ETV Bharat / sukhibhava

ಡಿಶ್‌ವೇರ್, ಹೇರ್ ಕಲರಿಂಗ್, ಪ್ಲಾಸ್ಟಿಕ್‌ ಬಳಕೆಯಿಂದ ಗರ್ಭಿಣಿಯರಿಗೆ ಕ್ಯಾನ್ಸರ್ ಸಾಧ್ಯತೆ

ಗರ್ಭಿಣಿಯರು ಮೆಲಮೈನ್, ಸೈನೂರಿಕ್ ಆಸಿಡ್ ಮತ್ತು ಆರೊಮ್ಯಾಟಿಕ್ ಅಮೈನ್‌ಗಳಂತಹ ರಾಸಾಯನಿಕಗನ್ನು ಹೆಚ್ಚು ಬಳಸಿದ್ರೆ, ಕ್ಯಾನ್ಸರ್​ಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿ ಎಚ್ಚರಿಸಿದೆ.

author img

By

Published : Aug 30, 2022, 5:27 PM IST

ಗರ್ಭಿಣಿಯರಿಗೆ ಕ್ಯಾನ್ಸರ್ ಬರುವ ಸಾಧ್ಯತೆ
ಗರ್ಭಿಣಿಯರಿಗೆ ಕ್ಯಾನ್ಸರ್ ಬರುವ ಸಾಧ್ಯತೆ

ನ್ಯೂಯಾರ್ಕ್: ಗರ್ಭಿಣಿಯರು ಮೆಲಮೈನ್, ಸೈನೂರಿಕ್ ಆ್ಯಸಿಡ್ ಮತ್ತು ಆರೊಮ್ಯಾಟಿಕ್ ಅಮೈನ್‌ಗಳಂತಹ ರಾಸಾಯನಿಕಗಳಿಗೆ ಒಗ್ಗಿಕೊಂಡರೆ ಅವರು ಕ್ಯಾನ್ಸರ್​ಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನದ ಮೂಲಕ ತಿಳಿದುಬಂದಿದೆ.

1. ಎಲ್ಲೆಲ್ಲಿ ಬಳಕೆ?: ಮೆಲಮೈನ್ ಡಿಶ್‌ವೇರ್, ಪ್ಲಾಸ್ಟಿಕ್‌, ನೆಲಹಾಸು, ಅಡಿಗೆ ಕೌಂಟರ್‌ಗಳು ಮತ್ತು ಕೀಟನಾಶಕಗಳಲ್ಲಿ ಕಂಡುಬರುತ್ತದೆ. ಸೈನೂರಿಕ್ ಆಮ್ಲವನ್ನು ಸೋಂಕುನಿವಾರಕವಾಗಿ, ಪ್ಲಾಸ್ಟಿಕ್ ಸ್ಟೆಬಿಲೈಸರ್ ಮತ್ತು ಈಜುಕೊಳಗಳಲ್ಲಿ ಸ್ವಚ್ಛಗೊಳಿಸುವ ದ್ರಾವಕವಾಗಿ ಬಳಸಲಾಗುತ್ತದೆ. ಕೂದಲಿನ ಬಣ್ಣ, ಮಸ್ಕರಾ, ಹಚ್ಚೆ ಇಂಕ್​​, ಬಣ್ಣ, ತಂಬಾಕು ಹೊಗೆ ಮತ್ತು ಡಿಸೇಲ್​​ನಲ್ಲಿ ಆರೊಮ್ಯಾಟಿಕ್ ಅಮೈನ್‌ಗಳು ಕಂಡುಬರುತ್ತವೆ.

2. ಕ್ಯಾನ್ಸರ್​ಗೆ ಆಮ್ಲಗಳು ಕಾರಣ: ಬಹುತೇಕ ಎಲ್ಲಾ ಅಧ್ಯಯನದಲ್ಲಿ ಭಾಗವಹಿಸುವವರ ಮಾದರಿಗಳಲ್ಲಿ ಮೆಲಮೈನ್ ಮತ್ತು ಸೈನೂರಿಕ್ ಆಮ್ಲವು ಕಂಡುಬಂದಿದೆ. ಆದರೆ ಹೆಚ್ಚಿನ ಮಟ್ಟದಲ್ಲಿ ಮಹಿಳೆಯರು ಮತ್ತು ತಂಬಾಕು ಸೇವಿಸುವವರಲ್ಲಿ ಕಂಡುಬಂದಿವೆ. ಈ ರಾಸಾಯನಿಕಗಳು ಕ್ಯಾನ್ಸರ್​ಗೆ ಕಾರಣವಾಗಲಿವೆ. ಹಾಗಾಗಿ ಅವನ್ನು ಯುಎಸ್​​ನಲ್ಲಿ ನಿಯಮಿತವಾಗಿ ಬಳಸಲಾಗುವುದು ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕ ಟ್ರೇಸಿ ಜೆ. ವುಡ್ರಫ್ ಹೇಳಿದ್ದಾರೆ.

ಇದನ್ನೂ ಓದಿ: ಪುಟ್ಟ ಕಂದನ ನಿರೀಕ್ಷೆಯಲ್ಲಿರುವಿರಾ? ಲಾಲನೆ - ಪಾಲನೆಗೆ ನಿಮ್ಮನ್ನು ಸಜ್ಜುಗೊಳಿಸಿ..

ಜನರು ವಿವಿಧ ರೀತಿಯಲ್ಲಿ ಮೆಲಮೈನ್ ಮತ್ತು ಆರೊಮ್ಯಾಟಿಕ್ ಅಮೈನ್‌ಗಳಿಗೆ ಒಗ್ಗಿಕೊಂಡಿದ್ದಾರೆ. ಉಸಿರಾಡುವ ಗಾಳಿ, ಕಲುಷಿತ ಆಹಾರವನ್ನು ತಿನ್ನುವ ಮೂಲಕ ಅಥವಾ ಮನೆಯ ಧೂಳನ್ನು ಸೇವಿಸುವ ಮೂಲಕ, ಹಾಗೆಯೇ ಕುಡಿಯುವ ನೀರಿನಿಂದ ಅಥವಾ ಪ್ಲಾಸ್ಟಿಕ್, ಬಣ್ಣಗಳು ಮತ್ತು ವರ್ಣದ್ರವ್ಯಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಬಳಸುವುದರಿಂದ ಇವು ದೇಹ ಪ್ರವೇಶಿಸುತ್ತವೆ.

3. ಮಹಿಳೆಯರ ಮೂತ್ರದ ಮಾದರಿ ಸಂಗ್ರಹ: ಮೆಲಮೈನ್ ಮತ್ತು ಅದರ ಪ್ರಮುಖ ಉಪ ಉತ್ಪನ್ನವಾದ ಸೈನೂರಿಕ್ ಆಮ್ಲ ಯುಎಸ್​ನಲ್ಲಿ ಪ್ರತಿ ವರ್ಷಕ್ಕೆ 100 ಮಿಲಿಯನ್ ಪೌಂಡ್‌ಗೂ ಮೀರಿದ ಹೆಚ್ಚಿನ ಉತ್ಪಾದನಾ ರಾಸಾಯನಿಕವಾಗಿದೆ. ಅಧ್ಯಯನಕ್ಕಾಗಿ, ತಂಡವು ವಿವಿಧ ಗುಂಪಿನ 171 ಮಹಿಳೆಯರ ಮೂತ್ರದ ಮಾದರಿಯನ್ನು ಸಂಗ್ರಹಿಸಿದೆ.

4. ಅಧ್ಯಯನದ ಅವಧಿ: ಇದರ ಮೂಲಕ ಕ್ಯಾನ್ಸರ್​ ಮತ್ತು ಇತರ ಅಪಾಯಗಳಿಗೆ ಕಾರಣವಾಗುವ 45 ರಾಸಾಯನಿಕಗಳನ್ನು ಅಧ್ಯಯನ ತಂಡ ಪತ್ತೆ ಹಚ್ಚಿದೆ. ಈ ಅಧ್ಯಯನವು 2008 ರಿಂದ 2020 ರವರೆಗೆ ನಡೆದಿದೆ. ಏಷ್ಯಾದ ದೇಶಗಳಲ್ಲಿನ ಗರ್ಭಿಣಿ ಮಹಿಳೆಯರಲ್ಲಿ ಮೆಲಮೈನ್ ಕುರಿತ ಪೂರ್ವ ಅಧ್ಯಯನವನ್ನು ನಡೆಸಲಾಯಿತು. ಯುಎಸ್​​ನಲ್ಲಿ ಗರ್ಭಿಣಿಯರಲ್ಲದ ಮಹಿಳೆಯರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.