ETV Bharat / sukhibhava

ಸಣ್ಣ ಮಕ್ಕಳಿಗೆ ಒಮಿಕ್ರಾನ್​ ಸೋಂಕು ಅಪಾಯಕಾರಿ: ಹೃದಯಾಘಾತಕ್ಕೂ ಕಾರಣ..

ಕ್ರೂಪ್‌​ ಎನ್ನುವುದು ಶ್ವಾಸನಾಳದ ಮೇಲ್ಭಾಗದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕು. ಇದನ್ನು ವೈದ್ಯಕೀಯವಾಗಿ ಲಾರಿಂಗೊಟ್ರಾಕೀಟಿಸ್ ಎನ್ನಲಾಗುತ್ತದೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು, ಉಸಿರಾಟಕ್ಕೆ ತೀವ್ರ ತೊಂದರೆ ಉಂಟು ಮಾಡಲಿದೆ.

ಸಣ್ಣ ಮಕ್ಕಳಿಗೆ ಓಮಿಕ್ರಾನ್​ ಸೋಂಕು ಅಪಾಯಕಾರಿ
ಸಣ್ಣ ಮಕ್ಕಳಿಗೆ ಓಮಿಕ್ರಾನ್​ ಸೋಂಕು ಅಪಾಯಕಾರಿ
author img

By

Published : Apr 19, 2022, 4:40 PM IST

ನ್ಯೂಯಾರ್ಕ್ (ಅಮೆರಿಕ): ಒಮಿಕ್ರಾನ್​ ಸೋಂಕು ಸಣ್ಣ ಮಕ್ಕಳಿಗೆ ಅಪಾಯಕಾರಿ. ಉಸಿರಾಟದ ನಾಳಗಳನ್ನು ದುರ್ಬಲಗೊಳಿಸುವ ಕ್ರೂಪ್‌​ ಸೋಂಕಿಗೆ ಒಮಿಕ್ರಾನ್​ ದಾರಿ ಮಾಡಿಕೊಡಲಿದ್ದು, ಇದು ಮಕ್ಕಳಲ್ಲಿ ಹೃದಯಾಘಾತಕ್ಕೂ ಕಾರಣವಾಗಬಹುದು ಎಂದು ಅಮೆರಿಕದ ಸಂಶೋಧನಾ ತಂಡ ಹೇಳಿದೆ.

ಕ್ರೂಪ್‌​ ಎನ್ನುವುದು ಶ್ವಾಸನಾಳದ ಮೇಲ್ಭಾಗದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಾಗಿದೆ. ಇದನ್ನು ವೈದ್ಯಕೀಯವಾಗಿ ಲಾರಿಂಗೊಟ್ರಾಕೀಟಿಸ್ ಎನ್ನಲಾಗುತ್ತದೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು, ಉಸಿರಾಟಕ್ಕೆ ತೀವ್ರ ತೊಂದರೆ ಉಂಟು ಮಾಡಲಿದೆ. ಅಮೆರಿಕದ ಕೊಲೊರಾಡೋ ಮತ್ತು ವಾಯುವ್ಯ ವಿಶ್ವವಿದ್ಯಾಲಯಗಳ ಸಂಶೋಧಕರ ತಂಡವು SARS-CoV-2 ಸೋಂಕಿನೊಂದಿಗೆ ಆಸ್ಪತ್ರೆಗೆ ದಾಖಲಾದ 18,849 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿ ಇದನ್ನು ಪತ್ತೆ ಹಚ್ಚಿದೆ.

ಒಮಿಕ್ರಾನ್ ಉಲ್ಬಣಗೊಂಡಿದ್ದ ಸಮಯದಲ್ಲದೇ ಗಂಟಲಿನ ಮೇಲ್ಭಾಗದಲ್ಲಿ ಈ ತೊಂದರೆ ಹೆಚ್ಚಾಗಿರುವುದು ಪತ್ತೆಯಾಗಿದೆ. ಈ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ಐದನೇ ಒಂದರಷ್ಟು ಮಕ್ಕಳಲ್ಲಿ ಇದು ತೀವ್ರವಾಗಿತ್ತು. ಸುಮಾರು 384 ಮಕ್ಕಳು ಮೇಲ್ಭಾಗದ ಶ್ವಾಸನಾಳದ ಸೋಂಕನ್ನು ಹೊಂದಿದ್ದರು. 81 ಜನ ಮಕ್ಕಳು ತೀವ್ರವಾದ ಸೋಂಕು, ವೆಂಟಿಲೇಷನ್​ಗೆ ಒಳಗಾಗಿ, ವಾಸೋಪ್ರೆಸರ್‌ ಅಥವಾ ಎಕ್ಸ್‌ಟ್ರಾಕಾರ್ಪೊರಿಯಲ್ ಮೆಂಬರೇನ್ ಆಕ್ಸಿಜನ್​ಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಸಂಶೋಧಕರ ತಂಡ ತಿಳಿಸಿದೆ.

ಒಮಿಕ್ರಾನ್ ಪೂರ್ವಕ್ಕೆ ಹೋಲಿಸಿದರೆ ಓಮಿಕ್ರಾನ್​ ಬಂದ ನಂತರವೇ ಮಕ್ಕಳಲ್ಲಿ ಇದರ ಸಮಸ್ಯೆ ಅಧಿಕವಾಗಿದೆ. ಮೇಲ್ಭಾಗದ ಶ್ವಾಸನಾಳದ ಸೋಂಕನ್ನು ಹೊಂದಿರುವ ಮಕ್ಕಳಿಗೆ ಓಮಿಕ್ರಾನ್​ ತೀವ್ರವಾದ ನಂತರ ಹೃದಯಾಘಾತದ ಅಪಾಯ ಅಧಿಕ ಇರುತ್ತದೆ. ಇಂತಹ ಮಕ್ಕಳಿಗೆ ನೆಬ್ಯುಲೈಸ್ಡ್ ರೇಸ್ಮಿಕ್ ಎಪಿನ್ಫ್ರಿನ್, ಹೀಲಿಯಂ ಹಾಗೂ ಇಂಟ್ಯೂಬೇಶನ್​ನನ್ನು ನೀಡುವುದು ಸೇರಿದಂತೆ ತೀವ್ರ ನಿಗಾ ಘಟಕದಲ್ಲಿನ ಚಿಕಿತ್ಸೆ ಅಗತ್ಯವಾಗಲಿದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಬ್ಲೇಕ್ ಮಾರ್ಟಿನ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.