ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ನೀಡಲಾಗುವ ಸೈಕೆಡೆಲಿಕ್ಸ್ ಔಷಧ ಮಾರುಕಟ್ಟೆ 2029ರ ವೇಳೆಗೆ 7.2 ಬಿಲಿಯನ್ ಡಾಲರ್ ಬೆಳವಣಿಗೆ ನಿರೀಕ್ಷೆ ಇದ್ದು, ವಾರ್ಷಿಕ ಬೆಳವಣಿಗೆ ದರ ಶೇ 55ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಕ್ಲಿನಿಕಲ್ ಟ್ರಯಲ್ ಮಾರ್ಗಸೂಚಿ ಸೇರಿದಂತೆ ಅನುಕೂಲಕರ ನಿಯಂತ್ರಕ ಬೆಳವಣಿಗೆಗಳಿಂದ ಇದನ್ನು ಮಾಡಲಾಗಿದೆ.
ಈ ಮಾರ್ಗಸೂಚಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಸೈಕೆಡೆಮಿಕ್ ಪ್ರಯೋಗಾಲಯದ ಫಲಿತಾಂಶಗಳು ಭರವಸೆದಾಯಕವಾಗಿದೆ. ಈ ಕ್ಷೇತ್ರದಲ್ಲಿ ಸೈಕೆಡೆಲಿಕ್ಸ್ ಭರವಸೆ ಮೂಡಿಸಿದೆ ಎಂದು ಗ್ಲೋಬಲ್ ಡೇಟಾ ವರದಿ ತಿಳಿಸಿದೆ.
ಸೈಕೆಡೆಲಿಕ್ ಔಷಧವು ತನ್ನ ಸೈಕೋಆ್ಯಕ್ಟಿವ್ ಗುಣಗಳಿಂದ ಗುರುತಿಸಲಾಗಿದೆ. ನರಗಳ ಮಾರ್ಗಗಳ ರಚನೆ ಉತ್ತೇಜಿಸುತ್ತದೆ. ಮನಸ್ಥಿತಿ ಮತ್ತು ಗ್ರಹಿಕೆಗೆ ಕಾರಣವಾಗಿರುವ ಡೀಫಾಲ್ಟ್ ಮೋಡ್ ನೆಟ್ವರ್ಕ್ ಪ್ರತಿಬಂಧಿಸುತ್ತದೆ. ಇದು ಸಾಂಪ್ರದಾಯಿಕ ಚಿಂತನೆಯ ಮಾದರಿಯನ್ನು ಬದಲಾಯಿಸುತ್ತದೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಪ್ರಯೋಜನಕಾರಿಯಾಗಿದೆ.
ಸೈಕೆಡೆಲಿಕ್ಸ್ ಪ್ರಾಯೋಗಿಕ ಸವಾಲುಗಳನ್ನು ಹೊಂದಿದ್ದು, ಈ ಹಿನ್ನೆಲೆ ಎಫ್ಡಿಎ ಅನುಮತಿಗೆ ಅನೇಕ ಅಡಚಣೆ ಎದುರಿಸುವಂತಾಗಿದೆ.
ಜೂನ್ 2023ರಲ್ಲಿ ಎಫ್ಡಿಎ ಸೈಕೆಡೆಲಿಕ್ ವೈದ್ಯಕೀಯ ಪ್ರಯೋಗದ ಮಾರ್ಗಸೂಚಿಯ ಕರಡನ್ನು ಅನಾವರಣ ಮಾಡಿತು. ಈ ಮಾರ್ಗದರ್ಶನವು ನಾನ್‌ಕ್ಲಿನಿಕಲ್, ಕ್ಲಿನಿಕಲ್ ಮತ್ತು ಸುರಕ್ಷತಾ ದತ್ತಾಂಶದಲ್ಲಿನ ಪ್ರಮುಖ ಪರಿಗಣನೆಗಳನ್ನು ವಿವರಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರಾರಂಭವಾಗುವ ನಿರೀಕ್ಷಿತ ಔಷಧಿ ಅನ್ವಯಗಳ ಎಫ್ಡಿಎ ಮೌಲ್ಯಮಾಪನದ ಒಳನೋಟಗಳನ್ನು ನೀಡುತ್ತದೆ.
2029ರ ಹೊತ್ತಿಗೆ ಸೈಕೆಡೆಲಿಕ್ನ ಪ್ರಮುಖ ಮೂರು ಔಷಧಗಳಾದ ಅಟೆ ಲೈಫ್ ಟೈ ಲೈಫ್ ಸೈನ್ಸಸ್ / ಒಟ್ಸುಕಾ ಫಾರ್ಮಾಸ್ಯುಟಿಕಲ್ನ ಪಿಸಿಎನ್ -101, ಸಿಬಿನ್ನ ಸಿವೈಬಿ 003 ಮತ್ತು ಸಣ್ಣ ಫಾರ್ಮಾದ ಎಸ್ಎಲ್ಪಿ- 026 ಮಾರುಕಟ್ಟೆಯ ಮಾರಾಟದಲ್ಲಿ 52 ಪ್ರತಿಶತವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಡೇಟಾ ಫಾರ್ಮಾ ಅನಾಲಿಸ್ಟ್ ಕೆವಿನ್ ಮಾರ್ಕೈಡಾ ತಿಳಿಸಿದ್ದಾರೆ.
ಪಿಸಿಎನ್-101 ಚಿಕಿತ್ಸೆ ನಿರೋಧಕ ಖಿನ್ನತೆಗೆ ಸೂಚಿಸಲಾದ ಸಣ್ಣ ಅಣುವಿನ ಔಷಧಿ ಆಗಿದ್ದು, ಡಿಸೆಂಬರ್ 2025 ಹೊತ್ತಿಗೆ ಅಮೆರಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 2029ರ ಹೊತ್ತಿಗೆ 1.6 ಬಿಲಿಯನ್ ಡಾಲರ್ ಸಂಗ್ರಹಿಸುವ ನಿರೀಕ್ಷೆ ಇದೆ.
ಪಿಸಿಎನ್- 101 ಇದು ಪ್ರಮುಖ ಖಿನ್ನತೆ ಸಮಸ್ಯೆಗೆ ನೀಡಲಾಗುವ ಸಣ್ಣ ಅಣುವಿನ ಔಷಧವಾಗಿದ್ದು, ಇದನ್ನು 2027ರ ಹೊತ್ತಿಗೆ ಅಮೆರಿಕ ಬಿಡುಗಡೆ ಮಾಡಲಿದ್ದು, 2029ರ ವೇಳೆಗೆ 1.4 ಬಿಲಿಯನ್ ಡಾಲರ್ ಸಂಗ್ರಹಿಸುವ ನಿರೀಕ್ಷೆ ಇದೆ.
ಎಸ್ಪಿಎಲ್-026 ಇದು ಸಣ್ಣ ಅಣುವಿನ ಔಷಧವಾಗಿದ್ದು, 2027ರಲ್ಲಿ ಅಮೆರಿಕದಲ್ಲಿ, 2028ರಲ್ಲಿ ಇಯುನಲ್ಲಿ ಬಿಡಗಡೆಯಾಗಲಿದೆ. 2029ರ ಹೊತ್ತಿಗೆ 0.9 ಬಿಲಿಯನ್ ಮಾರಾಟ ಸಂಗ್ರಹ ಕಾಣಲಿದೆ.
ಸೆಕೆಡೆಲಿಕ್ಸ್ ಔಷಧಗಳು ನಿರೀಕ್ಷೆ ಮೀರಿ ಪ್ರಯೋಜನವನ್ನು ಹೊಂದಿವೆ. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಸಾಂಪ್ರದಾಯಿಕ ಚಿಕಿತ್ಸೆಗಳಿಗೆ ಹೋಲಿಸಿದರೆ ಸೈಕೆಡೆಲಿಕ್ಸ್ ವಿಶಿಷ್ಟ ಸ್ಥಾನದಲ್ಲಿರಲಿದೆ.
ಮಾನಸಿಕ ಚಿಕಿತ್ಸೆಯಲ್ಲಿ ಅನೇಕ ಸಾಂಪ್ರದಾಯಿಕ ಚಿಕಿತ್ಸೆಯನ್ನು ಒಂದು ವರ್ಷದವರೆಗೆ ಪಡೆಯಬೇಕಾಗಿದೆ. ಇದಕ್ಕೆ ವೈದ್ಯಕೀಯ ವೃತ್ತಿಪರರ ಬೆಂಬಲ ಜೊತೆಗೆ ಇದು ಸಮಯ ಜೊತೆಗೆ ಖರ್ಚು ವೆಚ್ಚವಾಗಿದೆ. ಆದರೆ ಒಂದು ಸೈಕೆಡೆಲಿಕ್ ಚಿಕಿತ್ಸೆ ತತ್ಕ್ಷಣ, ಖರ್ಚು ಪರಿಣಾಮ ಮತ್ತು ದೀರ್ಘ ಚಿಕಿತ್ಸೆಯ ಲಾಭವನ್ನು ವರ್ಷದವರೆಗೆ ಪಡೆಯಬಹುದು. (ಐಎಎನ್ಎಸ್)
ಇದನ್ನೂ ಓದಿ: ಆಸ್ಪತ್ರೆಯಲ್ಲಿ ರಾತ್ರಿ ಎಸಿ ಆನ್ ಮಾಡಿ ಮಲಗಿದ ವೈದ್ಯ.. ಶೀತದಿಂದ ಸಾವನ್ನಪ್ಪಿದ ನವಜಾತ ಶಿಶುಗಳು