ETV Bharat / sukhibhava

ಬೊಜ್ಜಿನಿಂದ 'ಕೆಟ್ಟ ಕೊಲೆಸ್ಟ್ರಾಲ್​' ಹೆಚ್ಚು; ಹೃದಯ ಸಮಸ್ಯೆಯ ಎಚ್ಚರಿಕೆ

ಎಲ್​ಡಿಎಲ್​ ಎಂಬುದು ಕೆಟ್ಟ ಕೊಲೆಸ್ಟ್ರಾಲ್.​ ಇದರ ಪರಿಣಾಮವನ್ನು ಅಧಿಕ ತೂಕ ಮತ್ತಷ್ಟು ಕೆಟ್ಟದಾಗಿಸಿ ಗಂಭೀರ ಆರೋಗ್ಯ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

author img

By ETV Bharat Karnataka Team

Published : Oct 4, 2023, 5:33 PM IST

over wight worsens LDL raises serious health issue

ನ್ಯೂಯಾರ್ಕ್​: ಸ್ಥೂಲಕಾಯ ಸಂಬಂಧಿತ ಊರಿಯೂತ ಕೆಟ್ಟ ಕೊಲೆಸ್ಟ್ರಾಲ್​ ಅನ್ನು ಮತ್ತಷ್ಟು ಕೆಟ್ಟದಾಗಿಸುತ್ತದೆ. ಅಲ್ಲದೇ ಇದು ಅಸಹಜವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ, ಹೃದಯ ರಕ್ತನಾಳ, ಮಧುಮೇಹ ಮತ್ತು ಕೆಲವು ನಿರ್ದಿಷ್ಟ ಕ್ಯಾನ್ಸರ್​​ ಅಪಾಯ ಉಂಟು ಮಾಡುತ್ತದೆ ಎಂದು ಅಧ್ಯಯನ ಎಚ್ಚರಿಸಿದೆ.

ಸ್ಥೂಲಕಾಯ ಎಂಬುದು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆ. ಇದು ಅಧಿಕ ಮಟ್ಟದಲ್ಲಿ ಬಹು ಜನಸಂಖ್ಯೆಯ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಹೊಂದಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘ ಊರಿಯುತ ಮತ್ತು ಆಕ್ಸಿಡೆಟಿವ್​ ಒತ್ತಡದೊಂದಿಗೆ ಸಂಬಂಧ ಹೊಂದಿದ್ದು, ಹೃದಯ ರಕ್ತನಾಳದ ಸಮಸ್ಯೆಯನ್ನೂ ತೀವ್ರಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್​ ಶೇಖರಣೆ: ಕಡಿಮೆ ಮಟ್ಟದ ಲಿಪೊಪ್ರೋಟಿನ್​ (ಎಲ್​ಡಿಎಲ್​) ಎಂಬುದು ರಕ್ತದಲ್ಲಿ ಕೊಲೆಸ್ಟ್ರಾಲ್​ನ ಸಾಗಿಸುವ ನ್ಯಾನೋಪಾರ್ಟಿಕಲ್​ ಆಗಿದೆ. ಸಾಮಾನ್ಯ ಸೆಲ್ಯುಲಾರ್ ಕಾರ್ಯಕ್ಕೆ ಕೊಲೆಸ್ಟ್ರಾಲ್ ಅತ್ಯಗತ್ಯವಾಗಿದ್ದರೂ, ಹೆಚ್ಚುವರಿ ಕೊಲೆಸ್ಟ್ರಾಲ್ ಹೃದಯ ರಕ್ತನಾಳ ಅಪಾಯಕ್ಕೆ ಕಾರಣವಾಗುವ ಅಪಧಮನಿಗಳಲ್ಲಿ ಸಂಗ್ರಹಿಸಬಹುದು. ಇದರಿಂದಲೇ ಈ ಎಲ್​ಡಿಎಲ್​ ಅನ್ನು ಕೆಟ್ಟ ಕೊಲೆಸ್ಟ್ರಾಲ್​ ಎಂದೇ ಕರೆಯಲಾಗುತ್ತದೆ. ಈ ಅಧ್ಯಯನವನ್ನು ಜರ್ನಲ್​ ಆಫ್​ ಲಿಪಿಡ್​​ ರಿಸರ್ಚ್​​ನಲ್ಲಿ ಪ್ರಕಟಿಸಲಾಗಿದೆ. ಎಲ್​ಡಿಎಲ್​ನ ಗುಣಮಟ್ಟವು ಸ್ಥೂಲಕಾಯತೆ ಸಂಬಂಧಿತ ಉರಿಯೂತದ ಕಾರಣದಿಂದಾಗಿ ರೋಗ ಉಲ್ಬಣಗೊಳ್ಳಲು ಕಾರಣವಾಗುತ್ತದೆ.

ಫಲಿತಾಂಶವಾಗಿ, ಕೊಲೆಸ್ಟ್ರಾಲ್​ ಸಾಮಾನ್ಯದಿಂದ ಅಸಮಾನ್ಯದವರೆಗೆ ಕೊಲೆಸ್ಟ್ರಾಲ್​ ಅನ್ನು ಸ್ಥಳಾಂತರಿಸುತ್ತದೆ. ಹೀಗಾಗಿ ಹೆಚ್ಚು ಕೊಲೆಸ್ಟ್ರಾಲ್​ಗಳು ಅಪಧಮನಿಯ ಗೋಡೆಗಳಲ್ಲಿ ಸಂಗ್ರಹವಾಗುತ್ತದೆ. ಅಂತಿಮವಾಗಿ, ರಕ್ತದ ಹರಿವನ್ನು ತಡೆಯುವ ಪ್ಲೇಕ್‌ಗಳನ್ನು ರೂಪಿಸುತ್ತದೆ ಎಂದು ಹಿರಿಯ ಸಂಶೋಧಕ ವಿಜ್ಞಾನಿ ಶೋಭಿನಿ ಜಯರಾಮನ್​ ವಿವರಿಸಿದ್ದಾರೆ.

ಹೃದಯ ರಕ್ತನಾಳದ ಅಪಾಯ: ಈ ಅಸಹಜ ನಡವಳಿಕೆಯು ಸ್ಥೂಲಕಾಯ ಸಂಬಂಧಿತ ಉರಿಯೂತದಿಂದ ಪ್ರೇರಿತವಾದ ಎಲ್​ಡಿಎಲ್​ ಜೀವ ರಾಸಾಯನಿಕ ಸಂಯೋಜನೆಯಲ್ಲಿನ ಬದಲಾವಣೆಗಳಿಂದ ಉಂಟಾಗುತ್ತದೆ. ಇಂಥ ಹಾನಿಕಾರಕ ಬದಲಾವಣೆಗಳು ಸ್ಥೂಲಕಾಯತೆ ಹೊಂದಿರುವ ರೋಗಿಗಳಲ್ಲಿ ಹೃದಯ ರಕ್ತನಾಳದ ಅಪಾಯವನ್ನು ಹೆಚ್ಚಿಸಿವೆ ಎಂದು ಅಧ್ಯಯನ ತೋರಿಸಿದೆ.

ನಮ್ಮ ಅಧ್ಯಯನವು ರೋಗಿಯ ತೂಕವನ್ನು ಸಾಮಾನ್ಯೀಕರಿಸಿದಂತೆ ಎಲ್​ಡಿಎಲ್​ ಗುಣಮಟ್ಟವು ಸುಧಾರಿಸುತ್ತಿದೆ ಎಂದು ತೋರಿಸುತ್ತದೆ. ಹೃದಯ ರಕ್ತನಾಳದ ಅಪಾಯ ಕಡಿಮೆ ಮಾಡುತ್ತದೆ ಎಂದು ಫಾರ್ಮಾಕೊಲಾಜಿ ಫ್ರೊಫೆಸರ್​​ ಒ್ಲಗಾ ಗುರ್ಸಕಿ ಹೇಳಿದ್ದಾರೆ. ಇದು ಬ್ಯಾಟ್ರಿಯಾಕ್ಟಿಕ್​​ ಸರ್ಜರಿ ಒಳಗಾಗುವ ರೋಗಿಗಳಿಗೆ ಮಾತ್ರವಲ್ಲದೇ, ಭರವಸೆದಾಯಕವಾಗಿಲ್ಲ. ಅಧಿಕ ತೂಕ ಹೊಂದಿರುವ ಜನರಿಗೆ ತೂಕ ಇಳಿಕೆಯಲ್ಲಿ ಅನೇಕ ವಿಧಗಳಿಂದ ಸಹಾಯಕವಾಗಲಿದೆ ಎಂದು ಗುರ್ಸುಕಿ ಹೇಳಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತಾ ಡಾರ್ಕ್​ ಟೀ? ಹೊಸ ಅಧ್ಯಯನ ಹೀಗಂತಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.