ಹ್ಯೂಮನ್ ಇಮ್ಯುನೊ ಡಿಫಿಶಿಯನ್ಸಿ ವೈರಸ್ (ಎಚ್‌ಐವಿ) ಮತ್ತು ಅಕ್ಯುರೈಡ್ ಇಮ್ಯುನೋ ಡಿಫಿಶಿಯನ್ಸಿ ಸಿಂಡ್ರೋಮ್ (ಏಡ್ಸ್)ನಿಂದ ಬಳಲುತ್ತಿರುವ ಜನರು ಕೋವಿಡ್ಗೆ ತುತ್ತಾಗುತ್ತಾರೆ ಮತ್ತು ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ ಎಂದು ಹೊಸ ಸಂಶೋಧನೆಯೊಂದು ಹೇಳುತ್ತಿದೆ.
ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರ ನೇತೃತ್ವದ ಅಧ್ಯಯನವು ಎಚ್‌ಐವಿ ಪೀಡಿತ ಜನರಿಗೆ ಕೋವಿಡ್ ಸೋಂಕಿನ ಶೇಕಡಾ 24 ರಷ್ಟು ಹೆಚ್ಚಿನ ಅಪಾಯವಿದೆ. ಅಷ್ಟೇ ಅಲ್ಲದೆ, 78 ಪ್ರತಿಶತದಷ್ಟು ಮಂದಿಗೆ ಸಾವಿನ ಅಪಾಯವಿದೆ ಎಂದು ಕಂಡುಹಿಡಿದಿದೆ.
ಅಧಿಕ ರಕ್ತದೊತ್ತಡ, ಮಧುಮೇಹ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಎಚ್‌ಐವಿ-ಪಾಸಿಟಿವ್ ಹೊಂದಿರುವ ಜನಸಂಖ್ಯೆಯಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚು.
ಎಚ್ಐವಿ, ಏಡ್ಸ್ ಪೀಡಿತ ಜನರಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಅವರ ಕೋವಿಡ್ -19 ಪ್ರಕರಣಗಳ ತೀವ್ರತೆಗೆ ಕಾರಣವಾಗಬಹುದು. ಎಚ್ಐವಿ, ಏಡ್ಸ್ ಪೀಡಿತ ಜನರಿಗೆ ಕೊರೊನಾದಿಂದಾಗುವ ಅಪಾಯವನ್ನು ತಪ್ಪಿಸಲು ಬಳಸುವ ಆಂಟಿವೈರಲ್ ಔಷಧಿಗಳಾದ ಆಸ್ಟೆನೊಫೊವಿರ್ ಮತ್ತು ಪ್ರೋಟಿಯೇಸ್-ಇನ್ಹಿಬಿಟರ್ಗಳ ಪ್ರಯೋಜನ ಅನಿರ್ದಿಷ್ಟವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ವರದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
"ಎಚ್‌ಐವಿ-ಕೋವಿಡ್ ರೋಗದ ಬಗ್ಗೆ ತಿಳಿಯಲು ನಾವು ಸಾಕಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇದು ಡೇಟಾದ ಕೊರತೆಯಿಂದಾಗಿ ಆರಂಭದಲ್ಲಿ ಮಾಡಲಾಗಲಿಲ್ಲ" ಎಂದು ಪೆನ್ ಸ್ಟೇಟ್ನ ಸಾರ್ವಜನಿಕ ಆರೋಗ್ಯ ವಿಜ್ಞಾನ ಇಲಾಖೆಯ ವೆರ್ನಾನ್ ಚಿಂಚಿಲ್ಲಿ ಹೇಳಿದ್ದಾರೆ.
"ಈ ಸಂಶೋಧನೆಯು ಎಚ್ಐವಿ-ಏಡ್ಸ್ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವ್ಯಾಕ್ಸಿನ್ ಪರಿಣಾಮಕಾರಿಯೇ?. ಇದರ ಜೊತೆ ಜೀವಿಸುವ ಜನರಿಗೆ ಆದ್ಯತೆ ನೀಡಬಹುದೇ ಎಂಬುದರ ಬಗ್ಗೆ ತಿಳಿಯುವ ಉದ್ದೇಶ ಹೊಂದಿದೆ" ಎಂದು ಅವರು ಹೇಳಿದರು.
ಉತ್ತರ ಅಮೆರಿಕ, ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಲ್ಲಿ ಸುಮಾರು 21 ಮಿಲಿಯನ್ ಮಂದಿ ಭಾಗವಹಿಸಿದ್ದು, 22 ಹಿಂದಿನ ಅಧ್ಯಯನಗಳ ದತ್ತಾಂಶವನ್ನು ಅವರು ನಿರ್ಣಯಿಸಿದ್ದಾರೆ. ಎಚ್ಐವಿ-ಏಡ್ಸ್ನಿಂದ ಬಳಲುತ್ತಿರುವ ಜನರು ಎಷ್ಟರ ಮಟ್ಟಿಗೆ ಕೊರೊನಾ ಸೋಂಕಿಗೆ ತುತ್ತಾಗುತ್ತಾರೆ ಮತ್ತು ಸಾವಿಗೆ ಒಳಗಾಗುತ್ತಾರೆ ಎಂಬುದನ್ನು ನಿರ್ಧರಿಸಲು ಈ ಸಂಶೋಧನೆ ಕೈಗೊಳ್ಳಲಾಗಿದೆ.
ಕಳೆದ ವರ್ಷದಲ್ಲಿ, ಕ್ಯಾನ್ಸರ್, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕೆಲವು ಮೊದಲೇ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳು ಕೋವಿಡ್ -19 ನಿಂದ ವ್ಯಕ್ತಿಯ ಸಾಯುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಅಂದಾಜು 38 ಮಿಲಿಯನ್ ಜನರು ಎಚ್‌ಐವಿ ಪೀಡಿತರಾಗಿದ್ದಾರೆ.