡಿದ್ದಾರೆ ಎಂದು ಟ್ಜಾರ್ಕ್ ಆಂಡರ್ಸನ್ ತಿಳಿಸಿದೆ. ಏನೂ ತಿನ್ನದೇ, ಚಿತ್ರವನ್ನು ನೋಡಿದ ಕೂಡಲೇ ಅವರಿಗೆ ಹೊಟ್ಟೆ ತುಂಬಿದ ಭಾವನೆ ಮೂಡುವುದು ವಿಚಿತ್ರವಾಗಿದ್ದರೂ, ಇದು ನೈಸರ್ಗಿಕ ಎಂದು ಲೇಖಕರು ತಿಳಿಸಿದ್ದಾರೆ. ಆಹಾರದ ಬಗ್ಗೆ ಹೇಗೆ ಯೋಚಿಸುತ್ತೇವೆ ಎಂಬುದು ನಮ್ಮ ಹಸಿವಿನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಈ ರೀತಿ ಚಿತ್ರಗಳನ್ನು ನೋಡುವುದರಿಂದ ಚಿತ್ರಗಳಲ್ಲಿನ ವ್ಯತ್ಯಾಸವು ಅತ್ಯಧಿಕತೆಯ ಭಾವವನ್ನು ತೆಗೆದುಹಾಕುತ್ತದೆಯೇ ಎಂಬುದನ್ನು ಹೊಸ ಸಂಶೋಧನೆ ಪರಿಶೀಲಿಸಿದೆ.
ಆಹಾರದ ಚಿತ್ರಗಳನ್ನು ನೋಡುವುದರಿಂದ ಅದನ್ನು ತಿನ್ನಬೇಕು ಎಂಬ ಕಡು ಭಾವನೆಯನ್ನು ತೆಗೆದು ಹಾಕುತ್ತದೆಯೇ ಎಂಬುದನ್ನು ತನಿಖೆ ಮಾಡಬೇಕಿದೆ. ಈ ಕುರಿತು ಆಂಡರ್ಸನ್ ಮತ್ತು ಆತನ ಸಹೋದ್ಯೋಗಿ ತಂಡ ಅನೇಕ ಆನ್ಲೈನ್ ಪ್ರಯೋಗಗಳನ್ನು ಮಾಡಿದೆ. ಇದಕ್ಕಾಗಿ 1000 ಕ್ಕೂ ಹೆಚ್ಚು ಜನರನ್ನು ಡಿಜಿಟಲ್ ಪ್ರಯೋಗಗಳಿಗೆ ಬಳಕೆ ಮಾಡಲಾಗಿದೆ. ಅವರಿಗೆ ಮೊದಲಿಗೆ ಆರೆಂಜ್ ಕ್ಯಾಂಡಿಯನ್ನು ತೋರಿಸಲಾಯಿತು. ಕೆಲವು ಭಾಗಿದಾರರಿಗೆ 3 ಬಾರಿ ಈ ಚಿತ್ರ ತೋರಿಸಿದರೆ, ಮತ್ತೆ ಕೆಲವರಿಗೆ 30 ಬಾರಿ ತೋರಿಸಲಾಯಿತು. ಕ್ಯಾಂಡಿಯ ಹೆಚ್ಚಿನ ಚಿತ್ರಗಳನ್ನು ನೋಡಿದ ಗುಂಪು ನಂತರ ಹೆಚ್ಚು ತೃಪ್ತಿ ಅನುಭವಿಸಿತು. ಈ ಸಂಶೋಧನೆಗಳನ್ನು ತೂಕ ನಷ್ಟ ತಂತ್ರವಾಗಿ ಬಳಸಬಹುದು ಎಂದು ತಿಳಿಸಿದ್ದಾರೆ.
1975 ರಿಂದ ಜಗತ್ತಿನಾದ್ಯಂತ ಅಧಿಕ ತೂಕದ ಜನರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ವ್ಯಕ್ತಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಸ್ಥೂಲಕಾಯವೂ ದೊಡ್ಡ ಸಮಸ್ಯೆಯಾಗಿದೆ. ಅಧಿಕ ತೂಕ ಹೊಂದಲು ಪ್ರಮುಖ ಕಾರಣ ಹೆಚ್ಚಾಗಿ ತಿನ್ನುವುದರ ಜೊತೆಗೆ ಅನಾರೋಗ್ಯಕರ ಆಹಾರಗಳ ಆಯ್ಕೆ. ಅದಕ್ಕೆ ತಕ್ಕ ದೈಹಿಕ ಚಟುವಟಿಕೆಯಲ್ಲಿ ತೊಡಗದೇ ಇರುವುದಾಗಿದೆ.
ಈ ಸಂಬಂಧ ಗೂಗಲ್ ಹುಡುಕಾಟ ಆಧರಿಸಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದೀರಾ ಎಂದು ಯೋಚಿಸಿ. ನಿಮಗೆ ಪಿಜ್ಜಾ ಬೇಕು ಎಂದು ನೀವು ಅಪ್ಲಿಕೇಶನ್ ತೆಗೆದಾಗ, ಪಿಜ್ಜಾದ ಬಹಳಷ್ಟು ಫೋಟೋಗಳು ಕಣ್ಮುಂದೆ ಬರುತ್ತದೆ. ಅದನ್ನು ತಿಂದಂತೆ ಭಾವಿಸಿ, ಅದನ್ನು ಸೇವಿಸಿದ ತೃಪ್ತಿಯನ್ನು ಪಡೆಯಬಹುದು ಎಂದಿದ್ದಾರೆ.
ಇದನ್ನೂ ಓದಿ: ಬಿಸಿಲಿನ ಶಾಖದಲ್ಲಿ ತಂಪು ಅನುಭೂತಿ ನೀಡುವ ಕ್ಯಾಂಡಿಗಳಿವು